ಶರತ್ ಚಂದ್ರ

2026 ರ ಯುಗಾದಿ ದಿನ ಬಿಡುಗಡೆ ಯಾಗಲಿರುವ ಬಹು ನಿರೀಕ್ಷಿತ ಚಿತ್ರ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಅಪ್ಡೇಟ್ ಗಳನ್ನು ಚಿತ್ರತಂಡ ನೀಡಲು ಆರಂಭಿಸಿದೆ..

ಈಗಾಗಲೇ ಇಬ್ಬರು ನಾಯಕಿಯರ ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ಅವರ ಪಾತ್ರದ ಪರಿಚಯ ಮಾಡಿದೆ. ಚಿತ್ರದಲ್ಲಿಪ್ರಮುಖ ಮಹಿಳಾ ಪಾತ್ರಗಳನ್ನು ಕಿಯಾರಾ ಅಡ್ವಾಣಿ, ನಯನತಾರ,ರುಕ್ಮಿಣಿ ವಸಂತ್ ಹಾಗೂ ಹುಮ ಖುರೈಸಿ  ನಿರ್ವಹಿಸುತ್ತಿರುವುದು ನಿಮಗೆಲ್ಲ ಗೊತ್ತಿದೆ

ಈಗಾಗಲೇ ನಾದಿಯ ಪಾತ್ರ ನಿಭಾಯಿಸಿರುವ ಕಿಯಾರಾ ಅಡ್ವಾಣಿ ಅವರು ನೀಲಿ ಬಣ್ಣದ ಗೌನ್ ಧರಿಸಿರುವ ಫೋಟೋ ವೈರಲ್ ಆಗಿತ್ತು. ಸರ್ಕಸ್ ಬ್ಯಾಕ್ ಡ್ರಾಪ್ ನಲ್ಲಿ ತೆಗೆದಿರುವ ಈ ಫೋಟೋದಲ್ಲಿ ಆಕೆಯ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

1000819349

ಇತ್ತೀಚೆಗೆ ಹುಮ ಖುರೈಸಿಯವರ ಪಾತ್ರ ಪರಿಚಯದ ಪೋಸ್ಟರ್ ಬಿಡುಗಡೆಯಾಗಿದ್ದು, ಹ್ಯೂಮ ವಿಂಟೇಜ್ ಕಾರ್ ಮುಂದೆ ಪೋಸ್ ಕೊಟ್ಟಿರುವ ಪೋಸ್ಟರ್ ಕೂಡ ಗಮನ ಸೆಳೆದಿದೆ.ಹ್ಯೂಮ  ಎಂಬ ರೋಲ್ ಮಾಡುತ್ತಿದ್ದಾರೆ.

ಇವತ್ತು ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಯನ್ ತಾರಾ ಅವರ ಪೋಸ್ಟರ್ ನ್ನು ನಾಯಕ ಯಶ್ ತಮ್ಮ  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಲೇಡಿ ಸೂಪರ್ ಸ್ಟಾರ್ ನಯನ್ ತಾರಾ ಈ ಚಿತ್ರದಲ್ಲಿ ನಟಿಸುವ ಸುದ್ದಿ ಬಂದಾಗಿನಿಂದ ಈಕೆಯ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

1000819351

ಈ ದಿನ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಕೈಲ್ಲಿ ಗನ್ ಹಿಡಿದು ಕೊಂಡು ಪೋಸ್ ಕೊಟ್ಟಿರುವ ನಯನ್ ತಾರಾ ಬಹುಷಃ ಅಂಡರ್ ವಲ್ಡ್ ಡಾನ್ ಆಗಿ ಏನಾದರು ಅಭಿನಯಸುತ್ತಿರಬಹುದೇ ಎನ್ನುವ ಗುಮಾನಿ ಎಲ್ಲರ ಮನಸಿನಲ್ಲಿ ಮೂಡುತ್ತಿದೆ

ಅಕ್ಕ ಪಕ್ಕ ನಿಂತಿರುವ ಬಾಡಿ ಗೌರ್ಡ್ ಗಳನ್ನು ಗಮನಿಸಿದರೆ ಒಟ್ಟಿನಲ್ಲಿ ಆಕೆ ರಫ್ ಅಂಡ್ ಟಫ್ ಪಾತ್ರ ನಿಭಾಯಿಸಿರುವ ಸಾಧ್ಯತೆ ಇದೆ.ಒಟ್ಟಿನಲ್ಲಿ ಗಂಗಾ ಎಂಬ ಪಾತ್ರ ಮಾಡಿರುವ ನಯನ್ ತಾರಾ ಪಾತ್ರದ ಬಗ್ಗೆ ತಿಳಿಯಲು ಮಾರ್ಚ್ ತನಕ ಕಾಯಬೇಕಾಗುತ್ತದೆ.

1000819407

ಅಲ್ಲಿಗೆ ಮೂರು ನಟಿಯರ ಪಾತ್ರಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಇನ್ನೇನಿದ್ರೂ ರುಕ್ಕು ಅಂದ್ರೆ ರುಕ್ಮಿಣಿ ವಸಂತ್ ಪಾತ್ರದ ಬಗ್ಗೆ ತಿಳಿಯಲು ಜನ ಕಾಯುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ