ಸರಸ್ವತಿ*

ಇತ್ತೀಚೆಗೆ ಬಿಡುಗಡೆಗೊಂಡಿದ್ದ ಸುಧೀರ್ ಅತ್ತಾವರ್ ರವರ

‘ಕೊರಗಜ್ಜ’ ಸಿನಿಮಾದ ಹಾಡುಗಳನ್ನು ಹೊಟೆಲ್ ಹಾಲಿಡೇ ಇನ್ ನಲ್ಲಿ‌‌ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಬಿಗ್ ಎಫ್ ಎಮ್ 92.7 ಮತ್ತು ಸುಮಾರು ಮುನ್ನೂರಕ್ಕೂ ಹೆಚ್ಚಿನ ಆಡಿಯೋ ಪ್ಲಾಟ್ ಫಾರ್ಮ್ ಗಳಲ್ಲಿ ಹೊಸವರ್ಷಾರಂಭದ ವರ್ಣರಂಜಿತ ಕಾರ್ಯಕ್ರಮದ ನಡುವೆ ನೆರೆದ ಗಣ್ಯರ ಮತ್ತು ಪತ್ರಕರ್ತರ ಸಮ್ಮುಖದಲ್ಲ

“ಸಾಂಗ್ಸ್ ಪ್ರೀಮಿಯರ್” ಎನ್ನುವ ವಿನೂತನ ಕಾರ್ಯಕ್ರಮದ ಮುಖಾಂತರ ಹರಿಬಿಡಲಾಯಿತು.

premier

ದೇಶದ ಮೊದಲ ಪಾಪ್ ತಾರೆ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಶರೋನ್ ಪ್ರಭಾಕರ್,ಹಿರಿಯ ನಟಿ ಭವ್ಯ ನಿರ್ದೇಶಕ

ನಾಗತಿ ಹಳ್ಳಿ ಚಂದ್ರಶೇಕರ್, ಮೊದಲಾದ ಸೆಲೆಬ್ರೆಟಿಗಳು ಈ ಸಮಾರಂಭಕ್ಕೆ ಸಾಕ್ಷಿಯಾದರು.

*ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ ಆರ್ ಜೆ ಗಳು*:

ಚಿತ್ರದ ಅಫಿಷಿಯಲ್ ರೇಡಿಯೋ ಪಾರ್ಟ್ ನರ್ಸ್ ಆಗಿರುವ 92.7 ಬಿಗ್ ಎಫ್ ಎಮ್ ನ ದಕ್ಷಿಣ ಭಾರತದ ಮುಖ್ಯಸ್ಥ ವಿಶ್ವಾಸ್ ರವರು ಮಾತನಾಡುತ್ತಾ, ಕೊರಗಜ್ಜ ಚಿತ್ರದ ಅಫಿಷಿಯಲ್ ರೇಡಿಯೋ ಪಾರ್ಟ್ ನರ್ಸ್ ಆಗಿರುವುದು ಅವಿಸ್ಮರಣೀಯ ಕ್ಷಣ ಎಂದು ಬಣ್ಣಿಸಿ, ಎಲ್ಲಾ ಆರ್ ಜೆ ಗಳ ಸಮೇತ ಟೆಕ್ನಿಕಲ್ ಟೀಮನ್ನು ಪರಿಚಯಿಸಿದರು.ನಂತರ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ “ಕೊರಗಜ್ಜ” ಚಿತ್ರದ ಹಾಡುಗಳ ಪ್ರೀಮಿಯರ್ ಆಗಿ ಕೇಳುಗರಿಗೆ ತೆರೆದುಕೊಳ್ಳುತ್ತಿದ್ದಂತೆಯೇ ಆರ್ ಜೆ ವಿಕ್ಕಿ, ಆರ್ ಜೆ ದುಶ್ಯಂತ್, ಆರ್ ಜೆ ಪ್ರದೀಪ್ ಸಮೇತ ಬಿಗ್ ಎಫ್ ಎಮ್ ನ

ಸಂಪೂರ್ಣ ತಂಡ ಕೊರಗಜ್ಜ ಚಿತ್ರದ ಹಾಡುಗಳಿಗೆ

ಹೆಜ್ಹೆ ಹಾಕಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

*ಮಂತ್ರ ಮುಗ್ಧ ಗೊಳಿಸಿದ ಎಐ ಸ್ಪರ್ಷದ ಗಾಳಿ ಗಂಧ ಹಾಡು:*

ವರ್ಷಾರಂಭದ

ಕೌಂಟ್ ಡೌನ್ ಆಗುತ್ತಿದ್ದಂತೆಯೇ ಹ್ಯಾಪ್ಪೀ ನ್ಯೂ ಇಯರ್ ಎಂದು ಎಲ್ಲರೂ ಶುಭಾಶಯ ವಿನಿಮಯ ಮಾಡುತ್ತಿರುವಾಗಲೇ ಎಲ್ ಇ ಡಿ ಸ್ಕ್ರೀನ್ ಮೇಲೆ ಶ್ರೇಯ ಘೋಷಾಲ್ ಮತ್ತು ಆರ್ಮಾನ್ ಮಲಿಕ್ ಹಾಡಿದ್ದ ಸುಧೀರ್ ಅತ್ತಾವರ್ ಸಾಹಿತ್ಯ, ಗೋಪಿ ಸುಂದರ್ ನ ವಿಶೇಷ ಕಂಪೋಸಿಷನ್ ನ ಎ ಐ ಸ್ಪರ್ಷದ “ಗಾಳಿ ಗಂಧ …” ಹಾಡು ಮೂಡಿಬರುತ್ತಿದ್ದಂತೆಯೇ ಇದು ವರ್ಲ್ಡ್ ಕ್ಲಾಸ್ ವಿಷುವಲ್ಸ್ ಎಂದು ಶರೋನ್ ಪ್ರಭಾಕರ್ ಸಮೇತ ನೆರೆದಿದ್ದ

ಎಲ್ಲರಿಂದಲೂ ಪ್ರಶಂಸೆ ಗೊಳಪಟ್ಟಿತು.

 

*ಹಿರಿಯ ಕಲಾವಿದೆ ಭವ್ಯ ರವರ ಯಕ್ಷಗಾನ* :

” ಮಹಿಷಾಸುರ”ಯಕ್ಷಗಾನ ಸನ್ನಿವೇಶದಲ್ಲಿ ಮಹಿಷನ ತಾಯಿ ಮಾಲಿನಿ ಪಾತ್ರದಲ್ಲಿ ಹಿರಿಯ ನಟಿ ಭವ್ಯ ಎಲ್ಲರ ಗಮನಸೆಳೆದರು. ಮಂಗಳೂರಿನ ಜಯದೇವ್ ಮತ್ತು ತಂಡ

” ಮಹಿಷಾಸುರ” ಯಕ್ಷಗಾನದ ತುಣುಕು ಪ್ರದರ್ಶಿಸಿತು.

ಹಿನ್ನೆಲೆ ಗಾಯಕರಾದ ರಮೇಶ್ಚಂದ್ರ ಮತ್ತು ಪ್ರತಿಮಾ ಭಟ್ ಹಾಡುಗಳು

ಸಮಾರಂಭಕ್ಕೆ ಕಳೆಕಟ್ಟಿತ್ತು‌

ಅನೇಕ ಹಿರಿಯ ಜರ್ನಲಿಸ್ಟ್ ಗಳೂ ಹಾಡು-ಕುಣಿತದಲ್ಲಿ ಭಾಗವಹಿದರು.

ಆರ್ ಜೆ ಪ್ರದೀಪ್ ಮತ್ತು ನಿರ್ದೇಶಕ ಸುಧೀರ್ ಅತ್ತಾವರ್ ಕಾರ್ಯಕ್ತಮ ನಿರ್ವಹಿಸಿದರು.ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಮತ್ತು ಇಪಿ ವಿದ್ಯಾಧರ್ ಶೆಟ್ಟಿ ಅಥಿತಿಗಳನ್ನು ಗೌರವಿದರು.

ಅನೇಕ ಪತ್ರಕರ್ತರು ಸ್ಪಾಟ್ ಬಹುಮನಗಳನ್ನೂ ಗೆದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ