ಸರಸ್ವತಿ*

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಮ್ಯಾಜಿಕ್ ಥಿಯೇಟರ್ ನಲ್ಲಿ ಮುಂದುವರೆದಿದೆ. ಸಿನಿಮಾಗೆ ಸಿಕ್ತಿರುವ ಸಕ್ಸಸ್ ಬೆನ್ನಲ್ಲೇ ಸುದೀಪ್ ಥಿಯೇಟರ್ ವಿಸಿಟ್ ಆರಂಭಿಸಿದ್ದಾರೆ. ಮೊನ್ನೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ‌ ಜೊತೆ ಕುಳಿತು ಚಿತ್ರ ವೀಕ್ಷಣೆ ಮಾಡಿದರು.

ನಿನ್ನೆ ಮೈಸೂರಿಗೆ ಭೇಟಿ ಕೊಟ್ಟು ಚಾಮುಂಡಿ ಬೆಟ್ಟದಲ್ಲಿ ತಾಯಿಯ ದರ್ಶನ ಪಡೆದರು. ನಂತರ ಮೈಸೂರಿನ ಸಂಗಮ ಚಲನಚಿತ್ರ ಮಂದಿರಕ್ಕೆ ಅಭಿಮಾನಿಗಳ ಜೊತೆ ಕಿಚ್ಚ ಮಾರ್ಕ್ ವೀಕ್ಷಣೆ ಮಾಡಬೇಕಿತ್ತು.‌ಆದ್ರೆ ಕಿಚ್ಚನ ಆಗಮನದ ವಿಶೇಷ ತಿಳಿದು ಬರೋಬ್ಬರಿ‌ 15 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಥಿಯೇಟರ್ ಮುಂದೆ ಜಮಾಯಿಸಿದ್ದರು. ಹೀಗಾಗಿ ಸುದೀಪ್ ಚಿತ್ರ ನೋಡದೇ ವಾಪಸ್ಸು ತೆರಳಿದರು.

kichhas1

ಡಿಸೆಂಬರ್ 25ರಂದು ರಿಲೀಸ್ ಆದ ‘ಮಾರ್ಕ್’ ಸಿನಿಮಾ ನಾಲ್ಕು ದಿನಗಳಲ್ಲಿ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪ್ರೇಕ್ಷಕರ ಪ್ರೀತಿ ಜೊತೆಗೆ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಮ್ಯಾಕ್ಸ್ ಬಳಿಕ ಕಿಚ್ಚ ಹಾಗೂ ವಿಜಯ್ ಕಾರ್ತಿಕೇಯ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ