ಸರಸ್ವತಿ*
ಬೆಳ್ಳಿಪರದೆಯಲ್ಲಿ ಕಿಚ್ಚನ ಮಾರ್ಕ್ ಮೇನಿಯಾ ಮುಂದುವರೆದಿದೆ. ಮೊದಲ ಎರಡು ವಾರ ಉತ್ತಮ ಕಲೆಕ್ಷನ್ ಮಾಡಿರುವ ಸಿನಿಮಾವೀಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಡಿಸೆಂಬರ್-25 ರಂದು ಬಿಡುಗಡೆಯಾದ ಮಾರ್ಕ್ ಚಿತ್ರ ಮಾಸ್ ಜೊತೆಗೆ ಕ್ಲಾಸ್ ಆಡಿಯನ್ಸ್ ನ್ನು ತನ್ನತ್ತ ಸೆಳೆದಿದೆ.
ಮೂರನೇ ವಾರವೂ ಮಾರ್ಕ್ ಓಟ ಮುಂದುವರೆದಿದ್ದು, ಇಲ್ಲಿಯವರೆಗೆ ಸಿನಿಮಾ ಬರೋಬ್ಬರಿ 51 ಕೋಟಿ 30 ಲಕ್ಷವನ್ನು ಚಾಚಿಕೊಂಡಿದೆ. ಅಭಿಮಾನಿಗಳು, ಪ್ರೇಕ್ಷಕರು, ಯುವಕರು ಮತ್ತು ಫ್ಯಾಮಿಲಿ ಆಡಿಯನ್ಸ್ ಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಮಾರ್ಕ್ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುದೀಪ್ ಜೊತೆ ಯೋಗಿ ಬಾಬು, ನವೀನ್ ಚಂದ್ರ ಮೊದಲಾದವರು ನಟಿಸಿದ್ದಾರೆ. ಮಾರ್ಕ್ ಚಿತ್ರದಲ್ಲಿ ಕಿಚ್ಚನ ಮ್ಯಾನರಿಸಂ, ಸ್ಟೈಲ್, ಸ್ವ್ಯಾಗ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





