ಸರಸ್ವತಿ *

L A ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದ್ ಕುಮಾರ್ ನಿರ್ಮಾಣದ, ವಿಜಯ್ ನಿರ್ದೇಶನದ ಹಾಗೂ ಹೇಮಂತ್ ಕುಮಾರ್ ಎಂಬ ನೂತನ ಪ್ರತಿಭೆ ನಾಯಕನಾಗಿ ನಟಿಸಿರುವ “ಆಲ್ಫಾ #MEN LOVE VENGEANCE* ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗೆ ಮಂತ್ರಿ ಮಾಲ್ ನಲ್ಲಿ ಸಹಾಸ್ರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯತು. ಅನೂಪ್ ಸೀಳನ್ ಸಂಗೀತ ಸಂಯೋಜಿಸಿರುವ, ನಾಗಾರ್ಜುನ ಶರ್ಮ ಬರೆದಿರುವ ಹಾಗೂ ವ್ಯಾಸರಾಜ ಸೋಸಲೆ ಹಾಡಿರುವ ಶೀರ್ಷಿಕೆ ಗೀತೆ ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿರುವ ಈ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗಾಗಲೇ ಹಾಡುಗಳು ಹಾಗೂ ಟೀಸರ್ ಮೂಲಕ ಜನರ ಮನ ತಲುಪಿರುವ ಈ ಚಿತ್ರ ಫೆಬ್ರವರಿ 20ರಂದು ಬಿಡುಗಡೆಯಾಗುತ್ತಿದೆ‌. ಟೈಟಲ್ ಟ್ರ್ಯಾಕ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಟೈಟಲ್ ಟ್ರ್ಯಾಕ್ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ನಾಗಾರ್ಜುನ ಶರ್ಮ ಅವರು ಬರೆದಿರುವ ಈ ಹಾಡನ್ನು ವ್ಯಾಸರಾಜ ಸೋಸಲೆ ಅದ್ಭುತವಾಗಿ ಹಾಡಿದ್ದಾರೆ. ‘ಆಲ್ಫಾ’ ಚಿತ್ರದ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ ಎಂದರು ಸಂಗೀತ ಸಂಯೋಜಕ ಅನೂಪ್ ಸೀಳಿನ್.

Alpha 1

ನಾನು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದಿರುವವನು. ಆದರೆ ಮೊದಲಿನಿಂದಲೂ ನಟನಾಗಬೇಕು ಎಂಬ ಕನಸನ್ನು ಹೊತ್ತವನು. ಆದರೆ ನಾಯಕನಾಗುವ ಮೊದಲು ನಟನೆಗೆ ಬೇಕಾದ ಎಲ್ಲಾ ಅಭ್ಯಾಸವನ್ನು ಕಲಿತು ಬಂದಿದ್ದೇನೆ. ಜನರು ನಮ್ಮ ಚಿತ್ರವನ್ನು ಮುಚ್ಚಿಕೊಳ್ಳುವ ಭರವಸೆ ಇದೆ. ನಿರ್ದೇಶಕರು ಮಾಡಿಕೊಂಡಿರುವ ಕಥೆ, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ, ನಾಗಾರ್ಜುನ ಶರ್ಮ ಅವರ ಸಾಹಿತ್ಯ ಎಲ್ಲವೂ ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ ಟೈಟಲ್ ಟ್ರ್ಯಾಕ್ ಕೂಡ ಕೂಡ ಸೊಗಸಾಗಿದೆ. ಚಿತ್ರತಂಡದ ಸಹಕಾರದಿಂದ “ಆಲ್ಫಾ” ತುಂಬಾ ಚೆನ್ನಾಗಿ ಮೂಡಿಬಂದಿದೆ. ಫೆಬ್ರವರಿ 20 ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನನ್ನ ಚೊಚ್ಚಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಾಯಕ ಹೇಮಂತ್ ಕುಮಾರ್ ತಿಳಿಸಿದರು.

ನೆಗಟಿವ್ ಶೇಡ್ ನಲ್ಲಿ ಅಭಿನಯಿಸಿದ್ದೇನೆ. ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು “ಬಿಗ್ ಬಾಸ್” ಖ್ಯಾತಿಯ ಕಾರ್ತಿಕ್ ಮಹೇಶ್ ಹೇಳಿದರು.

Alpha 2

ಚಿತ್ರತಂಡದ ಸದಸ್ಯರ ಸಹಕಾರಕ್ಕೆ ನಿರ್ದೇಶಕ ವಿಜಯ್ ಧನ್ಯವಾದ ತಿಳಿಸಿದರು.

ನಾಯಕಿಯರಾದ ಆಯನಾ, ಗೋಪಿಕಾ ಸುರೇಶ್, ನಟ ಬಾಲು ನಾಗೇಂದ್ರ ಹಾಗೂ ಗೀತರಚನೆಕಾರ ನಾಗಾರ್ಜುನ ಶರ್ಮ ಮುಂತಾದವರು ಹಾಡು ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ