ಸರಸ್ವತಿ*
ಕಳೆದ ವರ್ಷಾಂತ್ಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಕಿಚ್ಚನ ''ಮಾರ್ಕ್'' ಸಿನಿಮಾ ಥಿಯೇಟರ್ ಅಂಗಳದಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದ ಈ ಚಿತ್ರವೀಗ 25 ದಿನ ಪೂರೈಸಿದೆ. ಈ ಸಂಭ್ರಮದ ನಡುವೆ ಮಾರ್ಕ್ ಒಟಿಟಿ ಎಂಟ್ರಿಗೂ ಸಜ್ಜಾಗಿದೆ.
*ಮಾರ್ಕ್ ಒಟಿಟಿ ಎಂಟ್ರಿ ಯಾವಾಗ?*
ಮಾರ್ಕ್ ಚಿತ್ರ ಓಟಿಟಿಗೆ ಬರ್ತಿದೆ.
ಇದೇ ಜನವರಿ-23 ರಿಂದಲೇ ಜೀಯೋ ಹಾಟ್‌ಸ್ಟಾರ್ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್ ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ಮಾರ್ಕ್ ಕಣ್ತುಂಬಿಕೊಳ್ಳಬಹುದು.
ಮಾರ್ಕ್ ನಲ್ಲಿ ಕಿಚ್ಚನ ಆಕ್ಟಿಂಗ್, ಮ್ಯಾನರಿಸಂ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ಟೈಟ್ ಆದ ಚಿತ್ರಕತೆ ಹೊಂದಿರುವ ‘ಮಾರ್ಕ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದರು. ಈ ಹಿಂದೆ ಕಿಚ್ಚನಿಗೆ ‘ಮ್ಯಾಕ್ಸ್’ ಸಿನಿಮಾ ಮಾಡಿ ಯಶಸ್ಸು ಕಂಡಿದ್ದರು.
ಈ ಸಿನಿಮಾದಲ್ಲಿ ಸುದೀಪ್ ಜೊತೆ ತಮಿಳಿನ ಯೋಗಿ ಬಾಬು, ಮಲಯಾಳಂನ ಶೈನ್ ಟಾಮ್ ಚಾಕೊ, ನವೀನ್ ಚಂದ್ರ , ನಿಶ್ವಿಕಾ ನಾಯ್ಡು, ರೋಶಿಕಾ ನಟಿಸಿದ್ದರು. ಸತ್ಯಜ್ಯೋತಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ ಬ್ಯಾನರ್ ನಡಿ ಮಾರ್ಕ್ ಸಿನಿಮಾ ನಿರ್ಮಾಣವಾಗಿತ್ತು.





