ರಾಘವೇಂದ್ರ ಅಡಿಗ ಎಚ್ಚೆನ್.

ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು ಮದುವೆಗೆ ರೆಡಿ ಆಗಿದ್ದಾರೆ. ಸಂಧ್ಯಾ  ಜೊತೆ ಇಂದು (23 ಜನವರಿ 2026) ಸಪ್ತಪದಿ ತುಳಿಯಲಿದ್ದಾರೆ. ಈ ದಂಪತಿ ಹಳದಿ ಶಾಸ್ತ್ರ ನೆರವೇರಿಸಿಕೊಂಡಿದ್ದಾರೆ. ಧರ್ಮಸ್ಥಳದಲ್ಲಿ  ಈ ಜೋಡಿ ಮದುವೆ ಆಗುತ್ತಿದೆ. ಮಂಜುನಾಥನ ಸಾನಿಧ್ಯದಲ್ಲಿ ಇವರು ವಿವಾಹವಾಗಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ, ಕನ್ನಡದ ಸ್ಟಾರ್ ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ಕೂಡ ಧರ್ಮಸ್ಥಳದಲ್ಲಿಯೇ ಮದುವೆ ಆಗಿದ್ದರು. ಮಂಜು ಅವರ ವಿವಾಹ ಕೂಡ ಸಿಂಪಲ್ ಆಗಿ ನಡೆಯಲಿದೆ. ಕೇವಲ ಆಪ್ತರು ಮಾತ್ರ ಈ ಮದುವೆಗೆ ಹಾಜರಿ ಆಗಿ ಹರಸಲಿದ್ದಾರೆ ಎನ್ನಲಾಗಿದೆ.

ugram 1

ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಹಾಗೂ ನಟ ಉಗ್ರಂ ಮಂಜು, ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿರುವ ಸಾಯಿ ಸಂಧ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿವಾಹಕ್ಕೂ ಮೊದಲು, ಅವರ ಮನೆಯಲ್ಲಿ ಅರಿಶಿಣ ಶಾಸ್ತ್ರ ಸರಳವಾಗಿ ನೆರವೇರಿದೆ.
ವಿವಾಹ ಮಹೋತ್ಸವಕ್ಕೂ ಮುನ್ನ ಮಂಜು ಅವರ ಮನೆಯಲ್ಲಿ ಅರಿಶಿಣ ಶಾಸ್ತ್ರ ಅತ್ಯಂತ ಸರಳವಾಗಿ ಮತ್ತು ಸಂಪ್ರದಾಯಬದ್ಧವಾಗಿ ನೆರವೇರಿದೆ. ಉಗ್ರಂ ಮಂಜು ಅವರ ನಿವಾಸದಲ್ಲಿ ನಡೆದ ಹಳದಿ ಶಾಸತ್ರದ ಕಾರ್ಯಕ್ರಮದಲ್ಲಿ ಅವರ ಕುಟುಂಬ ಸದಸ್ಯರು, ಆಪ್ತರು ಹಾಗೂ ಆತ್ಮೀಯ ಸ್ನೇಹಿತವರ್ಗ ಮಾತ್ರ ಭಾಗವಹಿಸಿದ್ದರು.

ugram 2

ಅರಿಶಿಣ ಹಚ್ಚಿಕೊಂಡು ಮಧುಮಗನ ಕಳೆಯಲ್ಲಿ ಮಂಜು ಕಂಗೊಳಿಸುತ್ತಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಖುಷಿಖುಷಿಯಾಗಿ ಉಗ್ರಂ ಮಂಜು ಅವರು ಹಳದಿ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾರೆ.. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಈ ಜೋಡಿಯ ನಿಶ್ಚಿತಾರ್ಥ ನಡೆದು ಸುದ್ದಿಯಾಗಿತ್ತು.
ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಉಗ್ರಂ ಮಂಜು ಅವರ ಮದುವೆ ವಿಚಾರ ಸಾಕಷ್ಟು ಸೌಂಡ್ ಮಾಡಿತ್ತು. ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯೊಳಗೆ ಮಂಜು ಅವರ ಗೆಳೆಯರು ಆಗಮಿಸಿ, ಅಲ್ಲಿಯೇ ಗ್ರ್ಯಾಂಡ್ ಆಗಿ ಬ್ಯಾಚುಲರ್ ಪಾರ್ಟಿ ಕೂಡ ಆಯೋಜಿಸಿ ಸುದ್ದಿಯಾಗಿದ್ದರು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ