ಪಾರ್ಕಿಂಗ್ ಫೀಸ್ ಹೆಚ್ಚಿಸಿ, ಮನೆಗಳನ್ನು ಕಷ್ಟಕ್ಕೆ ಸಿಲುಕಿಸಿ!
ದೆಹಲಿಯಂಥ ಮಹಾನಗರದಲ್ಲಿ ಪರಿಸರ ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರಗಳು ಹಾಗೂ ಮುನಿಸಿಪಲ್ ಬಾಡೀಸ್ ತಲೆಬಾಲವಿಲ್ಲದ ಉಪಾಯ ಹುಡುಕುತ್ತಿರುತ್ತವೆ. ಅದರಲ್ಲಿ ಡೀಸೆಲ್ ಸೆಟ್ ಗಳನ್ನು ಬಂದ್ ಮಾಡಿಸಿ, ಗಾಡಿಗಳನ್ನು ಆಡ್ ಈವೆನ್ ಆಗಿ ಓಡಿಸುವುದು, ಪಾರ್ಕಿಂಗ್ ಜಾಗದಲ್ಲಿ ಚಾರ್ಜ್ ಹೆವಿ ಮಾಡಿಸುವುದು, ನಗರಗಳಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನುಗ್ಗಿದರೆ ದಂಡ ಇತ್ಯಾದಿ ಮಾಮೂಲಿ ಆಗಿವೆ. ಈ ಎಲ್ಲಾ ಉಪಾಯಗಳೂ ಸರ್ಕಾರಿ ಅಧಿಕಾರಿಗಳು ಹಾಯಾಗಿ ತಮ್ಮ ಕಛೇರಿಗಳ ಸೀಟುಗಳಲ್ಲಿ ಕುಳಿತು ಕಂಡುಕೊಂಡ ಪರಿಹಾರಗಳಾಗಿವೆ.
ನಗರಗಳಲ್ಲಿ ಅನೇಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ. ಮುಖ್ಯ ಇಲ್ಲಿ ದುರ್ವಾಸನೆ, ಟ್ರಾಫಿಕ್ ಜ್ಯಾಮ್ ಇತ್ಯಾದಿ ಈ ಅಧಿಕಾರಿಗಳದೇ ಕಿತಾಪತಿ ಆಗಿರುತ್ತದೆ. ಪರಿಸರ ಮಾಲಿನ್ಯ ತಪ್ಪಿಸುತ್ತೇವೆ ಎಂಬ ನೆಪದಲ್ಲಿ ಲಕ್ಷವಲ್ಲ ಕೋಟ್ಯಂತರ ಹಣವನ್ನು ಬಜೆಟ್ ನಲ್ಲಿ ಪಾಸ್ ಮಾಡಿಸಿಕೊಳ್ಳುತ್ತಾರೆ, ಅದರಲ್ಲಿ ಅರ್ಧದಷ್ಟು ಅವರ ಜೇಬಿಗೇ ಇಳಿದಿರುತ್ತದೆ. ಹೀಗಾಗಿಯೇ ನಗರದ ಮೂಲೆ ಮೂಲೆಗಳೂ ದುರ್ನಾತ ಬೀರುತ್ತಾ, ಪರಿಸರ ಮಾಲಿನ್ಯ ಮಿತಿ ಮೀರಿದೆ.
ಡೀಸೆಲ್ ಜೆನರೇಟರ್ ಗಳಿಂದ ಹೊರಡುವ ಹೊಗೆ, ಈ ಸರ್ಕಾರಿ ವಾಹನಗಳ ದಟ್ಟ ಹೊಗೆ ಮುಂದೆ ಏನೂ ಇಲ್ಲ, ಸ್ವಂತ ಸಂಚಾರಕ್ಕಾಗಿಯೇ ಟ್ರಾಫಿಕ್ ಜ್ಯಾಮ್ ಹೆಚ್ಚಿಸುತ್ತಾರೆ. ಪ್ರತಿ ಜಾಗಕ್ಕೂ ಮುಖ್ಯ ಮಂತ್ರಿ, ಮಂತ್ರಿ ಮಂಡಲದ ಎಲ್ಲರ ವಾಹನಗಳೂ ದೊಡ್ಡ ಸಾಲುಗಳಲ್ಲಿ ಬಂದು ತುಂಬಿಕೊಂಡರೆ ಟ್ರಾಫಿಕ್ ಬಿಗಡಾಯಿಸದೆ ಇನ್ನೇನಾದೀತು? ರಸ್ತೆಗಳು ಎಲ್ಲಾ ಕಡೆ ಬಂದ್ ಆಗಿಹೋಗತ್ತವೆ. ಈ ಎಲ್ಲದರಿಂದ ಪಬ್ಲಿಕ್ ಗೆ ಆಗುವ ತೊಂದರೆಗೆ ಯಾರು ಹೊಣೆ? ಇದು ತಪ್ಪುವುದಾದರೂ ಎಂದು?
ನಗರಗಳಲ್ಲಿ ಪಾರ್ಕಿಂಗ್ ಫೀಸ್ ಹೆಚ್ಚಿಸುವುದರಿಂದ ಗಾಡಿಗಳ ಸಂಖ್ಯೆ ಕಡಿಮೆ ಆದೀತು ಎಂಬುದು ಕೇವಲ ಭ್ರಮೆ. ಬೇಕಾದರೆ ಜನ ಇನ್ನಷ್ಟು ದೂರ ಹೋಗಿ ಗಾಡಿ ನಿಲ್ಲಿಸಿ ಬರುತ್ತಾರೆ. ಪೆಟ್ರೋಲ್, ಡೀಸೆಲ್ ದಂಡ ಅಷ್ಟೆ. ಫೀಸ್ ಆಗದ ಕಡೆ ಗಾಡಿ ನಿಲ್ಲಿಸಿ ಜನ ತಮ್ಮ ಸ್ಮಾರ್ಟ್ ನೆಸ್ ತೋರಿಸುತ್ತಾರೆ. ಇದರಿಂದ ಟ್ರಾಫಿಕ್ ಪೊಲೀಸರು, ಜನ ಸಾಮಾನ್ಯರ ನಡುವಿನ ವಿರಸ ಹೆಚ್ಚುತ್ತದೆ, ಕೈಕೈ ಮಿಲಾಯಿಸುವ ಸ್ಥಿತಿ ಬರಬಹುದು.
ನಗರಗಳ ವಾಯು ಮಾಲಿನ್ಯ ತಪ್ಪಿಸಲು ಮಾಡಬೇಕಾದ ಮೊದಲ ಕೆಲಸ, ಸಮರ್ಪಕ ಟ್ರಾಫಿಕ್ ಮ್ಯಾನೇಜ್ ಮೆಂಟ್, ಆದರೆ ಇದನ್ನು ಮಾಡಿಸಲು ಯಾರಿಗೂ ಇಷ್ಟವಿಲ್ಲ. ಏಕೆಂದರೆ ಈ ಕೆಲಸವನ್ನು ಸರ್ಕಾರಿ ಅಧಿಕಾರಿ, ಇನ್ ಸ್ಪೆಕ್ಟರ್ ಗಳೇ ಮಾಡಬೇಕು, ಇವರುಗಳಿಗೆ ಮೇಲು ಆದಾಯ ಇಲ್ಲದೆ ಈ ಕೆಲಸ ಆಗದು, ನಾಗರಿಕರ ಸಮಸ್ಯೆ ಇವರಿಗೆ ಬೇಕಿಲ್ಲ. ರಸ್ತೆಗಳ ಬದಿಯ ಸಣ್ಣಪುಟ್ಟ ಅಂಗಡಿ, ಹೂ ತರಕಾರಿ ಹಣ್ಣು ಮಾರುವವರ ರಗಳೆ ಇಲ್ಲದಿದ್ದರೆ ಅರ್ಧ ಟ್ರಾಫಿಕ್ ತಂತಾನೇ ತಗ್ಗಿ ಹೋಗುತ್ತದೆ. ಈ ಟ್ರಾಫಿಕ್ ಜ್ಯಾಮ್ ನಿಂದ ಹರಡುವ ದಟ್ಟ ಹೊಗೆ ಗಂಭೀರ ಕಾಯಿಲೆ ತರಬಲ್ಲದು.
ಸರ್ಕಾರಿ ಅಧಿಕಾರಿ, ಟ್ರಾಫಿಕ್ ಪೊಲೀಸ್ ಮುಂತಾದವರು ಸಾಕಷ್ಟು ಸಂಖ್ಯೆಯಲ್ಲಿ ಟ್ಯಾಕ್ಸಿ, ಆಟೋ, ರಿಕ್ಷಾಗಳನ್ನು ಸಂಚರಿಸಲು ಬಿಡುವುದಿಲ್ಲ. ಅದರಲ್ಲಿ ಲೋಪದೋಷ ಇದ್ದಾಗ ಮಾತ್ರ ಇವರ ಜೇಬಿಗೆ ಗಿಂಬಳ! ಇವರುಗಳಿಗೆಲ್ಲ ಪರ್ಮಿಟ್ ಇಶ್ಯು ಆಗುವಷ್ಟರಲ್ಲಿ ಅದೆಷ್ಟು ಕೈಗಳಿಗೆ ಲಂಚ ಬದಲಾಗಿರುತ್ತದೋ?!! ಪಾರ್ಕಿಂಗ್ ಫೀಸ್ ಹೆಚ್ಚಿಸುವ ಮೊದಲು ಪರ್ಯಾಯ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಇವರು ಚಿಂತಿಸುವುದೇ ಇಲ್ಲ.
ಮುಂಬೈನಲ್ಲಿ ಹಿಂದೆಲ್ಲ ಶೇರಿಂಗ್ ಕ್ಯಾಬ್ ನ ಮಹತ್ವ ಹೆಚ್ಚಾಗಿತ್ತು. ಈಗಂತೂ ಇದು ಇಲ್ಲವೇ ಇಲ್ಲ. 2 ಸೀಟರ್, 3 ಸೀಟರ್ ಆಟೋ ಇವುಗಳನ್ನು ಇಲ್ಲವಾಗಿಸಿವೆ. ಅಸಲಿಗೆ ಶೇರಿಂಗ್ ಕ್ಯಾಬ್ ಇವೆಲ್ಲದಕ್ಕಿಂತ ಬೆಟರ್ ಆಗಿತ್ತು. `ಕಾಲ್ ಎ ಶೇರ್ ಕ್ಯಾಬ್’ ಸೌಲಭ್ಯ ಒದಗಿಸುವುದು ಅಸಾಧ್ಯವೇನಲ್ಲ. ಆದರೆ ಇದಕ್ಕಾಗಿ ಮುನಿಸಿಪಲ್ ಅಧಿಕಾರಿಗಳು ಎಲ್ಲದಕ್ಕೂ ಏಕೆ ಮೂಗು ತೂರಿಸಬೇಕು? ಅವರಿಗೆ ಹಣದ ಗಿಡ ಬೇಕಷ್ಟೆ, ಸೇವಾ ಮನೋಭಾವ ಇಲ್ಲ.
ಪಾರ್ಕಿಂಗ್ ಫೀಸ್ ಹೆಚ್ಚಿಸುವುದರ ಅರ್ಥ ಮನೆ ಮಂದಿಯ ಎಲ್ಲರ ಹಣ ಹೀರುವುದು. ಗಾಡಿಗಳನ್ನು ಕಡಿಮೆಗೊಳಿಸುವುದು ಎಂದರೆ, ಹೆಣ್ಣುಮಕ್ಕಳನ್ನು ಸಮಾಜದಲ್ಲಿ ಹರಡಿದ ತೋಳಗಳ ಮುಂದೆ ಛೂ ಬಿಡುವುದು ಅಂತ. ಪಬ್ಲಿಕ್ ಟ್ರಾನ್ಸ್ ಪೋರ್ಟ್ ಸರ್ವೀಸ್ ಕೇಳಲಿಕ್ಕೇನೋ ಚೆನ್ನಾಗಿರುತ್ತದೆ, ಆದರೆ ಹೆಣ್ಣುಮಕ್ಕಳಿಗೆ ಇಲ್ಲೇ ಹೆಚ್ಚಿನ ಕಾಟ ಇರುವುದು. ಆದರೆ ಸರ್ಕಾರಿ ಅಧಿಕಾರಿಗಳಿಗೆ ಈ ಹೆಣ್ಣುಮಕ್ಕಳಿಗೆ ಒಳ್ಳೆಯದು ಮಾಡಿ ಏನು ಆಗಬೇಕಿದೆ? ಪಬ್ಲಿಕ್ ಗೆ ಗರಿಷ್ಠ ತೊಂದರೆ ನೀಡುವ ನೀತಿ ನಿಯಮ ರೂಪಿಸುವುದರಲ್ಲಿ ಅವರ ಸರ್ವೀಸ್ ಕಳೆದುಹೋಗುತ್ತದೆ. ಪಾರ್ಕಿಂಗ್ ಫೀಸ್ ಹೆಚ್ಚಿಸುವುದು ಅಂದ್ರೆ ಶಾಪಿಂಗ್ ಯಾ ರೆಸ್ಟೋರೆಂಟ್ ಗೆ ಹೋಗಲು ಮತ್ತೊಂದು ಹೆಚ್ಚುವರಿ ಟ್ಯಾಕ್ಸ್ ಕಟ್ಟಿದಂತೆ, ಅದೂ ಸೌಲಭ್ಯಗಳೇ ಇಲ್ಲದೆ!
ವಾಗ್ದಾನಗಳೇನೋ ಸರಿ, ನೆರವೇರುವುದು ಎಂದೋ?
ಇತ್ತೀಚೆಗೆ ಸೈಬರ್ ಫ್ರಾಡ್ ಒಂದು ಹೊಸ ತಿರುವು ಪಡೆಯುತ್ತಿದೆ. ಇಂಥ ಫ್ರಾಡ್ ಮಾಡುವವರು ಎಲ್ಲಾ ದೇಶಗಳಲ್ಲೂ ಕ್ಷುದ್ರ ಕ್ರಿಮಿಕೀಟಗಳಂತೆ ಎಲ್ಲೆಡೆ ಹರಡಿಹೋಗಿದ್ದಾರೆ. ಈ ಕಿಡಿಗೇಡಿಗಳು ಹೆಂಗಸರಿಗೆ ಫೋನ್ ಮಾಡಿ ಅವರುಗಳ ಪತಿ/ಮಗ/ತಮ್ಮ ಪೊಲೀಸ್ ಠಾಣೆಯಲ್ಲಿದ್ದಾನೆ, ಅವರು ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದಾರೆ, ಅವರ ವಿಮಾಪಾಲಿಸಿ ಮೆಚ್ಯೂರ್ ಆಗಿದೆ, ಈಗಲೇ ಬಂದರೆ ಕ್ಯಾಶ್ ಸಿಗುತ್ತೆ ಇತ್ಯಾದಿ ಏನೋ ಒಂದು ಹೇಳಿ ನಂಬಿಸಿಬಿಡುತ್ತಾರೆ. ಹೀಗೆ ಫ್ರಾಡ್ ಮಾಡುವವರು ಬಲು ಬೇಗ ಆತಂಕಕ್ಕೆ ಒಳಗಾಗುವ ಹೆಂಗಸರ ಮನೋಭಾವ ಗ್ರಹಿಸುತ್ತಾರೆ. ಅವರು ಭಯಭೀತರು, ಅತಿ ಆಸೆಯುಳ್ಳವರು, ಪವಾಡ ನಂಬುವವರು, ಮುಖ್ಯ ಮೂರ್ಖರು ಅಂತ.
ಸದ್ಯಕ್ಕಂತೂ ಸರ್ಕಾರ ಎಷ್ಟೋ ಪ್ರಕರಣಗಳಲ್ಲಿ ತಕ್ಷಣ ಆನ್ ಲೈನ್ ಡೀಲಿಂಗ್ ಮಾಡಲು ಆದೇಶ ನೀಡುತ್ತಿರುವುದರಿಂದ, ಹೆಂಗಸರು ಸಹಜವಾಗಿಯೇ ಅನೇಕ ವಿಷಯಗಳಲ್ಲಿ ಆನ್ ಲೈನ್ ಆಗಿರುತ್ತಾರಾದ್ದರಿಂದ, ಅವರು ಇಂಥ ವಿಷಯಗಳಲ್ಲಿ ಬೇಗ ಬೇಗ ಸರತಿಯಲ್ಲಿ ಮುಂಚೂಣಿಯಲ್ಲಿರಲು ಇಂಥ ಆನ್ ಲೈನ್ ಫೇಸ್ ಲೆಸ್ ನ ಚಕ್ರವ್ಯೂಹಕ್ಕೆ ಸಿಲುಕುತ್ತಾರೆ. ಹೀಗೆಲ್ಲ ಬವರು ಆನ್ ಲೈನ್ ಮೆಸೇಜುಗಳ ಸತ್ಯಾಸತ್ಯತೆ ಅಥವಾ ಅಂಥವಕ್ಕೆ ಒಂದು ಕಛೇರಿ/ವಿಳಾಸ ಇದ್ದೀತೇ ಎಂಬುದನ್ನೂ ಯೋಚಿಸುವುದಿಲ್ಲ. ಇಂಥದ್ದರ ಮಾಲೀಕರ ಬಗ್ಗೆಯೂ ಏನೂ ತಿಳಿಯುವುದಿಲ್ಲ. ಇಂಥ ಹೆಂಗಸರಿಗೆ ಈ ಫೋನ್ ಕಾಲ್ ಯಾ ಮೆಸೇಜ್ ಒಂದು ಅಶರೀರವಾಣಿಯೇ ಸರಿ!
ಸದಾ ಪೌರಾಣಿಕ ಕಥೆಗಳಿಗೆ ಮರುಳಾದ ಇಂಥ ಹೆಂಗಸರು ವರ/ಶಾಪಗಳ ಗೊಂದಲದಲ್ಲಿ, ಫೋನನಲ್ಲಿ ಬರುವ ದುರಾಸೆಯ ಆಫರ್/ಧಮಕಿಗಳಿಗೆ ಬೇಗ ಶಾಮೀಲಾಗುತ್ತಾರೆ. ಏಕೆಂದರೆ ಸರ್ಕಾರ/ಧರ್ಮ ಸದಾ ಎಲ್ಲ ಇದ್ದಕ್ಕಿದ್ದಂತೆ ಆಗಿಹೋಗುತ್ತದೆ ಎಂದೇ ಜನರನ್ನು ನಂಬಿಸಿದೆ! ಹೆಂಗಸರು ಸರದಿಯಲ್ಲಿ ನಿಂತು ಗಣೇಶನ ಮೂರ್ತಿಗೆ ಹಾಲು ಕುಡಿಸುತ್ತಾರೆ, ಉಚಿತವಾಗಿ ಬಿಟ್ಟಿ ಸೀರೆ ಸಿಗುತ್ತಿದೆ ಎಂದರೆ ಕಾಲ್ತುಳಿತಕ್ಕೆ ಸಿಲುಕಲಿಕ್ಕೂ ರೆಡಿ! ಇಂಥವರು ಆನ್ ಲೈನ್ ರ/ಬೆದರಿಕೆಗೆ ಮಣಿಯದೆ ಇರುತ್ತಾರೆಯೇ?
ಈಗ ಸರ್ಕಾರ ನಡೆಸುತ್ತಿರುವ ಪ್ರಯತ್ನ ಎಂದರೆ, ಅದು ತಾನು ಮಾಡಿದ ಕುಕೃತ್ಯವಾದ ಅರ್ಜೆಂಟ್ ಆನ್ ಲೈನ್ ಪೋರ್ಟೆಲ್ ಬಿಡುಗಡೆ ಮಾಡಿ, ಸರ್ಕಾರದ ಆದೇಶ ಎಂಬಂತೆ ರಾಶಿ ರಾಶಿ ಮೆಸೇಜುಗಳನ್ನು ಹೇರುವುದನ್ನು ತುಸು ಕಂಟ್ರೋಲ್ ಮಾಡೋಣ ಎನಿಸಿದೆ. ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ ಟೆಲ್ ಗಳಿಗೆ ಆದೇಶ ನೀಡಿ, ಮಾರ್ಕೆಟಿಂಗ್ ನವರು, ಪ್ರಾಡಕ್ಟ್ ವಿತರಕರು ಒದಗಿಸು ಮಾಹಿತಿಗಳನ್ನು ತಕ್ಷಣ ನಿಲ್ಲಿಸುವ ಯೋಜನೆ ಜಾರಿಗೊಳಿಸಬೇಕೆಂದು ಹೇಳಿದೆ. ಇಂಥ ಟೆಲಿಕಾಂ ಕಂಪನಿಗಳಿಗೆ ಈ ಪರಿಯ ಮಾಹಿತಿಗಳಿಂದ ಕೋಟ್ಯಂತರ ಲಾಭವಿದೆ. ಹೀಗಾಗಿ ಅವೇಕೆ ಅದರ ರವಾನೆ ನಿಲ್ಲಿಸಿಯಾ?
ನರೇಂದ್ರ ಮೋದಿಯವರು 30ನೇ ಆಗಸ್ಟ್ 2024ರಂದು ಡಿಜಿಟಲ್ ಫ್ರಾಡ್ ಮಾಡುವವರನ್ನು ದೇಶದ ಪ್ರಗತಿ ಸಾಧಿಸದಂತೆ ತಡೆಯಲಾಗದು ಎಂದು ಹೇಳಿದ್ದರು. 15 ಲಕ್ಷ ಪ್ರತಿ ಖಾತೆಗೂ ಜಮಾ ಮಾಡಲಾಗುತ್ತದೆ ಎಂದು ನೀಡಿದ ವಾಗ್ದಾನದಂತೆಯೇ ಇದೂ ಕೂಡ! ನೋಟ್ ರದ್ದಿನಿಂದ ಬ್ಲ್ಯಾಕ್ ಮನಿ ಹಾವಳಿ ನಿಲ್ಲುತ್ತದೆ ಎಂಬಂತೆ! ಎಲೆಕ್ಟ್ರೋರ್ ಬ್ರಾಂಡ್ಸ್ ನಿಂದ ರಾಜಕೀಯದಲ್ಲಿ ಖಾಸಗಿ ಕಂಪನಿಗಳ ಮೂಗು ತೂರಿಸುವಿಕೆಯನ್ನು ನಿಲ್ಲಿಸುವ ವಾಗ್ದಾನದಂತೆಯೇ ಯಾವ ವಾಗ್ದಾನವೂ ನೆರವೇರುತ್ತಿಲ್ಲ! ಈ ಎಲ್ಲಾ ವಾಗ್ದಾನಗಳು ಭಗವಂತನ ಕೃಪಾಶೀರ್ವಾದದಂತೆಯೇ ದೊಡ್ಡ ಹುಂಡಿಗಳಲ್ಲಿ ದಾನ ಸ್ವೀಕರಿಸಿ, ಅತ್ತ ನೌಕರಿಯನ್ನು ಕೊಡಿಸದೆ, ಇತ್ತ ರೋಗರುಜಿನ ದೂರ ಮಾಡದೆ, ಚಿನ್ನದ ನಾಣ್ಯಗಳ ಮಳೆಯನ್ನು ಸುರಿಸದೆ ಇರುವಂತೆಯೇ!
ಫೋನ್ ಫ್ರಾಡಿಗೆ ಹುಟ್ಟು ನೀಡಿದ್ದೇ ಈ ಸರ್ಕಾರ, ಇದನ್ನು ನಮ್ಮ ಸಾಮಾನ್ಯ ಜನತೆ ಎಂದೂ ಮರೆಯಬಾರದು. ಕಲಿತ/ಕಲಿಯದ ಹೆಂಗಸರೆಲ್ಲರೂ ಮೂರ್ಖರೇ ಎಂದು ಈ ಸರ್ಕಾರಕ್ಕೆ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿಯೇ ಲಾಡ್ಲಿ ಬೆಹನ್, ಉಜ್ವಲಾ, ಬೇಟಿ ಬಚಾವೋ…. ಮುಂತಾದ ಘೋಷಣೆಗಳನ್ನು ಹೊರಡಿಸುತ್ತಾ ಅವರ ಮೂಗಿಗೆ ತುಪ್ಪ ಸರುತ್ತದೆ. ಒಮ್ಮೊಮ್ಮೆ ಇವರುಗಳ ಖಾತೆಗೆ ಅಷ್ಟಿಷ್ಟು ಹಣ ಜಮೆಗೊಳ್ಳುವುದೂ ಉಂಟು! ಫ್ರಾಡ್ ಮಾಡುವವರು ಇಂಥದ್ದನ್ನೇ ಸದವಕಾಶವಾಗಿ ಬಳಸಿಕೊಂಡು ವಂಚಿಸುತ್ತಾರೆ. ಈ ಫ್ರಾಡ್ ಗಿರಿ ಮಹಾ ಮೋಸದ ಹಡಗುಗಳ ದೊಡ್ಡ ಸಂಚಾರವೇ ಆಗಿದೆ. ಇಂಥ ಸರ್ಕಾರಿ ಲಂಗರುಗಳಿಗೆ ಥಳುಕು ಹಾಕಿಕೊಂಡಿರುತ್ತವೆ, ಸರ್ಕಾರ ಮಾತ್ರ ಅದರ ಮೇಲಿನ ಡೆಕ್ ನ ಲೈಡ್ ಸ್ಪೀಕರ್ ಗಳಿಂದ ಅರಚುತ್ತಿರುತ್ತದೆ, ಆದರೆ ಫ್ರಾಡ್ ಗಿರಿ ನಡೆಸುವ ಹಡಗುಗಳನ್ನಂತೂ ನಿಯಂತ್ರಿಸುವುದಿಲ್ಲ.
ಸುಳ್ಳಿನ ಪ್ರಚಾರ
ಭಕ್ತರನ್ನು ಯಾವ ತರಹ ಸಣ್ಣಪುಟ್ಟ ವಿಷಯಗಳಿಗೆ ಟಿವಿ ಚಾನೆಲ್ ಗಳು ಕಳೆದ 10 ವರ್ಷಗಳಿಂದಲೂ ಭ್ರಮೆಯಲ್ಲಿ ತೇಲಾಡಿಸಿವೆ ಎಂಬುದು, ನರೇಂದ್ರ ಮೋದಿಯವರು ಖುದ್ದಾಗಿ ದ. ಆಫ್ರಿಕಾ ನಾಮೀಬಿಯಾದಿಂದ ಮೊದಲು 8 ನಂತರ, 12 ಚಿರತೆ ತರಿಸಿಕೊಂಡು, ಮಧ್ಯ ಪ್ರದೇಶ ರಾಜ್ಯದ `ಕೂನೋ ನ್ಯಾಷನಲ್ ಪಾರ್ಕ್ ಅಭಯಾರಣ್ಯ’ದಲ್ಲಿ ಬಿಡಿಸಿಕೊಂಡ ವಿಷಯದಿಂದ ಅದು ಸಾಬೀತಾಗುತ್ತದೆ. ಇಂಥ ಪುಣ್ಯ ಕಾರ್ಯಗಳು ಪ್ರಧಾನಿಯ ಜವಾಬ್ದಾರಿಯೂ ಅಲ್ಲ, ಅಥವಾ ಅವರು ಇದನ್ನು ಶುರು ಮಾಡಿದ್ದೂ ಅಲ್ಲ! ಇಂಥ ಕೆಲಸಗಳನ್ನು ವೈಲ್ಡ್ ಲೈಫ್ ತಜ್ಞರು ಎಲ್ಲಾ ಕಡೆ ಮಾಡುತ್ತಲೇ ಇರುತ್ತಾರೆ. ಇದು ಒಂದು ತರಹದ ಪ್ರಯೋಗವೇ ಸರಿ. ಲುಪ್ತವಾಗುತ್ತಿರುವ ತಳಿಯ ಕಾಡುಪ್ರಾಣಿಗಳನ್ನು ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಹೋಗಿ ರವಾನಿಸುವುದು ಎಷ್ಟು ಸರಿ? ಎಷ್ಟು ಚಿರತೆಗಳು ಬಂದ, ಮುಂದೆ ಅದು ಏನಾಯಿತು, ಈಗೆಷ್ಟು ಉಳಿದಿವೆ, ಅವು ಮರಿ ಹಾಕಿತೋ ಇಲ್ಲವೋ….. ಇತ್ಯಾದಿ ಯಾವುದೂ ಮುಖ್ಯವಲ್ಲ. ಇವೆಲ್ಲ ಒಂದು ಸರ್ವೇ ಸಾಧಾರಣ ವಿಷಯ. ಆದರೆ ಇದು ಎಷ್ಟೋ ದಿನಗಳ ನ್ಯಾಶನಲ್ ಚಾನೆಲ್ ಗಳಲ್ಲಿ ಚಿರತೆಮಯ ವಿಷಯವಾಗಿ ಪ್ರಸಾರಗೊಳ್ಳುತ್ತಾ ಪ್ರಧಾನಿಯರನ್ನು ಖುಷಿಗೊಳಿಸಿದ್ದೇ ಆಯ್ತು.
ಈಗ ಹೆಚ್ಚುಕಡಿಮೆ 2 ವರ್ಷಗಳ ನಂತರ ಪರಿಸ್ಥಿತಿ ಹೇಗಾಗಿದೆ ಎಂದರೆ, ಎಷ್ಟು ಚಿರತೆಗಳು ಉಳಿದಿವೆ ಎಂಬ ನಿಖರ ಲೆಕ್ಕ ಗೊತ್ತಿಲ್ಲ. ಮ.ಪ್ರದೇಶ ರಾಜ್ಯದ ಅರಣ್ಯ ಇಲಾಖೆಯರು ಈ ಕುರಿತು ಬಾಯಿ ಬಿಡುತ್ತಿಲ್ಲ. ತಮ್ಮ ಹಿರಿಯ ದೇವತೆಗಳ ತರಹ ಸುಳ್ಳನ್ನೇ ಹೇಳುತ್ತಿದ್ದಾರೆ, ಇದರ ನಿಖರ ಸಂಖ್ಯೆ ತಿಳಿಸುವವರು ನ್ಯಾಶನಲ್ ಸೆಕ್ಯುರಿಟಿ ಯಾ ಇಂಟರ್ ನ್ಯಾಶನಲ್ ರಿಲೇಶನ್ಸ್ ಗೋಪನೀಯ ವಿಷಯವಂತೆ!
ಅಂದ ಹಾಗೆ ಹಲವು ಚಾನೆಲ್ ಗಳು ಏಕಕಾಲಕ್ಕೆ ಚಿರತೆಗಳ ಆಗಮನದ ವಿಷಯ ಪ್ರಸಾರ ಮಾಡುತ್ತಿದ್ದಾಗ, ಆ ಸಂಸ್ಥೆಗಳ ಬಾಯಿಗೆ ಬೀಗ ಬಿದ್ದಿತ್ತೇ? ಆಗ ಅವುಗಳ ಗೌಪ್ಯತೆ ಬಹಿರಂಗ ಆಗಿರಲಿಲ್ಲವೇ? ಇಲ್ಲಿ ನಮ್ಮ ಆಕ್ಷೇಪಣೆ ಚಾನೆಲ್, ಅರಣ್ಯ ಇಲಾಖೆ, ಆಯಾ ಸಂಸ್ಥೆ ಅಥವಾ ಪ್ರಧಾನಿಯ ಕುರಿತಾಗಿ ಅಲ್ಲ, ತಾನೇನೋ ದೊಡ್ಡ ಟ್ರೋಫಿ ಗೆದ್ದು ಬಂದಂತೆ ಅದನ್ನು ಪ್ರಸಾರಗೊಳಿಸಿದ್ದೇಕೆ? ಇರಲಿ, ಆ ಚಾನೆಲ್ ನ ಈ ತಲೆಬಾಲವಿಲ್ಲದ ಕಾರ್ಯಕ್ರಮಗಳನ್ನು ನೋಡುತ್ತಾ ತಮ್ಮ ಅಮೂಲ್ಯ 8-10 ಗಂಟೆಗಳನ್ನು ನಷ್ಟಗೊಳಿಸಿಕೊಂಡ ಪ್ರೇಕ್ಷರ ಬಗ್ಗೆ ಆಕ್ಷೇಪಣೆ ಇದೆ! ಪ್ರೇಕ್ಷಕರನ್ನು ಮೂರ್ಖರನ್ನಾಗಿಸುವ ಈ ಚಾನೆಲ್ಸ್, ಅತ್ತ ಸುದ್ದಿ ಅಥವಾ ಇತ್ತ ಮಾಹಿತಿ ಏನೂ ನೀಡುವುದಿಲ್ಲ.
ಇವು ಬ್ರೇಕಿಂಗ್ ನ್ಯೂಸ್ ಹೆಸರಲ್ಲಿ, ಒಂದು ಇರುವೆ ಆನೆ ಬೆನ್ನೇರುವುದನ್ನೇ ವೈಭವೀಕರಿಸಿ ತೋರಿಸುತ್ತವೆ. ಇದರಿಂದ ಸಹಜವಾಗಿ ಭ್ರಮೆಗೊಳ್ಳುವ ಪ್ರೇಕ್ಷಕರು ಏನೋ ಪರಮ ಸತ್ಯ ಸಾಕ್ಷಾತ್ಕಾರಗೊಂಡಂತೆ ಪುಳಕಗೊಳ್ಳುತ್ತಾರೆ! ಇವು ಪ್ರೇಕ್ಷಕರ ಯೋಚನಾಲಹರಿಯನ್ನೇ ಕುಂಠಿತಗೊಳಿಸುತ್ತವೆ, ಧರ್ಮ ಪ್ರರ್ವತಕರು ಬೋಧನೆ ಮಾಡುವ ಹಾಗೆ! ಇಂದು ವಿಜ್ಞಾನ ಯುಗ, ಪೌರಾಣಿಕ ಯುಗಲ್ಲವ. ನಮ್ಮ ಸುತ್ತಮುತ್ತಲೂ ಇರುವ ಪರಿಸರ ವಿಜ್ಞಾನದ ಕೊಡುಗೆ, ಋಷಿ ಮುನಿಗಳ ಜ್ಞಾನದ ದೇಣಿಗೆಯಲ್ಲ. ಟಿವಿ ಸಹ ವಿಜ್ಞಾನದ ಕೊಡುಗೆ. ಚಿರತೆಗಳನ್ನು ಯಾವ ಆಧುನಿಕ ವಿಮಾನದಲ್ಲಿ ಸಾಗಿಸಿಕೊಂಡು ಬಂದರೋ ಅದೂ ವಿಜ್ಞಾನದ ಕೊಡುಗೆ, ಪುರಾಣದಲ್ಲಿ ಉಲ್ಲೇಖಿಸಿದ ಪುಷ್ಪಕ ವಿಮಾನದ್ದಲ್ಲ!
ನರೇಂದ್ರ ಮೋದಿಯವರು ಈ ಚಿರತೆಗಳ ಆಮದನ್ನು ಹೇಗೆ ತೋರಿಸಿಕೊಂಡವರು ಎಂದರೆ, ತಾವೇನೋ ದೊಡ್ಡ ಧರ್ಮನಿರಪೇಕ್ಷತೆಯ ಸಾಕಾರ ಮೂರ್ತಿ ಎಂಬಂತೆ! ಸಂಸತ್ತಿನ ಹೊಸ ಭವನದ ನಿರ್ಮಾಣ ಎಲ್ಲಾ ಭಗವಾಧಾರಿಗಳಿಂದ ಆಗಿದ್ದು ಎಂಬುದು ಯಾರಿಗೂ ಗೊತ್ತಿಲ್ಲವೇ? ಎರಡರ ಲೈವ್ ಪ್ರಸಾರ ಒಟ್ಟೊಟ್ಟಿಗೆ ಸತತ ಮಾಡಿದ್ದು ತಪ್ಪು, ಅವೈಜ್ಞಾನಿಕ. ಸಂಸತ್ತನ್ನು ರಾಷ್ಟ್ರಪತಿಯರಿಗೆ ಸಮರ್ಪಿಸಬೇಕಿತ್ತು, ಚಿರತೆಗಳ ರವಾನೆಯನ್ನು ಅರಣ್ಯ ಇಲಾಖೆಗೇ ಬಿಟ್ಟಿದ್ದರೆ ಚೆನ್ನಿತ್ತು.





