ಪಾರ್ಕಿಂಗ್ಫೀಸ್ಹೆಚ್ಚಿಸಿ, ಮನೆಗಳನ್ನು ಕಷ್ಟಕ್ಕೆ ಸಿಲುಕಿಸಿ!

ದೆಹಲಿಯಂಥ ಮಹಾನಗರದಲ್ಲಿ ಪರಿಸರ ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರಗಳು ಹಾಗೂ ಮುನಿಸಿಪಲ್ ಬಾಡೀಸ್ ತಲೆಬಾಲವಿಲ್ಲದ ಉಪಾಯ ಹುಡುಕುತ್ತಿರುತ್ತವೆ. ಅದರಲ್ಲಿ ಡೀಸೆಲ್ ‌ಸೆಟ್‌ ಗಳನ್ನು ಬಂದ್‌ ಮಾಡಿಸಿ, ಗಾಡಿಗಳನ್ನು ಆಡ್‌ ಈವೆನ್‌ ಆಗಿ ಓಡಿಸುವುದು, ಪಾರ್ಕಿಂಗ್‌ ಜಾಗದಲ್ಲಿ ಚಾರ್ಜ್‌ ಹೆವಿ ಮಾಡಿಸುವುದು, ನಗರಗಳಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನುಗ್ಗಿದರೆ ದಂಡ ಇತ್ಯಾದಿ ಮಾಮೂಲಿ ಆಗಿವೆ. ಈ ಎಲ್ಲಾ ಉಪಾಯಗಳೂ ಸರ್ಕಾರಿ ಅಧಿಕಾರಿಗಳು ಹಾಯಾಗಿ ತಮ್ಮ ಕಛೇರಿಗಳ ಸೀಟುಗಳಲ್ಲಿ ಕುಳಿತು ಕಂಡುಕೊಂಡ ಪರಿಹಾರಗಳಾಗಿವೆ.

ನಗರಗಳಲ್ಲಿ ಅನೇಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ. ಮುಖ್ಯ ಇಲ್ಲಿ ದುರ್ವಾಸನೆ, ಟ್ರಾಫಿಕ್‌ ಜ್ಯಾಮ್ ಇತ್ಯಾದಿ ಈ ಅಧಿಕಾರಿಗಳದೇ ಕಿತಾಪತಿ ಆಗಿರುತ್ತದೆ. ಪರಿಸರ ಮಾಲಿನ್ಯ ತಪ್ಪಿಸುತ್ತೇವೆ ಎಂಬ ನೆಪದಲ್ಲಿ ಲಕ್ಷವಲ್ಲ ಕೋಟ್ಯಂತರ ಹಣವನ್ನು ಬಜೆಟ್‌ ನಲ್ಲಿ ಪಾಸ್‌ ಮಾಡಿಸಿಕೊಳ್ಳುತ್ತಾರೆ, ಅದರಲ್ಲಿ ಅರ್ಧದಷ್ಟು ಅವರ ಜೇಬಿಗೇ ಇಳಿದಿರುತ್ತದೆ. ಹೀಗಾಗಿಯೇ ನಗರದ ಮೂಲೆ ಮೂಲೆಗಳೂ ದುರ್ನಾತ ಬೀರುತ್ತಾ, ಪರಿಸರ ಮಾಲಿನ್ಯ ಮಿತಿ ಮೀರಿದೆ.

ಡೀಸೆಲ್ ಜೆನರೇಟರ್‌ ಗಳಿಂದ ಹೊರಡುವ ಹೊಗೆ, ಈ ಸರ್ಕಾರಿ ವಾಹನಗಳ ದಟ್ಟ ಹೊಗೆ ಮುಂದೆ ಏನೂ ಇಲ್ಲ, ಸ್ವಂತ ಸಂಚಾರಕ್ಕಾಗಿಯೇ ಟ್ರಾಫಿಕ್‌ ಜ್ಯಾಮ್ ಹೆಚ್ಚಿಸುತ್ತಾರೆ. ಪ್ರತಿ ಜಾಗಕ್ಕೂ ಮುಖ್ಯ ಮಂತ್ರಿ, ಮಂತ್ರಿ ಮಂಡಲದ ಎಲ್ಲರ ವಾಹನಗಳೂ ದೊಡ್ಡ ಸಾಲುಗಳಲ್ಲಿ ಬಂದು ತುಂಬಿಕೊಂಡರೆ ಟ್ರಾಫಿಕ್‌ ಬಿಗಡಾಯಿಸದೆ ಇನ್ನೇನಾದೀತು? ರಸ್ತೆಗಳು ಎಲ್ಲಾ ಕಡೆ ಬಂದ್ ಆಗಿಹೋಗತ್ತವೆ. ಈ ಎಲ್ಲದರಿಂದ ಪಬ್ಲಿಕ್‌ ಗೆ ಆಗುವ ತೊಂದರೆಗೆ ಯಾರು ಹೊಣೆ? ಇದು ತಪ್ಪುವುದಾದರೂ ಎಂದು?

ನಗರಗಳಲ್ಲಿ ಪಾರ್ಕಿಂಗ್‌ ಫೀಸ್‌ ಹೆಚ್ಚಿಸುವುದರಿಂದ ಗಾಡಿಗಳ ಸಂಖ್ಯೆ ಕಡಿಮೆ ಆದೀತು ಎಂಬುದು ಕೇವಲ ಭ್ರಮೆ. ಬೇಕಾದರೆ ಜನ ಇನ್ನಷ್ಟು ದೂರ ಹೋಗಿ ಗಾಡಿ ನಿಲ್ಲಿಸಿ ಬರುತ್ತಾರೆ. ಪೆಟ್ರೋಲ್, ಡೀಸೆಲ್ ‌ದಂಡ ಅಷ್ಟೆ. ಫೀಸ್‌ ಆಗದ ಕಡೆ ಗಾಡಿ ನಿಲ್ಲಿಸಿ ಜನ ತಮ್ಮ ಸ್ಮಾರ್ಟ್‌ ನೆಸ್‌ ತೋರಿಸುತ್ತಾರೆ. ಇದರಿಂದ ಟ್ರಾಫಿಕ್‌ ಪೊಲೀಸರು, ಜನ ಸಾಮಾನ್ಯರ ನಡುವಿನ ವಿರಸ ಹೆಚ್ಚುತ್ತದೆ, ಕೈಕೈ ಮಿಲಾಯಿಸುವ ಸ್ಥಿತಿ ಬರಬಹುದು.

ನಗರಗಳ ವಾಯು ಮಾಲಿನ್ಯ ತಪ್ಪಿಸಲು ಮಾಡಬೇಕಾದ ಮೊದಲ ಕೆಲಸ, ಸಮರ್ಪಕ ಟ್ರಾಫಿಕ್‌ ಮ್ಯಾನೇಜ್‌ ಮೆಂಟ್‌, ಆದರೆ ಇದನ್ನು ಮಾಡಿಸಲು ಯಾರಿಗೂ ಇಷ್ಟವಿಲ್ಲ. ಏಕೆಂದರೆ ಈ ಕೆಲಸವನ್ನು ಸರ್ಕಾರಿ ಅಧಿಕಾರಿ, ಇನ್‌ ಸ್ಪೆಕ್ಟರ್‌ ಗಳೇ ಮಾಡಬೇಕು, ಇವರುಗಳಿಗೆ ಮೇಲು ಆದಾಯ ಇಲ್ಲದೆ ಈ ಕೆಲಸ ಆಗದು, ನಾಗರಿಕರ ಸಮಸ್ಯೆ ಇವರಿಗೆ ಬೇಕಿಲ್ಲ. ರಸ್ತೆಗಳ ಬದಿಯ ಸಣ್ಣಪುಟ್ಟ ಅಂಗಡಿ, ಹೂ ತರಕಾರಿ ಹಣ್ಣು ಮಾರುವವರ ರಗಳೆ ಇಲ್ಲದಿದ್ದರೆ ಅರ್ಧ ಟ್ರಾಫಿಕ್‌ ತಂತಾನೇ ತಗ್ಗಿ ಹೋಗುತ್ತದೆ. ಈ ಟ್ರಾಫಿಕ್ ಜ್ಯಾಮ್ ನಿಂದ ಹರಡುವ ದಟ್ಟ ಹೊಗೆ ಗಂಭೀರ ಕಾಯಿಲೆ ತರಬಲ್ಲದು.

ಸರ್ಕಾರಿ ಅಧಿಕಾರಿ, ಟ್ರಾಫಿಕ್‌ ಪೊಲೀಸ್‌ ಮುಂತಾದವರು ಸಾಕಷ್ಟು ಸಂಖ್ಯೆಯಲ್ಲಿ ಟ್ಯಾಕ್ಸಿ, ಆಟೋ, ರಿಕ್ಷಾಗಳನ್ನು ಸಂಚರಿಸಲು ಬಿಡುವುದಿಲ್ಲ. ಅದರಲ್ಲಿ ಲೋಪದೋಷ ಇದ್ದಾಗ ಮಾತ್ರ ಇವರ ಜೇಬಿಗೆ ಗಿಂಬಳ! ಇವರುಗಳಿಗೆಲ್ಲ ಪರ್ಮಿಟ್‌ ಇಶ್ಯು ಆಗುವಷ್ಟರಲ್ಲಿ ಅದೆಷ್ಟು ಕೈಗಳಿಗೆ ಲಂಚ ಬದಲಾಗಿರುತ್ತದೋ?!! ಪಾರ್ಕಿಂಗ್‌ ಫೀಸ್‌ ಹೆಚ್ಚಿಸುವ ಮೊದಲು ಪರ್ಯಾಯ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಇವರು ಚಿಂತಿಸುವುದೇ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ