ರಾಘವೇಂದ್ರ ಅಡಿಗ ಎಚ್ಚೆನ್.

ಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ  ಸಲಗ ಸೂರಿ ಅಣ್ಣ ಖ್ಯಾತಿಯ
ನಟ ದಿನೇಶ್ ಕುಮಾರ್ ಅವರ ನಿರ್ಮಾಣ ಹಾಗೂ ನಿರ್ದೇಶನದ “ಸೂರಿ ಅಣ್ಣ” ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಹೈಡ್ ಪಾರ್ಕ್ ಹೋಟೆಲ್ ನಲ್ಲಿ ನೆರವೇರಿತು. ದಿ. ಹರೀಶ್ ರಾಯ್ ನಟಿಸಿದ ಕೊನೆಯ ಚಿತ್ರ ಇದಾಗಿದ್ದು, ಅವರ ಪತ್ನಿ ಆರತಿ ಅವರ ಕೈಲೇ  ಚಿತ್ರದ ಟ್ರೈಲರ್ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು.
ಲಹರಿ ಆಡಿಯೋದ ವೇಲು ಮಾತನಾಡುತ್ತ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದಿನೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಫೆ. 20ಕ್ಕೆ ಈ ಚಿತ್ರ  ರಿಲೀಸಾಗುತ್ತಿದೆ. ಟ್ರೈಲರ್ ತುಂಬಾ  ಚೆನ್ನಾಗಿ ಬಂದಿದೆ ಎಂದು ಹೇಳಿದರು.

IMG-20260126-WA0005

ಟ್ರೈಲರ್ ರಿಲೀಸ್ ಮಾಡಿದ ಹರೀಶ್ ರಾಯ್ ಪತ್ನಿ  ಆರತಿ ಮಾತನಾಡಿ ಇದು ನಮ್ಮ ಯಜಮಾನರ ಕಡೇ ಸಿನಿಮಾ ಅಂತ ನನಗೂ  ಗೊತ್ತಿರಲಿಲ್ಲ. ಈ ಚಿತ್ರಕ್ಕೆ ಖಂಡಿತ ಒಳ್ಳೆಯದಾಗುತ್ತೆ. ಕಷ್ಟದ ಸಮಯದಲ್ಲಿ ಚಿತ್ರರಂಗದ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ‌. ನನ್ನ‌ಪತಿ ಕೊನೆಯವರೆಗೂ ಸಿನಿಮಾ ಬಗ್ಗೆಯೇ ಧ್ಯಾನಿಸುತ್ತಿದ್ದರು. ನನ್ನ ಮಗನೂ ಬೆಳೆದಿದ್ದಾನೆ. ಈತನಿಗೆ ನಿಮ್ಮ ಸಪೋರ್ಟ್ ಬೇಕು. ನಮ್ಮನ್ನು ಮರೆಯಬೇಡಿ ಎಂದು  ಕೇಳಿಕೊಂಡರು.
ನಟ ಪ್ರವೀಣ್ ಮಾತನಾಡಿ ಈ ಚಿತ್ರದಲ್ಲಿ ನಾನು ಬ್ಯಾಟ್ ಎಂಬ ಪಾತ್ರ ಮಾಡಿದ್ದೇನೆ.

IMG-20260126-WA0011

ಮಾರಿಗುಡ್ಡದಲ್ಲಿ ಲೀಡ್ ಆಗಿದ್ದೆ. ಈ ಚಿತ್ರಕ್ಕೆ ವಿಶ್ವ ಅವರು ಕೊಟ್ಟ ಕೊಡುಗೆ ತುಂಬಾ ದೊಡ್ಡದು. ಆತ ದೈಹಿಕವಾಗಿ ನಮ್ಮೊಂದಿಗಿಲ್ಲ, ಆದರೆ ಯಾವಾಗಲೂ ನಮ್ಮ‌ಮನದಲ್ಲಿದ್ದಾರೆ ಎಂದರು.
ಜಾಕ್ ಜಾಲಿ ಮಾತನಾಡಿ ಚಿತ್ರದಲ್ಲಿ  ಸೂರಿಯಣ್ಣನಿಗಾಗಿ ಒಂದೇ ದಿನ ಬಂದು ಹೋಗುವ ಪಾತ್ರ ಮಾಡಿದ್ದೇನೆ. ಟ್ರೈಲರ್ ಸಖತ್ತಾಗಿ ಬಂದಿದೆ. ಈ ಸಿನಿಮಾ ಖಂಡಿತ ಸಕ್ಸಸ್ ಆಗಲಿದೆ ಎಂದರು.
ಪ್ರಸಾದ್ ಮಾತನಾಡುತ್ತ ನಾನು ಕಳೆದ 25 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಬಹುತೇಕ ಸ್ಟಾರ್ ಗಳಿಗೆ  ಜಿಮ್ ಹೇಳಿಕೊಟ್ಡಿದ್ದೇನೆ. ಯಾವತ್ತೂ ತೆರೆ ಮೇಲೆ ಬಂದವನಲ್ಲ. ಸೂರಿ  ಅವರು ಪಾತ್ರ ಮಾಡಿಸಿದ್ದಾರೆ ಎಂದರು.

IMG-20260126-WA0009

ನಟ ಕಾಮರಾಜ್ (ತಮಿಳ್ ಐ ಮೂವಿ ವಿಲನ್) ಮಾತನಾಡುತ್ತ  ಕಬ್ಜ, ಘೋಸ್ಟ್  ಸೇರಿದಂತೆ  ನಾನು ನಟಿಸಿರುವ  ಐದನೇ ಚಿತ್ರವಿದು. ನಾನು ಎಲ್ಲೇ ಹೋದರೂ ಕನ್ನಡ ಸಿನಿಮಾ ಬಗ್ಗೆಯೇ ಮಾತಾಡ್ತಾರೆ ಎಂದರು.
ನಾಯಕ, ನಿರ್ದೇಶಕ ಸೂರಿ ಅಣ್ಣ ಮಾತನಾಡುತ್ತ ಫೆ.20ಕ್ಕೆ ನಮ್ಮ ಸೂರಿ ಅಣ್ಣ  ರಿಲೀಸ್ ಆಗುತ್ತಿದೆ. ಚಿತ್ರಕ್ಕಾಗಿ ಕಳೆದ ಆರು ವರ್ಷದಿಂದ ಕಷ್ಟಪಟ್ಟಿದ್ದೇನೆ.
ಸಮಾಜಕ್ಕೆ ಒಳ್ಳೆ ಮೆಸೇಜ್ ಈ ಚಿತ್ರದಲ್ಲಿ ಇರಲಿದೆ. ಜಯಣ್ಣ ಫಿಲಂಸ್ ನ ಜಯಣ್ಣ ಅವರು ಚಿತ್ರವನ್ನು ರಿಲೀಸ್ ಮಾಡಿಕೊಡುತ್ತಿದ್ದು, ತುಂಬಾ ಸಪೋರ್ಟ್ ಮಾಡುತ್ತಿದ್ದಾರೆ‌,
ಮಾಜಿ ರೌಡಿಗಳ‌ ಕೈಲಿ ಯುವಕರಿಗೆ ಮೆಸೇಜ್ ಹೇಳಿಸಿದ್ದೇನೆ. ಯಾರೂ ಸಹ ಈ ರೌಡಿಸಂಗೆ ಬರಬೇಡಿ ಅಂತ ಈ ಚಿತ್ರದಲ್ಲಿ ತೋರಿಸಿದ್ದೇನೆ.  ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.
ನಟಿ ಚಿತ್ರಾಲ ಮಾತನಾಡಿ ಸೂರಿ ಈ ಸಿನಿಮಾಗೆ ತುಂಬಾ ಕಷ್ಟಪಟ್ಟಿದ್ದಾರೆ. ನೀನನ್ನ ದೇವತೆ ಹಾಡು ತುಂಬಾ ತುಂಬಾ ವೈರಲ್ ಆಗಿದೆ. ನನಗೆ ರಾ ಪಾತ್ರಗಳು ತುಂಬಾ ಇಷ್ಟ. ಓಂ ಸಿನಿಮಾ ನಂತರ ರಿಯಲ್ ರೌಡಿಗಳು ಆಕ್ಟ್ ಮಾಡಿದ ಚಿತ್ರವಿದು. ಅದ್ಭುತವಾದ ಮೆಸೇಜ್ ಇರೋ ಚಿತ್ರ ಎಂದರು.

IMG-20260126-WA0008

ನಾಯಕಿ ಸಂಭ್ರಮ ಶ್ರೀ ಮಾತನಾಡಿ  ಸೂರಿ ಅಣ್ಣ ಈ ಚಿತ್ರಕ್ಕಾಗಿ ಮನೆ, ಜಾಗವನ್ನು ಮಾರಿದ್ದಾರೆ. ಡಾನ್ ಗಳಿಂದ ಯುವಜನರಿಗೆ  ಒಳ್ಳೆಯ ಮೆಸೇಜ್ ಹೇಳಲಾಗಿದೆ ಎಂದರು.
ಸಾಹಸ ನಿರ್ದೇಶಕ ಜಾಗ್ವಾರ್ ಸಣ್ಣಪ್ಪ, ಎಡಿಟರ್ ವಿಶ್ವ, ಬಿಜಿಎಂ ಮಾಡಿದ ಶ್ರೀಧರ್ ಕಶ್ಯಪ್, ರಂಜಿತ್, ಬೆನಕ ನಂಜಪ್ಪ ಚಿತ್ರದ ಕುರಿತು ಮಾತನಾಡಿದರು.
ಈ ಚಿತ್ರದಲ್ಲಿ ಸೂರಿ ಅಣ್ಣ, ಸಂಭ್ರಮ ಶ್ರೀ,

IMG-20260126-WA0010

ಬೇಬಿ ಮಾರೀಶ, ಹರೀಶ್ ರಾಯ್, ರವಿಕಾಳೆ, ಕಾಮ್ ರಾಜ್, SK ಉಮೇಶ್, ಹೊನ್ನವಳ್ಳಿ ಕೃಷ್ಣ, ಪ್ರಕಾಶ್ ತುಮ್ಮಿನಾಡ್, ರೇಖಾದಾಸ್, ಕಾಕ್ರೋಚ್ ಸುಧಿ, ವಿನಯ್ ಗೌಡ, ಜಾಲಿ ಜಾಕ್, ಪ್ರಸಾದ್ ಕುಮಾರ್  ಹಾಗೂ ಒಂದು ಕಾಲದಲ್ಲಿ ಗ್ಯಾಂಗ್ ಸ್ಟಾರ್ಸ್ ಗಳಾಗಿದ್ದ ಮೊಟ್ಟ ಕಣ್ಣ, ಜೇಡರಳ್ಳಿ ಕೃಷ್ಣಪ್ಪ, ಜೀಬ್ರಾ, ಲೋಕೇಶ್, ಕಾಳ ಪತಾರ್, ಯಶಸ್ವಿನಿ ಗೌಡ, ವೇಡಿ ಅಣ್ಣ, ಗಡ್ಡ ನಾಗ, ಅಭಿನಯಿಸಿದ್ದಾರೆ.
ಫೆಬ್ರವರಿ 20 ಕ್ಕೆ ಜಯಣ್ಣ ಫಿಲಂಸ್, ಜಯಣ್ಣ ನವರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ