ಪ್ರ : ಹಿಂದೆಲ್ಲ ನನ್ನ ಕೂದಲು ಒತ್ತಾಗಿ, ದಟ್ಟಾಗಿ ನೀಳವಾಗಿತ್ತು, ಇತ್ತೀಚೆಗೆ ನಾನು ನನ್ನ ಜಾಬ್ಬದಲಿಸಿದೆ. ಹೊಸ ನಗರಕ್ಕೆ ಹೋದ ನಂತರ, ನನ್ನ ತಲೆಗೂದಲು ಬಹಳ ಉದುರುತ್ತಿದೆ. ನಾನು ಏನು ಮಾಡಲಿ?

ಉ : ಅಗತ್ಯಕ್ಕಿಂತ ಹೆಚ್ಚಿನ ಕೆಮಿಕಲ್ಸ್ ಬೆರೆತ ಶ್ಯಾಂಪೂ, ಪರಿಸರ ಮಾಲಿನ್ಯದಿಂದಾಗಿ ಕೂದಲು ಬೇಗ ಬೇಗ ಉದುರುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚು ಪ್ರಮಾಣದಲ್ಲಿ ಕರಿಬೇವನ್ನು ಸೇವಿಸಿ. ಇದರಲ್ಲಿ ವಿಟಮಿನ್ಸ್ ಹೇರಳವಾಗಿವೆ. ಇಷ್ಟಲ್ಲದೆ ಇದರಲ್ಲಿ ಕಬ್ಬಿಣಾಂಶ, ಕ್ಯಾಲ್ಶಿಯಂ, ಫಾಸ್ಛರಸ್‌ ಗಳಿದ್ದು, ಧಾರಾಳ ಪ್ರೋಟೀನ್‌, ಬೀಟಾ ಕೆರಾಟಿನ್‌ ಅಂಶವನ್ನೂ ಹೊಂದಿದೆ. ಇದೆಲ್ಲ ಸೇರಿ ಕೂದಲಿಗೆ ಆಗುವ ಹಾನಿ ತಪ್ಪಿಸುತ್ತದೆ. ಕೂದಲು ಇನ್ನಷ್ಟು ತೆಳು ಆಗುವುದಿಲ್ಲ. ಕರಿಬೇವನ್ನು ಚಟ್ನಿ, ಚಟ್ನಿಪುಡಿ, ಪಲ್ಯ, ಸಾರು, ಗೊಜ್ಜು ಇತ್ಯಾದಿಗಳಿಗೂ ಧಾರಾಳ ಬಳಸಿಕೊಳ್ಳಿ. ಇದರಿಂದಾಗಿ ನಿಮ್ಮ ಕೂದಲು ಒತ್ತಾಗಿ, ದಟ್ಟವಾಗಿ, ನೀಳ ಬೆಳೆಯುತ್ತದೆ. ಅದು ತಲೆ ಹೊಟ್ಟನ್ನು ಸಹ ನಿಯಂತ್ರಿಸುತ್ತದೆ.

ಕರಿಬೇವನ್ನು ಶುಚಿಗೊಳಿಸಿ, ಗರಿಗರಿ ಆಗುವಂತೆ ಬಿಸಿಲಲ್ಲಿ ಒಣಗಿಸಿ, ನುಣ್ಣಗೆ ಪುಡಿ ಮಾಡಿಕೊಳ್ಳಿ. ಒಂದು ಚಿಕ್ಕ ಬಟ್ಟಲಿಗೆ ಕೊಬ್ಬರಿ ಎಣ್ಣೆ ಹಾಕಿಕೊಳ್ಳಿ. ಇದಕ್ಕೆ ಕರಿಬೇವಿನ ಪುಡಿ ಬೆರೆಸಿ, ಬಿಸಿ ಮಾಡಿ ಚೆನ್ನಾಗಿ ಕುದಿಸಿರಿ. ಇದನ್ನು ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ ಇದನ್ನು ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ರಾತ್ರಿ ಮಲಗುವ ಮುನ್ನ ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿ. ಇದನ್ನು ತುಸುವೇ ಕಾಯಿಸಿದ ಎಣ್ಣೆಗೆ ಬೆರೆಸಿ ತಕ್ಷಣ ತಲೆಗೆ ಹಚ್ಚಿಕೊಂಡರೆ, ಬಹಳ ಒಳ್ಳೆಯದು. ಮಾರನೇ ಬೆಳಗ್ಗೆ ಹರ್ಬಲ್ ಶ್ಯಾಂಪೂ ಬಳಸಿ, ತಲೆಸ್ನಾನ ಮಾಡಿ.

ಪ್ರ : ನಾನು ಸದಾ ಕಂಪ್ಯೂಟರ್ಮುಂದೆ ಕುಳಿತು ಕೆಲಸ ಮಾಡಬೇಕು. ಹೀಗಾಗಿ ಕಂಗಳಿಗೆ ಉರಿ, ನೋವು ತಪ್ಪಿದ್ದಲ್ಲ. ಇದರಿಂದ ನನಗೆ ನಿದ್ದೆಯೇ ಬರೋದಿಲ್ಲ. ನಾನು ಯಾವ ಎಚ್ಚರಿಕೆ ವಹಿಸಿ, ಏನನ್ನು ಸೇವಿಸಿದರೆ ಇದರಿಂದ ಸೈಡ್ಎಫೆಕ್ಟ್ ಆಗೋದಿಲ್ಲ?

ಉ : ಕಂಗಳಿಗೆ ಗುಲಾಬಿ ಜಲ ಉತ್ತಮ ಪರಿಣಾಮ ಬೀರುತ್ತದೆ. ಮಲಗುವ ಮುನ್ನ ಕಣ್ಣಿನ ರೆಪ್ಪೆಗಳಿಗೆ ಸವರಿಕೊಳ್ಳಿ, ನಿದ್ದೆ ತರಿಸಲು ಇದು ಪೂರಕ. ಗುಲಾಬಿ ಜಲದಲ್ಲಿ ಹತ್ತಿ ನೆನೆಸಿ, ಕಂಗಳನ್ನು ಮುಚ್ಚಿಕೊಂಡು, ಇದನ್ನು 15 ನಿಮಿಷ ಅದರ ಮೇಲಿರಿಸಿ ವಿಶ್ರಾಂತಿ ಪಡೆಯಿರಿ. ಇದರಿಂದ ಉರಿ, ನೋವು ಎಷ್ಟೋ ತಗ್ಗುತ್ತದೆ. ಕಂಗಳ ಸುತ್ತಲೂ ಗುಲಾಬಿ ಜಲ ಸವರುವುದರಿಂದ ಡಾರ್ಕ್ ಸರ್ಕಲ್ಸ್, ಸುಕ್ಕು, ನಿರಿಗೆ, ಕಲೆ ಗುರುತು ಸಹ ದೂರವಾಗುತ್ತದೆ. ಇದರಿಂದ ಕಣ್ಣಿನ ಸೋಂಕು, ಅಲರ್ಜಿ ಸಹ ದೂರವಾಗುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ