ಒಂದಿಷ್ಟು ಮಾಡ್ ಗ್ಲಾಮರಸ್ ಆಗೋಣವೇ?
ಇತ್ತೀಚಿನ ಹೊಸ ಬಾಲಿವುಡ್ ಚಿತ್ರದ ಹಾಡೊಂದರಲ್ಲಿ `ಶಿಲ್ಪಾ ಕಾ ಫಿಗರ್... ಬೇಬೋ ಕೀ ಅದಾ.....' ಅಂತ ಬಂದಿದೆ. ಹಾಗೇಂತ ಈ ಹಾಡಿನಲ್ಲಿ ಶಿಲ್ಪಾ ಶೆಟ್ಟಿ ಯಾ ಕರೀನಾ ಹೆಜ್ಜೆ ಹಾಕಿ ಕುಣಿದಿಲ್ಲ! ಆದರೆ ಇದಕ್ಕೆ ಸಾಹಿತ್ಯ ಒದಗಿಸಿದವರು ಇಲ್ಲಿ ಶಿಲ್ಪಾ/ಕರೀನಾರ ಫಿಗರ್ ಬಗ್ಗೆ ಹೇಳಿದ್ದು ಮಾತ್ರ ಭಲೇ ಪರ್ಫೆಕ್ಟ್! ಮದುವೆಯಾಗಿದ್ದೇ ಇವರಿಬ್ಬರೂ ಇತರರಂತೆ ಡುಮ್ಮಕ್ಕಾ ಆಗಲಿಲ್ಲ. ಫ್ಯಾಷನ್ ಶೋಗಳ ರಾಂಪ್ ನಲ್ಲಿ ಇಂದಿಗೂ ಇವರು ಬಡನಡು ಆಡಿಸುತ್ತಾ ಬಳುಕಿದರೆ, ಎಲ್ಲಿಲ್ಲದ ಸೀಟಿ, ಚಪ್ಪಾಳೆ ಕಿವಿಗಡಚಿಕ್ಕುತ್ತದೆ! ಈ ಸಲದ ಹಬ್ಬದಲ್ಲಿ ನೀವು ಏಕೆ ಇವರಂತೆ ಮಾಡ್ ಡ್ರೆಸೆಸ್ ಧರಿಸಿ ಗ್ಲಾಮರಸ್ ಆಗಿ ಮೆರೆಯಬಾರದು.....? ಇವರೊಂದಿಗೆ ಸೇರಿ ಇದೇ ತರಹ ಆಧುನಿಕ ಯುವ ಪೀಳಿಗೆಯವರಾದ ಡಯಾನಾ ಪೆಂಟೀ, ಶಾರ್ರಿ, ಭೂಮೀ ಪೆಡ್ನೇಕರ್ ಸಹ ನಾವು ಯಾರಿಗೇನು ಕಡಿಮೆ ಎಂಬಂತೆ, ಇತ್ತೀಚಿನ ಲ್ಯಾಕ್ಮೆ ಫ್ಯಾಷನ್ ವೀಕ್ ಫ್ಯಾಷನ್ ಶೋನಲ್ಲಿ ಕ್ಯಾಟ್ ವಾಕ್ ನಡೆಸಿಕೊಟ್ಟರು. ಶಾರ್ವರಿಯ ಶಾರ್ಟ್‌ಡ್ರೆಸ್, ಡಯಾನಾಳ ಪಾರದರ್ಶಿ ಗೌನ್, ನಿಮ್ಮ ಈವ್ನಿಂಗ್ ಪಾರ್ಟಿಗಳಿಗೆ ಸುಪರ್ಬ್ ಆಗಿ ಹೊಂದುತ್ತವೆ. ಭೂಮೀಯ ಬೋಲ್ಡ್ ಡ್ರೆಸ್ ನೋಡಿ ಪಡ್ಡೆಗಳು ದಂಗಾಗಿ ಹೋದರು. ಇಂಥ ಡ್ರೆಸ್ ಧರಿಸಿ ವೈಯಾರದಿಂದ ಮಿಂಚಲು ಪರ್ಫೆಕ್ಟ್ ಫಿಗರ್ ಮಾತ್ರವಲ್ಲದೆ, ಆತ್ಮವಿಶ್ವಾಸ ಬೇಕು. ಭೂಮೀ ತನ್ನ ಮೊದಲ ಚಿತ್ರ `ಜೋರ್..... ಲಗಾಕೇ ಐಸಾ!' ನಂತರ ಯಾವ ರೀತಿ ಫ್ಯಾಟ್ ನಿಂದ ಫಿಟ್ ಆಗಿದ್ದಾಳೆ ಎಂಬುದು ಎಲ್ಲರೂ ಬಲ್ಲ ಸಂಗತಿ. ಹಾಗಾದರೆ ಈ ಸಲದ ಹಬ್ಬಕ್ಕೆ ಇವರುಗಳ ಯಾವ ಡ್ರೆಸ್ ನಲ್ಲಿ ನೀವು ಮಿಂಚಲಿದ್ದೀರಿ....?

ಖುಷಿಯಲ್ಲಿ ತೇಲುತ್ತಿರುವ ಹಿಮಾಚಲದ ಪುತ್ರಿ
ಕಿರುತೆರೆಯಿಂದ ತನ್ನ ಕೆರಿಯರ್ ಆರಂಭಿಸಿದ 24 ವರ್ಷದ ಪ್ರತಿಭಾ ರಾಂಟಾ, ನಿಧಾನವಾಗಿ ಬಾಲಿವುಡ್ ಗೆ ಬಂದಳು. ಈಕೆಯ ತವರೂರು ಹಿಮಾಚಲ ಪ್ರದೇಶದ ಸಿಮ್ಲಾ. ಈಕೆ ಟಿವಿಯ `ಕುರ್ಬಾನ್ ಹುವಾ' ಧಾರಾವಾಹಿಯಿಂದ ಹೆಸರು ಗಳಿಸಿದಳು. `ಹೀರಾಮಂಡಿ'ಯಿಂದ ಎಲ್ಲರ ಮನೆ ಮಾತಾದಳು. ಇತ್ತೀಚೆಗೆ ಈಕೆಯ `ಲಾಪತಾ ಲೇಡೀಸ್' ಚಿತ್ರ ಆಸ್ಕರ್ ಗೆ ನಾಮಿನೇಟ್ ಆದಾಗಿನಿಂದ ಪ್ರತಿಭಾ `ಗಗನವು ಎಲ್ಲೋ.... ಭೂಮಿಯು ಎಲ್ಲೋ.....' ಎಂದು ಖುಷಿಯಲ್ಲಿ ತೇಲಾಡುತ್ತಿದ್ದಳಂತೆ. ಈಕೆಯ ಫಾಲೋಯರ್ಸ್ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಳೆ ಸುರಿಸುತ್ತಿದ್ದಾರೆ. ಆಮೀರ್ ಖಾನ್, ಕಿರಣ್ ರಾವ್ ಇಡೀ ಚಿತ್ರ ತಂಡದ ಎಲ್ಲಾ ತಾರೆಯರಿಗೂ ಶುಭ ಹಾರೈಸಿದ್ದಾರೆ. ಇದಾದ ಮೇಲೆ ಇವಳ ಕೆರಿಯರ್ ಎಂಥ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಷ್ಟೆ. ಆಲ್ ದಿ ಬೆಸ್ಟ್ ಪ್ರತಿಭಾ!

ಐ ಡೋಂಟ್ ಕೇರ್!
38 ವರ್ಷದ ಅಭಿನೇತ್ರಿ ಹುಮಾ ಖುರೇಶಿ ತನ್ನ `ಮಹಾರಾಣಿ' OTT ಸೀರೀಸ್ ನಿಂದ ಅತಿ ಹೆಚ್ಚು ಜನಪ್ರಿಯತೆ ಗಳಿಸಿದಳು. ಈಕೆ ಆರಿಸಿಕೊಳ್ಳುವ ಚಿತ್ರಗಳ ತರಹವೇ ಇವಳ ಫ್ಯಾನ್ ಫಾಲೋಯರ್ಸ್ ಸಹ ವಿಭಿನ್ನ ವರ್ಗದ ಜನ. ಹುಮಾ ತನ್ನ ಹೆಲ್ದಿ ಪರ್ಸನಾಲಿಟಿಯಿಂದ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಬಾಡಿ ಶೇಮಿಂಗ್ ಗೆ ಒಳಗಾಗುತ್ತಿರುತ್ತಾಳೆ. ಆದರೆ ಇವಳ ಅಭಿಮಾನಿಗಳು ಅದಕ್ಕೆ ತಲೆ ಕೆಡಿಸಿಕೊಳ್ಳದೆ, ಅವಳ ಅಪ್ಪಟ ಪ್ರತಿಭೆಗೆ ಮಾರುಹೋಗಿದ್ದಾರೆ. ಆದರೆ ಹುಮಾ ಇಂಥ ಟ್ರೋಲಿಗರ ಟೀಕೆಗೆ ಎಂದೂ ಕ್ಯಾರೇ ಅಂದಳಲ್ಲ! ತನಗೆ ದೊರೆತ ಪ್ರತಿಯೊಂದು ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ. ಅವಳ ಈ ಉತ್ತಮ ಗುಣದಿಂದಾಗಿಯೇ ಇಂಥ ಪೈಪೋಟಿಗಳ ನಡುವೆಯೂ ಇನ್ನೂ ಇಂಡಸ್ಟ್ರಿಯಲ್ಲಿ ಉಳಿದುಕೊಂಡಿದ್ದಾಳೆ. ಇಷ್ಟರಲ್ಲಿ ಇವಳ `ಬಯಾನ್' ಚಿತ್ರ ರಿಲೀಸ್ ಆಗಲಿದೆ. ಜೊತೆಗೆ ಈಕೆ ಅರ್ಶದ್ ವಾರ್ಸಿ ಹಾಗೂ ಅಕ್ಷಯ್ ಕುಮಾರ್ ರೊಂದಿಗೆ ನಟಿಸುತ್ತಿರುವ ಚಿತ್ರ ಉತ್ತಮ ಭರವಸೆ ಮೂಡಿಸಿದೆ. ಗುಡ್ ಜಾಬ್ ಹುಮಾ, ನಿನ್ನ ಅಪ್ಪಟ ಪ್ರತಿಭೆಯಿಂದ ನೀನು ಯಾರ ಬಾಯನ್ನಾದರೂ ಮುಚ್ಚಿಸಬಹುದು, ಅವರಿವರ ಚಿಂತೆ ಏಕೆ? ಎನ್ನುವ ಹಿತೈಷಿಗಳ ಮಾತಿಗೆ ಹುಮಾ ಉತ್ತರಿಸುತ್ತಿರುವುದು ಹೀಗೆ....!





