ಸರಸ್ವತಿ*
ಆರೋಗ್ಯಕರ ಹಾಗೂ ಕಾಯಿಲೆಮುಕ್ತ ಕರ್ನಾಟಕವನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯೊಂದಿಗೆ “ಆರೋಗ್ಯ ಶಿಕ್ಷಣ ಕ್ರಾಂತಿ” ಎಂಬ ವಿಶೇಷ ಯೋಜನೆಯ ಕಾರ್ಯಕ್ರಮವನ್ನು ದಿನಾಂಕ 18-01-2026 ರಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ
ಸನ್ಮಾನ್ಯ ಕೃಷ್ಣಪ್ಪನವರು (ಶಾಸಕರು, ವಿಜಯನಗರ),
ಶ್ರೀ ಉಮೇಶ್ ಅಡಿಗ (ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು),
ಶ್ರೀಮತಿ ರೀನಾ ಸುವರ್ಣ (ACP) ಹಾಗೂ
ಶ್ರೀಮತಿ ಶೈಲಜಾ ವಿಜಯ್ ಕಿರಾಗಂದೂರ್
ಇವರು ಭಾಗವಹಿಸಿ ಕಾರ್ಯಕ್ರಮಕ್ಕೆ ಗೌರವವನ್ನು ತಂದರು.
ಈ ಯೋಜನೆಯ ಉದ್ದೇಶ ಸರಿಯಾದ ಹಾಗೂ ವೈಜ್ಞಾನಿಕ ಆರೋಗ್ಯ ಶಿಕ್ಷಣದ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸಿ, ಕಾಯಿಲೆಗಳು ಬಾರದಂತೆ ತಡೆಗಟ್ಟುವುದು ಮತ್ತು ಈಗಾಗಲೇ ಇರುವ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸುವುದಾಗಿದೆ.

ಯೋಜನೆಯಡಿಯಲ್ಲಿ ನಿರಂತರ ಆರೋಗ್ಯ ಶಿಕ್ಷಣದ ಮೂಲಕ ಆರೋಗ್ಯ ಸ್ವಯಂಸೇವಕರನ್ನು ಸೃಷ್ಟಿಸಲಾಗುತ್ತದೆ. ಸ್ವಯಂಸೇವಕರಿಗೆ ಆರೋಗ್ಯದ ಬಗ್ಗೆ ವೈಜ್ಞಾನಿಕ ಮಾಹಿತಿ, ಜನರಲ್ಲಿ ಇರುವ ತಪ್ಪು ನಂಬಿಕೆಗಳ ನಿವಾರಣೆ, ಕಾಯಿಲೆಗಳ ನಿಖರ ಕಾರಣಗಳು, ಹಾಗೂ ತಡೆಗಟ್ಟುವ ಮತ್ತು ಗುಣಪಡಿಸುವ ವಿಧಾನಗಳ ಕುರಿತು ತರಬೇತಿ ನೀಡಲಾಗುತ್ತದೆ.
ಆರೋಗ್ಯ ಸ್ವಯಂಸೇವಕರು ತಮ್ಮ ಸುತ್ತಮುತ್ತಲಿನ ಆರೋಗ್ಯ ಸಮಸ್ಯೆ ಇರುವವರನ್ನು ಗುರುತಿಸಿ, ಅವರಿಗೆ ಆರೋಗ್ಯ ಶಿಕ್ಷಣ ನೀಡುವರು. ಅಗತ್ಯವಿರುವ ಲ್ಯಾಬ್ ಪರೀಕ್ಷೆಗಳ ಆಧಾರದಲ್ಲಿ ವೈದ್ಯರ ತಂಡದ ಸಮಾಲೋಚನೆಯೊಂದಿಗೆ ಚಿಕಿತ್ಸೆಯಲ್ಲಿ ಅಗತ್ಯ ಬದಲಾವಣೆಗಳನ್ನು ಸೂಚಿಸಲಾಗುತ್ತದೆ. ರೋಗಿಯ ಜೀವನಶೈಲಿಯಲ್ಲಿ ಬದಲಾವಣೆಗಳೊಂದಿಗೆ ಔಷಧಿಗಳನ್ನು ಕ್ರಮೇಣ ಕಡಿಮೆ ಮಾಡಿ, ಸಂಪೂರ್ಣ ಗುಣಮುಖರಾದ ಬಳಿಕ ಔಷಧಿಗಳನ್ನು ನಿಲ್ಲಿಸುವ ಗುರಿ ಹೊಂದಲಾಗಿದೆ.
ಆರೋಗ್ಯ ಸ್ವಯಂಸೇವಕರನ್ನು ಸೃಷ್ಟಿಸುವ ಈ ಮಹತ್ವದ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ.
ಈ ವಿಶೇಷ ಯೋಜನೆಯಲ್ಲಿ ಎಲ್ಲಾ ಮಾಧ್ಯಮ ಮಿತ್ರರು ಕೈಜೋಡಿಸಿ ಸಹಕರಿಸಬೇಕೆಂದು ಕಾರ್ಯಕ್ರಮದ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.

“ಬನ್ನಿ, ನಾವೆಲ್ಲರೂ ಒಟ್ಟಾಗಿ ‘ಆರೋಗ್ಯ ಶಿಕ್ಷಣ ಕ್ರಾಂತಿ’ಯೊಂದಿಗೆ
ಕಾಯಿಲೆ ಮುಕ್ತ ಕರ್ನಾಟಕವನ್ನು ನಿರ್ಮಿಸೋಣ.”
ಡಾ. ರಾಜು ಕೃಷ್ಣಮೂರ್ತಿ
ಮೊಬೈಲ್: 9480454461





