ಸರಸ್ವತಿ *
“ಪಿ.ಯು.ಸಿ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟ ಚೇತನ್ ಚಂದ್ರ, “ಪ್ರೇಮಿಸಂ” ಮುಂತಾದ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಪ್ರಸ್ತುತ ಚೇತನ್ ಚಂದ್ರ “ಒಬ್ಬನೆ ಶಿವ” ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. URBAN LEGEND ಲಾಂಛನದಲ್ಲಿ ವಿ.ಪಿ.ಶಂಕರ್ ಅವರು ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕೋಲಾರ ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ಶೇಕಡಾ 80ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಸತ್ಯ ಕಶ್ಯಪ್ ಸಂಗೀತ ನೀಡುತ್ತಿದ್ದಾರೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಚಿತ್ರಕ್ಕೂ ಸತ್ಯ ಕಶ್ಯಪ್ ಸಂಗೀತ ನೀಡಿದ್ದಾರೆ. ಕೋರ್ಟ್ ರೂಮ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ವಿ.ಪಿ.ಶಂಕರ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಜನ್ ಛಾಯಾಗ್ರಹಣ ಹಾಗೂ ಅನ್ಬು ಸಂಕಲನ “ಒಬ್ಬನೆ ಶಿವ” ಚಿತ್ರಕ್ಕಿದೆ.
ಚೇತನ್ ಚಂದ್ರ, ಮಹಾಲಕ್ಷ್ಮೀ, ತೇಜ, ಕಿಂಗ್ ಮೋಹನ್, ವಿಶಾಲ್, ರತನ್ ಗಣಪತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.





