ಸರಸ್ವತಿ*
ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ಪ್ಯಾನ್ ಇಂಡಿಯಾ ಫಿಲ್ಮ್ "ಕೊರಗಜ್ಜ" ಚಿತ್ರತಂಡ ಪ್ರಮೋಷನ್ ಸಲುವಾಗಿ ಕೊಚ್ಚಿಯ "ಹಾಲಿಡೇ ಇನ್" ಪಂಚತಾರ ಹೊಟೆಲ್ ನ 'ಗ್ರ್ಯಾಂಡ್ ಬಾಲ್ ರೂಮಿ'ನಲ್ಲಿ ಜನವರಿ 24ರಂದು ರಾತ್ರಿ 8ಕ್ಕೆ ಅದ್ದೂರಿ ಪತ್ರಿಕಾಗೋಷ್ಠಿ ಹಾಗೂ ಭೊಜನಕೂಟ ಆಯೋಜಿಸಲಾಗಿತ್ತು. ಸುಮಾರು ಒಂದುವಾರಗಳ ಮೊದಲೇ ಕೊಚ್ಚಿಯ ಪಿ ಆರ್ ಒ ಮುಖಾಂತರ ಎಲ್ಲಾ ಮಾಧ್ಯಮಗಳಿಗೆ ಪತ್ರಿಕಾ ಗೋಷ್ಟಿಯ ಆಮಂತ್ರಣ ಕೂಡಾ ರವಾನೆಯಾಗಿತ್ತು. ಆದರೆ ಪ್ರೆಸ್ ಮೀಟ್ ನ ಮುಂಚಿನ ದಿನ ತಡರಾತ್ರಿ ಚಿತ್ರತಂಡಕ್ಕೆ ಪಿಆರ್ ಒ ಕರೆ ಮಾಡಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಅಥವಾ ಮುಂದೂಡುವಂತೆ "ಛಾತಪಾಚ"ಮಲಯಾಳಂ ಚಿತ್ರತಂಡವು ದಿಢೀರ್ ಆಗಿ ತಿಳಿಸಿದ್ದಾರೆ ಎಂದರು. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅದ್ದೂರಿ ಪತ್ರಿಕಾಗೋಷ್ಟಿ ನಡೆಸಲು ತಯಾರಿನಡೆಸಿದ್ದ 'ಕೊರಗಜ್ಜ' ಚಿತ್ರ ತಂಡಕ್ಕೆ ಆಘಾತವಾಯಿತು. ಈ ಬಗ್ಗೆ ಕಾರಣ ಕೇಳಿದಾಗ ಮಮುಟ್ಟಿ ಅಭಿನಯಿಸಿದ್ದ ಈ ಮಲಯಾಳಂ ಚಿತ್ರದ ಪ್ರಮೋಷನನ್ನು "ಕೊರಗಜ್ಜ" ಚಿತ್ರದ ಪ್ರಮೋಷನ್ ಸಮಯದಲ್ಲೇ ಜನವರಿ 24ರಂದೇ ರಾತ್ರಿ 8ಗಂಟೆಗೆ ನಡೆಸಲು ಅಂತಿಮ ಕ್ಷಣದಲ್ಲಿ ತೀರ್ಮಾನಿಸಿರುವುದರಿಂದ ಮತ್ತು ಮಮುಟ್ಟಿ ಯವರು ಈ ಕಾರ್ಯಕ್ರಮಕ್ಕೆ ಹಾಜರಾಗುವುದರಿಂದ ಕನ್ನಡ ಬೇಸ್ ಪ್ಯಾನ್ ಇಂಡಿಯಾ ಚಿತ್ರ "ಕೊರಗಜ್ಜ" ಗೆ ಜರ್ನಲಿಸ್ಟ್ ಗಳು ಹಾಜರಾಗುವುದು ಅಸಂಭವ. ಆದ್ದರಿಂದ ಪ್ರೆಸ್ಸ್ ಮೀಟ್ ರದ್ದುಗೊಳಿಸುವುದು ಉತ್ತಮ ಎಂಬ ಸಲಹೆ ಬಂತು. ಮಾರನೆಯ ದಿನದ "ಕೊರಗಜ್ಜ" ಚಿತ್ರದ ಪತ್ರಿಕಾಗೋಷ್ಟಿಗೆ ಕಬೀರ್ ಬೇಡಿ ಆದಿಯಾಗಿ ಹಲವರು ಆಗಲೇ ಆಗಮಿಸಿರುವುದರಿಂದ ಮತ್ತು ಹಾಲಿಡೇ ಇನ್ ಹೊಟೆಲ್ ಗೆ ಮರುದಿನದ ಡಿನ್ನರ್ ಮತ್ತು ಐಷಾರಾಮಿ ರೂಂ ಗಳಿಗೆ ಲಕ್ಷಾಂತರ ಹಣ ಪಾವತಿಸಿರುವುದರಿಂದ ಪತ್ರಿಕಾ ಗೋಷ್ಟಿಯನ್ನು ಮುಂದೂಡುವುದರಿಂದಾಗಲೀ , ರದ್ದು ಗೊಳಿಸುವುದರಿಂದಾಗಲೀ ಚಿತ್ರದ ನಿರ್ಮಾಪಕರಿಗೆ ಲಕ್ಷಾಂತರ ರುಪಾಯಿ ನಷ್ಟ ವಾಗುವ ಸಂಕಟ ಎದುರಾಯ್ತು.ಆದರೆ ಮಮ್ಮುಟ್ಟಿಯಂತಹ ನಟನ ಮತ್ತು ಅವರ ತಂಡದ ಏಕಸ್ವಾಮ್ಯದಿಂದಾಗಿ ಯಾರೊಂದಿಗೂ ತಮ್ಮ ಸಂಕಟವನ್ನು ಹೇಳಿಕೊಳ್ಳದ ಪರಿಸ್ಥಿತಿ "ಕೊರಗಜ್ಜ" ಚಿತ್ರ ತಂಡಕ್ಕೆ ಎದುರಾಯ್ತು.
ಮುಂಬಾಯಿ,ಬೆಂಗಳೂರು,ಹೈದರಾಬಾದ್ ರೀತಿಯ ಮಹಾನಗರಗಳಲ್ಲಿ ಇರುವಹಾಗೆ ಮೂರ್ನಾಲ್ಕು ಜರ್ನಲಿಸ್ಟ್ ಗಳು ಸಿನಿಮಾ ವಿಭಾಗವನ್ನು ಪ್ರತಿನಿಧಿಸುವುದಿಲ್ಲ. ಕೊಚ್ಚಿ ಯಂತಹ ಸಣ್ಣ ನಗರಗಳಲ್ಲಿ ಫಿಲ್ಮ್ ಮತ್ತು ಸ್ಪೋರ್ಟ್ಸ್ ಸೆಕ್ಷನ್ ಗೆ ಒಬ್ಬೊಬ್ಬರೇ ಮಾಧ್ಯಮ ಪ್ರತಿನಿಧಿಗಳಿರುತ್ತಾರೆ. ಆದ್ದರಿಂದ ಸಿನಿಮಾಗೆ ಸಂಬಂಧ ಪಟ್ಟ ಎರಡೆರಡು ಪ್ರೆಸ್ಸ್ ಮೀಟ್ ಗಳನ್ನಾಗಲೀ, ಕಾರ್ಯಕ್ರಮಗಳನ್ನಾಗಲೀ ಏಕಕಾಲದಲ್ಲಿ ಏರ್ಪಡಿಸುವುದಿಲ್ಲ. ಪಿ ಆರ್ ಒ ಗಳೊಂದಿಗೆ ಚರ್ಚಿಸಿ, ಬೇರೆ ಬೇರೆ ಸಮಯಗಳಲ್ಲಿ ಮತ್ತೊಂದು ಸಿನೆಮಾದ ಪ್ರಮೋಷನ್ ಗೆ ತೊಂದರೆ ಆಗದ ರೀತಿಯಲ್ಲಿ ಆಯೋಜಿಸುತ್ತಾರೆ. ಇದು ಇಂಡಸ್ಟ್ರಿಯ ಬೆಳವಣಿಗೆಗೆ ಮಾನವೀಯತೆಯ ಮತ್ತು ನೈತಿಕತೆಯ ದ್ರಷ್ಟಿಯಿಂದ ದಕ್ಷಿಣಭಾರತದ ಸಿನಿಮಾ ರಂಗದಲ್ಲಿ ಒಂದು ಭಾಷೆಯ ನಿರ್ಮಾಪಕ ಮತ್ತೊಂದು ಭಾಷೆಯ ನಿರ್ಮಾಪಕನಿಗೆ ಸಹಕರಿಸುವ ರೀತಿ. ಆದರೆ ಈ ಬಾರಿ ಪದ್ಮಭೂಷಣ ಪ್ರಶಸ್ತಿ ಪಡೆದ ಮಲಯಾಳಂ ಸುಪರ್ ಸ್ಟಾರ್ ಎನಿಸಿಕೊಂಡ ಮಮುಟ್ಟಿ ಯಂತಹ ನಟ ಮತ್ತು ಅವರ ಚಿತ್ರ ತಂಡ ಈರೀತಿಯ ವರ್ತನೆತೋರಿಸಿದ್ದು, ನಮಗೆ ಊಹಿಸಲೂ ಸಾಧ್ಯವಾಗುತ್ತಿಲ್ಲ ಎಂದು ಕೊರಗಜ್ಜ ಚಿತ್ರತಂಡ ಅಳಲು ತೋಡಿಕೊಂಡಿದ್ದಾರೆ.





