– ರಾಘವೇಂದ್ರ ಅಡಿಗ ಎಚ್ಚೆನ್.
ಬಿಗ್ ಬಾಸ್ 12ನೇ ಆವೃತ್ತಿ ಸ್ಪರ್ಧಿ ಮಲ್ಲಮ್ಮ ಅದೃಷ್ಛ ಖುಲಾಯಿಸಿದೆ. ಸ್ಯಾಂಡಲ್‌ವುಡ್‌ನ ಸಿನಿಮಾದಲ್ಲಿ ಮಲ್ಲಮ್ಮ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ. ಮಲ್ಲಮ್ಮ ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿರುವ ವಿನಾಶ ಕಾಲೆ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಹೊಸಬರೇ ಇರುವ ಈ ಸಿನಿಮಾದಲ್ಲಿ ಮಲ್ಲಮ್ಮ ಕಾಣಿಸಿಕೊಂಡಿದ್ದಾರೆ. ಹೊಸ ಪ್ರತಿಭಭೆಗಳ ನಡುವೆ ಮಲ್ಲಮ್ಮ ಭಾರಿ ಗಮನಸೆಳೆದಿದ್ದಾರೆ. ಈ ಮೂಲಕ ಮಲ್ಲಮ್ಮ ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ.
ಇನ್ನು ಸನಾತನ ಕಾಲದಿಂದಲೂ ಗಾದೆ ಮಾತು ಎಂದಿಗೂ ಸುಳ್ಳಾಗಿಲ್ಲ. ಈ ಪೈಕಿ ಹೊಸಬರ ತಂಡವೊಂದು ‘ವಿನಾಶ ಕಾಲೆ ವಿಪರೀತ ಬುದ್ಧಿ’ ಗಾದೆಯಲ್ಲಿ ಬರುವ ’ವಿನಾಶ ಕಾಲೆ’ ಎಂಬ ಎರಡು ಪದಗಳನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದೆ. ಗಣರಾಜ್ಯೋತ್ಸವ ದಿನದಂದು ರಾಜಾಜಿನಗರದ ಕೈಗಾರಿಕಾ ಕೇಂದ್ರದಲ್ಲಿರುವ ಮದ್ದುರಮ್ಮ ದೇವಿ ಮತ್ತು ಯಲ್ಲಮ್ಮ ದೇವಿ ಅಮ್ಮನ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಬಾ.ಮ.ಹರೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು
ಮಲ್ಲಮ್ಮ ಇದರಲ್ಲಿ ತಾಯಿಯ ಪಾತ್ರ ಮಾಡುತ್ತಿದ್ದಾರೆ.
ಶಕ್ತಿ ಫಿಲಿಂಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ತುಮಕೂರು ಮೂಲದ ಎಸ್. ಕಿರಣ್‌ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪಾವನಿ ಸಿರಿ, ರಿಷಿಕ ಗೌಡ, ವೈಷ್ಣವಿ, ಶ್ರೀನಿಧಿ, ರಚನಾ, ಶೋಭ, ಮಂಡ್ಯ ಸಿದ್ದು, ‘ಬಿಗ್ ಬಾಸ್’ ಮಲ್ಲಮ್ಮ, ಪ್ರವಲಿಕ, ದಿಶಾ ಮುಂತಾದವರು ನಟಿಸುತ್ತಿದ್ದಾರೆ.

ವಿನಾಶ ಕಾಲೆ ಸಿನಿಮಾವನ್ನು ಕಿರಣ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮಲ್ಲಮ್ಮ ಮಾತ್ರವಲ್ಲ, ಕರಿಬಸಪ್ಪ, ಡಾಗ್ ಸತೀಶ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿದ್ದಾರೆ. ನೈಜ ಕತೆಯನ್ನೇ ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಕಿರುಣ್ ಕುಮಾರ್ ಹೇಳಿದ್ದಾರೆ.
ಮಾರ್ಚ್ ತಿಂಗಳಿಂದ 30 ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಮಂಜು ಕವಿ ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿ ಹೊತ್ತರೆ, ವಿನಯ್ ಗೌಡ ಛಾಯಾಗ್ರಹಣವಿದೆ.





