ಕಾನ್ಫಿಡೆನ್ಸ್​ ಗ್ರೂಪ್​ ಮುಖ್ಯಸ್ಥ ಸಿ.ಜೆ. ರಾಯ್ ಕೇವಲ ಬಿಲ್ಡರ್ ಆಗಿರಲಿಲ್ಲ. ಮನರಂಜನಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದರು.

ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಾದ ಮರಕ್ಕಾರ್ ಮತ್ತು ಮೇ ಹೂಂ ಮೂಸಾದಂತಹ ಚಿತ್ರಗಳಿಗೆ ಬಂಡವಾಳ ಹೂಡಿದ್ದರು. ಸ್ಟಾರ್ ಸಿಂಗರ್ ನಂತಹ ಜನಪ್ರಿಯ ರಿಯಾಲಿಟಿ ಶೋಗಳನ್ನು ಸ್ಪಾನ್ಸರ್ ಮಾಡಿದ್ದರು.

ರಾಯ್​ ಅವರ ಸಮಾಜ ಸೇವೆಯೂ ಅಷ್ಟೇ ದೊಡ್ಡದಿತ್ತು. ಇತ್ತೀಚೆಗಷ್ಟೇ ಕೇರಳ ಮತ್ತು ಕರ್ನಾಟಕದ 201 ಬಡ ವಿದ್ಯಾರ್ಥಿಗಳಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಸ್ಕಾಲರ್ಶಿಪ್ ನೀಡಿದ್ದರು. 2026ರಲ್ಲಿ ಇದನ್ನು 300 ವಿದ್ಯಾರ್ಥಿಗಳಿಗೆ ವಿಸ್ತರಿಸುವ ಕನಸು ಕಂಡಿದ್ದರು. ಕೇರಳದಲ್ಲಿ ಪ್ರವಾಹ ಬಂದಾಗ 100ಕ್ಕೂ ಹೆಚ್ಚು ಮನೆಗಳನ್ನು ಮರು ನಿರ್ಮಿಸಿಕೊಟ್ಟ ಕೀರ್ತಿ ರಾಯ್​ ಅವರಿಗೆ ಸಲ್ಲುತ್ತದೆ.

ಕಾನ್ಫಿಡೆಂಡ್ ಗ್ರೂಪ್​ ವಿವಾದ, ಆರೋಪ!

ಸಿ.ಜೆ. ರಾಯ್ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ವಿವಾದಗಳು ಅವರನ್ನು ಬಿಟ್ಟಿರಲಿಲ್ಲ. 2013-2016ರ ಅವಧಿಯಲ್ಲಿ ಕಾನ್ಫಿಡೆಂಟ್ ಗ್ರೂಪ್ ವಿರುದ್ಧ ಗ್ರಾಹಕರು ತಿರುಗಿ ಬಿದ್ದಿದ್ದರು. ಪ್ರಾಜೆಕ್ಟ್ ಡಿಲೇ, ಕ್ಲಬ್ ಹೌಸ್ ಮತ್ತು ಪಾರ್ಕ್​ಗಳಂತಹ ಸೌಲಭ್ಯಗಳನ್ನು ನೀಡದಿರುವುದು ಮತ್ತು ಹ್ಯಾಂಡ್ ಓವರ್ ವಿಳಂಬದ ಬಗ್ಗೆ ಜನ ಬಿಗ್ ಫ್ರಾಡ್ ಎಂದು ದೂಷಿಸಿದ್ದರು.

2022ರಲ್ಲಿ ಮರಡು ಅಪಾರ್ಟ್ಮೆಂಟ್ ಪ್ರಾಜೆಕ್ಟ್​ನಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಆದರೆ, ಕಂಪನಿ ಈ ಆರೋಪಗಳನ್ನು ನಿರಾಕರಿಸಿ, ತಾವು ಕಾನೂನು ಪ್ರಕಾರವೇ ನಡೆದುಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿತ್ತು. ಗ್ರಾಹಕರ ದೂರುಗಳ ನಡುವೆಯೂ ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯಂತಹ 3,000 ಕೋಟಿ ರೂಪಾಯಿಗಳ ಬೃಹತ್ ಪ್ರಾಜೆಕ್ಟ್ ಮೂಲಕ ಮತ್ತೆ ಸಿಜೆ ರಾಯ್ ಸುದ್ದಿಯಾಗಿದ್ದರು.

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಎಚ್‌ಪಿ ಉದ್ಯೋಗಿಯಾಗಿ ವೃತ್ತಿ ಜೀವನ ಆರಂಭಿಸಿ, ಇಂದು ಇಡೀ ದಕ್ಷಿಣ ಭಾರತ ಮತ್ತು ದುಬೈನಲ್ಲಿ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಿದ ಸಿಜೆ ರಾಯ್ ಅವರ ದುರಂತ ಅಂತ್ಯ, ಇಡೀ ಬೆಂಗಳೂರು, ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ.

ಸಾವಿರಾರು ಕೋಟಿ ಆಸ್ತಿ, ನೂರಾರು ಕಾರುಗಳು, ಗೌರವ ಎಲ್ಲವೂ ಇದ್ದರು ಕೂಡ ಪದೇ ಪದೇ ನಡೆಯುತ್ತಿದ್ದ ಐಟಿ ದಾಳಿಗೆ ಹೆದರಿ ಬದುಕನ್ನು ಕೊನೆಗಾಣಿಸಿಕೊಂಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ