– ರಾಘವೇಂದ್ರ ಅಡಿಗ ಎಚ್ಚೆನ್.
ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ ಬಹು ನೀರೀಕ್ಷಿತ ಚಿತ್ರ ‘ಘಾರ್ಗಾ’ ತನ್ನ ವಿಭಿನ್ನ ಕಂಟೆಂಟ್, ಟ್ರೇಲರ್ ಮೂಲಕವೇ ಸಾಕಷ್ಟು ನೀರೀಕ್ಷೆಗಳನ್ನು ಹುಟ್ಟುಹಾಕಿದೆ. ಫೆ.6ರಂದು ರೀಲೀಸಾಗುತ್ತಿರುವ ಈ ಚಿತ್ರದಲ್ಲಿ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗಾಗಿಯೇ ದರ್ಶನ್ ಅಭಿನಯದ ‘ಗಜ’ ಚಿತ್ರದ ಸೂಪರ್ ಹಿಟ್ ‘ಬಂಗಾರಿ ಯಾರೇ ನೀ ಬುಲ್ ಬುಲ್ …’ ಹಾಡನ್ನು ರಿಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿದೆ. ಇದು ದರ್ಶನ್ ಫ್ಯಾನ್ಸ್ಗೆ ಒಂದು ಸರ್ ಪ್ರೈಸ್ ಗಿಪ್ಟ್ ಆಗಿ, ಇತ್ತೀಚೆಗೆ ಎ.ಆರ್.ಸಿ ಮ್ಯೂಸಿಕ್ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಫಾರ್ಗಾ ಒಂದು ಊರಿನ ಹೆಸರು, ದ ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಅರುಣ್ ರಾಮ್ಪ್ರಸಾದ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಘಾರ್ಗಾ ಒಂದು ಅಡ್ವೆಂಚರಸ್ ಡ್ರಾಮಾ, ಹಾರರ್ ಚಿತ್ರವಾಗಿದ್ದು, ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ. ಎಂ. ಶಶಿಧರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.
ಬಂಗಾರಿ ಹಾಡಿನ ಬಗ್ಗೆ ಮಾತನಾಡಿರುವ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್, ‘ಗಜ ಚಿತ್ರದ ಹಾಡುಗಳು ನಮ್ಮ ಅಶ್ವಿನಿ ಆಡಿಯೋದಲ್ಲೇ ರೀಲೀಸಾಗಿತ್ತು. ಆಗ ಆ ಹಾಡನ್ನು ಮಿಲಿಯನ್ ಗಟ್ಟಲೇ ಪ್ರೇಕ್ಷಕರು ನೋಡಿದ್ದರು. ಈಗಲೂ ಸಹ ರೀಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗೂ ಹೆಚ್ಚು ವೀಕ್ಷಣೆಯಾಗಿದೆ. ಈ ಹಾಡನ್ನು ದರ್ಶನ್ ಅವರಿಗೆ ಡೆಡಿಕೇಟ್ ಮಾಡುತ್ತಿದ್ದೇವೆ. ಚಿತ್ರದ ರೀಲೀಸ್ ದಿನ ಈ ಹಾಡಿನ ಯಶಸ್ಸನ್ನು ಸೆಲಬ್ರೇಟ್ ಮಾಡುತ್ತೇವೆ. ಈಗಾಗಲೇ ಎಲ್ಲಾ ಕಡೆ ಪ್ರೊಮೋಷನ್ ಕಾರ್ಯ ನಡೆಯುತ್ತಿದೆ. ಚಿತ್ರವನ್ನು ಎಷ್ಟು ಬೇಕೋ ಅಷ್ಟು ಸೆಂಟರ್ಗಳಲ್ಲಿ ಮಾತ್ರ ರೀಲೀಸ್ ಮಾಡುತ್ತಿದ್ದೇವೆ. ಎನ್. ಕುಮಾರ್ ಅವರು ಒಳ್ಳೊಳ್ಳೆ ಥೇಟರ್ ಸೆಟಪ್ ಮಾಡಿ ಕೊಟ್ಟಿದ್ದಾರೆ. ಇದು ಮಾಮೂಲಿ ಸಿನಿಮಾ ಅಲ್ಲ, ವಿಭಿನ್ನ ರೀತಿಯ ಮೇಕಿಂಗ್ ನಿರೂಪಣೆ ಕಾಣಬಹುದು’ ಎಂದು ಹೇಳಿದರು. ನಿರ್ದೇಶಕ ಶಶಿಧರ್ ಮಾತನಾಡಿ ‘ಜನ ಮೆಚ್ಚುವಂಥ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿ ನಾಯಕನಿಗೆ 3 ಗೆಟಪ್ಗಳಿವೆ’ ಎನ್ನುವರು.
ನಾಯಕ ಅರುಣ್ ಮಾತನಾಡಿ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ವಿಭಿನ್ನವಾಗಿದ್ದು, ರೈಟರ್, ಅಂಡರ್ವರ್ಡ್ಲ್ ಹೀಗೆ ಹಲವಾರು ಶೇಡ್ಸ್ ಇದೆ. ಇದೊಂದು ಹಾರರ್, ಕ್ರೈಮ್ ಥ್ರಿಲ್ಲರ್ ಸಬ್ಜೆಕ್ಟ್’ ಎಂದು ಹೇಳಿದರು. ಈ ಚಿತ್ರವನ್ನು ಎನ್. ಕುಮಾರ್ ಅವರು ರೀಲೀಸ್ ಮಾಡುತ್ತಿದ್ದಾರೆ. ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದ್ದು, ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಲಾಗಿದೆ.





