ನಾಯಕಿ ಸ್ಮೃತಿ ಮಂಧಾನಾ ಅವರ ಅಮೋಘ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ.
ಕೊಟಂಬಿಯ ಬಿಸಿಎ ಕ್ರೀಡಾಂಗಣದಲ್ಲಿ ಗುರುವಾಗರ ನಡೆದ ಜಿ್ದ್ದಾಜಿದ್ದಿನ ಪಂದ್ಯದಲ್ಲಿ 204 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಇದರೊಂದಿಗೆ ಟೂರ್ನಿಯ ಇತಿಹಾಸದಲ್ಲೇ ಅತ್ಯಧಿಕ ರನ್ ಚೇಸ್ ಮಾಡಿದ ಕೀರ್ತಿಯನ್ನು ಆರ್‌ಸಿಬಿ ತನ್ನದಾಗಿಸಿಕೊಂಡಿತು.
ನಾಯಕಿ ಸ್ಮೃತಿ ಮಂಧಾನಾ 41 ಎಸೆತಗಳಲ್ಲಿ 87 ರನ್ ಗಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಆದರೆ ಜಾರ್ಜಿಯಾ ವೋಲ್ ಎರಡನೇ ವಿಕೆಟ್‌ಗೆ 165 ರನ್‌ಗಳ ಜೊತೆಯಾಟದಲ್ಲಿ 54 ಎಸೆತಗಳಲ್ಲಿ 79 ರನ್ ಗಳಿಸಿದರು. ಇದು ಆರ್ ಸಿಬಿ ತಂಡ ಎರಡನೇ ಬಾರಿ ಸ್ಮರಣೀಯ ಪ್ರಶಸ್ತಿ ಗೆಲುವಿಗೆ ದಾರಿ ಮಾಡಿಕೊಟ್ಟಿತು.
ನಾಯಕಿ ಜೆಮಿಮಾ ರೊಡ್ರಿಗಸ್ ಅಜೇಯ ಅರ್ಧಶತಕ ಮತ್ತು ಚಿನೆಲ್ಲೆ ಹೆನ್ರಿ 15 ಎಸೆತಗಳಲ್ಲಿ 35 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಗೆ 204 ರನ್‌ಗಳ ಬೃಹತ್ ಮೊತ್ತಕ್ಕೆ ಮುನ್ನಡೆಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಪಡೆದ ನಂತರ ಲಾರಾ ವೋಲ್ವಾರ್ಡ್ (25 ಎಸೆತಗಳಲ್ಲಿ 44 ರನ್) ಮತ್ತು ಲಿಜೆಲ್ ಲೀ (30 ಎಸೆತಗಳಲ್ಲಿ 37 ರನ್) ಕೂಡ ವೇಗವಾಗಿ ರನ್ ಗಳಿಸಿದರು. ಜೆಮಿಮಾ 37 ಎಸೆತಗಳಲ್ಲಿ 57 ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ, ಆರ್‌ಸಿಬಿ ದಾಖಲೆಯ ಚೇಸ್ ನ್ನು ಪೂರ್ಣಗೊಳಿಸಿ ಡಬ್ಲ್ಯೂಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡಗಳಾಗಿ ಮುಂಬೈ ಇಂಡಿಯನ್ಸ್ ನ್ನು ಸೇರಿಕೊಂಡಿತು.
ಡಬ್ಲ್ಯೂಪಿಎಲ್‌ನಲ್ಲಿ ಗೆಲುವಿನ ನಂತರ ಮೂರು ವರ್ಷಗಳಲ್ಲಿ ಮೂರು ಪ್ರಶಸ್ತಿಗಳು ಫ್ರಾಂಚೈಸಿಗೆ ಅದ್ಭುತ ಫಲಿತಾಂಶವಾಗಿದೆ. ಈ ಗೆಲುವು ಬಹಳ ಖುಷಿ ತಂದಿದೆ. ಆರ್‌ಸಿಬಿ ಅಭಿಮಾನಿಗಳು ವಿಶ್ವದಲ್ಲೇ ಅತ್ಯುತ್ತಮರು ಎಂದು ಸ್ಮೃತಿ ಮಂಧಾನ ಹೇಳಿದ್ದಾರೆ.
ಶುಭಾಶಯಗಳ ಮಹಾಪೂರ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆರ್ ಸಿಬಿ ಮಹಿಳಾ ತಂಡದ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ತಂಡವನ್ನು ಅಭಿನಂದಿಸಿದ್ದಿ. ಮತ್ತೊಮ್ಮೆ, ಆರ್‌ಸಿಬಿ ಮಹಿಳಾ ತಂಡ ಡಬ್ಲ್ಯೂಪಿಎಲ್ ಟ್ರೋಫಿಯನ್ನು ಗೆದ್ದಿದೆ. ಪಂದ್ಯಾವಳಿಯಾದ್ಯಂತ ನಿರಂತರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ನಮ್ಮ ಆರ್ ಸಿಬಿ ತಂಡವು ಇಂದಿನ ಫೈನಲ್‌ನಲ್ಲಿ ದೆಹಲಿ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮುವುದನ್ನು ನೋಡಲು ಸಂತೋಷವಾಯಿತು ಎಂದು ಬರೆದಿದ್ದಾರೆ.





