ರಾಘವೇಂದ್ರ ಅಡಿಗ ಎಚ್ಚೆನ್.

ನಗರದ ಮೆಜೆಸ್ಟಿಕ್ ಮತ್ತು ಗಾಂಧಿನಗರ ಎಂದ ಕೂಡಲೇ ನೆನಪಾಗುವುದು ಅಲ್ಲಿನ ಗಿಜಿಗುಡುವ ಜನಸಂದಣಿ ಮತ್ತು ಹಳೆಯ ಚಿತ್ರಮಂದಿರಗಳು. ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಪ್ರದೇಶದಲ್ಲಿ ಒಂದು ಕಾಲದಲ್ಲಿ ಚಿತ್ರಮಂದಿರಗಳದ್ದೇ ಕಾರುಬಾರು. ಅವುಗಳಲ್ಲಿ, ಅದರಲ್ಲೂ ಏಷ್ಯಾದಲ್ಲಿಯೇ ಅತೀ ದೊಡ್ಡ ಥಿಯೇಟರ್ಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದ್ದು ಈ ‘ಕಪಾಲಿ’ ಚಿತ್ರಮಂದಿರ.
ಬೆಂಗಳೂರಿನಲ್ಲಿ ಕಾಣಿಸಿಕೊಂಡ ಟಾಲಿವುಡ್ ಸ್ಟಾರ್: ಸುಮಾರು 50 ವರ್ಷಗಳ ಕಾಲ ಸಿನಿಪ್ರಿಯರಿಗೆ ಮನರಂಜನೆ ನೀಡಿದ್ದ ಈ ಚಿತ್ರಮಂದಿರ ನೆಲಸಮಗೊಂಡು,‌ ಈಗ ಅದೇ ಜಾಗದಲ್ಲಿ ಬೃಹತ್ ಮಲ್ಟಿಫ್ಲೆಕ್ಸ್‌ ಶುರುವಾಗಿದೆ. ಅದು ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು ಅವರ ಒಡೆತನದ ಎಎಂಬಿ ಸಿನಿಮಾಸ್ ಅನ್ನೋದು ವಿಶೇಷ.‌ ಕೆಲವು ತಿಂಗಳಿಂದ ಎಎಂಬಿ ಸಿನಿಮಾಸ್ ಕಪಾಲಿ ಎನ್ನುವ ಹೆಸರಿನಲ್ಲಿ ಈ ಮಲ್ಟಿಪ್ಲೆಕ್ಸ್ ಕಾರ್ಯ ಆರಂಭಿಸಿರೋದು ಗೊತ್ತೇ ಇದೆ. ಈ ಮಲ್ಟಿಪ್ಲೆಕ್ಸ್ಗೆ ಇಂದು ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಭೇಟಿ ನೀಡಿದರು.
ತಮ್ಮ ಒಡೆತನದ ಮಲ್ಟಿಪ್ಲೆಕ್ಸ್ನಲ್ಲಿ ಒಂದು ಗಂಟೆ ಕಾಲ ಕಳೆದ ಮಹೇಶ್ ಬಾಬು: ಇಲ್ಲಿ ಅವರು ಅದರ ಕಾರ್ಯ ವೈಖರಿ, ಅಲ್ಲಿನ ಸೌಲಭ್ಯಗಳ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚೆ ಮಾಡಿದರು. ಎಎಂಸ್ ಸಿನಿಮಾಸ್ ಮ್ಯಾನೇಜರ್ ಹೇಳುವ ಹಾಗೇ ಮಹೇಶ್ ಬಾಬು ತಮ್ಮ ಆತ್ಮೀಯರ ಜೊತೆ ಸುಮಾರು ಗಂಟೆಗಳ ಕಾಲ, ಕಾಲ ಕಳೆದರು.
ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು: ಮತ್ತೊಂದು ಕಡೆ ಮಹೇಶ್ ಬಾಬು ಅವರನ್ನ ನೋಡೋದಕ್ಕೆ ನೂರಾರು ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಮಹೇಶ್ ಬಾಬು ಬ್ಯಾನರ್ ಗಳನ್ನು ಹಿಡಿದು ಘೋಷಣೆ ಕೂಗಿದರು. ತಮ್ಮ ನೆಚ್ಚಿನ ನಟನನ್ನು ಕಂಡು ಖುಷಿಯಾದರು.
ಎಎಂಬಿ ಸಿನಿಮಾಸ್‌ ನ ವಿಶೇಷತೆ ಏನು ಗೊತ್ತಾ?: ಇದು ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ವಿಥ್ ಇಂದು ಚಿತ್ರಮಂದಿರವಾಗಿದ್ದು, 9 ಸ್ಕ್ರೀನ್‌ಗಳು ಇದರಲ್ಲಿ ಇವೆ. ಈ ಸ್ಕ್ರೀನ್‌ಗಳು ಅತ್ಯುತ್ತಮ ವಿಡಿಯೋ ಗುಣಮಟ್ಟ ಹೊಂದಿದ್ದು, ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರ ವೀಕ್ಷಣೆ ಅನುಭವ ನಿಡುತ್ತದೆ. ವಿಶೇಷವಾಗಿ ಎಲ್ಲಾ ಸ್ಕ್ರೀನ್ ಗಳಲ್ಲಿ ಅತ್ಯುತ್ತಮ ಬಣ್ಣ ಹಾಗೂ ದೃಶ್ಯ ಸ್ಪಷ್ಟತೆಗಾಗಿ ಬಾರ್ಕೋ ಲೇಸರ್ ಪ್ರೊಜೆಕ್ಷನ್ ತಂತ್ರಜ್ಞಾನವನ್ನು ಎಎಂಬಿ ಸಿನಿಮಾಸ್‌ ನಲ್ಲಿ ಬಳಸಲಾಗಿದೆ. ಇಷ್ಟೇ ಅಲ್ಲ ಇನ್ನು ಹಲವು ವೈಶಿಷ್ಟ್ಯಗಳು ಈ ಮಲ್ಟಿಪ್ಲೆಕ್ಸ್ ನಲ್ಲಿ ಇವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ