ಯಾರು ಬೇರೆ ಮಾಡುತ್ತಾರೋ ಅವರೇ ಕಂಟಕರು

`ಹರಿದು ಹಂಚಿಹೋದರೆ ನಾವು ಹಾಳಾಗುತ್ತೇವೆ’ ಎಂಬ ಘೋಷಣೆ ಇದೀಗ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಇಲ್ಲಿ ಯಾರು ಹಾಗೆ ಬೇರೆ ಮಾಡುತ್ತಿದ್ದಾರೋ ಅವರ ಬಗ್ಗೆ ಪ್ರಸ್ತಾಪವಿಲ್ಲ. ಹಾಗಾದರೆ ಯಾರನ್ನು ತಡೆಯಬೇಕು? ಇಲ್ಲಿ ಯಾವ ಜಾತಿಯ ಹೆಸರನ್ನೂ ಹೇಳುತ್ತಿಲ್ಲ. ಆದರೆ ಜಾತಿ ಆಧಾರಿತ ಜನಗಣತಿಗೆ ಹೆದರಿ ಅದರ ವಿರುದ್ಧವಾಗಿ ಇಂಥ ಮಾತು ಕೇಳಿಬರುತ್ತಿದೆ ಎಂಬುದಂತೂ ಗ್ಯಾರಂಟಿ. ಆಯಾ ಜಾತಿಗಳನ್ನು ಗುರುತಿಸಿ, ಎಣಿಕೆ ಮಾಡಿದ್ದೇ ಆದಲ್ಲಿ, ಈ ಜಾತಿಗಳನ್ನು ಹೊರಗಿನವರು ಕಂಟಕರಾಗಿ ಕಾಡುತ್ತಾರೆ, ಎಂದೇ ಹೆದರಿಸಲಾಗುತ್ತಿದೆ.

ಇಲ್ಲಿ ಏಳು ಮುಖ್ಯ ಪ್ರಶ್ನೆ, ಜಾತಿಗಳನ್ನು ಗುರುತಿಸುವವರು ಯಾರು? ಎಲ್ಲಿಂದ ಶುರುವಾಗುತ್ತದೆ? ಇಡೀ ದೇಶದಲ್ಲಿ ಜಾತಿಯ ಗುರುತು ಸಿಗುತ್ತಿದ್ದಂತೆ, ಇದಕ್ಕೆ ಬ್ರಾಹ್ಮಣರೇ ಹೊಣೆ. ಅವರ ಪ್ಲಾನಿಂಗ್‌ ಪ್ರಕಾರ ಎಲ್ಲರೂ ಅವರವರ ಸೀಮಿತ ಜಾತಿಯಲ್ಲೇ ಉಳಿಯತಕ್ಕದ್ದು.

ಹಳ್ಳಿಗಳಲ್ಲಂತೂ ಇದು 100% ಖರೇ! ಏಕೆಂದರೆ ಈಗಲೂ ಅಲ್ಲಿ ಸಮಾಜ 18ನೇ ಶತಮಾನದ ತರಹವೇ ಇದೆ. ಓದುಬರಹ, ನೆಹರೂ ತಂದ ಸಂವಿಧಾನ, ಆ ಕಾಲದ ಕಾನೂನು, ಪ್ರತಿಯೊಬ್ಬರಿಗೂ ಸಮಾನ ಮತದಾನದ ಅವಕಾಶ ಇದ್ದರೂ, ಪ್ರತಿ ಜಾಗದಲ್ಲೂ ಜನ ತಮ್ಮ ಹೆಸರಿನ ಹಿಂದೆ ತಮ್ಮದೇ ಜಾತಿ ಜೋಡಣೆ ಮಾಡಿಕೊಂಡು ಸುತ್ತುತ್ತಾರೆ. ಎದುರಿಗಿರುವವನ ಜಾತಿಯ ಬಗ್ಗೆ ಗೊತ್ತಾಗುವ ತನಕ, ಯಾರೂ ಮಾತನಾಡಲಿಕ್ಕೂ ರೆಡಿ ಇಲ್ಲ.

ಜಾತಿ ಹೆಸರಿನಲ್ಲಿ ಹಂಚಿ ಹೋಗುವುದು ಅಂದ್ರೆ ಇದೇ. ಯಾರಿಗೆ ಈ ರೀತಿ ಬೇರ್ಪಡಿಸುವಿಕೆ ಗೊತ್ತೋ, ಅವರು ಮುಖ ನೋಡುತ್ತಲೇ ಯಾರು ಯಾವ ಜಾತಿಯವರೆಂದು ಹೇಳಿಬಿಡುತ್ತಾರೆ. ಜೊತೆಗೆ ವ್ಯವಹರಿಸುವರು, ಅಕ್ಕಪಕ್ಕ ನೆಲೆಸಿರುವರು, ಸಹಪಾಠಿಗಳು ಅಥವಾ ಸಹೋದ್ಯೋಗಿಗಳು ತಮ್ಮ ಜಾತಿಯ ಬಗ್ಗೆ ಎಲ್ಲಿಯವರೆಗೆ ಹೇಳಿಕೊಳ್ಳುವುದಿಲ್ಲವೇ, ಇಂಥವರು ನೆಮ್ಮದಿಯಾಗಿ ಇರಲಾರರು. ಸಾಮಾನ್ಯವಾಗಿ ಜನ ತಮ್ಮ ತಂದೆಯ ಹೆಸರು, ಕೆಲಸ, ಪೂರ್ವಾಪರ, ವಾಸದ ಜಾಗಗಳ ಬಗ್ಗೆ ವಿವರ ಕೇಳುತ್ತಿರುತ್ತಾರೆ. ಆಗ ಯಾರಾದರೂ ತಮ್ಮ ಜಾತಿಯ ಬಗ್ಗೆ ಸಹಜವಾಗಿ ಹೇಳಿಕೊಳ್ಳದಿದ್ದರೆ, ಅವರು ಯಾವ ಜಾತಿ… ಯಾಕೆ ಅದನ್ನು ಹೇಳಿಕೊಳ್ಳುತ್ತಿಲ್ಲ ಎಂದು ಗುಸುಗುಟ್ಟುತ್ತಾರೆ.

ಇಂಥವರು ಪ್ರತಿ ಊರು, ಪ್ರತಿ ಜಾಗದಲ್ಲೂ ತುಂಬಿದ್ದಾರೆ. ಹಾಗಿರುವಾಗ ಕಂಟಕರ ಮಾತೇಕೆ ಇಲ್ಲಿ ಬೇಕು? ಅಂತಹವರೇ ಈ ರೀತಿ ದಿನಕ್ಕೆ 10 ಸಲ ಜಾತಿಯ ಬಗ್ಗೆ ಪ್ರಸ್ತಾಪ ಮಾಡುತ್ತಿರುತ್ತಾರೆ. `ಆರ್ಟಿಕಲ್ 15′ ಚಿತ್ರದಲ್ಲಿ ಇಂಥ ಒಂದು ರೋಚಕ ಸನ್ನಿವೇಶವಿದೆ. ಇಲ್ಲಿ ಒಂದು ಪಾತ್ರ ನಾಯಕನನ್ನು ಬ್ರಾಹ್ಮಣನೆಂದೇನೋ ಹೇಳುತ್ತದೆ, ಆದರೆ ಅಲ್ಲೇ ಇರುವ ಇತರ 4 ಬ್ರಾಹ್ಮಣರ ಉಪಜಾತಿ ಬೇರೆ ಬೇರೆ, ಅದರಲ್ಲೂ ಮೇಲು ಕೀಳುಗಳಿವೆ ಎನ್ನುತ್ತಾ ಅವರನ್ನೂ ಬೇರೆ ಮಾಡುತ್ತದೆ. ಈ ಬ್ರಾಹ್ಮಣ ಪಾತ್ರಕ್ಕೆ ಶೂದ್ರ ಯಾವ ಅಸ್ಪೃಶ್ಯ ಹೆಣ್ಣಿನೊಂದಿಗೆ ಸಹವಾಸವಿದ್ದರೆ ಏನೂ ಪರವಾಗಿಲ್ಲ, ಆದರೆ ಅವಳು ಇಂಥವರ ಮನೆಯಲ್ಲಿ ಏನಾದರೂ ಮುಟ್ಟಿಬಿಟ್ಟರೆ ಆಪತ್ತು ತಪ್ಪಿದ್ದಲ್ಲ.

ಚುನಾವಣೆಗೆ ಮೊದಲು ಎಲ್ಲಾ ಪಕ್ಷಗಳೂ ಪ್ರತಿ ಜಾತಿಯವರ ಕುಲಗೋತ್ರ ವಿಚಾರಿಸಿ, ಆ ಆಧಾರದ ಮೇಲೆ ಟಿಕೆಟ್‌ ಹಂಚಲಾಗುತ್ತದೆ. ಇಲ್ಲಿ ಜಾತಿ ಎಷ್ಟು ಪ್ರಾಬಲ್ಯ ವಹಿಸುತ್ತದೆಂದರೆ, ರಾಷ್ಟ್ರಪತಿ ಹುದ್ದೆಗೇರಿದ ದಲಿತ ರಾಮನಾಥ್‌ ಕೋವಿಂದ್ ಹಾಗೂ ನಂತರ ದ್ರೌಪದಿ ಮುರ್ಮುರನ್ನು ಬಹಳಷ್ಟು ಕಾರ್ಯಕ್ರಮಗಳಿಗೆ ಆಹ್ವಾನಿಸಲೇ ಇಲ್ಲ. ಹೊಸ ಸಂಸತ್ತಿನ ಭವನದ ಗುದ್ದಲಿಪೂಜೆಯನ್ನು ರಾಮನಾಥರಿಂದ ಮಾಡಿಸಲಿಲ್ಲ, ಅದರ ಉದ್ಘಾಟನೆಯನ್ನು ದ್ರೌಪದಿಯವರಿಂದ ಮಾಡಿಸಲಿಲ್ಲ.

ಈ ರೀತಿ ಬೇರೆ ಮಾಡುವವರು ಯಾರು? ಹಿಂದೂ ಮುಸ್ಲಿಮರನ್ನು ಅಗಲಿಸಿದರು ಸ್ವಾಮಿ ದಯಾನಂದ, ಬಾಲ ಗಂಗಾಧರ ತಿಲಕ್, ಬಾಲಕೃಷ್ಣ ಗೋಖಲೆ, ರಾಜೇಂದ್ರ ಪ್ರಸಾದ್‌, ಸರ್ದಾರ್‌ ವಲ್ಲಭಬಾಯಿ ಪಟೇಲ್, ಸಿ. ರಾಜಗೋಪಾಲಚಾರಿ ಮುಂತಾದ ಕಾಂಗ್ರೆಸ್‌ ನೇತಾರರೇ ಆಗಿದ್ದರು. ಎಲ್ಲರೂ ಉನ್ನತ ಜಾತಿಯವರಿಗೇ ಮಣೆ ಹಾಕುತ್ತಿದ್ದು, ಮುಸಲ್ಮಾನರನ್ನು ಅಸ್ಪೃಶ್ಯರೆಂಬಂತೆ ಘೋಷಿಸುವ ಪ್ರಯತ್ನ ನಡೆಸುತ್ತಾ, ಭಾರತದ 1/3 ಭಾಗವನ್ನೇ ಕಳೆದುಕೊಂಡರು.

ಇಂದು ಕಂಟಕರೆಂದು ಭಯದಿಂದ ಬಿಂಬಿಸುತ್ತಿರುವುದು ಯಾರನ್ನು? ಮುಸಲ್ಮಾನರು 2002ರಲ್ಲಿ ಗುಜರಾತ್‌ ನಲ್ಲಿ ಧ್ವನಿ ಎತ್ತಿದ್ದೇ ದೊಡ್ಡ ತಪ್ಪಾಗಿ ಶಿಕ್ಷೆ ಅನುಭವಿಸಿ, ಅವರೇ ಕಂಟಕರಾದರೇ? 1984ರಲ್ಲಿ ಇಂದಿರಾರ ಹತ್ಯೆಗೈದ ಸಿಖ್ಖರು ಕಂಟಕರೇ? ಎರಡೂ ಪರಿಸ್ಥಿತಿಗಳಲ್ಲಿ ಕಂಟಕರು ಯಾರು? ಇಂಥವರು ಬೇರಾದರೆಂದು ಕಂಬನಿ ಮಿಡಿಯಲಾಯಿತೇ? ಇಲ್ಲ, ಯಾರ ಕುರಿತು ಭಯವಿತ್ತೋ ಅವರನ್ನೇ ಕತ್ತರಿಸಲಾಯಿತು. ಆ ಅಸಹಾಯಕ ದುರ್ಬಲ ಅಲ್ಪಸಂಖ್ಯಾತರು ಇಂದು ಮೂಲೆಗೊತ್ತರಿಸಲ್ಪಟ್ಟು, ಪ್ರತಿ ಕ್ಷಣ ಭಯದಿಂದ ನಡುಗುತ್ತಾ ಬಾಳುತ್ತಿದ್ದಾರೆ. ಇಂಥವರು ಕಂಟಕರೇ? ಯಾರ ಕೈಯಲ್ಲಿ ಬಂದೂಕು ರಾರಾಜಿಸುತ್ತಿದೆಯೋ ಅವರು ಕಂಟಕರು, ನೇತಾರರು, ಡ್ರೋನ್‌, ತರಬೇತಿ ಪಡೆದ ಪೋರ್ಸ್‌ ಹೊಂದಿದರು. ಹೀಗೆ ಕತ್ತರಿಸಿ ಹಾಕು ಟ್ರೇನಿಂಗ್ ಹಿಂದೂಯೇತರರಿಗಲ್ಲ, ಹಿಂದೂಗಳ ಪೊಲೀಸ್‌ ಯಾ ಸೇನೆಗೆ ಸಿಗುತ್ತಿದೆ ಯಾವ ಅರೆಬರೆ ರಾಷ್ಟ್ರಿಯ ಸ್ವಯಂ ಸೇವಕ ಸಂಘದವರಿಗೆ ಸಿಗುತ್ತಿದೆ. ಹಾಗಿರುವಾಗ ಏಕೆ ಭಯ?

ಭಯ ಇರುವುದು ಎಲ್ಲೆಂದರೆ, ಜಾತಿಗಳ ಸರಿ ಸಂಖ್ಯೆ ಪಡೆದು, ಅನಾದಿಕಾಲದಿಂದ ಬೇರೆ ಆಗುತ್ತಿರುವ ಶೂದ್ರರು ಅಂದ್ರೆ ಇಂದಿನ ಹಿಂದುಳಿದವರು, ಚಂಡಾಲರು ಯಾವ ಅಸ್ಪೃಶ್ಯರು ಅಂದ್ರೆ ಇಂದಿನ ಯಾವ ಹೆಂಗಸರು, ಅವರು ಮೇಲು/ಕೀಳು ಜಾತಿಯವರೇ ಇರಲಿ, ಅವರನ್ನು ಲೆಕ್ಕಕ್ಕೆ ಇಡುವವರಿಲ್ಲ. ಹೀಗೆ ಹಂಚಿಹೋದ ಜನ ತಮ್ಮ ಪಾಲನ್ನು ಕೇಳುತ್ತಿದ್ದಾರೆ, ಯಾರು ಇವರನ್ನು ಬೇರ್ಪಡಿಸಿದರೋ ಅವರು ಹುಯಿಲೆಬ್ಬಿಸುತ್ತಿದ್ದಾರೆ. ಇದು ಈ ಸಮಾಜ ಯಾವ ಧರ್ಮದ ಸಮಸ್ಯೆ ಮಾತ್ರವಲ್ಲ, ವಿಶ್ವದ ಎಲ್ಲಾ ಧರ್ಮದ ಜನರ ನರನಾಡಿಗಳಲ್ಲೂ ಇದೇ ವಿಚಾರಧಾರೆ ಇದೆ. ಬೇಕೆಂದೇ ಬೇರ್ಪಡಿಸುವವರೇ ಅಸಲಿ ಕಂಟಕರು, ಎರಡೂ ಪಾತ್ರ ಇವರೇ ವಹಿಸುತ್ತಾರೆ.

ಇದರಿಂದ ವಿಶ್ವಕ್ಕೆ ಒಳಿತೇ ಹೆಚ್ಚು!

ಜನಸಂಖ್ಯೆಯಲ್ಲಿ ಅತಿ ಹೆಚ್ಚಿನ 2ನೇ ಸ್ಥಾನದಲ್ಲಿರುವ ಚೀನಾದಿಂದ ಒಳ್ಳೆಯ ಸುದ್ದಿಗಳೇ ಬರುತ್ತಿವೆ. ಆದರೆ ಚೀನಾದ ಆಡಳಿತ ಮಂದಿಯ ಹಣೆ ಸುಕ್ಕುಗಟ್ಟಿ, ಬೆವರು ಇಳಿಯುತ್ತಿರುವುದು ಬೇರೆ ವಿಚಾರ. ಚೀನಾದ ಎಜುಕೇಶನ್‌ ಮಿನಿಸ್ಟ್ರಿಯ ವರದಿ ಪ್ರಕಾರ, 2023ರಲ್ಲಿ 2,74,400  ಶಾಲೆಗಳಲ್ಲಿ 14,000 ಶಾಲೆಗಳನ್ನು ಮುಚ್ಚಬೇಕಾಯಿತು. ಏಕೆಂದರೆ ಅಲ್ಲಿಗೆ ಸೇರಲು ಮಕ್ಕಳೇ ಇರಲಿಲ್ಲ! ಚೀನಾದ ಜನಸಂಖ್ಯೆ ಈಗ ವೇಗವಾಗಿ ತಗ್ಗುತ್ತಿದೆ. ಏಕೆಂದರೆ ಸಣ್ಣ ಕೂಸುಗಳು ಕೆರಿಯರ್‌ಫನ್‌ ದೃಷ್ಟಿಯಲ್ಲಿ, ಅನಗತ್ಯ ಎಂದೇ ಪರಿಗಣಿಸಲಾಗುತ್ತಿದೆ. ಒಂದು ವಿಧದಲ್ಲಿ ಇದು ಪ್ರಕೃತಿಗೆ ವಿರುದ್ಧ, ಆದರೆ ವಿಶ್ವಕ್ಕೆ ಇದು ಒಳ್ಳೆಯದು. ಮೊದಲು ಅಲ್ಲಿನ ಶಾಸಕರಿಗೆ ಈ ಪಾಟಿ ಬೆಳೆಯುತ್ತಿರುವ ಜನಸಂಖ್ಯೆಗೆ ಎಲ್ಲಿಂದ ಆಹಾರ ಒದಗಿಸುವುದೆಂಬ ಚಿಂತೆ ಇತ್ತು. ಜೊತೆಗೆ ನಿರುದ್ಯೋಗ ಸಮಸ್ಯೆ, ವಸತಿ, ನೀರು, ಪ್ರತಿ ಅಗತ್ಯ ವಸ್ತುಗಳಿಗೆ ಹಾಹಾಕಾರವಾದರೆ ಏನು ಮಾಡುವುದೆಂಬ ದಿಗಿಲಿತ್ತು. ಅದೀಗ ಉಲ್ಟಾ ಆಗುತ್ತಿದೆ. ಅಲ್ಲಿ ಯುವಜನತೆ ಬಿಂದಾಸ್‌ ಆಗಿ ಇವತ್ತಿನ ಬಗ್ಗೆ ಮಾತ್ರ ಯೋಚಿಸುತ್ತಿದೆ, ನಾಳೆಗಾಗಿ ಯಾರೂ ಚಿಂತಿಸಲಿಕ್ಕೆ ರೆಡಿ ಇಲ್ಲ. ನಮ್ಮ ನಂತರ ನಮ್ಮ ಹಣ ಏನಾದೀತು, ನಮ್ಮ ಆತ್ಮಕ್ಕೆ ಏನಾದೀತು ಮುಂತಾದ ಅರ್ಥಹೀನ ಮಾತುಗಳಿಲ್ಲದೆ ಒಂದು ವಿಧದಲ್ಲಿ ರಿಲೀಫ್‌ ಆಗಿದೆ.

ಅನಾದಿ ಕಾಲದಿಂದ ಧರ್ಮ, ರಾಜರು ಹೆಂಗಸರನ್ನು ಕೇವಲ ಮಕ್ಕಳನ್ನು ಹೆರುವ ಯಂತ್ರವೆಂದೇ ಭಾವಿಸಿದ್ದಾರೆ. ತಮ್ಮ ಮುಂದಿನ ಯುದ್ಧಗಳಿಗಾಗಿ ಗಂಡು ಸಂತಾನ ಹೆತ್ತು ಕೊಡಲಿ ಎಂಬುದೇ ಇವರ ಮೂಲ ಗುರಿಯಾಗಿತ್ತು. ಹೆಣ್ಣು ಇರುವುದೇ ಸೆಕ್ಸ್ ಸುಖಕ್ಕಾಗಿ ಎಂಬಂತೆ ವರ್ತಿಸುತ್ತಿದ್ದರು. ವಿಶ್ವದ ಪ್ರತಿಯೊಂದು ಸಮಾಜ, ಪ್ರತಿ ಧರ್ಮದಲ್ಲೂ ಇದೇ ಸೂತ್ರವಿದೆ. ಹೆಣ್ಣು ಹುಟ್ಟಿರುವುದೇ ಕೇವಲ ಸೆಕ್ಸ್ ಸುಖ ನೀಡಲು ಹಾಗೂ ಮಕ್ಕಳನ್ನು ಹೆರಲು. ಅವರ ಬೇರೆ ಕೆಲಸವೆಂದರೆ ಗಂಡಿನ ಮನೆಯ ನಿರ್ವಹಣೆ, ಅಡುಗೆ, ಇನ್ನಿತರ ಮನೆಗೆಲಸಗಳು. ಅವರು ಇರುವುದೇ ಮನೆಯ ಗುಲಾಮಗಿರಿಗೆ ಎಂಬಂತೆ.

ಆದರೆ ಹೆಣ್ಣು ಇಂದು ಸುಶಿಕ್ಷಿತೆ, ಸಂಪಾದಿಸುತ್ತಿದ್ದಾಳೆ. ಗಂಡು ಮಾಡುವ ಪ್ರತಿ ಕೆಲಸವನ್ನೂ ಎಲ್ಲಾ ವಿಭಾಗದಲ್ಲೂ ಅಚ್ಚುಕಟ್ಟಾಗಿ ಮಾಡಬಲ್ಲಳು. ಯುದ್ಧದ ಮೈದಾನದಲ್ಲೂ ಅವಳು ವೀರಾವೇಶದಿಂದ ಹೋರಾಡಬಲ್ಲಳು, ರಾಜಕೀಯದಲ್ಲೂ ಸರಿಯಾಗಿ ಎದುರು ನಿಲ್ಲಬಲ್ಲಳು. ಆದರೆ ಇವರನ್ನು 4 ಕೋಣೆಗಳ ಒಳಗೆ ಕಟ್ಟಿಹಾಕದೆ, ಮಕ್ಕಳ ಹೆರುವ ಯಂತ್ರ ಆಗಿಸದೆ ಶಿಕ್ಷಣ ಪಡೆದಾಗ ಇವೆಲ್ಲ ಸಾಧ್ಯ.

ಇದರಿಂದ ವಿಶ್ವದಲ್ಲಿ ಎಲ್ಲೆಡೆ ಗಂಡಿನ ಹೆಸರೇ ಇಲ್ಲದಂತೆ ಡೋಡೋ ಹಕ್ಕಿಯಂತೆ ನಿರ್ನಾಮವಾದೀತು ಎಂದು ಭಯಪಡಬೇಕಿಲ್ಲ. ಇಲ್ಲ, ಗಂಡು ಇದ್ದೇ ಇರ್ತಾನೆ, ಮುಂದಿನ 10-20 ಲಕ್ಷ ವರ್ಷಗಳವರೆಗೂ. ಮಕ್ಕಳು ಕಡಿಮೆ ಆಗಿಹೋದರೆ, ಮುದುಕರ ಬೆಲೆ ಹೆಚ್ಚುತ್ತದೆ. ಅವರು ವಿಶ್ರಾಂತಿ ಪಡೆಯುವ ಬದಲು ಸಾಯುವವರೆಗೂ ದುಡಿಯುತ್ತಾರೆ. ನಿವೃತ್ತಿಯ ಬಾಬತ್ತೇ ಇಲ್ಲವಾಗುತ್ತದೆ. ಜನ ದುಡಿಯುತ್ತಲೇ ಸಾಯುತ್ತಾರೆ, ಹಾಸಿಗೆ ಮೇಲೆ ಸುಮ್ಮನೆ ಮಲಗಿರಲ್ಲ. ಆಗು ಅವರು ಹೊರೆಯೇ ಅಲ್ಲ.

ಏಜಿಂಗ್‌ ಪಾಪ್ಯುಲೇಶನ್‌ ಒಂದು ತಲೆನೋವು ಎಂದು ನಮಗೆ ಅನಿಸುತ್ತದೆ, ಎಷ್ಟೋ ಜನ ಒಬ್ಬಂಟಿ ಹೌದು, ಆದರೆ ಇದು ಕೇವಲ ಟ್ರಾನ್ಸಿಶನ್‌ ಮಾತ್ರ. ಇಷ್ಟರಲ್ಲೇ ವಿಶ್ವದೆಲ್ಲೆಡೆ ಬಹಳಷ್ಟು ಕೆಲಸ ಖಾಲಿ ಇದೆ ಎಂದು ಅವರು ಅರಿಯುತ್ತಾರೆ. ಇಲ್ಲಿ ವಯಸ್ಸು ಗಣನೆಗೆ ಬಾರದು, ಹಾಗೆಯೇ ಗಂಡು/ಹೆಣ್ಣು ಎಂಬುದೂ ಮುಖ್ಯ ಆಗಲಾರದು. ಮನೆ ಚಿಕ್ಕದಾಗುತ್ತದೆ, ಅಡುಗೆ ಕೆಲಸ ಎಷ್ಟೋ ಕಡಿಮೆ ಆಗುತ್ತದೆ. ಯಂಗ್‌, ಮಿಡಲ್ ಯಾ ಏಜ್ಡ್ ಎಲ್ಲರೂ ತಮಗಿಷ್ಟವಾದ ಕೆಲಸ ಮಾಡುತ್ತಿರಬಹುದು.

ಇಂಥ ಸತತ ದುಡಿಯುವ ಮಂದಿಯ ಮಕ್ಕಳು ಸದಾ ಸುಖವಾಗಿರುತ್ತಾರೆ, ಅವರು ಸಾಮಾಜಿಕ ಜೀವನದಲ್ಲಿ ಹೆಮ್ಮೆ ಪಡುತ್ತಾರೆ. ಪ್ರತಿ ಮಗು ಸಮಾಜಕ್ಕೆ ಅತಿ ಮುದ್ದಿನ ಮಗು ಆಗಲಿದೆ. ಅದಕ್ಕೆ ಯಾವ ಕೊರತೆಯೂ ಬಾರದಂತೆ ಗಮನಿಸಲಾಗುತ್ತದೆ. ಪ್ರೀತಿ ವಾತ್ಸಲ್ಯ ಧಂಡಿಯಾಗಿ ಸಿಗಲಿದೆ. ಶಾಲೆ ಕಡಿಮೆ ಆಯ್ತೆಂದು ನೆಮ್ಮದಿಯಾಗಿರಿ, ಹೆರಿಗೆ ಆಸ್ಪತ್ರೆಗಳೂ ಬಹಳ ಕಡಿಮೆ ಆಗಲಿವೆ. ಮಕ್ಕಳ ಹೆರುವ ಯಂತ್ರಗಳು ಬೇರೆ ಕೆಲಸದಲ್ಲಿ ಬಿಝಿ ಆಗಿವೆ.

ಭರವಸೆ ಮುಖ್ಯವೇ ಹೊರತು ಭಗವಂತನಲ್ಲ

ಬಿಜೆಪಿಯ ರಾಜ್ಯಭಾರದಲ್ಲಿ ಸಾಮಾನ್ಯವಾಗಿ ಸದಾ ಹೇಳುವ ಮಾತು ಎಂದರೆ, ಎಲ್ಲ ಒಳ್ಳೆಯದೇ ನಡೆಯುತ್ತಿದೆ ಅಂತ. ಏಕೆಂದರೆ ಇವರುಗಳ ಮೇಲೆ ಸ್ವಯಂ ರಾಮ, ಶಿವ, ಬ್ರಹ್ಮ, ವಿಷ್ಣು, ಇತರ ಸಾವಿರಾರು ದೇವದೇವಿಯರ ಕೃಪೆ ಇದೆ. ಆದರೆ ಅಸಲಿಗೆ ಈ ಆಸ್ತಿಕರ ಆಡಳಿತದಲ್ಲಿ ಎಷ್ಟು ಅಪರಾಧ, ರೇಪ್‌, ಕೊಲೆಗಳಾಗುತ್ತಿವೆಯೋ ಲೆಕ್ಕವಿಲ್ಲ. ಅವರು ಹೇಳುವುದೆಲ್ಲ ದೇವರ ಭಜನೆ  ಮಾಡಿ, ಜಾತ್ರೆಗೆ ಹೊರಡಿ, ಸದಾ ಭಕ್ತಿಯಲ್ಲಿ ಮುಳುಗಿರಿ ಅಂತ. ಇದರಿಂದ ಏನಾದರೂ ಲಾಭವಿದೆಯೋ? ಗಂಡಸರು, ಮೇಲು ವರ್ಗದವರ ಯೋಚನೆ ಸದಾ ಹೀಗೇ ಇರುತ್ತದೆ. ಯಾರ ವಿರುದ್ಧವಾದರೂ ಅಪರಾಧ ನಡೆದಾಗ, ಅದು ಅವರ ಇಂದಿನ ಯಾವ ಹಿಂದಿನ ಜನ್ಮದ ಪಾಪಫಲ ಎನ್ನುತ್ತಾರೆ.

2 ತಿಂಗಳ ಹಿಂದೆ ಮಧ್ಯ ಪ್ರದೇಶ ರಾಜ್ಯದಲ್ಲಿ ಇಬ್ಬರು ಸೈನಿಕ ಅಧಿಕಾರಿಗಳ ಎದುರೇ, ಅವರ ಜೊತೆ ಬಂದಿದ್ದ ಇಬ್ಬರು ಯುವತಿಯರ ಮೇಲೆ ರಾತ್ರಿ ಹೊತ್ತಲ್ಲಿ ಗ್ಯಾಂಗ್‌ ರೇಪ್‌ ನಡೆಯಿತು. ಅದೇ ತರಹ ಅಕ್ಟೋಬರ್‌ 4 ರಂದು ಪುಣೆ ನಗರದಲ್ಲಿ ಮೂವರು ಕಿಡಿಗೇಡಿಗಳು ಒಬ್ಬ ಹೆಣ್ಣಿನ ಮೇಲೆ ಅವಳ ಸಂಗಾತಿ ಎದುರೇ ಗ್ಯಾಂಗ್‌ ರೇಪ್‌ ನಡೆಸಿದರು.

ಅನಾದಿ ಕಾಲದಿಂದಲೂ ರೇಪ್‌ ನಡೆಯುತ್ತಲೇ ಇದೆ. ಆದರೆ ಕೋಲ್ಕತಾದ ಡಾಕ್ಟರ್‌ ಮೇಲೆ ನಡೆದ ರೇಪ್‌ ನ್ನು ಯಾವ ರೀತಿ ರಾಜಕೀಯವಾಗಿ ಬಳಸಿಕೊಳ್ಳಲಾಯಿತು ಎಂದರೆ ಹೇಳುವುದೇ ಬೇಡ. ಅದು ಮಧ್ಯ ಪ್ರದೇಶದ ಮಹೂ ಹಾಗೂ ಪುಣೆಯ ಗ್ಯಾಂಗ್ ರೇಪ್‌ ಪ್ರಕರಣಗಳನ್ನು ಮಾತ್ರ ಮಾಮೂಲಿ ಆ್ಯಕ್ಸಿಡೆಂಟ್‌ ಎಂಬಂತೆ ಒತ್ತರಿಸಲಾಯಿತು. ಇದು ಹಿಂದೂ ಧರ್ಮದ ಢೋಂಗಿ ಅಲ್ಲದೆ ಇನ್ನೇನು? ಈ ರೀತಿ ವಿಶ್ವದ ಎಲ್ಲಾ ಧರ್ಮಗಳಲ್ಲೂ ನಡೆಯುತ್ತಲೇ ಇದೆ.

ಎಲ್ಲಾ ಧರ್ಮಗಳಲ್ಲೂ ಹೇಳಲಾಗುವ ಒಂದು ಅಪ್ಪಟ ಬಿಳಿಯ ಸುಳ್ಳು ಎಂದರೆ, ಯಾವುದೋ ಒಂದು ವಿಶಿಷ್ಟ ಶಕ್ತಿ ನಮ್ಮನ್ನು ಎಲ್ಲಾ ಸಮಯದಲ್ಲೂ ಗಮನಿಸುತ್ತಲೇ ಇರುತ್ತದೆ ಎಂಬ ವಿಚಾರ. ಹಾಗಿರುವಾಗ ಈ ಅಸಹಾಯಕರನ್ನು ಅದು ಕಾಪಾಡುತ್ತಿಲ್ಲವೇಕೆ? ಇಂಥ ಅಪರಾಧ ಮಾಡಿದವರಿಗೆ ಅವರವರ ಸರ್ಕಾರಗಳೇ ಶಿಕ್ಷೆ ಕೊಡಲಿ ಎಂದು ಕಾಯುವುದೇಕೆ? ಅಂಥ ಪಾಪಿಗಳು ಸತ್ತ ನಂತರ ಮುಂದಿನ ಜನ್ಮದಲ್ಲಿ ಅವರಿಗೆ ಶಿಕ್ಷೆ ಸಿಗಲಿದೆ ಎಂದೇನು ಗ್ಯಾರಂಟಿ?

ವಿಶ್ವಾದ್ಯಂತ ಕೋಟ್ಯಂತರ ಹೆಂಗಸರು ಈ ಮೂಢನಂಬಿಕೆಯಲ್ಲಿ ಮುಳುಗಿಹೋಗಿದ್ದಾರೆ. ಆಯಾ ಸರ್ಕಾರಗಳು ಮಾಡಿರುವ ಕಾನೂನಿಗಿಂತ ಧರ್ಮದಲ್ಲಿ ಅತ್ಯಧಿಕ ನಂಬಿಕೆಯುಳ್ಳವರಾಗಿ, ಆ ದೇವರೇ ತಮ್ಮನ್ನು ಕಾಪಾಡುತ್ತಾನೆ, ಏನೂ ಕೇಡು ಬಾರದು ಎಂದು ಭಾವಿಸುತ್ತಾರೆ. ಪೊಲೀಸರು ಆ ಪಾಪಿಗಳಿಗೆ ಶಿಕ್ಷೆ ಕೊಡುತ್ತಾರೋ ಇಲ್ಲವೇ, ಅದೃಶ್ಯ ಶಕ್ತಿ ಖಂಡಿತಾ ಅವರನ್ನು ಶಿಕ್ಷಿಸುತ್ತದೆ ಎಂದು ನಂಬುತ್ತಾರೆ. ಆಪತ್ತು ಎದುರಾದಾಗ, ಸ್ವರಕ್ಷಣೆ ಬಗ್ಗೆ ಚಿಂತಿಸದೆ ದೇವರ ಮೊರೆ ಹೋಗುತ್ತಾರೆ.  ದೇವದೇವಿಯರು ಬಂದು ರಕ್ಷಿಸಲಿ ಎಂದು ಕಾಯುತ್ತಾರೆ.

ಎಲ್ಲಾ ಧರ್ಮದ ಸಾಹಿತ್ಯದಲ್ಲೂ ದೇವರ ಇಂಥ ರಕ್ಷಣೆಯ ಬಗ್ಗೆ ಹೇರಳವಾಗಿ ಹೇಳಲಾಗಿದೆ. ವಿಶ್ವದೆಲ್ಲೆಡೆ ಹೆಂಗಸರು ಇಂಥ ದುರಾಚಾರಗಳಿಗೆ ಈಡಾಗುತ್ತಲೇ ಇರುತ್ತಾರೆ. ಆದರೆ ಯಾವ ಧರ್ಮದ ಯಾವ ದೇವರೂ ಇವರ ರಕ್ಷಣೆಗೆ ಮಾತ್ರ ಧಾವಿಸುವುದೇ ಇಲ್ಲ. ಅಂಥ ದುಷ್ಟರು ಆ ಕಾರ್ಯ ಎಸಗುವ ಮೊದಲೇ ಅವರಿಗೇಕೆ ಶಿಕ್ಷೆ ಆಗದು?

ಪುಣೆಯ ಬೋಪ್‌ ದೇವ್ ಘಾಟ್‌ ಬಳಿ FB ‌ಜೊತೆ ರೊಮಾನ್ಸ್ ನಡೆಸುತ್ತಿದ್ದ ಹೆಣ್ಣಿಗೆ ಇಂಥ ಅದ್ಭುತ ಶಕ್ತಿಯ ಬಗ್ಗೆ ಹೆಚ್ಚು ವಿಶ್ವಾಸವಿತ್ತು. ಹೀಗಾಗಿಯೇ ರಾತ್ರಿ 11 ಗಂಟೆಯಲ್ಲೂ ಅಂಥ ಭೀಕರ ಜಾಗದಲ್ಲಿ ಇರಲು ಅಂಜಲಿಲ್ಲ. ಆ ಯುವಕನನ್ನು ಇವಳ ಎದುರೇ ಕಟ್ಟಿಹಾಕಿ, ಮೂರು ದುರ್ಮಾರ್ಗಿಗಳು, ಘೋರಾಗಿ ರೇಪ್‌ ನಡೆಸಿದರು. ನಿರ್ಭಯವಾಗಿ ಓಡಿಹೋದರು. ಯಾವ ದೇವರೂ ಇವಳನ್ನು ಕಾಪಾಡಲು ಬರಲೇ ಇಲ್ಲ!

ಗಂಡಸರಿಗಿಂತ ಹೆಚ್ಚು ಆಸ್ತಿಕರಾಗಿರುವ ಹೆಂಗಸರಿಗೇ ಇಂಥ ಅನ್ಯಾಯಗಳು ನಡೆಯುವುದು ಹೆಚ್ಚು. ಧರ್ಮದಲ್ಲ ಅವರಿಗೆ ಅಚಲ ನಂಬಿಕೆ. ಆದರೆ ಇಂಥ ಅಪರಾಧ ನಡೆದಾಗ, ಅಂಥ ಯಾವ ಅದ್ಭುತ ಶಕ್ತಿಯೂ ಸಹಾಯಕ್ಕೆ ಧಾವಿಸಿ ಬರುವುದಿಲ್ಲ ಎಂದು ಗಂಡಸರಿಗೆ ಚೆನ್ನಾಗಿ ಗೊತ್ತು. ಅವರು ಹೆಚ್ಚು ಎಚ್ಚರಿಕೆಯಿಂದ ಇರುತ್ತಾರೆ, ಹೀಗಾಗಿ ರಾತ್ರಿ ಹೊತ್ತು ಇರುವ ಲೂಟಿಗೆ ಒಳಗಾಗುವ ಪ್ರಕರಣಗಳೂ ಕಡಿಮೆ. ರೇಪ್‌ ಮಾತ್ರ ಹಾಗಲ್ಲ, ನಡೆಯುತ್ತಲೇ ಇರುತ್ತದೆ. ಧರ್ಮವೇ ತಮಗೆ ರಕ್ಷಾಕವಚ ಎಂದು ನಂಬಿದ ಹಣ್ಣಿಗೆ ಇಂಥ ದುಸ್ಥಿತಿ ತಪ್ಪಿದ್ದಲ್ಲ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ