ಒಬ್ಬ ಹೆಣ್ಣಿನ ಜೀವನ ಬಹಳಷ್ಟು ಏರುತಗ್ಗುಗಳಿಂದ ಕೂಡಿರುತ್ತದೆ. ಜೀವನದ ಈ ವಿಭಿನ್ನ ಹಂತಗಳನ್ನು ನಿಭಾಯಿಸುತ್ತಾ, ಅವಳ ದೇಹ ಸಾಕಷ್ಟು ಬದಲಾವಣೆಗಳಿಗೆ ಗುರಿಯಾಗುತ್ತದೆ. ಹೀಗಾಗಿ ಕಾಲಾನುಕಾಲಕ್ಕೆ ಅವಳ ಮುಂದೆ ಹೆಲ್ತ್ ವೆಲ್ ‌ನೆಸ್‌ ಗೆ ಸಂಬಂಧಿಸಿದ ಪ್ರಶ್ನೆಗಳು ಧುತ್ತೆಂದು ಎದುರಾಗುತ್ತವೆ. ಈ ಪ್ರಶ್ನೆಗಳಿಗೆ ಎಲ್ಲಿಂದ ಉತ್ತರ ಹುಡುಕುವುದು ಎಂಬುದೇ ದೊಡ್ಡ ಚಾಲೆಂಜ್‌ ಆಗುತ್ತದೆ. ಇಂದಿನ ಆಧುನಿಕ ಕಾಲದಲ್ಲಿ ಇಂಟರ್‌ ನೆಟ್‌ ಇಲ್ಲದೆ ಏನೂ ನಡೆಯದು. ಇಲ್ಲಿನ ಸೂಚನೆ ಅನುಸರಿಸಿದರೂ ಯಾವುದನ್ನು ನಂಬುವುದೋ ಬಿಡುವುದೋ ತಿಳಿಯದಾಗುತ್ತದೆ.

ಹೆಂಗಸರ ಈ ಸಮಸ್ಯೆಗಳನ್ನು ನಿವಾರಿಸಲೆಂದೇ, ಮುಖ್ಯವಾಗಿ ತರುಣಿಯರಿಗೆಂದೇ ಇರುವ ಹೆಲ್ತ್ ವೆಲ್ ‌ನೆಸ್‌ಗೆ ಸಂಬಂಧಿಸಿದ ಹಲವು ಮಹತ್ವಪೂರ್ಣ ವೆಬ್‌ ಸೈಟ್‌ ಗಳ ವಿವರ ಇಲ್ಲಿ ನೀಡಲಾಗಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಭಿನ್ನ ವಿಷಯಗಳ ಕುರಿತ ಪ್ರಾಮಾಣಿಕ ಮಾಹಿತಿ ಇಲ್ಲಿ ಲಭ್ಯವಿದೆ :

ಹೆಲ್ದಿ ವುಮನ್‌ ಅಮೆರಿಕಾ ಆಧಾರಿತ ಈ ವೆಬ್‌ ಸೈಟ್‌, ಹೆಣ್ಣಿನ ಆರೋಗ್ಯ, ಉನ್ನತ ಜೀವನಶೈಲಿಗೆ ಸಂಬಂಧಿಸಿದಂತೆ ಎಷ್ಟೋ ಉತ್ಕೃಷ್ಟ ಸಲಹೆ ನೀಡುತ್ತದೆ. ಇಲ್ಲಿ ನಿಮಗೆ ಮುಟ್ಟಿನ ಸಮಸ್ಯೆಗಳಿಂದ ಹಿಡಿದು, ಸೆಕ್ಸ್, ರಿಲೇಶನ್‌ ಶಿಪ್‌, ಪ್ರೆಗ್ನೆನ್ಸಿ, ಫಿಟ್‌ ನೆಸ್‌, ಪೇರೆಂಟಿಂಗ್‌ ಇತ್ಯಾದಿ ಎಲ್ಲದರ ಕುರಿತು ಆಮೂಲಾಗ್ರ ಮಾಹಿತಿ ಸಿಗುತ್ತದೆ. ಕಾಲಾನುಕಾಲಕ್ಕೆ ಇಲ್ಲಿ ವಿಭಿನ್ನ ವಿಶೇಷಜ್ಞರಿಂದ ಸೇವೆ ಒದಗಿಸಲಾಗುತ್ತದೆ. ಅಂಥವರ ಬಳಿ ನೀವು ಪ್ರಶ್ನೆ ಕೇಳಿ ನಿಮ್ಮ ಸಮಸ್ಯೆ ನಿವಾರಿಸಿಕೊಳ್ಳಬಹುದು.

Image

ಸೆಕ್ಸ್ ವಿತ್ಎಮಿಲಿ

ಸೆಕ್ಸ್ ಎಂದೊಡನೆ ನಾಚಿಕೆಯಿಂದ ತಲೆ ತಗ್ಗಿಸುವುದು ನಮ್ಮ ಹೆಣ್ಣುಮಕ್ಕಳ ಸ್ವಭಾವ. ಇದಕ್ಕೆ ಸಂಬಂಧಿಸಿದಂತೆ ನಿಮಗೆ ಬೇಕಾದಷ್ಟು ಸಂದೇಹಗಳಿರುತ್ತವೆ. ಇಂದಿಗೂ ಸಹ ನಮ್ಮ ದೇಶದಲ್ಲಿ  ಈ ಕುರಿತು ಬಹಿರಂಗವಾಗಿ ಮಾತನಾಡಲು ಹೆಂಗಸರು ಹಿಂಜರಿಯುತ್ತಾರೆ. ಇಂಟರ್‌ ನೆಟ್‌ ಲೋಕದಲ್ಲೂ ಈ ವಿಷಯವಾಗಿ ಅರೆಬರೆ, ತಪ್ಪು ಮಾಹಿತಿಗಳೇ ತುಂಬಿರುತ್ತವೆ.

ಮುಖ್ಯವಾಗಿ ಈ ವೆಬ್‌ ಸೈಟ್‌ ನಲ್ಲಿ, ಸೆಕ್ಸ್ ರಿಲೇಶನ್‌ ಶಿಪ್‌ ಎಕ್ಸ್ ಪರ್ಟ್‌ ಡಾ. ಎಮಿಲಿ ಮಾರಿಸನ್‌, ಈ ಎಲ್ಲಾ ವಿಷಯಗಳ ಕುರಿತು ಮುಕ್ತವಾಗಿ ವಿಷಯ ತಿಳಿಸುತ್ತಾರೆ. ಇಲ್ಲಿ ನಾವು ವೈವಿಧ್ಯಮಯ ವಿಷಯಗಳ ಕುರಿತು ಲೇಖನಗಳನ್ನು ಓದಬಹುದು, ಪಾಡ್‌ ಕಾಸ್ಟ್ ಕೇಳಬಹುದು, ಡಾ. ಎಮಿಲಿ ಜೊತೆ ಸಂಭಾಷಣೆ ನಡೆಸಿ ನಿಮ್ಮ ಸಂದೇಹ ನಿವಾರಿಸಿಕೊಳ್ಳಬಹುದು. ಮುಟ್ಟಿನಲ್ಲಿ ಸಂಭೋಗ ಸರಿಯೇ, ವೈಬ್ರೇಟರ್‌ ಬಳಕೆ ಸಾಧುವೇ ಮುಂತಾದ ಎಲ್ಲಾ ಸೂಕ್ಷ್ಮ ವಿಷಯಗಳ ಕುರಿತೂ ಇಲ್ಲಿ ಆಕೆ ನಿಮಗೆ ಸ್ಪಷ್ಟ ವಿವರಣೆ ನೀಡುತ್ತಾರೆ.

ಟೋನ್ಇಟ್ಅಪ್

ಹೆಣ್ಣು ದೈಹಿಕವಾಗಿ ಗಂಡಿಗಿಂತ ದುರ್ಬಲಳು, ಹಾಗೆಂದು ವ್ಯಾಯಾಮ, ವರ್ಕ್‌ ಔಟ್‌ ಗಳನ್ನು ಬಿಡಲಾದೀತೇ? ಈ ಕುರಿತಾಗಿ ಕರೀನಾ, ಕತ್ರೀನಾ ಈ ವೆಬ್‌ ಸೈಟ್‌ ನಲ್ಲಿ ನಿಮಗೆ ಫಿಟ್‌ ನೆಸ್‌, ವಿಭಿನ್ನ ವ್ಯಾಯಾಮ, ಯೋಗಾಭ್ಯಾಸ ಇತ್ಯಾದಿ ಎಲ್ಲದರ ಬಗ್ಗೆ ಹೇಳುತ್ತಾರೆ. ಇಂಟೆನ್ಸ್ ವರ್ಕ್‌ ಔಟ್‌ಬಾಡಿ ಬಿಲ್ಡಿಂಗ್‌ ಫೀಲ್ಡ್ ನಲ್ಲಿ ಹೆಂಗಸರಿಗೆ ಹೆಚ್ಚಿನ ಪ್ರೇರಣೆ ಒದಗಿಸುತ್ತಾರೆ. ನಿಮ್ಮನ್ನು ನೀವು ಎಲ್ಲಾ ವಿಧದಲ್ಲೂ ಫಿಟ್‌ ಆಗಿ ಇರಿಸಿಕೊಳ್ಳಲು, ನೀವು ಈ ವೆಬ್‌ ಸೈಟ್‌ ನಿಂದ ಬೇಕಾದಷ್ಟು ಉತ್ತಮ ಮಾಹಿತಿ ಪಡೆಯಬಹುದು.

ವೆಲ್ ನೆಸ್ಮಾಮಾ

ತಾಯಿ ಆದ ನಂತರ ಒಬ್ಬ ಹೆಣ್ಣಿನ ಜೀವನದಲ್ಲಿ ಅತಿ ಹೆಚ್ಚಿನ ಬದಲಾವಣೆ ಉಂಟಾಗುತ್ತದೆ. 6 ಮಕ್ಕಳ ತಾಯಿ ಕ್ಯಾಟಿ ವೆಲಿಸ್‌ ಈ ಬ್ಲಾಗಿನ ಮಾಧ್ಯಮದಿಂದ, ನೀವು ಮಕ್ಕಳ ಜೊತೆ ಹೇಗೆ ಅಡ್ಜಸ್ಟ್ ಮಾಡಿಕೊಳ್ಳುವುದು ಎಂಬುದಕ್ಕೆ ಸಹಾಯ ಮಾಡುತ್ತಾರೆ. ಇಲ್ಲಿ ನಿಮಗೆ ಹೆಲ್ದಿ ರೆಸಿಪಿಗಳಿಂದ ಹಿಡಿದು, ಮಕ್ಕಳು ಇಷ್ಟಪಟ್ಟು ಬಯಸುವ ಪೌಷ್ಟಿಕಾಂಶಗಳ ವ್ಯಂಜನಗಳ ತಯಾರಿ, ಮಕ್ಕಳ ಬೆಳವಣಿಗೆ ಕುರಿತು ಸರ್ವತೋಮುಖ ಮಾಹಿತಿ ನೀಡುತ್ತಾರೆ.

ಲಿವ್, ಲವ್, ವಾಫ್ಫೌಂಡೇಶನ್

ಹೆಚ್ಚು ಏರಿಳಿತಗಳು ತುಂಬಿರುವ ಹೆಣ್ಣಿನ ಜೀವನದಲ್ಲಿ ಡಿಪ್ರೆಶನ್‌ ಒಂದು ಸಾಧಾರಣ ಸ್ಥಿತಿ ಆಗಿದೆ. ಎಷ್ಟೋ ಸಲ ನಿಮಗೆ ಇದರ ಸಂಕೇತಗಳ ಸುಳಿವೇ ಇರುವುದಿಲ್ಲ. ಇಂಥ ನೂರಾರು ಡಿಪ್ರೆಶನ್‌ ಗಳಿಂದ ಹೊರಬಂದು  ಗೆಲುವಾಗಿರುವ ಪ್ರಸಿದ್ಧ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಯ ಟ್ರಸ್ಟ್ ಮೂಲಕ ಸಂಚಾಲಿತ ಈ ಸೈಟ್‌, ನಿಮಗೆ ಮಾನಸಿಕ ಆರೋಗ್ಯದ ಕುರಿತು ಮಹತ್ವಪೂರ್ಣ ಮಾಹಿತಿ ನೀಡುತ್ತದೆ. ಇಲ್ಲಿ ಡಿಪ್ರೆಶನ್‌ ಗೆ ಸಂಬಂಧಿಸಿದ ಹಲವ ಲೇಖನಗಳನ್ನು ಓದಬಹುದು. ನಿಮ್ಮ ಮನದಾಳದಲ್ಲಿ ಕೊರೆಯುತ್ತಿರುವ ಯಾವುದೇ ಚಿಂತೆ ಇದ್ದರೆ, ಅದನ್ನು ಇಲ್ಲವೇ ಸಮಾಲೋಚಿಸಿ ಪರಿಹಾರ ಪಡೆಯಬಹುದು. ಇಲ್ಲಿನ ತಜ್ಞರು ನಿಮಗೆ ಹಲವು ವಿಧದಲ್ಲಿ ನೆರವಾಗುತ್ತಾರೆ. ಈ ಸೈಟ್‌ ನ ವೈಶಿಷ್ಟ್ಯ ಎಂದರೆ, ಇಲ್ಲಿ ಆಂಗ್ಲ ಮಾತ್ರವಲ್ಲದೆ ಎಲ್ಲಾ ಭಾರತೀಯ ಭಾಷೆಗಳಲ್ಲೂ ನಿಮಗೆ ಲೇಖನ ಓದಲು ಲಭ್ಯ!

ಪ್ಲೇ ಲಿವಿಂಗ್‌ ಮುಟ್ಟಿನ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಾ? ಈ ಸಮಸ್ಯೆಗಳ ಕುರಿತಾಗಿ ವಿಷಯ ಹಂಚಿಕೊಳ್ಳಲು ನಮ್ಮ ಹೆಣ್ಣುಮಕ್ಕಳು ಬಹಳ ಸಂಕೋಚಪಡುತ್ತಾರೆ. ಈ ವೆಬ್‌ ಸೈಟ್‌ ನಿಮಗೆ ಈ ಕುರಿತಾಗಿ ಎಲ್ಲ ವಿಷಯಗಳ ಮಾಹಿತಿ ನೀಡುತ್ತದೆ. ಇದರ ಕುರಿತಾದ ಮಿಥ್ಯೆಗಳನ್ನು ನಿವಾರಿಸಿ, ಈ ಮೂಲಕ ಬರುವಂಥ ವಿಭಿನ್ನ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ಮಹತ್ವಪೂರ್ಣ ಪರಿಹಾರವನ್ನು ತಜ್ಞರಿಂದ ಒದಗಿಸುತ್ತದೆ.

ಆಟೋಸ್ಟೀಡ್ ಸೈಟ್

ಮುಖ್ಯವಾಗಿ ಸಮುದಾಯ, ಅದರಲ್ಲೂ ಲೆಸ್ಬಿಯನ್‌ ಸೆಕ್ಶುಯೆಲ್ ‌ಓರಿಯೆಂಟೇಶನ್‌ ಹೊಂದಿರುವ ಹೆಂಗಸರಿಗೆಂದೇ ಸಮರ್ಪಿತ. ಇದು ಅವರಿಗೆ ಅನೇಕ ವಿಧದಲ್ಲಿ ನೆರವು ನೀಡುತ್ತಾ, ಪ್ರೇರಣಾದಾಯಕವಾಗಿ ನಿಲ್ಲುತ್ತದೆ. ನಿಮ್ಮ ಸಂಗಾತಿಯನ್ನು ಆರಿಸುವ ಹಕ್ಕು ಸಂಪೂರ್ಣ ನಿಮ್ಮದೇ ಎಂದು ಆತ್ಮವಿಶ್ವಾಸ ತುಂಬುತ್ತದೆ. ಈ ಸಮಾಜ ಆ ಕುರಿತಾಗಿ ನಿಂದಿಸುವ ಹಕ್ಕು ಹೊಂದಿಲ್ಲ ಎಂದೇ ಹೇಳುತ್ತದೆ. ಈ ಕುರಿತಾದ ಅನೇಕ ಲೇಖನಗಳು ಲಭ್ಯವಿದ್ದು, ತಜ್ಞರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಕೆ.ಜಿ. ದೀಪಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ