ಬಿಹಾರದ ಬಕ್ಸಾರ್‌ನಲ್ಲಿ ಮದುವೆ ವೇದಿಕೆಯಲ್ಲೇ ವಧು ಆರತಿ ಕುಮಾರಿಗೆ ಮಾಜಿ ಪ್ರೇಮಿ ಗುಂಡು ಹಾರಿಸಿದ್ದಾನೆ. ವರನೊಂದಿಗೆ ವೇದಿಕೆಯಲ್ಲಿದ್ದ ವಧುವಿನ ಹೊಟ್ಟೆಗೆ ಗುಂಡು ತಗುಲಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಪ್ರೇಮ ಪ್ರಕರಣವೇ ಕಾರಣ ಎನ್ನಲಾಗಿದ್ದು, ಆರೋಪಿ ದೀನಬಂಧು ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ದೀನಬಂಧು ಮದುವೆ ಮನೆಗೆ ಬಂದು ವೇದಿಕೆಯಲ್ಲಿದ್ದ ಮಾಜಿ ಪ್ರೇಯಸಿಯ ಹೊಟ್ಟೆಗೆ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದಾಗ ಆರತಿ ಕುಮಾರಿ ವರನ ಜೊತೆಗೆ ವೇದಿಕೆಯಲ್ಲಿದ್ದರು. ವಧು-ವರರ ಪಕ್ಕದಲ್ಲಿ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಇದ್ದರು. ಆರತಿಯ ಸಂಬಂಧಿಕರೊಬ್ಬರು ವೇದಿಕೆಯಲ್ಲಿ ವರನ ಹಣೆಗೆ ಸಿಂಧೂರ ಹಚ್ಚುವ ಆಚರಣೆ ಮಾಡುತ್ತಿದ್ದರು. ವೇದಿಕೆಯ ಮುಂದೆ ನಿಂತಿದ್ದ ಆತ ವಧುವಿನ ಮೇಲೆ ಗುಂಡು ಹಾರಿಸಿದ್ದಾನೆ.

ಆರತಿಯ ಹೊಟ್ಟೆಗೆ ಗುಂಡು ತಗುಲಿದ್ದು, ಜನರು ಭಯಭೀತರಾಗಿ, ಕಿರುಚುತ್ತಾ ಹೊರಗೆ ಓಡಿಹೋದರು. ಆರತಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆಕೆಯನ್ನು ತಕ್ಷಣವೇ ಹತ್ತಿರದ ಸದರ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ವಾರಾಣಸಿ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು.

ಆರತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರ ಪ್ರಕಾರ, ಗುಂಡಿನ ದಾಳಿ ಘಟನೆಗೆ ಶಂಕಿತ ಪ್ರೇಮ ಪ್ರಕರಣ ಕಾರಣ ಎನ್ನಲಾಗಿದೆ. ಶಂಕಿತ ದೀನಬಂಧು ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆರೋಪಿಯ ಪೋಷಕರನ್ನು ವಿಚಾರಣೆ ನಡೆಸುತ್ತಿದ್ದು, ಅವರನ್ನು ವಶಕ್ಕೆ ಪಡೆದಿದ್ದಾರೆ.

ದೀನಬಂಧು ಈ ಹಿಂದೆ ಮದ್ಯದ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದ.  ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ