ಬೆಂಗಳೂರು: “ದಿ ಸೂಟ್” ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದ ಬಹುಮುಖ ಪ್ರತಿಭೆ ಕಮಲ್ ರಾಜ್ ಅವರಿಗೆ 2026ನೇ ವರ್ಷವು ವೃತ್ತಿಜೀವನದ ‘ಸುವರ್ಣ ಅಧ್ಯಾಯ’ವಾಗಿ ಮೂಡಿಬರುತ್ತಿದೆ. ನಟನೆಯ ಜೊತೆಗೆ ನಿರ್ಮಾಣ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯಲ್ಲಿ ತೊಡಗಿಸಿಕೊಂಡಿರುವ ಅವರು, ಈ ವರ್ಷ ಸಾಲು ಸಾಲು ಸಾಧನೆಗಳ ಮೂಲಕ ಚಿತ್ರರಂಗದ ಗಮನ ಸೆಳೆದಿದ್ದಾರೆ.

100 ಮೂಲ ಗೀತೆಗಳ ಐತಿಹಾಸಿಕ ಮೈಲಿಗಲ್ಲು*

ಈ ವರ್ಷದ ಅತ್ಯಂತ ಗಮನಾರ್ಹ ಸಾಧನೆಯೆಂದರೆ, ಕಮಲ್ ರಾಜ್ ಅವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 100 ಮೂಲ ಗೀತೆಗಳನ್ನು ರಚಿಸಿ, ಸಂಯೋಜಿಸಿ ಬಿಡುಗಡೆ ಮಾಡಿರುವುದು. ಒಂದೇ ವರ್ಷದಲ್ಲಿ ಇಷ್ಟು ದೊಡ್ಡ ಮಟ್ಟದ ಹಾಡುಗಳ ಸೃಜನೆ ಮಾಡುವುದು ಅಪರೂಪದ ದಾಖಲೆಯಾಗಿದೆ.

ಈ ಸಂಗ್ರಹದಲ್ಲಿ ಪ್ರೇಮ, ಭಕ್ತಿ, ಭಾವನಾತ್ಮಕ ಹಾಗೂ ಮಾಸ್ ಬೀಟ್‌ಗಳ ಹಾಡುಗಳಿದ್ದು, ಡಿಜಿಟಲ್ ವೇದಿಕೆಗಳಲ್ಲಿ ಈಗಾಗಲೇ ಸೌಂಡ್ ಮಾಡುತ್ತಿವೆ. ಚಿತ್ರರಂಗದ ದಿಗ್ಗಜರು ಹಾಗೂ ಸೆಲೆಬ್ರಿಟಿಗಳು ಕಮಲ್ ರಾಜ್ ಅವರ ಈ ಅಪ್ರತಿಮ ಸೃಜನಶೀಲತೆಗೆ ಮನಸೋತು ಅಭಿನಂದನೆ ಸಲ್ಲಿಸಿದ್ದಾರೆ.

minchu 1

*ಸೆಪ್ಟೆಂಬರ್‌ನಲ್ಲಿ ಕನ್ನಡ ಚಿತ್ರದ ಹವಾ*

ಕಮಲ್ ರಾಜ್ ಅಭಿನಯದ ಬಹುನಿರೀಕ್ಷಿತ ಹೊಸ ಕನ್ನಡ ಚಿತ್ರವು ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಭವ್ಯ ನಿರ್ಮಾಣ ಹಾಗೂ ಮನಮುಟ್ಟುವ ಕಥಾಹಂದರ ಹೊಂದಿರುವ ಈ ಚಿತ್ರವು, ಸೂಪರ್ ಹಿಟ್ ಹಾಡುಗಳ ಮೂಲಕ ಈಗಾಗಲೇ ಕುತೂಹಲ ಮೂಡಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ನಿರೀಕ್ಷೆಯಿದೆ.

*ಬಾಲಿವುಡ್‌ಗೆ ಪಾದಾರ್ಪಣೆ*

ಕನ್ನಡದ ಜೊತೆಗೆ ಕಮಲ್ ರಾಜ್ ಈ ವರ್ಷ ಬಾಲಿವುಡ್‌ಗೂ ಲಗ್ಗೆ ಇಡುತ್ತಿದ್ದಾರೆ. ಅವರ ಅಭಿನಯದ ಹಿಂದಿ ಚಿತ್ರವೊಂದು ಇದೇ ವರ್ಷ ಬಿಡುಗಡೆಯಾಗಲಿದ್ದು, ಇದು ಅವರ ‘ಪ್ಯಾನ್ ಇಂಡಿಯಾ’ ಕನಸಿನ ಮಹತ್ವದ ಹೆಜ್ಜೆಯಾಗಿದೆ. ಕಮಲ್ ರಾಜ್ ಕೇವಲ ನಟನಾಗಿ ಸೀಮಿತವಾಗದೆ, ಚಿತ್ರರಂಗದ ವಿವಿಧ ಆಯಾಮಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪರದೆಯ ಮೇಲೆ ನಟನಾಗಿ, ನಿರ್ಮಾಪಕನಾಗಿ, ಗೀತರಚನೆಕಾರರಾಗಿ, ಸಂಗೀತ ಸಂಯೋಜಕರೂ ಆಗಿದ್ದಾರೆ.

2026ರಲ್ಲಿ 100 ಹಾಡುಗಳ ಸಂಭ್ರಮ ಹಾಗೂ ಎರಡು ದೊಡ್ಡ ಸಿನಿಮಾಗಳ ಬಿಡುಗಡೆಯೊಂದಿಗೆ ಕಮಲ್ ರಾಜ್ ತಮ್ಮದೇ ಆದ ಸಾಮ್ರಾಜ್ಯವನ್ನು ನಿರ್ಮಿಸುತ್ತಿದ್ದಾರೆ. ಪ್ರೇಕ್ಷಕರು ಮತ್ತು ಚಿತ್ರರಂಗ ಈ ‘ಸೃಜನಶೀಲ ಶಕ್ತಿ’ಯ ಮುಂದಿನ ಪಯಣಕ್ಕೆ ಕಾತರದಿಂದ ಕಾಯುತ್ತಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ