– ರಾಘವೇಂದ್ರ ಅಡಿಗ ಎಚ್ಚೆನ್.
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಕೊನೆಯ ಹಂತದ ಕೆಲಸಗಳು ಭರದಿಂದ ಸಾಗುತ್ತಿದ್ದು, ಇಷ್ಟರಲ್ಲೇ ಟ್ರೈಲರ್ ಲಾಂಚ್ ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಮೂಲಗಳ ಪ್ರಕಾರ ಇದೇ ಮಾರ್ಚ್ 8 ರಂದು ಟಾಕ್ಸಿಕ್ ಟ್ರೈಲರ್ ಬಿಡುಗಡೆ ಆಗಲಿದೆ.. ವಿಶೇಷವೆಂದರೆ ಈ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲೇ ನಡೆಯುತ್ತಿದ್ದು, ತುಂಬಾ ದೊಡ್ಡ ಮಟ್ಟದಲ್ಲಿ ಪ್ಲ್ಯಾನಿಂಗ್ ಮಾಡಲಾಗಿದೆ. ಬೇರೆ ಭಾಷೆಯ ಮಾಧ್ಯಮಗಳು ಈ ಟ್ರೈಲರ್ ಲಾಂಚ್ನಲ್ಲಿ ಭಾಗವಹಿಸೋ ನಿರೀಕ್ಷೆಯಿದೆ.

ಇನ್ನು ಟಾಕ್ಸಿಕ್ ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಬಹುತೇಕ ಮುಗಿದಿದ್ದು, ಸಿನಿಮಾದ ಅಸಲಿ ಪ್ರಚಾರ ಶುರುವಾಗಬೇಕಿದೆ. ಆದರೆ ಈ ಬಾರಿ ‘ಟಾಕ್ಸಿಕ್’ ಸಿನಿಮಾಕ್ಕೆ ಎದುರಾಳಿಯಾಗಿ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬರುತ್ತಿದೆ. ಎರಡೂ ಸಿನಿಮಾಗಳ ನಡುವೆ ಭಾರಿ ಪೈಪೋಟಿ ಏರ್ಪಡುವುದು ಖಾತ್ರಿ ಆಗಿದೆ. ‘ಧುರಂಧರ್’ ಸಿನಿಮಾ ಈಗಾಗಲೇ ಭಾರಿ ದೊಡ್ಡ ಹಿಟ್ ಆಗಿದ್ದು, ಸಹಜವಾಗಿಯೇ ‘ಧುರಂಧರ್ 2’ ಸಿನಿಮಾಕ್ಕೆ ಸಹ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕಾಯುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಎರಡೂ ಸಿನಿಮಾಗಳ ನಡುವೆ ಭರ್ಜರಿ ಫೈಟ್ ನಡೆಯಲಿದೆ.
ಈ ನಡುವೆ ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಮಾರ್ಚ್ 2 (ಇಂದು) ಬಿಡುಗಡೆ ಆಗಿದ್ದು ‘ಟಾಕ್ಸಿಕ್’ ತಂಡ ಬಿಡುಗಡೆ ಮಾಡುತ್ತಿರುವ ಮೊದಲ ಹಾಡು ಇದಾಗಿದೆ.
ಟಾಕ್ಸಿಕ್ ಸಿನಿಮಾದ ಬಿಡುಗಡೆಗೆ ಬೆರಳೆಣಿಕೆಯ ದಿನಗಳಷ್ಟೇ ಉಳಿದಿದ್ದು, ದಿನೇ ದಿನೇ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗುತ್ತಿದೆ.. ಈ ಹಂತದಲ್ಲಿ ಸಿನಿಮಾಗೆ ಮ್ಯೂಸಿಕ್ ನೀಡಿರೋ ಸಂಗೀತ ನಿರ್ದೇಶಕ ರವಿ ಬಸ್ರೂರು, ಟಾಕ್ಸಿಕ್ ಕುರಿತು ಒಂದಷ್ಟು ಎಕ್ಸ್ಲಕ್ಲ್ಯೂಸಿವ್ ಮಾಹಿತಿ ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಸಿನಿಮಾದ ಮೇಕಿಂಗ್ ತುಂಬಾ ರಿಚ್ ಆಗಿ ಮೂಡಿ ಬಂದಿದೆ.. ಅದಕ್ಕೆ ತಕ್ಕನಂತೆ ಮ್ಯೂಸಿಕ್ ನೀಡಲಾಗಿದೆ.. ಟಾಕ್ಸಿಕ್ ರೆಟ್ರೂ ಲುಕ್ ನಲ್ಲಿದ್ದು, ಮ್ಯೂಸಿಕ್ ಮಾಡ್ರನ್ ಫೀಲ್ ನಲ್ಲಿ ಇರಲಿದೆ.. ಈ ಸಿನಿಮಾಗೆ ಲೈವ್ ಆರ್ಕೆಸ್ಟ್ರಾ ಬಳಸಿ ಮ್ಯೂಸಿಕ್, ಬ್ಯಾಕ್ ಗ್ರೌಂಡ್ ಸ್ಕೋರ್ ನೀಡಲಾಗಿದೆ ಅಂತಾ ರವಿ ಬಸ್ರೂರು ತಿಳಿಸಿದ್ದಾರೆ.





