– ರಾಘವೇಂದ್ರ ಅಡಿಗ ಎಚ್ಚೆನ್.
ಇದು ನಿಮ್ಮ ವಾಹಿನಿ ಕಲಾ ವೇದಿಕೆಯಿಂದ ಮಾ. 15 ರಂದು ಅಪ್ಪು ಉತ್ತವ ಆಯೋಜಿಸಲಾಗಿದೆ ಎಂದು ಹಿರಿಯ ನಟ ನೆನಪಿರಲಿ ಪ್ರೇಮ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉತ್ಸವಕ್ಕೆ ತಮ್ಮನ್ನು ರಾಯಭಾರಿಯಾಗಿ ನೇಮಿಸಿರುವುದು ತಮಗೆ ಸಂತಸ ತಂದಿದೆ. 21ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ. ಭರತನಾಟ್ಯ ಕಲಾವಿದರಿಗೆ ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ಕೃಷಿ ತಂದಿದೆ ಎಂದು ತಿಳಿಸಿದರು.

ರಾಮಮೂರ್ತಿ ನಗರದ ನಾಟ್ಯ ಪ್ರಿಯ ಆಡಿಟೋರಿಯಂ ಆಡಿಟೋರಿಯಂ ನಡೆಯಲಿರುವ “ಅಪ್ಪು ಉತ್ಸವ” ಹಾಗೂ “21ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಅಪ್ಪು ಉತ್ಸವದ ಅಧ್ಯಕ್ಷತೆಯನ್ನು ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಪ್ರಮೀಳಾ ನೈಸರ್ಗಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಉಪಸ್ಥಿತರಿದ್ದರು.





