ಸೌತ್ ಇಂಡಿಯಾದ ಸ್ಟಾರ್ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಆಗ್ಗಿಂದಾಗೆ ಕೇಳಿಬರುತ್ತಲೇ ಇರುತ್ತದೆ. ಇದೀಗ ಮೂಲಗಳ ಪ್ರಕಾರ ಇದೇ ವರ್ಷ ಅನುಷ್ಕಾ ಶೆಟ್ಟಿ ಸಪ್ತಪದಿ ತುಳಿಯಲಿದ್ದಾರಂತೆ. ಅನುಷ್ಕಾ ಕೈ ಹಿಡಿಯಲಿರುವ ಹುಡುಗ ಉದ್ಯಮಿಯಾಗಿದ್ದು, ಅನುಷ್ಕಾ ಶೆಟ್ಟಿ ಕುಟುಂಬಕ್ಕೆ ತುಂಬಾ ಆಪ್ತರು ಎನ್ನಲಾಗುತ್ತಿದೆ.

ಈ ವಿಚಾರ ಅನುಷ್ಕಾ ಅಭಿಮಾನಿಗಳಲ್ಲಿ ಖುಷಿ ತಂದಿದೆಯಾದರೂ, ಪ್ರಭಾಸ್ ಜೊತೆಗಿನ ಮದುವೆ ವಿಚಾರ ಸುಳ್ಳಾಯಿತಲ್ಲ ಎಂಬ ಬೇಸರವೂ ಅಭಿಮಾನಿಗಳಲ್ಲಿ ಮೂಡಿದೆ‌‌‌‌‌.

‘ದೇವಸೇನಾ’ ಖ್ಯಾತಿಯ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಇದೀಗ ಮತ್ತೆ ಸದ್ದು ಮಾಡುತ್ತಿದ್ದು, ಕಳೆದ ಹಲವು ವರ್ಷಗಳಿಂದ ಅಭಿಮಾನಿಗಳಲ್ಲಿ ಕುತೂಹಲಕ್ಕೀಡು ಮಾಡಿದ್ದ ವಿಷಯಕ್ಕೆ ಈಗ ಅಂತ್ಯ ಸಿಗುವ ಲಕ್ಷಣಗಳು ಕಾಣುತ್ತಿವೆ ಎನ್ನಲಾಗುತ್ತಿದೆ.

ಕೆಲವು ಮೂಲಗಳ ಪ್ರಕಾರ, ಅನುಷ್ಕಾ ಶೆಟ್ಟಿ ಅವರು ಇದೇ ವರ್ಷ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅವರು ಕೈಹಿಡಿಯಲಿರುವ ಹುಡುಗ ಯಶಸ್ವಿ ಉದ್ಯಮಿಯಾಗಿದ್ದಾರೆ. ಅನುಷ್ಕಾ ಅವರ ಆಪ್ತರು ಎನ್ನಲಾಗಿದ್ದು ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಈ ಮದುವೆ ನಿಶ್ಚಯವಾಗಿದೆ ಎಂದು ಹೇಳಲಾಗುತ್ತಿದೆ.

ಅನುಷ್ಕಾ ಶೆಟ್ಟಿ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಡುವೆ ಪ್ರೀತಿ ಇದೆ ಎಂಬ ವದಂತಿಗಳು ದಶಕಗಳಿಂದ ಕೇಳಿಬರುತ್ತಿದ್ದವು. ‘ಬಾಹುಬಲಿ’ ಜೋಡಿ ನಿಜ ಜೀವನದಲ್ಲೂ ಒಂದಾಗಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ಆಸೆಯಾಗಿತ್ತು. ಆದರೆ ಈಗ ಅನುಷ್ಕಾ ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದ ಹಿನ್ನಲೆ ಪ್ರಭಾಸ್ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ಆದರೂ, ನೆಚ್ಚಿನ ನಟಿ ಹೊಸ ಜೀವನಕ್ಕೆ ಕಾಲಿಡುತ್ತಿರುವುದಕ್ಕೆ ಶುಭವನ್ನೂ ಹಾರೈಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ