ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ವಿವಾಹದ ಕುರಿತ ಇತ್ತೀಚೆಗೆ ಸುದ್ದಿಗಳು ಪ್ರಕಟವಾಗಿದ್ದವು. ಬೆಂಗಳೂರು ಮೂಲದ ಉದ್ಯಮಿಯನ್ನು ಅವರು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ಮಾಧ್ಯಮಗಳಲ್ಲಿ ಅನುಷ್ಕಾ ಶೆಟ್ಟಿ ವಿವಾಹಕ್ಕೆ ಸಂಬಂಧಿಸಿದಂತೆ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಸ್ವತಃ ಅನುಷ್ಕಾ ಶೆಟ್ಟಿ ತಂಡ ಸ್ಪಷ್ಟನೆ ನೀಡಿದೆ.

ಸ್ಟಾರ್ ನಾಯಕಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎನ್ನಲಾಗಿತ್ತು. ಆದರೆ ಇತ್ತೀಚಿನ ಪ್ರಕಟವಾದ ಸುದ್ದಿಗಳಲ್ಲಿ ಸತ್ಯವಿಲ್ಲ ಎಂದು ಚಿತ್ರ ತಂಡ ಸ್ಪಷ್ಟಪಡಿಸಿದೆ.

ಅನುಷ್ಕಾ ಶೆಟ್ಟಿ ವಿವಾಹದ ವಿಷಯವಾಗಿ ಈ ಹಿಂದೆಯೂ ಸಾಕಷ್ಟು ಊಹಾಪೋಹಗಳು ಹರಡಿದ್ದವು. ಆದರೆ. ಅನುಷ್ಕಾ ಅಂತಹ ವದಂತಿಗಳಿಗೆ ಹೆಚ್ಚು ಪ್ರತಿಕ್ರಿಯಿಸಿರಲಿಲ್ಲ. ಈಗ ಅವರ ತಂಡ ಅನುಷ್ಕಾ ಅವರ ಮದುವೆಯ ಸುದ್ದಿಯನ್ನು ನಿರಾಕರಿಸುವ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಊಹಾಪೋಹ ಮಾಡುವುದು, ಭವಿಷ್ಯ ನುಡಿಯುವುದು ಮತ್ತು ಅನಧಿಕೃತ ಮಾಹಿತಿಯನ್ನು ಪದೇ ಪದೇ ಪ್ರಕಟಿಸುವುದು ಸರಿಯಲ್ಲ’ ಎಂದು ಅನುಷ್ಕಾ ತಂಡ ಹೇಳಿದೆ.

ಅನುಷ್ಕಾ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಬಯಸುತ್ತಾರೆ. ಅಂತಹ ಮಹಿಳೆಯನ್ನು ಈ ರೀತಿ ಗುರಿಯಾಗಿಸಿಕೊಳ್ಳುವುದು ತಪ್ಪು. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಹೇಳಲು ಬಯಸುವುದಿಲ್ಲ. ಪ್ರತಿಯೊಬ್ಬರೂ ಆ ನಿರ್ಧಾರವನ್ನು ಗೌರವಿಸಬೇಕು. ಮದುವೆ ವೈಯಕ್ತಿಕ ವಿಷಯ. ಇದು ಬ್ರೇಕಿಂಗ್ ನ್ಯೂಸ್ ಅಲ್ಲ ಎಂದು ಅನುಷ್ಕಾ ತಂಡ ಎಚ್ಚರಿಕೆ ನೀಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ