ಇದೇ ಮೊದಲ ಬಾರಿಗೆ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಭಾರಿ ಮಟ್ಟದಲ್ಲಿ ಇಳಿಕೆಯಾಗಿವೆ. ಒಂದೂವರೇ ಲಕ್ಷ ರೂಪಾಯಿ ಗಡಿ ಮೀರಿದ್ದ ಚಿನ್ನದ ಬೆಲೆಗಳು ಈಗ 1 ಲಕ್ಷದ 28 ಸಾವಿರ ರೂಪಾಯಿಗೆ ಇಳಿದಿದೆ.

ಇಂದಿನ ದರ: ಮಂಗಳವಾರದಂದು (ಮಾರ್ಚ್ 24, 2026) 24 ಕ್ಯಾರೆಟ್ 10 ಗ್ರಾಂ ನಲ್ಲಿ 2940 ರೂ. ಇಳಿಕೆಯಾಗಿ, 1,40,350 ಗೆ ಬೆಲೆ ಇಳಿದಿದೆ. 1 ಗ್ರಾಂ ಬೆಲೆ ಇಂದು 294 ರೂ ಇಳಿಕೆ ಕಂಡಿದ್ದು, 14,035 ರೂ ದಾಖಲಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ 1 ಗ್ರಾಂ ಬೆಲೆ 270 ರೂ ಇಳಿಕೆ ಆಗಿ 12,865 ರೂ ಆಗಿದ್ದು 10 ಗ್ರಾಂ ಬೆಲೆಯಲ್ಲಿ 2700 ರೂ ಇಳಿಕೆಯಾಗಿ, 1,28,650 ರೂಪಾಯಿಗೆ ತಲುಪಿದೆ.

ಬೆಳ್ಳಿ ಬೆಲೆ: ಬೆಳ್ಳಿ ಬೆಲೆ ಇಂದು 5 ಸಾವಿರ ಏರಿಕೆಯಾಗಿದ್ದು, ಕೆಜಿ ಬೆಲೆ 2,35,000 ಸಾವಿರ ರೂ ಬೆಲೆ ತಲುಪಿದೆ. ಬೆಳ್ಳಿ ಬೆಲೆ ನಿನ್ನೆ ಏಕಾಏಕಿ 15 ಸಾವಿರ ಕುಸಿತ ಕಂಡಿತ್ತು. ಅಲ್ಲದೆ ಕಳೆದ ವಾರವೂ ಭಾರಿ ಇಳಿಕೆಯಾಗಿದ್ದು, ಮಾರ್ಚ್ 2 ರಂದು ಗರಿಷ್ಠ ಬೆಲೆ 3.15 ಲಕ್ಷಕ್ಕೆ ಏರಿದ್ದ ಬೆಲೆಯಲ್ಲಿ 80 ಸಾವಿರ ರೂಪಾಯಿ ಇಳಿಕೆಯಾಗಿ 2.35 ಲಕ್ಷ ರೂ ಆಗಿದೆ.

ಬೆಲೆ ಏರಿಳಿತ: ಇರಾನ್-ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ , ಡಾಲರ್ ಬೆಲೆ ಏರಿಳಿತ ಸೇರಿದಂತೆ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಏರುಪೇರಾಗುತ್ತಿದೆ. ಮಧ್ಯಪ್ರಾಚ್ಯ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಮಾರ್ಚ್ 24 ದಿನಗಳಲ್ಲಿ ಚಿನ್ನದ 22 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 30 ಸಾವಿರ ರೂಪಾಯಿ ಇಳಿಕೆ ಆಗಿದ್ದರೆ, 24 ಕ್ಯಾರೆಟ್ ಬೆಲೆಯಲ್ಲಿ 32740 ರೂಪಾಯಿ ಕಡಿತ ಆಗಿದೆ. ಸದ್ಯ -18.91% ರ ದರದಲ್ಲಿ ಬೆಲೆ ಇಳಿಕೆಯ ಟ್ರೆಂಡ್ ನಡೆಯುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ