ಇದೆಂಥ ಹುಚ್ಚು! : ಟ್ರಾನ್ಸ್ ಸೆಕ್ಷುಯೆಲ್ಸ್ ಮಂದಿಯಲ್ಲಿ ಕ್ರಾಸ್ ಡೆಸರ್ಸ್ ಗುಂಪು ಕೂಡ ಒಂದು. ಇಲ್ಲಿ ಬೇಕೆಂದೇ ಗಂಡು ಹೆಣ್ಣಿನಂತೆ ವೇಷ ಬದಲಿಸುತ್ತಾನೆ, ಸೆಕ್ಸ್ ಬದಲಾವಣೆ ಅನಿವಾರ್ಯವೇನಲ್ಲ. ಇದೇ ತರಹ ಉಲ್ಟಾ ಕೇಸ್, ಹೆಣ್ಣು ಗಂಡಿನ ಡ್ರೆಸ್ ಧರಿಸುತ್ತಾಳೆ. ಇದು ಅವರವರ ಮೆಂಟಲ್ ರಿಕ್ವೈರ್ ಮೆಂಟ್ಸ್ ಗೆ ಬಿಟ್ಟದ್ದು. ಬಹಳಷ್ಟು ಗಂಡುಗಳು ಹೆಣ್ಣಿನಂತೆ ಕಾಣ ಬಯಸುತ್ತಾರೆ. ಮ್ಯಾಡಿ ಟೇಲರ್ ಇವರಲ್ಲಿ ಪ್ರಮುಖ ಸೆಲೆಬ್. ಬೇಕೆಂದೇ ಈತ ತನ್ನ ಧ್ವನಿ ಬದಲಿಸಿ ಮಾತನಾಡುತ್ತಾನೆ. ಸರ್ಜರಿ ಮೂಲಕ ಸೆಕ್ಸ್ ಚೇಂಜ್ ಸುಲಭವೇನಲ್ಲ. ಬದಲಿಗೆ ಹೀಗೆ ಛದ್ಮವೇಷ ಧರಿಸುವುದು ಸುಲಭ ಅಲ್ಲವೇ? ಇದೇನು ಹುಚ್ಚು ಅಂತೀರಾ? ಇದು ಅವರ ಮಾನಸಿಕತೆಗೆ ಅಗತ್ಯ ಎನಿಸುತ್ತದೆ. ಅಮೆರಿಕಾದಲ್ಲಿ ಇವರನ್ನು ಹೆಚ್ಚು ಸಹಿಸುತ್ತಾರೆ.

ಮಾರ್ಕೆಟ್ ನ ಫಂಡಾ : ನೈಜೀರಿಯಾದ ಈ ಮಾಡೆಲ್ಸ್ ಇಲ್ಲಿ ತಮ್ಮ ಡ್ರೆಸ್ ಪ್ರದರ್ಶಿಸುತ್ತಿಲ್ಲ, ಕೈಕೈ ಹಿಡಿದು ಸ್ಯಾನಿಟರಿ ನ್ಯಾಪ್ಕಿನ್ ತೋರಿಸುತ್ತಿದ್ದಾರೆ. ಆಫ್ರಿಕಾದ ದೇಶಾದ ನೈಜೀರಿಯಾದವರು ಅದನ್ನೀಗ ಇಂಗ್ಲೆಂಡ್ ನಗರದಲ್ಲಿ ಮಾರಾಟ ಮಾಡುತ್ತಿದ್ದಾರೆ, ಏಕೆಂದರೆ ಆಫ್ರಿಕಾದ ಮೇಕ್ ಇಂಗ್ಲೆಂಡ್ ನಲ್ಲಿ ಬಲು ಅಗ್ಗ. ಭಾರತ ಈ ಕೆಲಸವನ್ನು ಎಂದೋ ಶುರು ಮಾಡಿತ್ತು, ಇದೀಗ ಆಫ್ರಿಕಾದ ದೇಶಗಳು ಪೈಪೋಟಿಗೆ ಮುನ್ನುಗುತ್ತಿವೆ.

ಫ್ಯಾಷನ್ನಿನ ಟಶನ್ : ಈ ಡ್ರೆಸ್ ನಿಮಗೆ ಬಲು ಆರ್ಡಿನರಿ ಎನಿಸಬಹುದು, ಆದರೆ ಇದು ವಿಶೇಷವಾಗಿ ಗಾಲ್ಫ್ ಆಡುವವರಿಗೆಂದೇ ರೂಪಿಸಲಾಗಿದೆ. ಗಾಲ್ಫ್ ಟಿನಿ ಎಂಬ ಕಂಪನಿ ತನ್ನ ಗಾಲ್ಫ್ ಫ್ಯಾಷನ್ ಗಾಗಿ ಹೆಸರು ಗಳಿಸಿದೆ. ಇಂಥ ಡ್ರೆಸ್ ಗಳು ಎಲ್ಲಾ ಚಟುವಟಿಕೆಗಳಿಗೂ ವಿಭಿನ್ನ , ಹೀಗಾಗಿ ಮಾರ್ಕೆಟ್ ಗೆ ಹೋದಾಗ ಗಮನವಿಟ್ಟು ಆರಿಸಿ.

ಒಂದೇ ತರಹದ ವಾತಾರಣ : ಇದೀಗ ಈ ತರಹದ ವಾತಾವರಣ ವಿಶ್ವದ ಎಲ್ಲಾ ದೇಶಗಳಲ್ಲೂ ಒಂದೇ ತರಹ ಆಗಿಹೋಗಿದೆ. ಧರ್ಮ ಅಧಿಕಾರ ದಾಹಕ್ಕಾಗಿ ಜನ ಪರಸ್ಪರರ ತಲೆ ಒಡೆಯಲಿಕ್ಕೂ ಹೇಸುವುದಿಲ್ಲ. ಅದೇ ತರಹ ಪಬ್ಲಿಕ್ ಆಗಿ ಊಟತಿಂಡಿ ಸವಿಯುವ ವಿಷಯದಲ್ಲೂ ಒಂದೇ ತರಹದ ಹಾಹಾಕಾರ ಎಬ್ಬಿಸುತ್ತಾರೆ. ಈ ದೃಶ್ಯ ಮಲೇಷಿಯಾದ ರಾಜಧಾನಿ ಕೌಲಾಲಂಪುರ್ ಗೆ ಸಂಬಂಧಿಸಿದ್ದು. ಅಲ್ಲಿ ನಡೆದ ಒಂದು ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಜನ ಹೀಗೆ, ವಿಶ್ವದ ಪ್ರತಿ ಊರಿನಲ್ಲೂ ನಡೆಯುವಂತೆಯೇ ಆಹಾರಕ್ಕೆ ಮುಗಿ ಬಿದ್ದಿದ್ದರು.

ಬಡವರು ಸಹ ಮನುಷ್ಯರೇ ! : ಅಮೆರಿಕಾದಲ್ಲಿ ಹಿಂದಿನಿಂದಲೂ ವುಡನ್ ಹೌಸ್ ಚಾಲ್ತಿಯಲ್ಲಿದೆ, ಈಗಲೂ ಧಾರಾಳ ಇದೆ. ಆಕಸ್ಮಿಕವಾಗಿ ಅಲ್ಲಿ ಬೆಂಕಿ ದುರಂತ ನಡೆದಾಗ, ಫೈರ್ ಮೆನ್ ಅದನ್ನು ನಂದಿಸಿ ಮಕ್ಕಳೆದುರು ಆದರ್ಶ ಮೆರೆಯುತ್ತಾರೆ. ಕಳೆದ ಕ್ರಿಸ್ ಮಸ್ ನಲ್ಲಿ ಅಲ್ಲಿ ಬಹುತೇಕ ಬಡವರಾದ ಒಬ್ಬಂಟಿಗರು, ಅನಾಥರು, ವೃದ್ಧರು, ಮನೆಮಠ ರಹಿತರು ಮುಂತಾದವರಿಗೆಂದೇ ಆಹಾರ ಸಾಮಗ್ರಿ, ಗಿಫ್ಟ್ ಇತ್ಯಾದಿ ಹಂಚಲಾಯಿತು. ಇದು ಅಲ್ಲಿನ ಎಲ್ಲಾ ಸಣ್ಣಪುಟ್ಟ ಊರುಗಳಲ್ಲೂ ನಡೆಯುತ್ತದೆ. ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ ಹೀಗೆ ಹಬ್ಬದ ನೆಪದಲ್ಲಿ ಬಡವರಿಗೆ ಹಂಚುತ್ತಾರೆ. ಅಮೆರಿಕಾದಂಥ ಅತಿ ಶ್ರೀಮಂತ ದೇಶದಲ್ಲೂ ಬೀದಿ ಬದಿಯ ಅನಾಥರಿಗೇನೂ ಕೊರತೆ ಇಲ್ಲ. ಹೊಸ ವರ್ಷಾಚರಣೆಗಾಗಿ ಇರುವ ಬೀದಿ ಬದಿಯ ಕಟ್ಟಿಗೆ, ಕಾಗದ ಉರಿಸಿ ಈ ಗಿಫ್ಟ್ಸ್ ಪಡೆದು ಸಂಭ್ರಮಿಸುತ್ತಾರೆ. ಟ್ರಂಪಣ್ಣ ಇನ್ನು ಮುಂದಾದರೂ ಇವರಿಗೆ ನೆರವಾಗುತ್ತಾರೋ…. ಕಾದು ನೋಡೋಣ!

ಹಳೆಯದಕ್ಕೆ ತನ್ನದೇ ಆದ ಮಜಾ : ಪ್ರಾಚೀನ ಕಾಲದ ಕಡಲುಗಳ್ಳರ ನೆಪದಲ್ಲಿ ಅವರ ಸಂತಾನಗಳು, ಇಂದೂ ಸಹ ತಮ್ಮ ಪೂರ್ವಜರ ಕೆಲಸ ನೆನಪಿಸಲಿಕ್ಕಾಗಿ ಪೈರೆಟ್ ಪೆರೇಡ್ ನಡೆಸುತ್ತಾರೆ. ಇದು ಅಮೆರಿಕಾ, ಯೂರೋಪಿನ ದೇಶಗಳಲ್ಲಿ ಮಾಮೂಲಿ. ಈ ಪೆರೇಡ್ ನಲ್ಲಿ ಅದ್ಧೂರಿ ಹಾಡು, ಕುಣಿತ, ಮಸ್ತಿ, ಊಟತಿಂಡಿ, ಹೆಂಡ ಎಲ್ಲಾ ತುಂಬಿರುತ್ತದೆ. ಹಳೆಯದರ ತನ್ನದೇ ಆದ ಮಜಾ ಈ ರೀತಿ ಹೊಸ ಟೆಕ್ನಾಲಜಿ ಜೊತೆ ಮೆರೆಯುತ್ತದೆ.

ತೃಪ್ತಿಯಾಗುವಂತೆ ನೋಡಿ : ನಮ್ಮಲ್ಲಿ ಹೇಗೆ 10 ಸಾವಿರ ದಾನ ನೀಡುವಾಗ 100 ಜನ ಫೋಟೋಗೆ ಪೋಸ್ ನೀಡುತ್ತಾರೋ ಹಾಗೇ, ಈ ಫೋಟೋದಲ್ಲಿ ಮಂದಿ ಗುಂಪುಗೂಡಿ ಅಂಗವಿಕಲರಿಗೆ ದಾನ ನೀಡಿದ ನೆಪದಲ್ಲಿ ಹೀಗೆ ಪೋಸ್ ನೀಡುತ್ತಿದ್ದಾರೆ. ಇದೀಗ ಈ ಫೋಟೋವನ್ನು ನೀವು ನೋಡಿ, ಮನಸಾರೆ ತೃಪ್ತಿಪಟ್ಟುಕೊಂಡು, ಕೈ ತಟ್ಟಿಬಿಡಿ.





