ಮಣ್ಣಿನಲ್ಲಿ ಏನಿದೆ ಮಹಾ! ಎಂದು ಹಂಗಿಸುವವರಿಗೆ, ಅದರಲ್ಲಿ ಎಂಥ ಅದ್ಭುತ ಆಭರಣಗಳನ್ನು ರೂಪಿಸಬಹುದು ಎಂದು ತಿಳಿಸಿಕೊಟ್ಟಿರುವ ಮಣ್ಣಿನ ಮಗಳು ನೀಲಿ ರೋಹಿತ್ ಕುರಿತು ಪರಿಚಯ ಪಡೆಯೋಣವೇ.....?

ತನ್ನದೆಲ್ಲವನ್ನೂ ಕಳೆದುಕೊಂಡು ಇನ್ನು ಬದುಕು ಸಾಕು ಎನ್ನುವಂತಾದಾಗ, ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದು, ಬದುಕು ಕಟ್ಟಿ ಅನೇಕರಿಗೆ ಜೀವನಸ್ಛೂರ್ತಿಯನ್ನು ತುಂಬಿದ ಹೆಮ್ಮೆಯ ಕನ್ನಡತಿ, ಮೈಸೂರಿನ ದಿಟ್ಟ ಹೆಣ್ಣುಮಗಳೊಬ್ಬಳ ಬಾಳ ಪಯಣವಿದು.

ಹೆಣ್ಣುಮಗು ಹುಟ್ಟಿತೆಂಬ ಕಾರಣದಿಂದ ಹೆತ್ತವರ ನಿರ್ಲಕ್ಷ್ಯಕ್ಕೆ ಒಳಗಾಗಿ, ಅಜ್ಜ ಅಜ್ಜಿಯರ ನೆರಳಿನಲ್ಲೇ ಬೆಳೆದು, ಸುತ್ತಲಿನ ಅನೇಕರ ಹಂಗಿನ ಮಾತುಗಳನ್ನು ಕೇಳಿಕೊಂಡು, ಪದೇ ಪದೇ ಗಾಯಗೊಂಡ ಮನಸ್ಸಿನ ನೋವನ್ನು ನುಂಗಿ ಬೆಳೆದವರಿವರು. ಮದುವೆ ಎಂಬ ಬಂಧನಕ್ಕೆ ಬಿದ್ದು ಅಲ್ಲೂ ನಕರವನ್ನು ಅನುಭವಿಸಿ, ಪುಟ್ಟ ಹೆಣ್ಣುಮಗುವಿನ ಜೊತೆ ಒಂಟಿಯಾಗಿ ನಿಂತ ನೀಲಿಗೆ ಆಶಾಕಿರಣಾಗಿದ್ದು ರೋಹಿತ್‌.

ಬರೀ ಕಷ್ಟಗಳನ್ನು ನುಂಗಿಕೊಂಡು, ಪ್ರೀತಿಗಾಗಿ ಸದಾ ಹಂಬಲಿಸಿದ ಮಂಜುಳಾ ಎಂಬ ಮುಗ್ಧೆ, `ನೀಲಿ'ಯಾಗಿ ತನ್ನನ್ನು ಇಷ್ಟಪಟ್ಟು ಮದುವೆಯಾದರ ಜೊತೆ ಮತ್ತೆ ಬದುಕು ಕಟ್ಟಿಕೊಳ್ಳುವಷ್ಟರಲ್ಲಿ ವಿಧಿ ಮತ್ತೆ ಮೋಸ ಮಾಡಿತ್ತು. ಕೊರೋನಾ ಎಂಬ ರಕ್ಕಸ `ಕೊರೋನಾ ವಾರಿಯರ್‌' ಆಗಿದ್ದ ಅವರ ಪತಿಯನ್ನು ಕಸಿದುಕೊಂಡು ಮತ್ತೆ ಮೇಲೇಳಾಗದಂತಹ ಪೆಟ್ಟು ಕೊಟ್ಟಿತ್ತು.

ಹೊರಗಿನ ಪ್ರಪಂಚವನ್ನೇ ಅರಿಯದ, ತನ್ನ ಪುಟ್ಟ ಮಗಳ ಜೊತೆ ಒಂಟಿಯಾಗಿ ನಿಂತ ಇವರ ಕಷ್ಟಕ್ಕೆ ಮನೆಯವರೇ ಹೆಗಲಾಗಲಿಲ್ಲ. ಬದಲಿಗೆ ಇವರ ಮೇಲಿನ ಅನೇಕ ಆರೋಪಗಳಿಗೆ ಕೋರ್ಟ್‌ ಕಛೇರಿಗಳಿಗೆ ಅಲೆಯಬೇಕಾದ ಸಂದರ್ಭಗಳು ಎದುರಾದವು. ವಿಧಿಯ ಅಟ್ಟಹಾಸದೊಂದಿಗೆ ಸಮಾಜ ಕೊಟ್ಟ ತಿರಸ್ಕಾರದ ನೋವು ಸೇರಿ ಬಳಲಿದ ಇವರು ಅಳುತ್ತಾ ಸುಮ್ಮನೆ ಕೂರುವಂತೆಯೂ ಇರಲಿಲ್ಲ.

ಮಗಳ ಭವಿಷ್ಯ ಕಣ್ಣೆದುರಿಗೆ ಇರುವಾಗ, ಗುರುವಾಗಿ ಪತಿ ರೋಹಿತ್‌ ಕಲಿಸಿದ್ದ ಮಣ್ಣಿನ ಆಭರಣಗಳ ತಯಾರಿಕೆಯೊಂದೇ ನೀಲಿಯವರ ಮುಂದಿನ ಗುರಿಯಾಯಿತು.

ಮಣ್ಣಿನ ವಿವಿಧ ಆಭರಣಗಳು

ಮಣ್ಣನ್ನು ನಂಬಿದವರಿಗೆ ಅದು ಯಾವತ್ತೂ ಮೋಸ ಮಾಡುವುದಿಲ್ಲ ಎನ್ನುವ ಮಾತಿದೆ. ದಿನನಿತ್ಯ ಉಪಯೋಗಿಸುವ ವಸ್ತುಗಳಾದ ಪೆನ್ನಿನ ಭಾಗಗಳು, ರೀಫಿಲ್‌, ಚಾಕು, ವಿವಿಧ ಅಳತೆಯ ಮುಚ್ಚಳಗಳು ಇತ್ಯಾದಿಗಳನ್ನಷ್ಟೇ ಉಪಯೋಗಿಸಿಕೊಂಡು ತಯಾರಿಸಬಹುದಾದ ಮಣ್ಣಿನ ಆಭರಣಗಳಿಗೆ ಬಂಡವಾಳ ಕಡಿಮೆ. ನಮ್ಮ ಸುತ್ತಮುತ್ತ ಸಿಗುವ ಮಣ್ಣನ್ನು ದಿನಗಟ್ಟಲೆ ನೆನೆಸಿ, ಸೋಸಿ ಒಂದು ಹದಕ್ಕೆ ಬಂದ ಮೇಲೆ ಆ ಮಣ್ಣಿನಲ್ಲಿ ಒಡವೆಗಳನ್ನು ತಯಾರಿಸಿ, ಅವುಗಳನ್ನು ಒಣಗಿಸಿ, ನಂತರ ಬೆಂಕಿಯಲ್ಲಿ ಬೇಯಿಸಿದರೆ ಒಂದು ಹಂತದ ಕೆಲಸ ಮುಗಿಯಿತು.

ಆಮೇಲೆ ಬರುವುದೇ ಬಣ್ಣಗಳ ಕೈಚಳಕ. ವಿಷಕಾರಿಯಲ್ಲದ ಬಣ್ಣಗಳನ್ನು ಹಚ್ಚಿ ಸಿದ್ಧ ಮಾಡಿದ ಆಭರಣಗಳನ್ನು ತಮ್ಮ ಬಟ್ಟೆಗಳ ಬಣ್ಣಕ್ಕೆ ಹೊಂದಿಸಿ ಧರಿಸಿದ ಹೆಣ್ಣನ್ನು ನೋಡಲು ಎರಡು ಕಣ್ಣು ಸಾಲದು! ಇಷ್ಟೆಲ್ಲಾ ಕೆಲಸ ಬಯಸುವ ಈ ಮಣ್ಣಿನ ಒಡವೆಗಳ ತಯಾರಿಕೆಗೆ ಮುಖ್ಯವಾಗಿ ಬೇಕಾದದ್ದು ತಾಳ್ಮೆ ಎನ್ನುತ್ತಾರೆ ನೀಲಿ ರೋಹಿತ್‌.

ಕೆಲವೊಂದು ಪದಕಗಳು ಸಂಪೂರ್ಣವಾಗಿ ಒಣಗಲು ಹತ್ತು ಹದಿನೈದು ದಿನಗಳಾದರೂ ಬೇಕು. ಆಭರಣಗಳನ್ನು ಬೆಂಕಿಯಲ್ಲಿ ಸುಡುವಾಗ ಎಷ್ಟೋ ಸಲ ಒಡೆದು ಹೋಗುವುದೂ ಇದೆ. ಹಾಗಾಗಿ ತಾಳ್ಮೆ ಕಳೆದುಕೊಂಡು, ಇಂದು ಒಡವೆಗಳನ್ನು ಮಾಡಿ ನಾಳೆಯೇ ಧರಿಸಬೇಕೆಂದರೆ ಸಾಧ್ಯವಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ