ಕಾಂತಾರ ಕನಕವತಿಯ ಚಮತ್ಕಾರ

`ಬೀರಬಲ್ ಟ್ರಿಾಜಿ' ಮೂಲಕ ನಾಯಕಿಯಾಗಿ ಸಿನಿಪಯಣ ಆರಂಭಿಸಿದ ನಟಿ ರುಕ್ಮಿಣಿ ವಸಂತ್‌, `ಸಪ್ತಸಾಗರದಾಚೆ ಎಲ್ಲೋ' ಸರಣಿಯ ಮೂಲಕ ಮನೆಮಾತಾದವರು. ರಕ್ಷಿತ್‌ ಶೆಟ್ಟಿಗೆ ನಾಯಕಿಯಾಗಿದ್ದ ಅವರು, ಸಂಪೂರ್ಣ ಕಲಾವಿದೆಯಾಗಿ ಭರವಸೆ  ಮೂಡಿಸಿದರು. `ಬಘೀರ, ಭೈರತಿ ರಣಗಲ್' ಸೇರಿದಂತೆ ತೆಲುಗು, ತಮಿಳು ಚಿತ್ರಗಳಲ್ಲೂ ಮಿಂಚಿದ್ದ ರುಕ್ಮಿಣಿ `ಕಾಂತರ ಚಾಪ್ಟರ್'ರ ಮೂಲಕ ಪ್ಯಾನ್‌ ಇಂಡಿಯಾ ಸದ್ದು ಮಾಡಿದರು. ಚಿತ್ರದ ಜೊತೆಗೆ ಅವರು ನಟಿಸಿರುವ ಕನಕವತಿ ಪಾತ್ರಕ್ಕಂತೂ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಆ ಮೂಲಕ ನ್ಯಾಶನಲ್ ಕ್ರಶ್‌ ಎನಿಸಿದ್ದಾರೆ.

Namratha-gowda-(9)

ಪಡ್ಡೆಗಳ ಹೃದಯಕ್ಕೆ ಕಚಗುಳಿ ಇಡುವ ನಮ್ರತಾ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ನಮ್ರತಾ ಗೌಡ, ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಮೂಲಕ ಸೀರಿಯಲ್ ಜರ್ನಿ ಆರಂಭಿಸಿ, `ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಮಹಿಮಾ ಪಾತ್ರದ ಮೂಲಕ ಗಮನ ಸೆಳೆದರು. ತಕಧಿಮಿತ ಡ್ಯಾನ್ಸ್ ಶೋನಲ್ಲಿ ಟಾಪ್‌-5ಗೆ ಆಯ್ಕೆಯಾದರು. `ನಾಗಿಣಿ-5' ಸೀರಿಯಲ್ ನಲ್ಲಿ ಶಿವಾನಿ ಪಾತ್ರ ನಿರ್ವಹಿಸಿ, ಬಿಗ್‌ ಬಾಸ್‌ ಕನ್ನಡ ಸೀಸನ್‌-10 ರಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. `ಕರ್ಣ' ಧಾರಾವಾಹಿಯಲ್ಲಿ ನಿತ್ಯಾ ಪಾತ್ರದಲ್ಲಿ ಅಭಿನಯಿಸುತ್ತಿರುವ ನಮ್ರತಾ, ಸೋಶಿಯಲ್ ಮೀಡಿಯಾದಲ್ಲೂ ಸದಾ ಆ್ಯಕ್ಟಿವ್ ಆಗಿದ್ದು, ತಮ್ಮ ಮುದ್ದು ಮುದ್ದಾದ ಫೋಟೋಗಳ ಮೂಲಕ ಗಮನ ಸೆಳೆಯುತ್ತಾರೆ.

Anusha-hegde-(4)

ಲುಕ್ಬದಲಿಸಿಕೊಂಡ ಅನೂಷಾ ಹೆಗ್ಡೆ

ಕಿರುತೆರೆಯ `ರಾಧಾ ರಮಣ' ಧಾರಾವಾಹಿಯಲ್ಲಿ ದೀಪಿಕಾ ಪಾತ್ರದ ಮೂಲಕ ಮನೆಮಾತಾದವರು ಅನೂಷಾ ಹೆಗ್ಡೆ. ತೆಲುಗು ಕಿರುತೆರೆಯಲ್ಲಿ ಬಿಝಿಯಾಗಿರುವ ಈಕೆಯ ಅಭಿನಯಕ್ಕೆ ತೆಲುಗು ಮಂದಿ ಕೂಡ ಫಿದಾ ಆಗಿದ್ದಾರೆ. ತೆಲುಗಿನ `ಸೂರ್ಯಕಾಂತಂ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಅವರು ಸಂಪೂರ್ಣವಾಗಿ ತಮ್ಮ ಲುಕ್‌ ಬದಲಾಯಿಸಿಕೊಂಡರು. ಇದಕ್ಕೂ ಮೊದಲು `ಪೆಳ್ಳಾಡತಾ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.

Archana-jois-(4)

ಫೈಟ್ಗೂ ಸೈ, ನಟನೆಗೂ ಸೈ ಅರ್ಚನಾ

ಕನ್ನಡದ `ಮ್ಯೂಟ್‌' ಸಿನಿಮಾದ ನಟನೆಗಾಗಿ 2021ನೇ ಸಾಲಿನ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದ ಸ್ಯಾಂಡಲ್ ವುಡ್‌ ನಟಿ ಅರ್ಚನಾ ಜೋಯಿಸ್‌, `ಮಹಾದೇವಿ' ಧಾರಾವಾಹಿಯಲ್ಲಿ ತ್ರಿಪುರಸುಂದರಿ ಪಾತ್ರದ ಮೂಲಕ ಕಿರುತೆರೆ ಪ್ರವೇಶಿಸಿದರು. `ದುರ್ಗಾ' ಸೀರಿಯಲ್ ಮೂಲಕ ಮನೆಮಾತಾದ ಈಕೆ `ಕೆ.ಜಿ.ಎಫ್‌' ಚಿತ್ರದಲ್ಲಿ ಯಶ್‌ ತಾಯಿ ಪಾತ್ರವನ್ನು ಅಮೋಘವಾಗಿ ಅಭಿನಯಿಸಿ, ಸೈಮಾ ಅತ್ಯುತ್ತಮ ಪೋಷಕರ ಪ್ರಶಸ್ತಿ ಪಡೆದರು. ಅರ್ಚನಾ, ದೃಷ್ಟಿ ಸೆಂಟರ್‌ ಮತ್ತು ನಾಟ್ಯ ಗ್ರೂಪ್‌ ನ ಮೂಲಕ ಭಾರತ ಮತ್ತು ವಿದೇಶಾದ್ಯಂತ ಇನ್ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

Ashwini-gowda-(2)

ಕಿರುತೆರೆಗೆ ಮನೆಮಗಳು ಅಶ್ವಿನಿ ಗೌಡ

ಕಿರುತೆರೆದ ಹಾಗೂ ಸ್ಯಾಂಡಲ್ ವುಡ್‌ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ, ನಿರ್ಮಾಪಕಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖ ಕಾರ್ಯದರ್ಶಿ ಅಶ್ವಿನಿ ಗೌಡ, ತಮ್ಮದೇ ಆದ ಎಎಂಜಿ ಪ್ರೊಡಕ್ಷನ್‌ ಹೌಸ್‌ ಹೊಂದಿದ್ದಾರೆ. `ಅಶ್ವಿನಿ ನಕ್ಷತ್ರ, ಮಹಾಪರ್ವ' ಸೇರಿದಂತೆ ಕನ್ನಡದ 15ಕ್ಕೂ ಹೆಚ್ಚು ಹಾಗೂ ತೆಲುಗಿನಲ್ಲಿ 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಮನೆಮಾತಾದವರು. ಸ್ಯಾಂಡಲ್ ವುಡ್‌ ನ `ಚಡ್ಡಿದೋಸ್ತ್, ರಾಜಾಹುಲಿ, ಹ್ಯಾಪಿ ಬರ್ತ್‌ ಡೇ' ಸೇರಿದಂತೆ 45ಕ್ಕೂ ಹೆಚ್ಚು ಚಿತ್ರಗಳ ಮೂಲಕ ಗಮನ ಸೆಳೆದರು. ಬಿಗ್‌ ಬಾಸ್‌ ಕನ್ನಡ ಸೀಸನ್‌-12ರ ಸ್ಪರ್ಧಿಯಾಗಿ ಪಾಲ್ಗೊಂಡರು.`ಕೆಂಡಸಂಪಿಗೆ' ಕಾವ್ಯಾ ಶೈ ಕಿರುತೆರೆ ಹಾಗೂ ಸ್ಯಾಂಡಲ್ ವುಡ್‌ ನ ಆಧುನಿಕ ನಟಿ ಕಾವ್ಯಾ ಶೈ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ