- ರಾಘವೇಂದ್ರ ಅಡಿಗ ಎಚ್ಚೆನ್.
ಪ್ರಿಯಾಂಕಾ ಉಪೇಂದ್ರ ಅವರ 50 ನೇ ಚಿತ್ರ ರೆಡಿ ಆಗಿದೆ. ಡಿಟೆಕ್ಟಿವ್ ತೀಕ್ಷಣ ಹೆಸರಿನ ಈ ಚಿತ್ರದಲ್ಲಿ ಆ್ಯಕ್ಷನ್ ಇದೆ, ಥ್ರಿಲ್ ಇದೆ. ಇದಕ್ಕೂ ಹೆಚ್ಚಾಗಿ ಪ್ರಿಯಾಂಕಾ ಉಪೇಂದ್ರ ಅವರು ಡಿಟೆಕ್ಟಿವ್ ತೀಕ್ಷಣ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ, ಈ ಚಿತ್ರ ಶುರು ಆಗಿಯೇ ಹೆಚ್ಚು ಕಡಿಮೆ 3 ವರ್ಷದ ಮೇಲೆ ಆಗಿದೆ. ಈಗ ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆಗಸ್ಟ್-7 ರಂದು ಈ ಸಿನಿಮಾ ತೆರೆ ಕಾಣುತ್ತಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರದ ಮಾದ್ಯಮ ಗೋಷ್ಠಿ ನಡೆಯಿತು.
ಚಿತ್ರವನ್ನ ತ್ರಿವಿಕ್ರಮ್ ರಘು ನಿರ್ದೇಶನ ಮಾಡಿದ್ದಾರೆ. ಕತೆ-ಚಿತ್ರಕತೆಯನ್ನು ಇವರೇ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರು ಈ ಚಿತ್ರದಲ್ಲಿ ಡಿಟೆಕ್ಟಿವ್ ತೀಕ್ಷ್ಣ ಹೆಸರಿನ ಪಾತ್ರ ಮಾಡಿದ್ದಾರೆ. ನಟ ಮುನಿ ವೆಂಕಟ್ ಚರಣ್, ಅವಿನಾಶ್, ಶ್ರೀಧರ್, ವಿಜಯ್ ಸೂರ್ಯ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಚಿತ್ರಕ್ಕೆ ಮನು ದಾಸಪ್ಪ ಛಾಯಾಗ್ರಹಣ ಮಾಡಿದ್ದಾರೆ. ಗೌತಮ್ ಸಾಹಸ ನಿರ್ದೇಶನ ಮಾಡಿದ್ದಾರೆ. ಪೆಡ್ಡಪಲ್ಲಿ ರೋಹಿತ್ ಸಂಗೀತ ನೀಡಿದ್ದಾರೆ.
ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಭರ್ಜರಿ ಆ್ಯಕ್ಷನ್ ಇದೆ.

ಉಗ್ರಾವತಾರ' ಸಿನಿಮಾದ ಮೇಕಿಂಗ್ ವೇಳೆ ತ್ರಿವಿಕ್ರಮ ರಘು ಅವರಿಂದ ಈ ಚಿತ್ರದ ಕಥೆಯನ್ನು ಪ್ರಿಯಾಂಕಾ ಉಪೇಂದ್ರ ಕೇಳಿದರಂತೆ. ಕಥೆ ಬಗ್ಗೆ ಸಿಕ್ಕಾಪಟ್ಟೆ ಇಂಪ್ರೆಸ್ ಆದ ಪ್ರಿಯಾಂಕಾ ಉಪೇಂದ್ರ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಇದು ಇಂದಿನ ಮಕ್ಕಳಿಗೆ ಸ್ಫೂರ್ತಿ ನೀಡುವ ಸಿನಿಮಾ ಎಂದು ಪ್ರಿಯಾಂಕಾ ಉಪೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.

ಇದು ನನ್ನ ಐವತ್ತನೇ ಚಿತ್ರ. ಇದೆ ಆಗಸ್ಟ್ ನಲ್ಲಿ ತೆರೆಗೆ ಬರಲಿದೆ. ಇನ್ನು ನನ್ನ ಮಗನ ಸಿನಿಮಾ ಸಹ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದು ಅವರು ಸಂಭ್ರಮದಿಂದ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರದರ್ಶಿಸಿದ ಟ್ರೈಲರ್ ಅಲ್ಲಿ ಪ್ರಿಯಾಂಕಾ ಅವರ ಆ್ಯಕ್ಷನ್ ಭರ್ಜರಿ ಆಗಿಯೇ ಇವೆ. ವಿಜಯ್ ಸೂರ್ಯ ಕೂಡ ಅವರಿಗೆ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಥ್ರಿಲ್ಲಿಂಗ್ ಕಂಟೆಂಟ್ ಇದೆ ಅಂತಲೇ ಹೇಳಲಾಗಿದೆ.





