ಈ ಹಬ್ಬದಲ್ಲಿ ಅತಿಥಿಗಳು ನಿಮ್ಮ ಮನೆಯ ಸೌಂದರ್ಯದ ಬಗ್ಗೆ ಮುಕ್ತವಾಗಿ ಹೊಗಳುವಂತೆ ಅಲಂಕರಿಸಿ.....
ಹಬ್ಬದ ಸೀಸನ್ ಬರುತ್ತಿದ್ದಂತೆ ನಮ್ಮ ಹೃದಯದಲ್ಲಿ ಉತ್ಸಾಹ ಹಾಗೂ ಉಲ್ಲಾಸದ ಅಲೆಯೊಂದು ಹೊರಹೊಮ್ಮಲು ಆರಂಭವಾಗುತ್ತದೆ. ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಪ್ರಾರಂಭವಾಗುತ್ತದೆ. ಮಳೆಗಾಲದ ನಂತರ, ಮನೆಯ ಗೋಡೆಯ ಮಸುಕಾದ ಬಣ್ಣವನ್ನು ಹೋಗಲಾಡಿಸಿ, ಹೊಸ ಬಣ್ಣ ಹಚ್ಚುವ ಮೂಲಕ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಪ್ರಾರಂಭವಾಗುತ್ತದೆ.
ಹೀಗೆ ಮಾಡುವುದರಿಂದ ಮನಸ್ಸಿಗೆ ಒಂದು ರೀತಿಯ ಫ್ರೆಶ್ ನೆಸ್ ದೊರೆತರೆ, ಎರಡನೆಯದಾಗಿ ಮನೆಯ ಪ್ರತಿಯೊಂದು ಮೂಲೆಯನ್ನೂ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ.
ಹಬ್ಬದ ಸಮಯದಲ್ಲಿ ಮನೆಗೆ ಅತಿಥಿಗಳು ಬಂದು ಹೋಗುತ್ತಲೇ ಇರುತ್ತಾರೆ. ಹೀಗಿದ್ದಾಗ ನಿಮ್ಮ ಮನೆಗೆ ಬಿಳಿ ಬಣ್ಣ ಬಳಿದು ಅಲಂಕಾರ ಮಾಡುವುದರಿಂದ ನಿಮ್ಮ ಮನೆಯ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಬಣ್ಣ ಬಳಿದ ನಂತರ, ಮನೆಯ ವಾತಾವರಣ ಬಹಳ ಆಕರ್ಷಕ ಹಾಗೂ ಸುಂದರವಾಗಿ ಕಾಣುತ್ತದೆ. ಮನೆಯನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ. ನೀವು ನಿಮ್ಮ ಮನೆಗೆ ಕ್ಲಾಸಿ ಮತ್ತು ಫ್ರೆಶ್ ಲುಕ್ ನೀಡಲು ಬಯಸಿದರೆ, ಚಿತ್ರಕಲೆಯ ಈ ಪ್ರವೃತ್ತಿಗಳನ್ನು ಆರಿಸಿಕೊಳ್ಳುವ ಮೂಲಕ ನಿಮ್ಮ ಮನೆಯ ಗೋಡೆಗಳಿಗೆ ಇನ್ನಷ್ಟು ಮೆರುಗು ನೀಡಬಹುದು.
ಸಮರ್ಥನೀಯ ಬಣ್ಣಗಳು
ಪರಿಸರದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯಿಂದಾಗಿ ಜೈವಿಕಸ್ನೇಹಿ ಹಾಗೂ ಕಡಿಮೆ ವಿಓಸಿ ಬಣ್ಣಗಳ ಪ್ರವೃತ್ತಿ ಇತ್ತೀಚೆಗೆ ವೇಗವಾಗಿ ಹೆಚ್ಚುತ್ತಾ ಬಂದಿದೆ. ಈ ಬಣ್ಣಗಳ ವಿಶೇಷವೆಂದರ, ಅವು ಇತರ ಬಣ್ಣಗಳಿಗೆ ಹೋಲಿಸಿದರೆ, ಕಡಿಮೆ ವಾಸನೆ ಹೊಂದಿರುತ್ತವೆ. ಇವು ಪರಿಸರಕ್ಕೆ ಹೆಚ್ಚಿನ ಹಾನಿಯನ್ನೇನು ಮಾಡುವುದಿಲ್ಲ ಹಾಗೂ ಹೆಚ್ಚು ಕಾಲ ಬಾಳಿಕೆ ಬರುತ್ತವೆ.
ನೈಸರ್ಗಿಕ ಬಣ್ಣಗಳು
ಈಗೆಲ್ಲಾ ನೈಸರ್ಗಿಕ ಬಣ್ಣಗಳ ಬಳಕೆ ಹೆಚ್ಚುತ್ತಿದೆ. ಉದಾಹರಣೆಗೆ ಮಣ್ಣಿನ ಬಣ್ಣಗಳು, ಹಸಿರು, ನೀಲಿ ಮತ್ತು ತಿಳಿ ಕಂದುಬಣ್ಣಗಳು ಹೆಚ್ಚು ಜನಪ್ರಿಯಾಗುತ್ತಿವೆ. ಈ ಬಣ್ಣಗಳು ಮನೆಯಲ್ಲಿ ಶಾಂತ ಮತ್ತು ಪ್ರಕೃತಿಗೆ ಹತ್ತಿರವಾದ ವಾತಾವರಣವನ್ನು ಸೃಷ್ಟಿಸುತ್ತವೆ. ವಿಶೇಷವಾಗಿ ಮನೆಯ ಹೊರಗಿನ ಗೋಡೆಗಳಿಗೆ ಇವು ಅತ್ಯುತ್ತಮ ಎಂದು ಪರಿಗಣಿಸಬಹುದು. ಗಾಢ ಬಣ್ಣಗಳು ಇತ್ತೀಚೆಗೆ ತಿಳಿ ಬಣ್ಣಗಳ ಜೊತೆ ಗಾಢ ಬಣ್ಣಗಳ ಬಳಕೆಯೂ ಸಹ ಟ್ರೆಂಡಿಂಗ್ ಆಗಿದೆ. ಗೋಡೆಯ ಒಂದು ಭಾಗವನ್ನು ಗಾಢ ಬಣ್ಣದಲ್ಲಿ ಚಿತ್ರಿಸಿದಂತೆ ಅಥವಾ ಪೀಠೋಪಕರಣಗಳನ್ನು ಪ್ರಕಾಶಮಾನವಾದ ಬಣ್ಣಗಳಿಂದ ಅಲಂಕರಿಸಿದಂತೆ. ಈ ಸಂಯೋಜನೆಯಿಂದ ಸೃಷ್ಟಿಯಾದ ವ್ಯತಿರಿಕ್ತತೆಯ ಹೋಲಿಕೆ ಮೀರಿದ್ದು. ಇದು ಎಷ್ಟು ಆಕರ್ಷಕವಾಗಿ ಇರುತ್ತದೆ ಎಂದರೆ, ನೋಡಿದವರು ಇದರಿಂದ ಪ್ರಭಾವಿತರಾಗದೇ ಇರಲು ಸಾಧ್ಯವೇ ಇಲ್ಲ.
ಮೆಟಾಲಿಕ್ ಫಿನಿಶ್
ಮನೆಗೆ ಆಕರ್ಷಕ ಮತ್ತು ಆಧುನಿಕ ಸ್ಪರ್ಶ ನೀಡಲು ಮೆಟಾಲಿಕ್ ಬಣ್ಣಗಳನ್ನು ಬಳಸಲಾಗುತ್ತದೆ. ಚಿನ್ನ, ಕಂಚು ಹಾಗೂ ಬೆಳ್ಳಿಯಂತಹ ಮೆಟಾಲಿಕ್ ಬಣ್ಣಗಳನ್ನು ವಿಶೇಷವಾಗಿ ಲಿವಿಂಗ್ ರೂಮ್ ಹಾಗೂ ಡೈನಿಂಗ್ ರೂಮ್ ಗಳಿಗೆ ಬಳಸಲಾಗುತ್ತದೆ.
ಟೆಕ್ಸ್ ಚರ್ ಪೇಂಟ್
ಗೋಡೆಗಳಿಗೆ ವಿನ್ಯಾಸ ನೀಡಲು ಟೆಕ್ಸ್ ಚರ್ ಬಣ್ಣಗಳನ್ನು ಬಳಸುವ ಪ್ರವೃತ್ತಿಯೂ ಹೆಚ್ಚಾಗಿದೆ. ಇವು ಮನೆಯ ಗೋಡೆಗಳಿಗೆ ವಿಶೇಷ ಮೆರುಗು ನೀಡುತ್ತವೆ ಹಾಗೂ ಸರಳವಾದ ಕೋಣೆಯನ್ನು ಸಹ ಆಕರ್ಷಣೀಯವಾಗಿ ಮಾಡುತ್ತವೆ. ಅವುಗಳ ಒಂದು ಅನುಕೂಲವೆಂದರೆ, ಅವು ಗೋಡೆಗಳ ಸಣ್ಣಪುಟ್ಟ ಕೊರತೆಗಳನ್ನೂ ಸಹ ಮರೆ ಮಾಡುತ್ತವೆ. ಇದು ಕೋಣೆಗೆ ಒಂದು ಲುಕ್ ನೀಡುತ್ತದೆ. ನೀವು ಕೋಣೆಯ ಒಂದು ಗೋಡೆಯನ್ನು ಕೇಂದ್ರಬಿಂದುವನ್ನಾಗಿ ಮಾಡಲು ಬಯಸಿದರೆ, ನಿಮ್ಮ ಆಯ್ಕೆಯ ಟೆಕ್ಸ್ ಚರ್ ನ್ನು ನೀವು ಸೇರಿಸಿಕೊಳ್ಳಬಹುದು.





