ಸ್ಮೂಥ್ ನಿಟ್ಟಿಂಗ್ ಮಾಡಬಯಸಿದರೆ, ಅಗತ್ಯ ಈ ಟಿಪ್ಸ್ ಅನುಸರಿಸಿ......!
ಚಳಿಗಾಲ ಅಡಿಯಿಡುತ್ತಿದ್ದಂತೆ ಮಾರುಕಟ್ಟೆ ತುಂಬಾ ಉಣ್ಣೆ ವಸ್ತ್ರಗಳ ರಾಶಿ ಕಾಣಿಸುತ್ತದೆ. ಗ್ರಾಹಕರು ಮುಗಿಬಿದ್ದು ಇವನ್ನು ಕೊಳ್ಳುತ್ತಿರುತ್ತಾರೆ. ಇದೇನೇ ವಾಣಿಜ್ಯ ಯಹಾರ ಇರಲಿ, ನಮ್ಮ ಕುಟುಂಬದ ಸದಸ್ಯರಿಗಾಗಿ ನಾೀ ಪ್ರೀತಿಯಿಂದ ಸ್ವೆಟರ್‌ಹೆಣೆಯುವುದರಲ್ಲಿ ಇರುವ ಕಾಳಜಿ, ಯಾಂತ್ರಿಕ ಉತ್ಪನ್ನಗಳಲ್ಲಿ ಇರುವುದಿಲ್ಲ. ಮನೆಯವರಿಗಾಗಿ ನಾವು ಹೆಣೆಯುವ ಇಂಥವುಗಳ ಹಿಂದಿನ ಪ್ರೀತಿ ವಾತ್ಸಲ್ಯವನ್ನು ಧರಿಸಿಯೇ ಸವಿಯಬೇಕು.
ಹೀಗೆ ಹೆಣಿಗೆಯಲ್ಲಿ ಪರಿಣಿತರಾದ ಹೆಂಗಸರು, ಮಾರುಕಟ್ಟೆಯ ಉಣ್ಣೆ ವಸ್ತ್ರಗಳನ್ನು ತಮ್ಮ ಮನೆಯವರಿಗಾಗಿ ಎಂದೂ ಬಯಸುವುದಿಲ್ಲ. ಅಂಗಡಿಗಳಲ್ಲಿನ ದುಬಾರಿ ಯಾಂತ್ರಿಕ ಉತ್ಪನ್ನ ಕೊಳ್ಳುವುದಕ್ಕಿಂತ, ಹೆಂಗಸರು ಬಿಡುವಿನ ವೇಳೆಯಲ್ಲಿ ಮನೆಯವರಿಗಾಗಿ ಕೈಗಳಿಂದಲೇ (ಹೆಚ್ಚಾದಾಗ ಯಂತ್ರ ಬಳಕೆಯೂ ಸಹ) ಹೆಣೆದ ಈ ವಸ್ತ್ರಗಳ ಬೆಚ್ಚನೆಯ ಅನುಭವ ಅತಿ ವಿಶಿಷ್ಟಪೂರ್ಣ.
ಸಮರ್ಪಕ ನಿಟ್ಟಿಂಗ್ ಯಾರ್ನ್: ಹೆಣಿಗೆಯ ವಿಷಯ ಬಂದ ತಕ್ಷಣ, ಮೊತ್ತ ಮೊದಲಿಗೆ ಹೊಳೆಯುವುದು ಎಂದರೆ, ಉತ್ತಮ ಗುಣಮಟ್ಟದ ಉಲ್ಲನ್ ಬಳಕೆ. ನಿಟ್ಟಿಂಗ್ ಯಾರ್ನ್ ಉತ್ತಮ ಅಲ್ಲದಿದ್ದರೆ, ಡ್ರೆಸ್ ರೆಡಿ ಆಗುವಷ್ಟರಲ್ಲಿ ನಮಗೆ ಸಾಕಷ್ಟು ಕೆಟ್ಟ ರಿಸಲ್ಟ್ ಎದುರಾಗುತ್ತವೆ. ಇದರಿಂದ ನಮ್ಮ ಹಲವು ತಿಂಗಳ ಶ್ರಮ ವ್ಯರ್ಥವಾಗುತ್ತದೆ. ಅಂದ್ರೆ ಮುಂದೆ ವುಲ್ಲನ್ ಕಲರ್ ಫೇಡ್ ಆಗುವುದು, ಹೆಣೆದ ಸ್ವೆಟರ್ ನಿಂದ ಎಳೆ ಎಳೆಯಾಗಿ ಯಾರ್ನ್ ಕಿತ್ತುಬರುವುದು, ಒಟ್ಟಾರೆ ಆಕಾರ ಕೆಡುವುದು.... ಇತ್ಯಾದಿ.
ಹೀಗಾಗಿ ನಾವು ನಿಟ್ಟಿಂಗ್ ಯಾರ್ನ್ ನ್ನು ಬಲು ಎಚ್ಚರಿಕೆಯಿಂದ ಆರಿಸಬೇಕು. ನಾವು ಕೊಳ್ಳುವ ವುಲ್ಲನ್ ಲಡಿ, ಅಗ್ಗ ಎಂದು ಯಾವುದೋ ಲೋಕಲ್ ಗೆ ಮಾರುಹೋಗಬಾರದು, ಸದಾ ಬ್ರಾಂಡೆಡ್ ವುಲ್ಲನ್ ನ್ನು ನಂಬಿಕಸ್ಥ ಅಂಗಡಿಯಲ್ಲೇ ಕೊಳ್ಳಬೇಕು. ನಕಲಿ ಲೇಬಲ್ ಇರುವಂಥ ಲೋಕಲ್ ವುಲ್ಲನ್ ಸಹ ಬ್ರಾಂಡೆಡ್ ತರಹವೇ ಮೋಸಗೊಳಿಸುತ್ತದೆ, ಎಚ್ಚರ!
ಇತ್ತೀಚೆಗೆ ವರ್ಧಮಾನ್, ಓಸ್ವಾಲಾ, ಗಂಗಾ ಕಂಪನಿಗಳ ನಿಟ್ಟಿಂಗ್ ಯಾರ್ನ್ ಬಲು ಸುಂದರ ಬಣ್ಣಗಳಲ್ಲಿ, ವೈವಿಧ್ಯಮಯ ರೀತಿಗಳಲ್ಲಿ ಲಭ್ಯ. ನೀವು ಇಷ್ಟೆಲ್ಲ ಕಾಳಜಿವಹಿಸಿ, ಬೆನ್ನು ನೋಯಿಸಿಕೊಂಡು ನಿಮ್ಮವರಿಗಾಗಿ ಒಂದೊಂದೇ ಪರ್ಲ್/ನಿಟ್‌ಹೆಣೆಯುತ್ತಿರುವಾಗ, ಅಂದದ ಡಿಸೈನ್ ಬರಲಿ ಎಂದು ನಿರೀಕ್ಷಿಸುವಾಗ, ಯಾರ್ನ್ ಕ್ವಾಲಿಟಿ ಉತ್ತಮ ಆಗಿರುವಂಥದ್ದನ್ನೇ ಆರಿಸಿ! ಹೆಣಿಗೆ ಮುಗಿಸಿದ ನಂತರ ನೀವು ಬಯಸಿದ ಉತ್ತಮ ಪರಿಣಾಮ ಬರದಿದ್ದರೆ, ಬಲು ಬೇಸರವಾಗುತ್ತದೆ.
ಉತ್ತಮ ಬಣ್ಣಗಳ ಸಂಯೋಜನೆ : ಸಮರ್ಪಕ ನಿಟ್ಟಿಂಗ್ ಯಾರ್ನ್ ನ ಆಯ್ಕೆಯೊಂದಿಗೆ ಉತ್ಕೃಷ್ಟ ಬಣ್ಣಗಳ ಸಂಯೋಜನೆಯೂ ಅತಿ ಮುಖ್ಯ, ಇದಕ್ಕಾಗಿ ಸೂಕ್ತ ತಿಳಿವಳಿಕೆ ಅಗತ್ಯ. ಉತ್ತಮ ಗುಣಮಟ್ಟದ ಬ್ರಾಂಡೆಡ್ ನಿಟ್ಟಿಂಗ್ ಯಾರ್ನ್ ನ ಕಲರ್ ಬಲು ಉತ್ಕೃಷ್ಟ ಹಾಗೂ ಯೂನಿಕ್ ಆಗಿರುತ್ತದೆ. ಲೋಕಲ್ ಲೆವೆಲ್ ನಲ್ಲಿ ಈ ಗುಣಮಟ್ಟ ಅಸಾಧ್ಯ.
ಸಣ್ಣ ಮಕ್ಕಳಿಗಾಗಿ ಬೇಬಿ ಪಿಂಕ್, ಪಿಸ್ತಾ ಗ್ರೀನ್, ಬಾದಾಮಿ ಕ್ರೀಂ, ಲೈಟ್ ಶೇಡ್ಸ್ ಬಲು ಚೆನ್ನಾಗಿ ಒಪ್ಪುತ್ತವೆ. ದೊಡ್ಡ ಮಕ್ಕಳು, ಕಾಲೇಜು ಕಿಶೋರರಿಗಾಗಿ ರಾಯಲ್ ಬ್ಲೂ, ಹಳದಿ, ರೆಡ್, ಡಾರ್ಕ್ ಗ್ರೀನ್, ಬದನೆ, ಬ್ಲ್ಯಾಕ್ ಇತ್ಯಾದಿ ಚೆನ್ನಾಗಿರುತ್ತದೆ. ವೃದ್ಧರಿಗಾಗಿ ಬಾದಾಮಿ ಗ್ರೇ, ತೆಳು ನೀಲಿ, ಮೆರೂನ್, ಲೈಟ್ ಶೇಡ್ಸ್ ಹೆಚ್ಚು ಒಪ್ಪುತ್ತವೆ.





