ಈಗ ಎಲ್ಲರ ಬಾಯಿಯಲ್ಲೂ ಒಂದೇ ಮಾತು, ಟಿಕೆಟ್ ಸಿಕ್ತಾ? ರಾಜಕಾರಣಿಗೆ ಚುನಾವಣೆಯಲ್ಲಿ ಸ್ಪರ್ಥಿಸಲು ಟಿಕೆಟ್ ಚಿಂತೆಯಾದರೆ, ಕ್ರಿಕೆಟ್ ಪ್ರೇಮಿಗಳಿಗೆ, IPL ಟಿಕೆಟ್ ಚಿಂತೆ. ಕರೋನ ಮಹಾಮಾರಿ ಎಲ್ಲವೂ ಕಳೆದು, ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಮತ್ತು ರೋಚಕ ಸೆಣಸಾಟದ ಇಂಡಿಯನ್ ಪ್ರೀಮಿಯಂ ಲೀಗ್ ಈ ಬಾರೀ ಆಯಾಯಾ ತಂಡದ ತವರು ಮೈದಾನಗಳಲ್ಲಿಯೇ ಮಾರ್ಚ್ ನಿಂದ ಮೇ ವರೆಗೂ ಸುಮಾರು ಒಂದೂವರೆ ತಿಂಗಳಗಳ ಕಾಲ ಐಪಿಎಲ್ ಜ್ವರ ದೇಶದ್ಯಂತ ಶುರುವಾಗಿದೆ.

ಪ್ರತೀ ಬಾರಿ ಈ ಸಮಯದಲ್ಲಿ ಪಂದ್ಯಗಳ ಟಿಕೆಟ್ ಸಿಕ್ಕವರು ಹೆಮ್ಮೆಯಿಂದ ಬೀಗುತ್ತಿದ್ದರೆಟಿಕೆಟ್ ಸಿಗದಿದ್ದವರು ಟಿಕೆಟ್ ಗಳಿಗಾಗಿ ಪರೆದಾಡುತ್ತಿದ್ದ ಪರಿ ಕಣ್ಣ ಮುಂದೆ ಬರುತ್ತಿದೆ. ಇದೇ ರೀತಿಯಾಗಿ ಟಿಕೆಟ್ಗಾಗಿ‌ ಪರದಾಡಿ ಸಿಕ್ಕ ಟಿಕೆಟ್ ಕೈ ತಪ್ಪಿ ಹೋಗಿ ಮತ್ತೆ ಫೀನಿಕ್ಸ್ ನಂತೆ ಸಿಕ್ಕಿ, ಮತ್ತೆ ಗೋಜಲಿಗೆ ಸಿಕ್ಕಿಕೊಂಡ ನಮ್ಮ ರೋಚಕತೆಯೇ ಇಂದಿನ ಕಥಾವಸ್ತು.

ಐದು ವರ್ಷದ ಹಿಂದೆ ಅಂದರೆ ಏಪ್ರಿಲ್ 25, 2018 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಮತ್ತು CSK ತಂಡಗಳ ನಡುವಿನ ಪಂದ್ಯ ರಾತ್ರಿ 8.00 ಘಂಟೆಗೆ ನಿಗಧಿಯಾಗಿತ್ತು. ಕರ್ನಾಟಕ ಮತ್ತು ತಮಿಳುನಾಡು ಪಂದ್ಯವೆಂದರೆ, ಭಾರತ ಮತ್ತು ಪಾಕೀಸ್ಥಾನಗಳ ನಡುವಿನ ಸಾಂಪ್ರದಾಯಕ ಎದುರಾಳಿಗಳ ಹಾಗೆ ಕಾದಾಡುವ ಹಾಗೆ ಎಂಬುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿ. ಕರ್ನಾಟಕ ಮತ್ತು ತಮಿಳುನಾಡಿನ ಯಾವುದೇ ಆಟಗಾರರು ತಂಡದಲ್ಲಿ ಇಲ್ಲದಿದ್ದರೂ ಬೆಂಗಳೂರು ಮತ್ತು ಚೆನ್ನೈ ಎಂಬ ಹೆಸರಿನಿಂದಲೇ ಜಿದ್ದಾ ಜಿದ್ದಿಯ ಪಂದ್ಯಗಳು ನಡೆಯುತ್ತವೆ. ಪಂದ್ಯದ ದಿನದ ವರೆಗೂ ಎಷ್ಟೇ ಪ್ರಯತ್ನಿಸಿದರೂ ನಮಗೆ ಟಿಕೆಟ್ ಸಿಕ್ಕಿರಲಿಲ್ಲ. ಬ್ಲಾಕ್ ಟಿಕೆಟ್ ಮೊತ್ತ ತುಂಬಾ ಹೆಚ್ಚಾಗಿದ್ದರಿಂದ ಕೊಳ್ಳಲು ಮನಸ್ಸಾಗಿರಲಿಲ್ಲ. ಕೆಲವೊಂದು ಸ್ನೇಹಿತರಿಗೆ ಹೇಳಿ ಕಡೆಯ ಕ್ಷಣದವರೆಗೂ ಜಾತಕ ಪಕ್ಷಿಯಂತೆ ಕಾಯುವುದು. ಸಿಕ್ಕರೆ ಮೈದಾನದಲ್ಲಿ ಪಂದ್ಯ ಇಲ್ಲದಿದ್ದರೆ ಹೇಗೂ ಮನೆಯಲ್ಲಿಯೇ ಎಲ್ಲರೊಟ್ಟಿಗೆ ಟಿವಿಯಲ್ಲೇ ವೀಕ್ಷಿಸುವುದೆಂದು ತೀರ್ಮಾನಕ್ಕೆ ಬಂದಿದ್ದೆವು.

ನಮ್ಮ ಮನೆಯಲ್ಲಿ ಮೊದಲ ಪ್ರಾಶಸ್ತ್ಯ ಕನ್ನಡ ಭಾಷೆಗಾದರೆ ಎರಡನೇ ಪ್ರಾಶಸ್ತ್ಯ ಕ್ರಿಕೆಟ್ ಆಟಕ್ಕೆ. ಮನೆಯಲ್ಲಿ ಎಲ್ಲರೂ ಕ್ರಿಕೆಟ್ ಪ್ರೇಮಿಗಳೇ. ಅಗಲಿದ ನಮ್ಮ ತಂದೆ ತಾಯಿ ನಾನು ನನ್ನ ಮಡದಿ ಮತ್ತು ನನ್ನ ಮಗ RCB ಆಭಿಮಾನಿಗಳಾದರೆ ನನ್ನ ಮಗಳು ದೋನಿ ಮತ್ತು ಸುರೇಶ್ ರೈನಾರ ಆಭಿಮಾನದ ಕುರುಹಾಗಿ CSK ತಂಡದ ಪರಮ ಆಭಿಮಾನಿ. RCB ಮತ್ತು CSK ತಂಡಗಳ ನಡುವಿನ ಪಂದ್ಯವೆಂದರೆ ನಮ್ಮ ಮನೆಯಲ್ಲಿ ಅಕ್ಷರಶಃ ಜಿದ್ದಾ ಜಿದ್ದಿ ಕಾದಾಟ. ಈ ನಾಲ್ಕೂ ಜನರನ್ನು ಎದಿರು ಹಾಕಿಕೊಂಡು ಸಮರ್ಥವಾಗಿಯೇ CSK ತಂಡವನ್ನು ಸಂಭಾಳಿಸುವಷ್ಟು ಗಟ್ಟಿಗಿತ್ತಿ ನನ್ನ ಮಗಳು. ಸಂಜೆ ಐದು ಗಂಟೆಯವರೆಗೂ ಟಿಕೆಟ್ ಸಿಗುವ ಲಕ್ಷಣ ಕಾಣಲಿಲ್ಲವಾದ್ದರಿಂದ ಮನೆಯಲ್ಲಿಯೇ ಕುಳಿತು ಪಂದ್ಯವನ್ನು ವೀಕ್ಷಿಸಲು ಮಾನಸಿಕವಾಗಿ ಸಿದ್ಧರಾಗಿದ್ದೆವು. ಸಂಜೆ ಸುಮಾರು ಆರು ಗಂಟೆಗೆ ನಮ್ಮ ಸ್ನೇಹಿತ ಸುಧಾಕರ್ ಕರೆ ಮಾಡಿ ಸರ್ ಶಾಸಕರ ಕೋಟಾದ ಅಡಿಯಲ್ಲಿ ಎರಡು ವಿವಿಐಪಿ ಪಾಸ್ ಸಿಕ್ಕಿದೆ. ಮಾಮೂಲಿ ಹೈಕೋರ್ಟ್ ಬಳಿ ಬನ್ನಿ ಪಾಸ್ ಕೊಡ್ತೀನಿ ಅಂದಾಗ ಒಂದು ಕಡೆ ಖುಷಿ. ಮತ್ತೊಂದು ಕಡೆ ಬೇಸರ. . ನಾವು ನಾಲ್ಕು ಟಿಕೆಟ್ ಕೇಳಿದ್ದೆವು. ಈಗ ಸಿಕ್ಕಿರುವುದು ಕೇವಲ ಎರಡು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತೆ, ಈಗ ಆ ಎರಡು ಟಿಕೆಟ್ಟಿನಲ್ಲಿ ಹೋಗುಔರು ಯಾರು? ನಾನಂತೂ ಖಾಯಂ. ಮಗಳೋ ಇಲ್ಲವೇ ಮಗನನ್ನೋ ಕರೆದುಕೊಂಡು ಹೋಗ ಬೇಕು. ಹೇಳಿ ಕೇಳಿ ಇದು RCB ಮತ್ತು CSK ನಡುವಿನ ಪಂದ್ಯ. CSK ಮಗಳ ಅಚ್ಚು ಮೆಚ್ಚಿನ ತಂಡ. ಮಗಳನ್ನೇ ಕರೆದು ಕೊಂಡು ಹೋಗೋಣ. ಮಗನನ್ನು ಮುಂದೆ ಯಾವುದಾದರೂ RCB ಪಂದ್ಯಕ್ಕೆ ಕರೆದು ಕೊಂಡು ಹೋದರೆ ಆಯ್ತು ಎಂದು ನಿರ್ಧರಿಸಿ ಮಗಳಿಗೆ ಸಿದ್ಧವಾಗಲು ಹೇಳಿದರೆ, ಮಗ ಉಪ್ ಎಂದು ಮುಖ ಊದಿಸಿಕೊಂಡು ಮೂಲೆ ಸೇರಿದ. ಸರಿ ನಾನಾಗಲೇ ಕಛೇರಿಯಿಂದ ಸ್ನೇಹಿತರ ಜೊತೆ ಬೆಂಗಳೂರು ಮತ್ತು ಡೆಲ್ಲಿ ಪಂದ್ಯವನ್ನು ನೋಡಿದ್ದರಿಂದ, ಅಮ್ಮಾ-ಮಗಳು, ಅಮ್ಮಾ-ಮಗ, ಇಲ್ಲವೇ ಅಕ್ಕ-ತಮ್ಮಾ ಹೋಗಿ ಎಂದು ಹೇಳಿದರೆ ಅಷ್ಟು ಹೊತ್ತಿನಲ್ಲಿ ಹೆಣ್ಣು ಮಕ್ಕಳನ್ನಾಗಲೀ ಇಲ್ಲವೇ ಕೇವಲ ಮಕ್ಕಳನ್ನಾಗಲೀ ಕಳುಹಿಸುವುದು ಸರಿ ಅಲ್ಲ ಎಂಬ ವಾದ. ಕಡೆಗೆ ಅತ್ತೂ ಕರೆದು ಮಗಳು ಮನೆಯಲ್ಲಿಯೇ ನೋಡುತ್ತೇನೆಂದು ತಮ್ಮನಿಗಾಗಿ ಟಿಕೆಟ್ ತ್ಯಾಗ ಮಾಡಿದಾಗ, ನನ್ನ ಮಗನ ಮುಖ ಪಾಪ್ ಕಾರ್ನ್ ಅರಳುವಂತೆ ಅರಳಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ