ಮದುವೆಗಳ ಸೀಸನ್ ಬಂತೆದರೆ ಕಪಾಟು ತುಂಬಾ ಬಟ್ಟೆಗಳಿದ್ದರೂ , ಒಮ್ಮೆ ಧರಿಸಿದ್ದು ಅನ್ನಿಸುವ ಭಾವನೆಯಂತೂ ಇದ್ದೆ ಇರುತ್ತದೆ. ಒಂದು ಬಾರಿ ಧರಿಸಿದ ಬಟ್ಟೆ ಮತ್ತೊಮ್ಮೆ ಧರಿಸಲು ಇಷ್ಟ ಪಡದ ಟ್ರೆಂಡ್ ಇಂದು ಅಂದರೆ ತಪ್ಪಿಲ್ಲ !
ಎಲ್ಲರಿಗಿಂತ ಆಕರ್ಷಕವಾಗಿ ಕಾಣಬೇಕು . ಯಾವ ಬಟ್ಟೆ ಧರಿಸಿದರೆ ಸುಂದರವಾಗಿ ಕಾಣಬಹುದು ಮತ್ತು ಸೆಳೆಯಬಹುದು ಎನ್ನುವ ಮನೋಭಾವನೆ ಎಲ್ಲ ಗೃಹಿಣಿಯರ ಮನದ ಮಾತು. ಅದಕ್ಕೆ ಏನು ಮಾಡಬೇಕು, ಧರಿಸುವ ವಸ್ತ್ರಗಳು ಆಧುನಿಕ ಸೌಂದರ್ಯದ ಮಿಶ್ರಣದ ಜೊತೆಗೆ ರಾಯಲ್ ಲುಕ್ ಕೊಡುವಂತಹ ವಸ್ತ್ರಗಳು ಮತ್ತಷ್ಟು ಆಕರ್ಷಕವೆನಿಸುತ್ತದೆ. ಮೃದುವೆನಿಸುವ ವಿನ್ಯಾಸ ಮತ್ತು ಐಷಾರಾಮಿ ಶೀನ್‌ಗೆ ಹೆಸರುವಾಸಿಯಾದ ಮತ್ತು ಟ್ರೆಂಡ್ ನಲ್ಲಿ ಇರುವ ಮೈಸೂರು ಸಿಲ್ಕ್ ಸೀರೆಗಳು, ಝರಿಯೊಂದಿಗೆ ಕ್ರೆಪ್ ಸಿಲ್ಕ್ ಸೀರೆಗಳು ಹೆಚ್ಚಾಗಿ ಗಮನಸೆಳೆಯುತ್ತಿದೆ. ಸೀರೆಗೆ ಹೊಂದುವ ಬ್ಲೌಸ್ಗಳ ಡಿಸೈನ್ ಗು ಹೆಚ್ಚಿನ ಮಹತ್ವವಿದೆ. ಕಸೂತಿ ಕೆಲಸ, ಎಂಬ್ರಾಯ್ಡರಿ ಮಿಷನ್ ವರ್ಕಗಳ ಕಸೂತಿ ಇಂದು ಹೆಚ್ಚು ಟ್ರೆಂಡ್ ಆಗಿದೆ. ವಿವಿಧ ರೀತಿಯ ಕಲಾಕೃತಿಗಳು ಮತ್ತು ಸ್ಟೋನ್ ವರ್ಕ್ ಗಳ ರೋಮಾಂಚನ ಲುಕ್ ನೀಡುತ್ತದೆ. ಜೊತೆಗೆ ಇಳಕಲ್ ಸೀರೆಗಳು ಝರಿಯೊಂದಿಗೆ ಶುದ್ಧಕ್ರೆಪ್ ಸಿಲ್ಕ್ ಕೂಡ ಮೆರುಗು ನೀಡುತ್ತದೆ.ವಿಶಾಲವಾದ ಅಂಚುಗಳು, ವರ್ಕ್ ಇರುವ ಸೀರೆಗಳು ಇಂದು ಹೆಚ್ಚು ಟ್ರೆಂಡಿಯಾಗಿದೆ.

ಮದುವೆ ಮತ್ತು ಸಾಂಪ್ರದಾಯಕ ಸಮಾರಂಭಗಳಿಗೆ ಸಂಪ್ರದಾಯಿಕವಾಗಿ ಅಂದ ಹೆಚ್ಚಿಸುವ ಬಾರ್ಡರ್ ಲಂಗಾ ದವನಿ (ಅರ್ಧ ಸೀರೆಗಳು) ಮತ್ತು ನೆಟೆಡ್ ಅಥವಾ ಸಿಲ್ಕ್ ಲೆಹೆಂಗಾ ಶೈಲಿಯ ಅರ್ಧ ಸೀರೆಗಳು ಹೆಚ್ಚು ಪ್ರಾಬಲ್ಯ ಹೊಂದಿವೆ. ಕೊಡಗು ಶೈಲಿಯಂತೆ , ಹಿಂಬದಿಯಲ್ಲಿ ನೆರಿಗೆಗಳ ಇರುವಂತಹ ಸಾಂಪ್ರದಾಯಿಕ ಸೀರೆಯು ಒಂದು ವಿಶಿಷ್ಟವಾದ, ಟ್ರೆಂಡಿಂಗ್ ಶೈಲಿಯಾಗಿದೆ. ಲೆಹೆಂಗಾ-ಕುರ್ತಿ ಸೆಟ್‌ಗಳು, ಇಂಡೋ-ವೆಸ್ಟರ್ನ್ ಮತ್ತು ಸ್ಟೈಲಿಶ್ ಎಥ್ನಿಕ್ ಗೌನ್‌ಗಳು ವಿಶೇಷವಾಗಿ ಟ್ರೆಂಡಿಂಗ್ ಆಗಿವೆ. ಸರಿ ಹೊಂದುವ ಆಭರಣಗಳ ಆಯ್ಕೆ ಯು ಮತ್ತಷ್ಟು ಅಂಧ ಕೊಡುತ್ತದೆ. ಗೊಂಚಲು ಕಿವಿಯೋಲೆಗಳು, ಚಿನ್ನದ ಜುಮ್ಕಾಗಳು, ಮುತ್ತಿನ ಮತ್ತು ಚಿನ್ನದ ಸೆಟ್‌ಗಳು ಬಾರ್ಡರ್ ಸೀರೆಗಳಿಗೆ ಒಪ್ಪುತ್ತದೆ. ಚಿನ್ನದ ಲೇಪಿತ, ದೇವಿಯ ಲಕ್ಷಣಗಳಿರುವ ಆಭರಣಗಳ ಸಂಕೀರ್ಣ ವಿನ್ಯಾಸಗಳು, ಸಾಂಪ್ರದಾಯಿಕ ಟಚ್ ಕೊಡುತ್ತದೆ. ಪುರಾತನ ಚಿನ್ನದ ಸೆಟ್‌ಗಳು, ಮ್ಯಾಟ್-ಫಿನಿಶ್ ನೆಕ್ಲೇಸ್‌ಗಳೊಂದಿಗೆ ರೇಷ್ಮೆ ಸೀರೆಗಳು ಹಾಗು ಮೈಸೂರು ಸಿಲ್ಕ್ಸ್ ಸೀರೆಗಳಿಗೆ ಪರಿಪೂರ್ಣ ವಿಶೇಷವಾದ ಮೆರುಗು ನೀಡುತ್ತದೆ. .ಸೊಂಟಕ್ಕೆ ಧರಿಸುವ 'ಡಾಬು ' ಗಳು ಸಂಪ್ರದಾಯ ಬಿಂಬಿಸುವ ಚಿತ್ರಣಗಳ ಆಯ್ಕೆ ರೇಷ್ಮೆ ಹಾಗೂ ಸಿಲ್ಕ್ ಸೀರೆಗಳಿಗೆ ಒಪ್ಪುತ್ತದೆ ಮತ್ತು ಹೇರ್ ಸ್ಟೈಲ್ ಕೂಡ ಅಂದವನ್ನು ಹೆಚ್ಚಿಸುವಲ್ಲಿ ಮುಖ್ಯವಾಗಿದೆ.
ವಾಣಿ ಮೈಸೂರು





