ವಿಶ್ವಸಂಸ್ಥೆಯ ಒಂದು ಅಂತಾರಾಷ್ಟ್ರೀಯ ಅಂಗಸಂಸ್ಥೆಯ ಅಧ್ಯಕ್ಷರ ಸ್ಥಾನಕ್ಕಾಗಿ ಸೂಕ್ತ ಅಭ್ಯರ್ಥಿಯ ಆಯ್ಕೆ ನಡೆಯುತ್ತಿತ್ತು :
ಪ್ರಶ್ನೆ : 5ರ ನಡುವೆ 4ನ್ನು ಬರೆದು ತೋರಿಸಿ.
ಚೀನಾದನು : ಇದೆಂಥ ಕೆಟ್ಟ ಜೋಕ್!
ಜಪಾನೀಯ : ಇದಂತೂ ಸಾಧ್ಯವೇ ಇಲ್ಲ.
ಅಮೇರಿಕನ್ : ಈ ಪ್ರಶ್ನೆಯೇ ತಪ್ಪು!
ಬ್ರಿಟಿಷ್ : ದಿಸ್ ಈಸ್ ನಾನ್ ಸೆನ್ಸ್!
ಭಾರತೀಯ : FIVE (IV) ಅಷ್ಟಲ್ಲದೆ ಈಗೆಲ್ಲ ಭಾರತೀಯರು ಪರದೇಶಗಳ ಪ್ರಧಾನಿ ಮತ್ತಿತರ ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆಯೇ?
ಅಮೆರಿಕನ್ : ಛೇ…ಛೇ! ನೀವು ಭಾರತೀಯರೆಲ್ಲ ಬೇರೆ ಬೇರೆ ಬಣ್ಣದಲ್ಲಿದ್ದೀರಿ. ಅದೇ ನಮ್ಮನ್ನು ನೋಡಿ, ಹೇಗೆ ಬೆಳ್ಳಗೆ ಹೊಳೆ ಹೊಳೆಯುತ್ತಿದ್ದೇವೆ?
ಭಾರತೀಯ : ಕುದುರೆಗಳೂ ವಿವಿಧ ಬಣ್ಣಗಳಲ್ಲಿ ಬರುತ್ತವೆ, ಆದರೆ ಕತ್ತೆಗಳು ಮಾತ್ರ ಒಂದೇ ಬಣ್ಣದಲ್ಲಿರುತ್ತವೆ!
ಟೀಚರ್ : ರಾತ್ರಿ ಹೊತ್ತು ಸೊಳ್ಳೆ ಕಚ್ಚಿದರೆ ಏನು ಮಾಡುವುದು?
ಗುಂಡ : ನಿದ್ದೆಯಿಂದ ಎದ್ದು ಅದನ್ನು ಬಡಿದುಹಾಕಿ ಮತ್ತೆ ಮಲಗೋದು. ಅದಕ್ಕಿಂತ ಇನ್ನೇನು ಮಾಡಲಾದೀತು? ಅದನ್ನು ಎಡಗೈಲಿ ಹಿಡಿದು ಹಾಡು ಹೇಳಿಸಲು ನಾವೇನು ರಜನೀಕಾಂತಾ…..?
ಗಿರೀಶ್ : ಈ ಲಾಕ್ ಡೌನ್ ನಲ್ಲಿ ಮನೆಯಲ್ಲಿ ಕುಳಿತು WFH ಮಾಡಿ ಮಾಡಿ ಸಾಕಾಗಿದೆ. ಏನು ಮಾಡಿದ್ರೂ ಟೈಂ ಪಾಸ್ ಆಗ್ತಾ ಇಲ್ಲ!
ಸತೀಶ್ : ಹೌದಾ, ಹಾಗಾದರೆ ನಿನ್ನ ಮದುವೆಯ ವಿಡಿಯೋ ಕ್ಯಾಸೆಟ್ ಅಥವಾ ಸಿಡಿ ಹಾಕಿಕೊಂಡು ನೋಡು…. ಹಿಂದೆ ಮಾಡಿದ ತಪ್ಪುಗಳೆಲ್ಲ ರೀವೈಂಡ್ ಆಗಿ ಮುಂದೆ ಚಾನ್ಸ್ ಸಿಕ್ಕಿದಾಗ, ಅಂಥ ತಪ್ಪು ರಿಪೀಟ್ ಆಗೋದಿಲ್ಲ!
ಒಮ್ಮೆ ಬ್ಯಾಂಕ್ ಮ್ಯಾನೇಜರ್ ಒಬ್ಬ ತನ್ನ ಕುಟುಂಬದೊಂದಿಗೆ ಊಟಕ್ಕಾಗಿ ಹೋಟೆಲಿಗೆ ಹೋಗಿದ್ದ.
ಮ್ಯಾನೇಜರ್ : ಏನ್ರಿ…. ಊಟಕ್ಕೆ ಏನೇನಿದೆ?
ಮಾಣಿ : ಪಾಲಕ್ ಪನೀರ್, ತಂದೂರಿ ಚಿಕನ್, ಬಿರಿಯಾನಿ….
ಮ್ಯಾನೇಜರ್ : ಪಾಲಕ್‌ಪನೀರ್ ಮತ್ತು ತಂದೂರಿ ರೋಟಿ ಕೊಡು. ಮತ್ತೇನಿದೆ?
ಮಾಣಿ : ದಾಲ್ ಫ್ರೈ, ದಾಲ್ ತಡ್ಕಾ, ಕ್ಯಾರೆಟ್ ಹಲ್ವಾ….
ಮ್ಯಾನೇಜರ್ : 1 ದಾಲ್ ಫ್ರೈ, 1 ಕ್ಯಾರೆಟ್ ಹಲ್ವಾ ಕೊಡು.
ಮಾಣಿ : ಚಿಕನ್ 65 ಅಥವಾ ಗೋಭಿ ಮಂಚೂರಿ ಕೊಡ್ಲಾ?
ಮ್ಯಾನೇಜರ್ : ಹ್ಞೂಂ, ಗೋಭಿ ಮಂಚೂರಿ ಸಾಕು.
ಮಾಣಿ : ಮತ್ತೆ ಮಿನರಲ್ ವಾಟರ್ ತಂದು ಕೊಡ್ಲಾ ಸಾರ್….?
ಮ್ಯಾನೇಜರ್ : ಹ್ಞೂಂ ಕೊಡು.
ಮಾಣಿ : ಸಾರ್, ನಿಮ್ಮ ಆರ್ಡರ್ ಹೀಗಿದೆ, ಯಾವುದಕ್ಕೂ ಒಮ್ಮೆ ಚೆಕ್ ಮಾಡಿಕೊಂಡು ಬಿಡಿ. ಪಾಲಕ್ ಪನೀರ್, ತಂದೂರಿ ರೋಟಿ, ದಾಲ್ ಫ್ರೈ, ಗೋಭಿ ಮಂಚೂರಿ, ಕ್ಯಾರೆಟ್ ಹಲ್ವಾ ವಿತ್ ಮಿನರಲ್ ವಾಟರ್….
ಮ್ಯಾನೇಜರ್ : ಆಯ್ತು, ಎಲ್ಲಾ ಬೇಗ ತಗೊಂಬಾ.
ಮಾಣಿ : ಇವೆಲ್ಲ ಇತ್ತು…. ಆದರೆ ಈಗ ಎಲ್ಲಾ ಖಾಲಿ ಆಗಿದೆ, ಏನೂ ಸಿಗೋಲ್ಲ!
ಮ್ಯಾನೇಜರ್ : ಎಲ್ಲಾ ಮುಗಿದಿದೆ ಅಂದ್ರೆ ಸುಡುಗಾಡು. ಮೊದಲೇ ಹೇಳಕ್ಕೆ ಆಗಲ್ವೇನ್ರೀ? ಹಸಿವಿನಿಂದ ನಾನಿಲ್ಲಿ ಸಾಯುತ್ತಿರೋವಾಗ ಒಂದೊಂದೇ ವಿವರ ಕೇಳಿ, ವರದಿ ಒಪ್ಪಿಸಿ, ಆಮೇಲೆ ಏನೂ ಇಲ್ಲ ಅಂತೀರಲ್ಲ….?
ಮಾಣಿ : ಸಾರ್ ನಾನು ದಿನಾ ನಿಮ್ಮ ಬ್ಯಾಂಕಿನ ಎ.ಟಿ.ಎಂ ಮುಂದೆ ನಿಂತಾಗ ಪಿನ್ ಕೋಡ್ ಹಾಕಿ, ಸೇವಿಂಗ್ಸ್/ ಕರೆಂಟ್ ಅಕೌಂಟ್, ಅಮೌಂಟ್, ರೆಸಿಪ್ಟ್ ಎಲ್ಲಾ ಕೇಳುತ್ತೆ. ಕೊನೆಯಲ್ಲಿ ಕ್ಯಾಶ್ ಇಲ್ಲ ಅಂತ ಡಿಕ್ಲೇರ್ ಮಾಡುತ್ತೆ. ಆಗ ಅಷ್ಟು ಹೊತ್ತು ಬಿಸಿಲಲ್ಲಿ ಕಾದು ನಿಂತಿದ್ದ ನಮಗೆ ಕಾಲು ನೋಯಲ್ವಾ? ನಮಗೆ ಮಾತ್ರ ಉರಿಯಲ್ವಾ?
ಯಾರೋ ತೀರಿಕೊಂಡರೆಂದು ಮಂಗ್ಯಾ ಬಸ್ಯಾ ಸ್ಮಶಾನಕ್ಕೆ ಬಂದು, ಹೆಣ ಉರಿಯುವವರೆಗೂ ಕಾಯೋಣ ಎಂದು ನಿಂತುಕೊಂಡರು.
ಮಂಗ್ಯಾ : ಆ ಹೆಣ ನೋಡ್ಲೇ….. ಎಷ್ಟು ಆರಾಮವಾಗಿ ಮಲಗಿದೆ, ಹೌದಲ್ಲ…..
ಹೆಣ (ಎದ್ದು ಕುಳಿತು) : ಯಾಕ್ಲಾ ಮಲಗಬಾರ್ದು? ಎಷ್ಟು ಕಷ್ಟಪಟ್ಟು ಹೋರಾಡಿ, ದಾಯಾದಿಗಳಿಂದ ಈ ಜಾಗ ನಮ್ಮದಾಗಿಸಿಕೊಂಡಿದ್ದೀನಿ, ಗೊತ್ತಾ?
ಅನೂಷಾ ಚೆಕ್ ಅಪ್ ಗೆಂದು ಗಂಡನ ಜೊತೆ ನರ್ಸಿಂಗ್ ಹೋಮಿಗೆ ಹೋದಳು. ಅಂದು ಲೇಡಿ ಡಾಕ್ಟರ್ ಬಂದಿರಲಿಲ್ಲ. ಹಾಗಾಗಿ ಡಾ. ವರುಣ್ ತಾವೇ ಚೆಕ್ ಮಾಡಲು ಮುಂದಾದರು. ಅನೂಷಾಳ ಗಂಡನನ್ನು ಹೊರಗೆ ಕಳಿಸಿ, ಡಾಕ್ಟರ್ ಬಾಗಿಲು ಹಾಕಿ, ತಪಾಸಣೆಗೆ ಮುಂದಾದರು.
ಅನೂಷಾ : ಡಾಕ್ಟರ್ ನೀವು ತಪ್ಪು ಭಾವಿಸುವುದಿಲ್ಲ ಅಂದ್ರೆ ದಯವಿಟ್ಟು, ನನ್ನ ಗಂಡನ್ನ ಸಹ ಒಳಗೆ ಕರೀತೀರಾ?
ಡಾಕ್ಟರ್ : ನಿಮ್ಮ ಆತಂಕ ನನಗೆ ಅರ್ಥ ಆಗುತ್ತಮ್ಮ…. ಈ ಸರ್ವೀಸಿನಲ್ಲಿ ನಾನು 20 ವರ್ಷಗಳಿಂದ ಪಳಗಿದ್ದೇನೆ. ಜಂಟಲ್ ಮ್ಯಾನ್ ಡಾಕ್ಟರ್ ಅಂತಾನೇ ಫೇಮಸ್ಸು! ನಿವೇನೂ ಗಾಬರಿಗೊಳ್ಳಬೇಡಿ.
ಅನೂಷಾ : ಅಯ್ಯೋ! ನಿಮ್ಮ ಬಗ್ಗೆ ನನಗೆ ಎಳ್ಳಷ್ಟೂ ಸಂದೇಹವಿಲ್ಲ. ಆದರೆ ಅಲ್ಲಿ ಹೊರಗೆ ಕುಳಿತಿದ್ದಾನಲ್ಲ ನನ್ನ ಪತಿರಾಯ, ಮಹಾ ಕಿರಾತಕ! ನಿಮ್ಮ ರಿಸಪ್ಶನಿಸ್ಟ್ ಬೇರೆ ಮೊದಲೇ ಮಹಾ ಗ್ಲಾಮರಸ್ಸು….!
ವಿನುತಾ ಮಗುವನ್ನು ಕರೆದುಕೊಂಡು ಡಾಕ್ಟರ್ ಕ್ಲಿನಿಕ್ಕಿಗೆ ಬಂದಳು. ಮಗು ನಿಶ್ಶಕ್ತಿಯಿಂದ ಬಹಳ ಬಳಲುತ್ತಿತ್ತು. ವೈದ್ಯರು ಮಗುವನ್ನು ಆಮೂಲಾಗ್ರವಾಗಿ ಮತ್ತೆ ಮತ್ತೆ ಪರೀಕ್ಷಿಸಿ ಯಾವುದೇ ತರ್ಕಕ್ಕೆ ಬರದಾದರು.
ಡಾಕ್ಟರ್ : ಏನಮ್ಮ, ಮಗುವಿಗೆ ಎದೆ ಹಾಲು ಕುಡಿಸುತ್ತೀರೋ, ಬಾಟಲಿ ಹಾಲೋ?
ವಿನುತಾ : ಎದೆ ಹಾಲು ಡಾಕ್ಟರ್.
ಡಾಕ್ಟರ್ : ಯಾವುದಕ್ಕೂ ನಿಮ್ಮನ್ನೂ ಒಮ್ಮೆ ಪರೀಕ್ಷಿಸಬೇಕು, ನಿಮ್ಮ ಟಾಪ್ ತೆಗೆದು ಇಲ್ಲಿ ಮಲಗಿ.
ವಿನುತಾ : ನನ್ನನ್ನು ಯಾಕೆ ಪರೀಕ್ಷಿಸಬೇಕು ಡಾಕ್ಟರ್?
ಡಾಕ್ಟರ್ : ನಿಮ್ಮ ಸ್ತನ ಪರೀಕ್ಷೆ ಆಗಬೇಕಿದೆ.
ಡಾಕ್ಟರ್ ಅವಳನ್ನು ಕೂಲಂಕಷವಾಗಿ ಪರೀಕ್ಷಿಸಿದರು.
ಡಾಕ್ಟರ್ : ಅದಕ್ಕೆ ಮತ್ತೆ…. ನಿಮ್ಮ ಎದೆಯಲ್ಲಿ ಹಾಲೇ ಇಲ್ಲ. ಮಗುವಿಗೆ ಶಕ್ತಿ ಎಲ್ಲಿಂದ ಬರಬೇಕು?
ವಿನುತಾ : ಇದನ್ನು ನೀವು ನನಗೆ ಮೊದಲೇ ಹೇಳಬೇಕಲ್ವಾ? ನಾನು ಈ ಮಗುವಿನ ಚಿಕ್ಕಮ್ಮ…. ನಮ್ಮಕ್ಕನ ಮಗು ಇದು!
ಮೋನಾ : ಡಾಕ್ಟ್ರೇ…. ನನ್ನ ಗಂಡಂದು ಬಹಳ ಕಾಟ ಆಗಿಹೋಗಿದೆ. ಸಹಿಸಿ ಸಹಿಸಿ ಸಾಕಾಗಿದೆ, ಏನಾದರೂ ಸಲಹೆ ಕೊಡಿ.
ಡಾಕ್ಟರ್ : ಮುಂದಿನ ಸಲ ಅವರನ್ನೂ ಕರೆದುಕೊಂಡು ಬಾರಮ್ಮ. ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿ, ಆತ ಕಾಟ ಕೊಡದಂತೆ ಮಾಡಿಬಿಡ್ತೀನಿ!
ಮೋನಾ : ಅಯ್ಯೋ ಕರ್ಮ! ಅದಲ್ಲ ಡಾಕ್ಟರ್….
ಡಾಕ್ಟರ್ : ಇನ್ನೇನು? ಕುಡಿದು ಬಂದು ಹೊಡೀತಾನಾ?
ಮೋನಾ : ಅಯ್ಯೋ… ಅವನಿಗೆಲ್ಲಿದೆ ಅಷ್ಟು ದಮ್ಮು…
ಡಾಕ್ಟರ್ : ಮತ್ತೆ ಏನಮ್ಮ ತೊಂದರೆ…? ವಿವರವಾಗಿ ಹೇಳು.
ಮೋನಾ : ಅವರಿಲ್ಲದಾಗ ನಾನು ಮನೆಯಲ್ಲಿ ಆಗಾಗ ಸಿಗರೇಟ್ ಸೇದ್ತೀನಿ. ಅದನ್ನು ಯಾರೋ ಅವನಿಗೆ ಚಾಡಿ ಹೇಳಿಬಿಟ್ಟಿದ್ದಾರೆ! ಅದಕ್ಕೆ ನನ್ನ ಮೇಲೆ ಸಿಕ್ಕಾಪಟ್ಟೆ ರೋಗಾಡೋದಾ….?
ಗುಂಡಗುಂಡಿಗೆ ಮದುವೆಯಾಗಿ 1 ವರ್ಷ ಆಗಿತ್ತು.
ಗುಂಡ : ಏನ್ರಿ, ನಿಮಗೊಂದು ಅರ್ಜೆಂಟ್ ವಿಷಯ ಹೇಳಬೇಕು.
ಗುಂಡಿ : ಮತ್ತೆ ಬೇಜಾರು ಮಾಡಿಕೊಳ್ಳಬಾರದು, ಕೋಪ ಮಾಡಿಕೊಳ್ಳಬಾರದು, ಪೇಚಾಡಬಾರದು….
ಗುಂಡ : ಇದೇನು ಪೀಠಿಕೆ ಇಷ್ಟು ದೊಡ್ಡದಾಗಿದೆ…. ಅದೇನು ವಿಷಯ ಅಂತ ಹೇಳ್ಬಾರ್ದಾ? ಸಸ್ಪೆನ್ಸ್ ಬೇರೆ….
ಗುಂಡಿ : ಮತ್ತೆ… ಮತ್ತೆ… ನನಗೀಗ 3 ತಿಂಗಳು.
ಗುಂಡ : ಇದು ಸಂತೋಷದ ವಿಚಾರ! ಇದಕ್ಕೆ ಯಾಕೆ ಇಷ್ಟು ದೊಡ್ಡ ಪೀಠಿಕೆ.
ಗುಂಡಿ : ಮತೆ… ಮತ್ತೆ… ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಹೀಗ್ಹೀಗೆ ಆಗಿತ್ತು ಅಂತ ನಮ್ಮಪ್ಪನಿಗೆ ಹೇಳಿದ್ದಕ್ಕೆ ಬರಲು ತಗೊಂಡು ಬಾರಿಸೋದೇ….?





