ವಿಶ್ವಸಂಸ್ಥೆಯ ಒಂದು ಅಂತಾರಾಷ್ಟ್ರೀಯ ಅಂಗಸಂಸ್ಥೆಯ ಅಧ್ಯಕ್ಷರ ಸ್ಥಾನಕ್ಕಾಗಿ ಸೂಕ್ತ ಅಭ್ಯರ್ಥಿಯ ಆಯ್ಕೆ ನಡೆಯುತ್ತಿತ್ತು :
ಪ್ರಶ್ನೆ : 5ರ ನಡುವೆ 4ನ್ನು ಬರೆದು ತೋರಿಸಿ.
ಚೀನಾದನು : ಇದೆಂಥ ಕೆಟ್ಟ ಜೋಕ್!
ಜಪಾನೀಯ : ಇದಂತೂ ಸಾಧ್ಯವೇ ಇಲ್ಲ.
ಅಮೇರಿಕನ್ : ಈ ಪ್ರಶ್ನೆಯೇ ತಪ್ಪು!
ಬ್ರಿಟಿಷ್ : ದಿಸ್ ಈಸ್ ನಾನ್ ಸೆನ್ಸ್!
ಭಾರತೀಯ : FIVE (IV) ಅಷ್ಟಲ್ಲದೆ ಈಗೆಲ್ಲ ಭಾರತೀಯರು ಪರದೇಶಗಳ ಪ್ರಧಾನಿ ಮತ್ತಿತರ ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆಯೇ?
ಅಮೆರಿಕನ್ : ಛೇ...ಛೇ! ನೀವು ಭಾರತೀಯರೆಲ್ಲ ಬೇರೆ ಬೇರೆ ಬಣ್ಣದಲ್ಲಿದ್ದೀರಿ. ಅದೇ ನಮ್ಮನ್ನು ನೋಡಿ, ಹೇಗೆ ಬೆಳ್ಳಗೆ ಹೊಳೆ ಹೊಳೆಯುತ್ತಿದ್ದೇವೆ?
ಭಾರತೀಯ : ಕುದುರೆಗಳೂ ವಿವಿಧ ಬಣ್ಣಗಳಲ್ಲಿ ಬರುತ್ತವೆ, ಆದರೆ ಕತ್ತೆಗಳು ಮಾತ್ರ ಒಂದೇ ಬಣ್ಣದಲ್ಲಿರುತ್ತವೆ!
ಟೀಚರ್ : ರಾತ್ರಿ ಹೊತ್ತು ಸೊಳ್ಳೆ ಕಚ್ಚಿದರೆ ಏನು ಮಾಡುವುದು?
ಗುಂಡ : ನಿದ್ದೆಯಿಂದ ಎದ್ದು ಅದನ್ನು ಬಡಿದುಹಾಕಿ ಮತ್ತೆ ಮಲಗೋದು. ಅದಕ್ಕಿಂತ ಇನ್ನೇನು ಮಾಡಲಾದೀತು? ಅದನ್ನು ಎಡಗೈಲಿ ಹಿಡಿದು ಹಾಡು ಹೇಳಿಸಲು ನಾವೇನು ರಜನೀಕಾಂತಾ.....?
ಗಿರೀಶ್ : ಈ ಲಾಕ್ ಡೌನ್ ನಲ್ಲಿ ಮನೆಯಲ್ಲಿ ಕುಳಿತು WFH ಮಾಡಿ ಮಾಡಿ ಸಾಕಾಗಿದೆ. ಏನು ಮಾಡಿದ್ರೂ ಟೈಂ ಪಾಸ್ ಆಗ್ತಾ ಇಲ್ಲ!
ಸತೀಶ್ : ಹೌದಾ, ಹಾಗಾದರೆ ನಿನ್ನ ಮದುವೆಯ ವಿಡಿಯೋ ಕ್ಯಾಸೆಟ್ ಅಥವಾ ಸಿಡಿ ಹಾಕಿಕೊಂಡು ನೋಡು.... ಹಿಂದೆ ಮಾಡಿದ ತಪ್ಪುಗಳೆಲ್ಲ ರೀವೈಂಡ್ ಆಗಿ ಮುಂದೆ ಚಾನ್ಸ್ ಸಿಕ್ಕಿದಾಗ, ಅಂಥ ತಪ್ಪು ರಿಪೀಟ್ ಆಗೋದಿಲ್ಲ!
ಒಮ್ಮೆ ಬ್ಯಾಂಕ್ ಮ್ಯಾನೇಜರ್ ಒಬ್ಬ ತನ್ನ ಕುಟುಂಬದೊಂದಿಗೆ ಊಟಕ್ಕಾಗಿ ಹೋಟೆಲಿಗೆ ಹೋಗಿದ್ದ.
ಮ್ಯಾನೇಜರ್ : ಏನ್ರಿ.... ಊಟಕ್ಕೆ ಏನೇನಿದೆ?
ಮಾಣಿ : ಪಾಲಕ್ ಪನೀರ್, ತಂದೂರಿ ಚಿಕನ್, ಬಿರಿಯಾನಿ....
ಮ್ಯಾನೇಜರ್ : ಪಾಲಕ್‌ಪನೀರ್ ಮತ್ತು ತಂದೂರಿ ರೋಟಿ ಕೊಡು. ಮತ್ತೇನಿದೆ?
ಮಾಣಿ : ದಾಲ್ ಫ್ರೈ, ದಾಲ್ ತಡ್ಕಾ, ಕ್ಯಾರೆಟ್ ಹಲ್ವಾ….
ಮ್ಯಾನೇಜರ್ : 1 ದಾಲ್ ಫ್ರೈ, 1 ಕ್ಯಾರೆಟ್ ಹಲ್ವಾ ಕೊಡು.
ಮಾಣಿ : ಚಿಕನ್ 65 ಅಥವಾ ಗೋಭಿ ಮಂಚೂರಿ ಕೊಡ್ಲಾ?
ಮ್ಯಾನೇಜರ್ : ಹ್ಞೂಂ, ಗೋಭಿ ಮಂಚೂರಿ ಸಾಕು.
ಮಾಣಿ : ಮತ್ತೆ ಮಿನರಲ್ ವಾಟರ್ ತಂದು ಕೊಡ್ಲಾ ಸಾರ್....?
ಮ್ಯಾನೇಜರ್ : ಹ್ಞೂಂ ಕೊಡು.
ಮಾಣಿ : ಸಾರ್, ನಿಮ್ಮ ಆರ್ಡರ್ ಹೀಗಿದೆ, ಯಾವುದಕ್ಕೂ ಒಮ್ಮೆ ಚೆಕ್ ಮಾಡಿಕೊಂಡು ಬಿಡಿ. ಪಾಲಕ್ ಪನೀರ್, ತಂದೂರಿ ರೋಟಿ, ದಾಲ್ ಫ್ರೈ, ಗೋಭಿ ಮಂಚೂರಿ, ಕ್ಯಾರೆಟ್ ಹಲ್ವಾ ವಿತ್ ಮಿನರಲ್ ವಾಟರ್....
ಮ್ಯಾನೇಜರ್ : ಆಯ್ತು, ಎಲ್ಲಾ ಬೇಗ ತಗೊಂಬಾ.
ಮಾಣಿ : ಇವೆಲ್ಲ ಇತ್ತು.... ಆದರೆ ಈಗ ಎಲ್ಲಾ ಖಾಲಿ ಆಗಿದೆ, ಏನೂ ಸಿಗೋಲ್ಲ!
ಮ್ಯಾನೇಜರ್ : ಎಲ್ಲಾ ಮುಗಿದಿದೆ ಅಂದ್ರೆ ಸುಡುಗಾಡು. ಮೊದಲೇ ಹೇಳಕ್ಕೆ ಆಗಲ್ವೇನ್ರೀ? ಹಸಿವಿನಿಂದ ನಾನಿಲ್ಲಿ ಸಾಯುತ್ತಿರೋವಾಗ ಒಂದೊಂದೇ ವಿವರ ಕೇಳಿ, ವರದಿ ಒಪ್ಪಿಸಿ, ಆಮೇಲೆ ಏನೂ ಇಲ್ಲ ಅಂತೀರಲ್ಲ....?





