ಇಂದಿನಿಂದ ಭಾರತ ದೇಶದಾದ್ಯಂತ ಬೃಹತ್‌ ಜನಗಣತಿ ಕಾರ್ಯ ಪ್ರಾರಂಭವಾಗಲಿದೆ. ಭಾರತದ ಮೊತ್ತ ಮೊದಲ ಡಿಜಿಟಲ್‌ ಗಣತಿ ಇದಾಗಿದ್ದು 30 ಲಕ್ಷದಷ್ಟು ಗಣತಿದಾರರು, ಮೇಲುಸ್ತುವಾರಿಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಗಣತಿಗೆಂದೇ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು, ಗಣತಿದಾರರು ಈ ಆ್ಯಪ್‌ನಲ್ಲಿ ದತ್ತಾಂಶ ತುಂಬಲಿದ್ದಾರೆ. ಜನರು ಸ್ವಯಂಪ್ರೇರಿತರಾಗಿ ತಮ್ಮ ದತ್ತಾಂಶ ನೀಡಲು *se.census.gov.in* ಆನ್‌ಲೈನ್‌‍ ಪೋರ್ಟಲ್‌ ತೆರೆಯಲಾಗಿದ್ದು ತಮ್ಮ ಕುಟುಂಬದವರ ವಿವರವನ್ನು ಆನ್‌ಲೈನ್‌ನಲ್ಲಿ ತುಂಬಿದಾಗ ಗಣತಿ ಐಡಿ ಸೃಜನೆಯಾಗುತ್ತದೆ, ಈ ಐಡಿಯನ್ನು ಮನೆಗಳಿಗೆ ಗಣತಿದಾರರು ಭೇಟಿ ನೀಡಿದಾಗ ನೀಡಿದರೆ ಅವರು ಅದನ್ನು ಪರಿಶೀಲಿಸಿ ಮಾಹಿತಿಯನ್ನು ದೃಢಪಡಿಸುತ್ತಾರೆ.

IMG-20260401-WA0089

ಭಾರತದ ಜವಾಬ್ದಾರಿಯುತ ಪ್ರಜೆಗಳಾದ ನಾವು ಕಡ್ಡಾಯವಾಗಿ ಈ ಗಣತಿಯಲ್ಲಿ ಭಾಗಿಯಾಗೋಣ ನಮ್ಮ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸೋಣ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ