ಬಹಳಷ್ಟು ಜನಗಳು ಕೇಳುವ ಸಾಮಾನ್ಯ ಪ್ರಶ್ನೆಯೆಂದರೆ ದೇವರು ಇದ್ದಿದ್ರೆ? ದುಃಖˌ ನೋವುˌ ಆತ್ಯಾಚಾರˌ ಹಿಂಸೆˌ ಯುದ್ಧ ˌ ತೊಂದರೆ ತಾಪತ್ರಯಗಳು ಯಾಕೆ?
ಈ ಪ್ರಶ್ನೆ ಕೇವಲ ತತ್ವಜ್ಞಾನಿಯವಾಗಿಲ್ಲ ˌ
ಪ್ರತಿ ಸಾಮಾನ್ಯ ಹೃದಯದ ಕೂಗು.
ಆದರೆ… ಈ ಪ್ರಶ್ನೆಗೆ ನೇರವಾದ, ಸರಳ ಉತ್ತರವೇ ಇಲ್ಲ. ಆದರೆ ಇವುಗಳನ್ನು ತಿಳಿಯಲು ಆಳವಾದ ಅರಿವು ಬೇಕು.
ಪ್ರಶ್ನೆಯ ಹಿಂದೆ ಇರುವ ಮೌನ ನಾವು “ದೇವರು ಇದ್ದಿದ್ರೆ?” ಎಂದು ಕೇಳುವಾಗ, ನಿಜವಾಗಿ ನಾವು ಕೇಳುವುದುˌ "ನನ್ನ ನೋವಿಗೆ ಅರ್ಥವೇನು?
“ಇದಕ್ಕೆ ಯಾರು ಹೊಣೆ?” ನೋವು ಬಂದಾಗ ಮನಸ್ಸು ಒಂದು ಕಾರಣ ಹುಡುಕುತ್ತದೆ. ಅದು ಕಾಣದಿದ್ದರೆ — ಅದು “ದೇವರು” ಎಂಬ ಕಲ್ಪನೆಗೆ ತಲುಪುತ್ತದೆ. ಆಸ್ತಿಕ - ನಾಸ್ತಿಕ ಇಬ್ಬರು ಕೂಡಾ ತಮ್ಮ ನೋವಿಗೆ ದೇವರೆ ಹೊಣೆ ಎನ್ನುತ್ತಾರೆ.
ಆದರೆˌ ಯಾವತ್ತಾದ್ರೂ ಸುಖದಲ್ಲಿˌ ˌಸಂತೋಷದಲ್ಲಿ ˌ ಸಿನೆಮಾ ನೋಡುವಾಗˌ ತಣ್ಣನೆ ಬಿರ್ ಕುಡಿಯುವಾಗ ಇದಕ್ಕೆಲ್ಲಾ "ದೇವರು" ಕಾರಣ ಎಂದಿರುವೆವಾ? ಸುಖಕ್ಕೆ ಕಾರಣರು ನಾವೇˌ ಆದರೆˌ ನಮ್ಮ ನೋವಿಗೆ ಮಾತ್ರ "ದೇವರು" ಕಾರಣ. ಎಂಥ ಹುಷಾರಿ ಮನುಷ್ಯ.
Jiddu Krishnamurti ಸ್ಪಷ್ಟವಾಗಿ ಹೇಳುತ್ತಾರೆ:
“ಜಗತ್ತಿನ ಅಶಾಂತಿಯ ಮೂಲ ನೀನೇ.
ನೀನು ಬದಲಾಗದವರೆಗೂ ಜಗತ್ತು ಬದಲಾಗುವುದಿಲ್ಲ.” ಅಂದರೆˌ ಯುದ್ಧಗಳು, ಹಿಂಸೆ, ದ್ವೇಷ...ಇವೆಲ್ಲವೂ ಆಕಾಶದಿಂದ ಬರುವುದಿಲ್ಲ.
ಅವು ಮಾನವನ ಮನಸ್ಸಿನಿಂದ ಹುಟ್ಟುತ್ತವೆ.
ಓಶೋ ಒಂದು ಕಡೆ ಹೇಳುತ್ತಾರೆˌ
“ದೇವರನ್ನು ಹೊಣೆ ಮಾಡುವುದು ಸುಲಭ.
ಆದರೆ ನಿನ್ನ ಅಜ್ಞಾನವನ್ನು ನೋಡುವುದು ಕಷ್ಟ.”
ನಾವು ಮಾಡಿರುವ ಆಯ್ಕೆಗಳು,
ನಮ್ಮ ಲಾಲಸೆ, ನಮ್ಮ ಅಹಂಕಾರˌ ಇವೆಲ್ಲ ಸೇರಿ ಸಮಾಜವನ್ನು ರೂಪಿಸುತ್ತವೆ.
ಹಾಗಾದರೆ ಪ್ರಶ್ನೆ ಬದಲಾಯಿಸಿ ನೋಡಿˌ
“ದೇವರು ಯಾಕೆ?” ಎಂಬುದರಿಂದ
“ನಾವು ಯಾಕೆ ಹೀಗೆ ಬದುಕುತ್ತಿದ್ದೇವೆ?”
ಬುದ್ದ ದೇವರ ಬಗ್ಗೆ ವಾದಿಸಲೇ ಇಲ್ಲ.
ಅವರು ನೇರವಾಗಿ ನೋವಿನ ಮೂಲವನ್ನು ಹೇಳಿದರುˌ
“ದುಃಖದ ಕಾರಣ — ಆಸೆ (ತೃಷ್ಣೆ).”ನಾವು ಬಯಸುತ್ತೇವೆ… ಹಿಡಿಯಲು ಪ್ರಯತ್ನಿಸುತ್ತೇವೆ…
ಹಿಡಿತ ಕಳೆದುಹೋದಾಗ ನೋವು.
ಬುದ್ಧನು ಹೇಳಿದುದುˌ
ದುಃಖದ ಪ್ರಶ್ನೆಗೆ ದೇವರ ಉತ್ತರ ಬೇಡˌ
ಜಾಗೃತಿಯ ಉತ್ತರ ಬೇಕು.
Friedrich Nietzsche ಒಂದು ತೀಕ್ಷ್ಣ ವಾಕ್ಯ ಹೇಳುತ್ತಾನೆ: “God is dead.”
ಅದರ ಅರ್ಥ ˌ ಮಾನವನು ತನ್ನ ಜವಾಬ್ದಾರಿಯನ್ನು ಹೊರಗಿನ ದೇವರ ಮೇಲೆ ಹಾಕಿ
ಸ್ವತಃ ಜಾಗೃತಿಯಾಗುವುದನ್ನು ತಪ್ಪಿಸಿಕೊಂಡಿದ್ದಾನೆ.
Jean-Paul Sartre ಹೇಳುತ್ತಾನೆ:
“ನೀನು ಸಂಪೂರ್ಣ ಸ್ವತಂತ್ರ…
ಆದ್ದರಿಂದ ನೀನೇ ಸಂಪೂರ್ಣ ಹೊಣೆಗಾರ.”
ಅಂದರೆˌ ನೀನು ಮಾಡಿರುವುದಕ್ಕೆ ದೇವರನ್ನು ಕಾರಣ ಮಾಡಲಾಗುವುದಿಲ್ಲ.
ನಿಸರ್ಗಕ್ಕೆ ನೀತಿ ಇಲ್ಲ…
ಅದು ನ್ಯಾಯ - ಅನ್ಯಾಯ ತೀರಿಸುವುದಿಲ್ಲ…
ಅದು ಕೇವಲ ನಡೆಯುತ್ತದೆ. ಮಳೆ ಸುರಿಯುತ್ತದೆ —
ಒಬ್ಬನಿಗೆ ಆಶೀರ್ವಾದ, ಇನ್ನೊಬ್ಬನಿಗೆ ವಿಪತ್ತು.
ಅಲ್ಲಿ ದೇವರ ನಿರ್ಧಾರವಿಲ್ಲ —
ಅಲ್ಲಿ ಜೀವನದ ಸ್ವಭಾವ. ಪ್ರಕೃತಿ ನಿಯಮಗಳು ಮಾನವ ತೀರ್ಪಿನ ಅನುಸಾರ ಚಲಿಸುವುದಿಲ್ಲ. ಅದು ತನ್ನ ನಿರ್ದಿಷ್ಟ ನಿಯಮದಂತೆ ನಡೆಯುತ್ತದೆ.
ಹಾಗಾದರೆ ನಾವು ಏನು ಅರಿಯಬೇಕು?
ದೇವರು ಇದ್ದಿದ್ರೆ… ನೋವು ಯಾಕೆ? ಈ ಪ್ರಶ್ನೆಗೆ ಮತ್ತೊಂದು ಪ್ರಶ್ನೆ ˌ ನಾವು ಇದ್ದಾಗ… ನಾವು ಏನು ಮಾಡುತ್ತಿದ್ದೇವೆ? ಎಲ್ಲವನ್ನು "ದೇವರೆ" ಮಾಡುವುದಾದ್ರೆ ಮನುಷ್ಯನ free will ಏನೂ?





