ಹಣದ ಜೊತೆ ಹೆಸರೂ ಬಂತು! : ಬ್ರೆಝಿಲಿಯನ್ ನಟಿ ಚೇಸ್, ಹಾರರ್ ಚಿತ್ರಗಳಲ್ಲಿ ದೆವ್ವವಾಗಿ ನಟಿಸುತ್ತಾ ಖ್ಯಾತಿ ಗಳಿಸಿದಳು. ಜೊತೆಗೆ ಈಕೆ ಸಿಂಗರ್ ಸಹ. ಲೈವ್ ಶೋಗಾಗಿ ಸ್ಟೇಡಿಯಂ ಬುಕ್ ಆಗುತ್ತದೆ. ಹಾರರ್ ಚಿತ್ರಗಳ ಕುಖ್ಯಾತ ಹೆಸರಿನ ಕಾರಣ ಇವಳಿಗೆ ಹಣ, ಹೆಸರು! ಕಲಿತರಾದರೂ ಜನ ದೆವ್ವ, ಭೂತ, ಮಾಟಮಂತ್ರಗಳ ಹೆಸರಿನಲ್ಲಿ ಮಜಾ ಪಡೆಯಲು ಬರುತ್ತಾರೆ. ಅಸಲಿಗೆ ಈ ಜನ ಆಧುನಿಕರಾದರೂ ಇನ್ನೂ 19ನೇ ಶತಮಾನದಲ್ಲೇ ಇದ್ದುಬಿಟ್ಟಿದ್ದಾರೆ. ಇದನ್ನು ಕಟ್ಟಿಕೊಂಡು ಈಕೆಗೇನು? ಅದು ನಿರ್ದೇಶಕರ ಹೊಣೆ. ಹಾಡು, ಹೆಸರು, ಹಣದ ಹೊಳೆ ಹರಿಯುತ್ತಿದೆ…. ಸಾಕಲ್ಲವೇ….?

ಇಲ್ಲಿ ಮಿಂಚಿದ್ದೂ ಮಿಂಚಿದ್ದೇ ! : ಅಮೆರಿಕಾದ ಟ್ರಂಪಣ್ಣ ಬಯಸಿದರೂ ಸಹ ಲೀಗಲ್ ಇಲ್ಲೀಗಲ್ ಲ್ಯಾಟಿನ್ ಮಂದಿಯನ್ನು ದೇಶದಿಂದ ಹೊರ ದೂಡಲು ಆಗುತ್ತಿಲ್ಲ. ಏಕೆಂದರೆ ಆ ಜನ ಅಮೆರಿಕದೆಲ್ಲೆಡೆ ಹೇಗೆ ಬೆರೆತುಹೋಗಿದ್ದಾರೆಂದರೆ, ಅವರಿಗೆ ಅತ್ತ ತಮ್ಮ ಮೂಲ ದೇಶದ ನೆನಪೂ ಇಲ್ಲ, ಅಥವಾ ಅಲ್ಲಿಗೆ ವಾಪಸ್ಸು ಹೊರಡುವ ಇರಾದೆಯೂ ಇಲ್ಲ. ಅಮೆರಿಕಾದಲ್ಲಿದ್ದುಕೊಂಡೇ ಅವರು ತಮ್ಮ ಹೊಸ ಲೋಕ ಕಾಣುತ್ತಿದ್ದಾರೆ, ಅದು ಬಿಳಿಯರಿಗಿಂತ ಖಂಡಿತಾ ವಿಭಿನ್ನ. ಕ್ವೀನ್ಸ್ ಸನಾರಾ ಎಕ್ಸ್ ಪೋ ಲ್ಯಾಟಿನೋ ಪಾಪ್ಯುಲೇಶನ್ ನದೇ ವಿಭಿನ್ನ ಇವೆಂಟ್ಸ್ ನಡೆಯುತ್ತಿರುತ್ತವೆ. ಇದರಲ್ಲಿ ಹೆಚ್ಚಿನ ಥಳುಕುಬಳುಕು ಇರುವುದಿಲ್ಲ, ಆದರೆ ಇದು ಮಿಂಚಿಂಗೋ ಮಿಂಚಿಂಗ್! ಒಂದು ಫ್ಯಾಷನ್ ಇವೆಂಟಿನ ಈ ಡ್ರೆಸ್ ನೋಡಿ, ಇದು ಎಷ್ಟು ಮಣ ಭಾರ ಇರಬಹುದು? ಇಂಥ ಕೋಮಲಾಂಗಿ ಈ ಪಾಟಿ ಭಾರಿ ವಸ್ತ್ರ ಹೊತ್ತಿದ್ದಾಳಾದರೂ ಹೇಗೆ…?

ಹಳೆಯ ದಿನಗಳ ವಾಪಸಿ : ಸ್ಪೇನಿನಿಂದ ಅಮೆರಿಕಾಕ್ಕೆ ಹೊರಟ ಮಂದಿಯ ಎಷ್ಟೋ ತಲೆಮಾರುಗಳು ಆಗಿಹೋಗಿವೆ. ಆದರೂ ವರ್ಷದಲ್ಲಿ ಒಂದು ದಿನ ಅವರೆಲ್ಲ ಅಮೆರಿಕಾದ ಫ್ರಾನ್ಸಿಸ್ಕೋದಲ್ಲಿ ತಮ್ಮ ತವರಾದ ಸ್ಪೇನ್ ನ್ನು ವಾಪಸ್ಸು ತರುತ್ತಾರೆ. ಹಾಗಾಗಿ ಅಂದಿನ ಕಾಲದ ಹಳೆಯ ಡ್ರೆಸ್, ಕುದುರೆ ಸವಾರಿ, ಸಾರೋಟು, ಹ್ಯಾಟ್ ಧರಿಸಿ ಜನ ಮೆರವಣಿಗೆ ಹೊರಡುತ್ತಾರೆ. ಹಳೆಯ ಬೇರು ಹೊಸ ಊರಲ್ಲಿ ಚಿಗುರಿ ಗಿಡ ಹೊಸತೆನಿಸಿದರೂ, ಬೇರು ಹಳೆಯ ಜಾಡನ್ನು ಬಿಟ್ಟೀತೇ?

ಫ್ಯಾಷನ್ ಗಮನಿಸಿ, ಸುಂದರಿಯರನ್ನೂ ಸಹ : ಈ ಅಂತಾರಾಷ್ಟ್ರೀಯ ಫ್ಯಾಷನ್ನಿನ ಗಮ್ಮತ್ತು ಇರುವುದೇ, ರಂಜಾನ್ ಹಬ್ಬದ ದಿನಗಳನ್ನು ಮತ್ತಷ್ಟು ಎಂಜಾಯ್ ಮಾಡಲಿಕ್ಕಾಗಿ! ಅದರಲ್ಲೂ ದುಬೈನ `ಮ್ಯಾಕ್ಸ್ ಫ್ಯಾಷನ್ಸ್’ ಇದನ್ನು ಏರ್ಪಡಿಸಿದೆ. ಅಥೆಂಟಿಸಿಟಿಗಾಗಿ ಇದನ್ನು ಪಶ್ಚಿಮ ಏಷ್ಯಾದ ಗಗನಚುಂಬಿ ಕಟ್ಟಡಗಳ ಮೇಲೇ ಶೂಟ್ ಮಾಡಲಾಗಿದೆ! ಇಲ್ಲಿ ಹಿಜಾಬ್, ಬುರ್ಖಾಗಳ ಸುದ್ದಿಯೇ ಇಲ್ಲ! ಅಂಥ ವೆಸ್ಟ್ ಏಷ್ಯಾವನ್ನು ಮೂಢನಂಬಿಕೆಗಳ ಗೂಡು ಎಂದು ನಾವಿಲ್ಲಿ ಭಾವಿಸುತ್ತೇವೆ.

ಮಜಾ ಪಡೆಯುವ ಮೊದಲು ಯೋಚಿಸಿ : ಅಮೆರಿಕಾದಲ್ಲಿ ಜೂಜಿಗೆ ಕುಖ್ಯಾತಿ ಪಡೆದದ್ದು ಲಾಸ್ವೇಗಾಸ್. ಜನ ಬಂದು ಸತತ ಹಣ ಕಳೆದುಕೊಳ್ಳಲಿ ಎಂದು, ಅಲ್ಲೂ ಸಹ ಈಗ ದಿನೇದಿನೇ ಹೊಸ ಪ್ರಯೋಗ ನಡೆಸಲಾಗುತ್ತಿದೆ. ಏಪ್ರಿಲ್ ನ ರಾಕೆಬಲೀ ಫೆಸ್ಟಿವ್ನಲ್ಲಿ ಬಹಳಷ್ಟು ಇವೆಂಟ್ಸ್ ನಡೆಯುತ್ತವೆ. ಆ ಮೂಲಕ ಲಕ್ಷಾಂತರ ಜನರನ್ನು ಆಕರ್ಷಿಸಲಾಗುತ್ತದೆ. ಇದರಲ್ಲಿ ಅತಿ ಗ್ಲಾಮರಸ್ ಡ್ಯಾನ್ಸರ್ಸ್, ಆಧುನಿಕ ಅಬ್ಬರದ ಸಂಗೀತಕ್ಕೇನೂ ಕಡಿಮೆ ಇಲ್ಲ. ಹಣ ಹೆಚ್ಚಿದ್ದರೆ, ನೀವು ಸಹ ಅಲ್ಲಿಗೆ ಹೋಗಬಹುದು. ಆದರೆ ಟ್ರಂಪಣ್ಣನ ಖಡಕ್ ನಿಯಮಗಳನ್ನು ಮಾತ್ರ ಮರೆಯದೆ, ಕೇಳಿದಷ್ಟು ಟ್ಯಾಕ್ಸ್ ಕಟ್ಟಿಬಿಡಿ. ಅಲ್ಲಿಂದ ವಾಪಸ್ಸು ಬರುವಾಗ, ಕೈಗಳನ್ನು ಮೇಲೆತ್ತಿಸಿ, ಸರಪಳಿ ಬಿಗಿದು, ಮಿಲಿಟರಿ ಪ್ಲೇನ್ ನಲ್ಲಿ ಎಳೆತಂದು, ಪಂಜಾಬ್ ಬಾರ್ಡರ್ ನಲ್ಲಿ ಬಿಸಲಾಡಬಾರದಷ್ಟೇ!

ಆಧುನಿಕ ಲೈಫ್ ಸ್ಟೈಲ್ ಅಂದ್ರೆ ಇದು! : ತನ್ನ ಕ್ಯಾಸಿನೋವಾಗಳಿಗೆ ಫೇಮಸ್ ಆಗಿರುವ ಲಾಸ್ ವೇಗಾಸ್ ಕೇವಲ ಗಂಡಸರ ಜೂಜಿಗಷ್ಟೇ ಮೀಸಲು ಎಂದು ಭಾವಿಸಬೇಡಿ, ಹೆಂಗಸರೂ ಸಹ ಅಷ್ಟಿಷ್ಟು ಲಿಮಿಟ್ ನಲ್ಲಿ ಸಿಕ್ಕಿರುವ ಸ್ವಾತಂತ್ರವನ್ನೇ ಧಾರಾಳ ಬಳಸಿ ಮಜಾ ಉಡಾಯಿಸುತ್ತಿದ್ದಾರೆ. ಇವರದ್ದೆಲ್ಲ ಹದ್ದು ಮೀರಿದ ವರ್ತನೆ ಎಂದು ಮುಖ ಸಿಂಡರಿಸದಿರಿ, ಇಂಥ ಮುಕ್ತ ವಾತಾವರಣದ ಖುಲ್ಲುಂಖುಲ್ಲ ಮಜಾ, ಜಗತ್ತಿನ ಬೇರಾ ಜಾಗದಲ್ಲೂ ಸಿಗದು! ನೀವು ಖರ್ಚು ಮಾಡುವುದಕ್ಕೆ ರೆಡಿ ಇರಬೇಕಷ್ಟೆ, ಗಂಟೆಗಟ್ಟಲೇ ದಿನಗಟ್ಟಲೇ ಇಲ್ಲಿ ಮೋಜು ಮಸ್ತಿ ಉಡಾಯಿಸಬಹುದು!





