ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ಆಟಗಾರರು 140-150+ ಕಿಮೀ ವೇಗದ ಚಂಡುಗಳನ್ನು ಸುಲಭವಾಗಿ ಎದುರಿಸುವಾಗ, ತಲೆಯ ಮೇಲೆ ಬರುವ ಬೌನ್ಸರ್ ಗಳಿಗೆ ತಲೆ ಬಗ್ಗಿಸಿ ಚಂಡನ್ನು ಬಿಡುವ ಬದಲು ಅಂತಹ ಎಸೆತಗಳನ್ನು ಸಲೀಸಾಗಿ ಸಿಕ್ಸರ್‌ಗಳಿಗೆ ರೋಹಿತ್ ಶರ್ಮಾ ಬಾರಿಸಿದಾಗ, ವಿರಾಟ್ ಕೊಹ್ಲಿಯ ವೇಗದ ಮತ್ತು ಪುಟಿಯುವ ಚೆಂಡುಗಳನ್ನು ಲೀಲಾಜಾಲವಾಗಿ ಬೌಂಡರಿಗೆ ಕಳುಹಿಸಿದಾಗ, ವೇಗದ ಚಂಡುಗಳನ್ನು ಸೂರ್ಯಕುಮಾರ್ ಯಾದವ್ ಅಟ್ಟಿಸಿಕೊಂಡು 360 ಡಿಗ್ರಿ ಹೊಡೆಯುವಾಗ ವಾವ್!!  ಅದ್ಭುತ!! ಎಂದು ಚಪ್ಪಾಳೆ ತಟ್ಟುವಾಗ ಇವೆಲ್ಲದರ ಹಿಂದೆ ಎಲೆಮರೆ ಕಾಯಿಯಂತೆ ಒಬ್ಬ ವ್ಯಕ್ತಿ ಇದ್ದು ಆತನೇ ಥ್ರೋಡೌನ್ ಸ್ಪೆಷೆಲಿಸ್ಟ್ ರಾಘವೇಂದ್ರ ದೀವಿಗಿ ಅರ್ಥಾತ್ ಎಲ್ಲರ ಪ್ರೀತಿಯ ರಾಘು, ರಾಘು ಬಯ್ಯಾನ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಅದು 1999-2000ರ ಆಸು ಪಾಸು. ಕುಮಟಾ ತಾಲ್ಲೂಕಿನ ವಿವೇಕ್ ನಗರ  ಸಂಪ್ರದಾಯಸ್ಥ ಶಿಕ್ಷಕರಿಗೆ ತಮ್ಮ ಮಗ ರಾಘವೇಂದ್ರನನ್ನು ಚೆನ್ನಾಗಿ ಓದಿಸಿ ದೊಡ್ಡ ಹುದ್ದೆಯಲ್ಲಿ ಕಾಣುವಾಸೆ. ಆದರೆ ಆಗ ತಾನೇ 10ನೇ ತರಗತಿ ಪರೀಕ್ಷೆ ಮುಗಿಸಿದ್ದ 15-16ರ ಮೀಸೆ ಚಿಗುರೊಡೆಯುತ್ತಿದ್ದ ರಾಘುವಿಗೆ ಕ್ರಿಕೆಟರ್ ಆಗುವ ಆಸೆ. ಈ ವಿಷಯಕ್ಕಾಗಿ ತಂದೆ ಮಗನ ಜೊತೆ ಜಟಾಪಟಿ ನಡೆದು ಕೇವಲ ಕೇವಲ 21  ರೂಪಾಯಿಗಳನ್ನು ಹಿಡಿದುಕೊಂಡು ಕುಮಟಾದಿಂದ ಸುಮಾರು 175 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿಗೆ ಬಂದಾಗ ಅಲ್ಲಿ ಎಲ್ಲಿ ಇರುವುದು? ಎಂದು ತಿಳಿಯದೇ ಸುಮಾರು ಒಂದೆರಡು ವಾರಗಳ ಕಾಲ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಆಶ್ರಯಿಸಿದ್ದನ್ನು ಗಮನಿಸಿದ ಪೊಲೀಸರು ಅಲ್ಲಿಂದ ಓಡಿಸಿದಾಗ,  ಅಲ್ಲೇ ಸಮೀಪದ  ಹನುಮಾನ್ ದೇವಸ್ಥಾನದಲ್ಲಿ  ಕೆಲದಿನಗಳ ಕಾಲ ಕಳೆದಾಗ, ಅಲ್ಲಿಂದಲೂ ಅವರನ್ನು ಎತ್ತಂಗಡಿ ಮಾಡಿಸಿದಾಗ, ತಮ್ಮ ವಾಸ್ತವ್ಯವನ್ನು  ಬಿವಿಬಿ ಇಂಜಿನಿಯರಿಂಗ್ ಕಾಲೇಜು ಬಳಿ ಇರುವ ಸ್ಮಶಾನವೊಂದಕ್ಕೆ ಬದಲಿಸಿಕೊಂಡ ರಾಘು ಅಲ್ಲಿಂದ  ಸುಮಾರು 4 ವರ್ಷಗಳ ಕಾಲ ಸ್ಮಶಾನವೇ ರಘು ಅವರಿಗೆ ಮನೆ, ಕ್ರಿಕೆಟ್ ಮ್ಯಾಟೇ ಹಾಸಿಗೆ ಮತ್ತು ಹೊದಿಕೆ. ಊಟ ತಿಂಡಿ ಇಲ್ಲದೇ ಎಷ್ಟೋ ದಿನಗಳ ಕಾಲ ಉಪವಾಸದಲ್ಲೇ ಮಲಗಿದಿದರೂ, ತಾನು ಬಂಧ ಧ್ಯೇಯವನ್ನು ಮರೆಯದೇ ಪ್ರತೀ ದಿನವೂ ಕ್ರಿಕೆಟ್ ಮೈದಾನಕ್ಕೆ ಹೋಗಿ ವೇಗದ ಬೌಲಿಂಗ್ ಮಾಡುತ್ತಾ ಎಲ್ಲರನ್ನೂ ಅಕರ್ಷಿಸಿದ್ದ ರಾಘು  ದಯಾನಂದ್ ಶೆಟ್ಟಿಯವರ ಕಣ್ಣಿಗೆ ಬಿದ್ದು ಅವರು ಈತನ ಧೃಢಸಂಕಲ್ಪ ಮತ್ತು ಕಠಿಣ ಪರಿಶ್ರಮವನ್ನು ನೋಡಿ ಬೆಂಗಳೂರಿನಲ್ಲಿದ್ದ ತಮ್ಮ ಸ್ನೇಹಿತ ಮತ್ತು ಕ್ರಿಕೆಟ್ ಕೋಚ್ ಇರ್ಫಾನ್ ಅವರನ್ನು ಪರಿಚಯಿಸಿ ಅವರ ಬಳಿ ತರಭೇತಿ ಪಡೆಯಲು ತಿಳಿಸಿದಾಗ ರಾಘುವಿಗೆ ಸ್ವರ್ಗಕ್ಕೆ ಮೂರೇ ಗೇಣು. ಎನ್ನುವಷ್ಟರ ಮಟ್ಟಿಗಿನ ಆನಂದ.  ಅದೇ ರಾತ್ರಿ ಹುಬ್ಬಳ್ಳಿಯ ಬಸ್ ಹತ್ತಿ ಮಾರನೇ ದಿನ ಬೆಳಿಗ್ಗೆ ಇರ್ಫಾನ್ ಅವರ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ)ಗೆ ಬಂದು ಅವರನ್ನು ಭೇಟಿಯಾಗುತ್ತಾರೆ.

ಕೆಐಒಸಿಗೆ ಸೇರಿದಾಗ ಉಳಿದು ಕೊಳ್ಳಲು ಮನೆಯೇ ಇಲ್ಲದ್ದದ್ದನು ಗಮನಿಸಿದ ಇರ್ಫಾನ್ ಅಭ್ಯಂತರ ಇಲ್ಲದೇ ಹೋದಲ್ಲಿ,  ಅದೇ  ಕಛೇರಿಯಲ್ಲಿ ಉಳಿದು ಕೊಳ್ಳಲು  ತಿಳಿಸಿದಾಗ ಅದಕ್ಕೆ ಸಂತೋಷದಿಂದ ಒಪ್ಪಿಕೊಂಡ ರಾಘು, ಅಲ್ಲಿ  ಅಭ್ಯಾಸಕ್ಕೆಂದು ಬರುತ್ತಿದ್ದ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಬೌಲಿಂಗ್ ಮಾಡುತ್ತಾ, ಸಮಯ ಸಿಕ್ಕಾಗ ತಾನು ಸಹಾ ಆಟವಾಡುತ್ತಾ, ನಿಧಾನವಾಗಿ ಬೆಂಗಳೂರಿನ ಡಿವಿಜನ್ ಕ್ರಿಕೆಟ್ಟಿನಲ್ಲಿ ಅಗ ಸಣ್ಣ ವಯಸ್ಸಿನವರಾಗಿದ್ದ, ಇನ್ನೂ ಪ್ರವರ್ಧಮಾನಕ್ಕೆ ಬಾರದಿದ್ದ ರಾಬಿನ್ ಉತ್ತಪ್ಪ, ಮನೀಷ್ ಪಾಂಡೆಯಂತಹವರ ಜೊತೆ ಲೀಗ್ ಕ್ರಿಕೆಟ್ ಆಟವಾಡುವಾಗಲೇ ದುರದೃಷ್ಟವಷಾತ್ ಅಪಘಾತಕ್ಕೆ ಈಡಾಗಿ ಬೌಲಿಂಗ್ ಮಾಡಲು ಸಾಧ್ಯವಿಲ್ಲದ ಹಾಗೆ  ಆದಾಗ, ತಾನು  ಪ್ರಾಣಕ್ಕಿಂತಲೂ ಪ್ರೀತಿಸಿದ ಕ್ರಿಕೆಟ್ ಆಟವನ್ನು ಇನ್ನು ಮುಂದೆ ಆಡಲು ಸಾಧ್ಯವಾಗುವುದಿಲ್ಲಾ ಎಂದು ತಿಳಿದು ಬಹಳಷ್ಟು ನೊಂದು ಕೊಳ್ಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ