ಹೆಣ್ಣುಮಕ್ಕಳಿಗೆ ಮುಟ್ಟಿಗೆ ಸಂಬಂಧಿಸಿದ ಶಿಕ್ಷಣ ನೀಡುತ್ತಾ ಅವರನ್ನು ಪ್ರಭಾವಶಾಲಿ ಆಗಿಸುತ್ತಿದ್ದಾರೆ

ಹೋಮ್ ಪ್ರೆನ್ಯೋರ್‌ ಅಚೀವರ್‌ ಅವಾರ್ಡ್‌ ಸಮಾಜ ಸೇವೆ ಮಾಡಬಯಸುವ ನಿಟ್ಟಿನಲ್ಲಿ ಅದಿತಿ ಗುಪ್ತಾ ಒಂದು ವಿಭಿನ್ನ ಹೆಸರು. ರೀತಿ ರಿವಾಜುಗಳ ವಿರುದ್ಧ ಕ್ರಾಂತಿಯನ್ನೇ ಮಾಡಿದರು. ಅಹಮದಾಬಾದಿನ `ನ್ಯಾಶನಲ್ ಇನ್‌ ಸ್ಟಿಟ್ಟೂಟ್‌ ಆಫ್‌ ಡಿಸೈನ್‌’ನ ಮಾಜಿ ವಿದ್ಯಾರ್ಥಿನಿ ಅದಿತಿ ಗುಪ್ತಾ, ಕಳೆದ 12 ವರ್ಷಗಳಿಂದ ಮೆನ್‌ ಸ್ಟ್ರುಯೆಲ್ ‌ಎಜುಕೇಟರ್‌ ಪಾತ್ರ ವಹಿಸುತ್ತಿದ್ದಾರೆ. ಈಕೆ ಮೆನ್ ಸ್ಟ್ರುಪೀಡಿಯಾ ಸಂಸ್ಥೆಯ ಸಹಸಂಸ್ಥಾಪಕಿ. ಕಿಶೋರವಾಸ್ಥೆಯಲ್ಲಿ ಮುಟ್ಟಿನ ಕುರಿತಾಗಿ ಅನುಭವಿಸಿದ್ದ ಯಾತನೆಯ ದಿನಗಳನ್ನು ನೆನೆದು, ಆ ನಿಟ್ಟಿನಲ್ಲಿ ಹೊಸತೇನೋ ಮಾಡಲು ಬಯಸಿದರು. ಹೆಂಗಸರು ಈ ಕುರಿತು ಮಾತನಾಡುವಾಗ ಬಹಳ ಮುಜುಗರಕ್ಕೆ ಒಳಗಾಗುತ್ತಾರೆ ಎಂದು ಇವರಿಗೆ ಚೆನ್ನಾಗಿ ಗೊತ್ತಿತ್ತು.

ಪೀರಿಯಡ್ಸ್ ಕುರಿತಾಗಿ ನಮ್ಮ ಹೆಂಗಳೆಯರಲ್ಲಿ ಸಾಕಷ್ಟು ಮೂಢನಂಬಿಕೆಗಳು ಬೆಳೆದುಬಂದಿವೆ. ಈ ಕಾರಣದಿಂದಾಗಿ ಹೆಣ್ಣುಮಕ್ಕಳು ಎಷ್ಟೋ ಯಾತನೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಅದಿತಿ ಮೆನ್‌ ಸ್ಟ್ರುಪೀಡಿಯಾ ಮಾಧ್ಯಮದಿಂದ, ವೈಜ್ಞಾನಿಕ ಶಿಕ್ಷಣದ ಮೂಲಕ ಮುಟ್ಟಿಗೆ ಸಂಬಂಧಿಸಿದ ಎಲ್ಲಾ ಮಿಥ್ಯೆ, ಮೂಢತೆಗಳನ್ನು ತೊಲಗಿಸಿದ್ದಾರೆ. ಈ ಸಂಸ್ಥೆ ಒಂದು ವೈಜ್ಞಾನಿಕ ವೇದಿಕೆಯಾಗಿದ್ದು, ಮುಟ್ಟು ಎಂದರೆ ಕಳಂಕವಲ್ಲ ಎಂದು, ಕಾಮಿಕ್ಸ್ ಪುಸ್ತಕ ಹಾಗೂ ಸಂಬಂಧಿಸಿದ ಮೀಡಿಯಾ ಮೂಲಕ ಮಾಹಿತಿ ನೀಡುತ್ತಾರೆ.

ಮೆನ್ಸ್ಟ್ರುಪೀಡಿಯಾ ಸ್ಥಾಪನೆ

ಗಢಾ, ಝಾರ್ಖಂಡ್‌ ನಲ್ಲಿ ಹುಟ್ಟಿದ ಅದಿತಿ ಗುಪ್ತಾ ತನ್ನ ಸುತ್ತಮುತ್ತಲೂ ಮುಟ್ಟಿನ ಕುರಿತು ಇರುವ ವ್ಯಾಪಕ ಕಳಂಕ, ತಪ್ಪು ಧೋರಣೆ ನೋಡುತ್ತಾ ಬೆಳೆದರು. ಒಂದು ನೈಸರ್ಗಿಕ ಪ್ರಕ್ರಿಯೆಗೆ ಇದೇಕೆ ಇಂಥ ಸಂಕೀರ್ಣ ಕೂಪ ಮಂಡೂಕತನ ಎಂದು ಬೆರಗಾದರು. ಇದರ ವಿರುದ್ಧ ಹೋರಾಡಲೇಬೇಕು, ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ನಿರ್ಧರಿಸಿದರು. ಈ ನಿಟ್ಟಿನಲ್ಲಿ 2012ರಲ್ಲಿ ಅದಿತಿ ಗುಪ್ತಾ, ಈಕೆಯ ಪತಿ ತುಹಿನ್‌ ಪಾಲ್ ‌ಕೂಡಿ ಮೆನ್‌ ಸ್ಟ್ರುಪೀಡಿಯಾದ ಸಹಸ್ಥಾಪನೆ ಮಾಡಿದರು. ಅದಿತಿಯ ವಿಷನ್‌ ಅಂದ್ರೆ ಮಾತುಕಥೆ ಮೂಲಕ ಮುಟ್ಟಿನ ಕುರಿತಾಗಿದ್ದ ಮೌಢ್ಯ ತೊಲಗಿಸುವುದು, ಕಳಂಕವಲ್ಲ ಎಂದು ಸಾರುವುದು, ಹೆಂಗಸರಲ್ಲಿ ಈ ಕುರಿತು ಅಜ್ಞಾನ ತೊಲಗಿಸಿ ವಿಜ್ಞಾನದಿಂದ ಸುಧಾರಣೆ ತರುವುದಾಗಿತ್ತು.

ಅದಿತಿ ಈ ರೀತಿ ಮುಟ್ಟಿನ ಕುರಿತಾಗಿ ಖುಲ್ಲಂಖುಲ್ಲ ಮಾತುಕಥೆ ಆಡತೊಡಗಿದಂತೆ, ಸಾಮಾಜಿಕ ವಿರೋಧ, ತಿರಸ್ಕಾರಗಳನ್ನು ಎದುರಿಸ ಬೇಕಾಯಿತು, ಅದರಲ್ಲೂ ಸಾಂಪ್ರದಾಯಿಕ ಸಮುದಾಯಗಳಲ್ಲಿ! ತಮ್ಮ ಸಂಸ್ಥೆ ಮೂಲಕ ಹೆಣ್ಣುಮಕ್ಕಳು, ಅವರ ಹಿರಿಯರು, ಶಿಕ್ಷಕರಿಗೆ ಸಂವೇದನಾಶೀಲ ವಿಧಾನದಿಂದ ಮುಟ್ಟಿನ ಕುರಿತಾಗಿ ವೈಜ್ಞಾನಿಕ  ಮಾಹಿತಿ ನೀಡಲೆಂದೇ ಕಾಮಿಕ್ಸ್ ಬುಕ್ಸ್, ಕಾರ್ಯಾಗಾರಗಳು, ಡಿಜಿಟಲ್ ಸಾಮಗ್ರಿ ಬಳಸಿಕೊಂಡರು. ಈ ಸಂಸ್ಥೆಯ ಕಾಮಿಕ್ಸ್ ಭಾರತ ಮಾತ್ರವಲ್ಲದೆ, ವಿಶ್ವಾದ್ಯಂತ 20+ ದೇಶಗಳ ಶಾಲೆಗಳಲ್ಲಿ, ಮನೆ ಮನೆಗಳಲ್ಲಿ ಒಂದು ವಿಶ್ವಸನೀಯ ಸಂಗಾತಿ ಆಗಿದೆ.

ಮುಟ್ಟಿನ ಕುರಿತ ಶೈಕ್ಷಣಿಕ ಮಾಹಿತಿಯನ್ನು 13 ಸಾವಿರಕ್ಕೂ ಹೆಚ್ಚಿನ ಶಾಲೆಗಳಿಗೆ ತಲುಪಿಸಿದ್ದಾರೆ. ಇಂಥ ಕಾಮಿಕ್ಸ್, ವರ್ಕ್‌ ಶಾಪ್ ಗಳಿಂದ 1.5 ಮಿಲಿಯನ್‌ ಗೂ ಅಧಿಕ ಹೆಣ್ಣುಮಕ್ಕಳನ್ನು ಪ್ರಭಾವಶಾಲಿಗೊಳಿಸಿದ್ದಾರೆ.

ಯಶಸ್ಸಿನ ಕಥೆ

ಅದಿತಿ ಪೇರ್ಬ್ಸ್ ಇಂಡಿಯಾ 30 ಅಂಡರ್‌ 30 ಅಚೀವರ್‌. ಇವರನ್ನು 2015ರಲ್ಲಿ 100 ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರು ಎಂದು ಹೆಸರಿಸಲಾಗಿತ್ತು. ಈಕೆ ಶಾರ್ಕ್‌ ಟ್ಯಾಂಕ್‌ ಇಂಡಿಯಾದ ವಿಜೇತೆ, ಸಂಸ್ಥಾಪಕಿ ಸಹ. ಈಕೆ 7 ದೇಶಗಳಲ್ಲಿ ಮುಟ್ಟಿಗೆ ಸಂಬಂಧಿಸಿದ ಆರೋಗ್ಯದ ಕುರಿತವಾಗಿ ಜಾಗೃತಿ ಉಂಟು ಮಾಡುವ ಕ್ಷೇತ್ರದಲ್ಲಿ, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಸಾಬೀತುಪಡಿಸಲು ಆಹ್ವಾನಿಸಲಾಗಿತ್ತು. ಈಕೆ ಲಂಡನ್ನಿನ, ಥಾಮಸ್‌ ರೈಟರ್ಸ್‌ ಫೌಂಡೇಶನ್‌ ಟ್ರಸ್ಟ್, ಮಹಿಳಾ ಸಮ್ಮೇಳನದ ಬ್ರೇಕಿಂಗ್‌ ಟ್ಯಾಬೂ ಪ್ಯಾನೆಲ್ ನಲ್ಲಿ ಮಾತನಾಡಿದ್ದರು. ಬಿಸ್‌ ನೆಸ್‌ ಟುಡೇ, ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರೆಂದು ಇವರನ್ನು ಅತಿ ಶಕ್ತಿಶಾಲಿ ಮಹಿಳೆ ಎಂದು ಗೌರವಿಸಿ ಸನ್ಮಾನಿಸಿದೆ.

ಗೃಹಶೋಭಾ ಇನ್ಸ್ಪೈರಿಂಗ್ಅವಾರ್ಡ್ಸ್

ಪ್ರೇರಣಾದಾಯಕ, ಅಚೀವರ್‌ ಮಹಿಳೆಯರ ಕೆಲಸ ಕಾರ್ಯ ಸನ್ಮಾನಿಸಲೆಂದೇ ಕಳೆದ ಮಾರ್ಚ್‌ 20ರಂದು ದೆಹಲಿಯ ಟ್ರಾಂಕೋರ್‌ ಪ್ಯಾಲೇಸ್‌ ನಲ್ಲಿ ಅವಾರ್ಡ್‌ ಸಮಾರಂಭ ಆಯೋಜಿಸಲಾಗಿತ್ತು. ಇದರಲ್ಲಿ ಅದಿತಿ ಗುಪ್ತಾರಿಗೆ ಹೋಮ್ ಪ್ರೆನ್ಯೋರ್ ಅಚೀವರ್‌ (ಗೃಹಶೋಭಾ ಇನ್‌ ಸ್ಪೈರಿಂಗ್‌ ಅವಾರ್ಡ್ಸ್) ಅವಾರ್ಡ್‌ ನಿಂದ ಸನ್ಮಾನಿಸಲಾಯಿತು. ಅಲ್ಲಿ ಅವರ ಮುಖದಲ್ಲಿ ಕಂಡುಬಂದ ಮುಗುಳ್ನಗು, ಆತ್ಮವಿಶ್ವಾಸ ಅವರ ಯಶಸ್ಸಿನ ಪಯಣದ ಸೂಚಕವಾಗಿತ್ತು.

ಗರಿಮಾ ಪಂಕಜಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ