ಕನ್ನಡವೆಂದರೆ ಮುಖ ಕಿವುಚುವಂಥ ಸಂಕುಚಿತ ಸಂಕೀರ್ಣ ಮನೋಭಾವದ ಆಧುನಿಕ ಕಾಲದಲ್ಲಿ, ಸಪ್ತ ಸಾಗರದಾಚೆ ಎಲ್ಲೋ ಅಮೆರಿಕದ ನ್ಯೂಜೆರ್ಸಿಯಲ್ಲಿ ಸತತ ಕನ್ನಡದ ಕಂಪನ್ನು ಹರಡುತ್ತಿರುವ ಸೀಮಾ ಮೂರ್ತಿಯವರ ಪರಿಚಯ ಪಡೆಯೋಣವೇ......?

ಸೀಮಾ ಮೂರ್ತಿ ಮೂಲತಃ ಕರ್ನಾಟಕದ ಮೈಸೂರಿನಲ್ಲಿ ಜನಿಸಿ, ಹೆತ್ತವರೊಂದಿಗೆ ಇಲ್ಲೇ ನೆಲೆಸಿ ರಾಜ್ಯದ ಉಡುಪಿ, ಮತ್ತಿತರ ಸ್ಥಳಗಳಲ್ಲಿ ಹಾಗೂ ವಿದೇಶಗಳಲ್ಲೂ ವಿದ್ಯಾಭ್ಯಾಸ ಮಾಡಿದರು. ವೃತ್ತಿಯಲ್ಲಿ ಸಾಫ್ಟ್ ವೇರ್‌ ಆರ್ಕಿಟೆಕ್ಟ್ ಆಗಿರುವ ಸೀಮಾ, ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ನಲ್ಲಿ ಬಿ.ಇ. ಪದವಿ ಮುಗಿಸಿದರು. ಆರಂಭದಲ್ಲಿ ಬೆಂಗಳೂರಿನಲ್ಲಿ ಮಾರ್ಕೆಟಿಂಗ್‌ ಎಂಜಿನಿಯರ್‌ ಆಗಿ ಕೆಲಸ ಶುರು ಮಾಡಿದರು. ವಿವಾಹದ ನಂತರ 1996ರಿಂದ ತಮ್ಮ ಪತಿ ವಿಜಯ್‌ ಮೂರ್ತಿ ಮತ್ತು ಇಬ್ಬರು ಮಕ್ಕಳೊಂದಿಗೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಮ್ಯಾನ್‌ ಹಟನ್‌ ನಗರಕ್ಕೆ ಸಮೀಪದಲ್ಲಿರುವ, ಹಡ್ಸನ್‌ ನದಿ ತೀರ ಹೊಂದಿರುವ, ಸ್ಟಾಚ್ಯು ಆಫ್‌ ಲಿಬರ್ಟಿ ಪ್ರತಿಮೆ ಇರುವಂಥ ಈ ನಗರದಲ್ಲಿ ಕನ್ನಡದ ಕಂಪನ್ನು ಹರಡಲು ಇವರು ಸತತ ಹೋರಾಡುತ್ತಿದ್ದಾರೆ.

ತನ್ನ ಮಗಳು ಸುಮಾರು 7 ವರ್ಷ ವಯಸ್ಸಿನವಳಾಗಿದ್ದಾಗ, ಅವಳನ್ನು ಕನ್ನಡ ತರಗತಿಗಳಿಗೆ ಸೇರಿಸಲು ಬಯಸಿದ್ದರು. ಅಲ್ಲಿ ನಡೆಯುತ್ತಿದ್ದ ಕನ್ನಡ ತರಗತಿಗಳಿಗೆ ಸೇರಿಸಲು ಮಕ್ಕಳನ್ನು ನ್ಯೂಜೆರ್ಸಿ ಬ್ರಿಡ್ಜ್ ವಾಟರ್‌ ನಲ್ಲಿರುವ ಬಾಲಾಜಿ ದೇವಸ್ಥಾನಕ್ಕೆ ಕರೆದೊಯ್ದರಂತೆ. ಅಲ್ಲಿ ಬಹುತೇಕ ಭಾರತೀಯ ಭಾಷೆಗಳ ತರಗತಿಗಳನ್ನು ನಡೆಸಲಾಗುತ್ತಿತ್ತು. ಆದರೆ ಇತರ ಭಾಷೆಗಳಿಗೆ ಹೋಲಿಸಿದರೆ, ಕನ್ನಡ ತರಗತಿಯಲ್ಲಿದ್ದ ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇತ್ತು. ಮಾತ್ರವಲ್ಲ, ಇತರ ಭಾಷೆಗಳ ತರಗತಿಗಳು ಪ್ರತಿವಾರ ನಡೆಯುತ್ತಿದ್ದರೆ ಕನ್ನಡ ತರಗತಿಗಳನ್ನು ಎರಡು ವಾರಗಳಿಗೊಮ್ಮೆ ನಡೆಸಲಾಗುತ್ತಿತ್ತು. ಸಾಲದ್ದಕ್ಕೆ ಕೆಲವು ವಾರಗಳ ನಂತರ ವಿದ್ಯಾರ್ಥಿಗಳ ಕೊರತೆಯಿಂದ ಶಿಕ್ಷಕರು ಬರುವುದನ್ನೇ ನಿಲ್ಲಿಸಿದರು. ಹಾಗಾಗಿ ತರಗತಿಗಳು ನಿಂತೇ ಹೋದವು.

1000299715

ಕನ್ನಡ ಕಲಿಸುವಿಕೆಯ ಆರಂಭ

ಸೀಮಾ ಇದನ್ನು ಸರಿಪಡಿಸಿ ಕನ್ನಡ ಕಲಿಯಲು ಆಸಕ್ತಿ ಇರುವವರನ್ನು ಪ್ರೋತ್ಸಾಹಿಸಲು ಕಾರ್ಯಪ್ರವೃತ್ತರಾದರು. ಕನ್ನಡ ಕಲಿಕೆಗೊಂದು ಕಾಯಕಲ್ಪ ನೀಡುವ ಸಂಕಲ್ಪ ಮಾಡಿ, ಕನ್ನಡ ತರಗತಿಗಳನ್ನು ಪುನರಾರಂಭಿಸಲು ತಾನೇ ಮುಂದಾಳ್ವ ವಹಿಸಿದರು. ಅವರು ಭಾರತೀಯ ಮೂಲಕ ಅಮೆರಿಕನ್‌ ಕನ್ನಡಿಗರ ಮಕ್ಕಳನ್ನು ಒಗ್ಗೂಡಿಸಿ ತರಗತಿಗಳನ್ನು ಮತ್ತು ಪಠ್ಯಕ್ರಮವನ್ನು ಪುನರ್‌ ರಚಿಸಿದರು. ಒಂದು ತರಗತಿಯಿಂದ ಇನ್ನೊಂದರ ನಡುವೆ ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ ಇರುತ್ತಿದ್ದ ಅಂತರದ ಕಾರಣಕ್ಕೆ ಒಟ್ಟಾರೆ ಆಸಕ್ತಿ ಕ್ಷೀಣಿಸುತ್ತಿರುವುದನ್ನು ಗಮನಿಸಿ ಅದನ್ನು ಸರಿಪಡಿಸಲು ಸಮಾನ ಮನಸ್ಕರ ಸಹಕಾರದೊಂದಿಗೆ ಸಮಗ್ರ ಕಾರ್ಯಕ್ರಮವೊಂದನ್ನು ರೂಪಿಸಿದರು. ಮುಖ್ಯವಾಗಿ ವಾರಕ್ಕೊಮ್ಮೆ ನಡೆಯುವ ವೇಳಾಪಟ್ಟಿಯನ್ನು ಬದಲಾಯಿಸಿದರು.

ಒಂದೇ ಒಂದು ಮಗುವಷ್ಟೇ ಬರುತ್ತಿದ್ದರೂ ತರಗತಿ ನಡೆಸುವ ನಿರ್ಧಾರ ಮಾಡಿರುವುದು ಇವುಗಳಲ್ಲಿ ಮುಖ್ಯವಾದುದು (ಇದು ಇಂದಿಗೂ ಚಾಲನೆಯಲ್ಲಿದೆ). ಒಟ್ಟಿನಲ್ಲಿ ಕನ್ನಡ ಕಲಿಕೆ ಕಾರ್ಯಕ್ರಮ ಸೀಮಾ ಅವರ ಮುತುವರ್ಜಿಯಿಂದ ಪುನರಾರಂಭವಾಯಿತು.

1000299714

ಕನ್ನಡದ ಸಂಘಟಿತ ಕಾರ್ಯಕ್ರಮ

ನ್ಯೂಜೆರ್ಸಿಯಲ್ಲಿ ಇದು ಕಳೆದ 20+ ವರ್ಷಗಳಿಂದ ಸಂಘಟಿತವಾಗಿ ಬೆಳೆದಿದೆ. ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ತರಗತಿಗಳು ಬ್ರಿಡ್ಜ್ ವಾಟರ್‌, ಎಡಿಸನ್‌, ಪಾರ್ಸಿಪ್ಪನಿ ಮತ್ತು ಮನ್ರೋ ಈ ನಾಲ್ಕು ಕೇಂದ್ರಗಳಲ್ಲಿ ನಡೆಯುತ್ತದೆ. ಇವುಗಳಿಗೆ ಯಾವುದೇ ಶುಲ್ಕವಿಲ್ಲ. ಆದರೆ ದಾನ ರೂಪದಲ್ಲಿ ಸಂಗ್ರಹವಾದ ಏನನ್ನೇ ಆದರೂ ಅದನ್ನು ತರಗತಿಗಳು ನಡೆಯಲು ಸ್ಥಳಾವಕಾಶ ಒದಗಿಸುವ ದೇವಾಲಯಗಳಿಗೆ ದೇಣಿಗೆಯಾಗಿ ನೀಡಲಾಗುತ್ತದೆ. ಉತ್ತಮ ತರಬೇತಿ ಪಡೆದ, ಸಮರ್ಪಿತ ಮನೋಭಾವದ ಶಿಕ್ಷಕರ ಗುಂಪು ಇದಕ್ಕೆ ಪರಿಪೂರ್ಣ ಸಹಕಾರ ನೀಡುತ್ತಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕನ್ನಡದ ಜ್ಞಾನವನ್ನು ನೀಡುವಲ್ಲಿ ಯಾವುದೇ ನ್ಯೂನತೆಯಾಗದಂತೆ ಗರಿಷ್ಠ ಎಚ್ಚರ ವಹಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ