‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ನಂತರ, ಜೀ ಕನ್ನಡ ವಾಹಿನಿಯು ಈಗ ಸಂಗೀತದ ಮಾಯಾಲೋಕವನ್ನು ಮರಳಿ ತರಲು ಸಜ್ಜಾಗಿದೆ.

ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಹೆಸರುವಾಸಿಯಾದ ಜನಪ್ರಿಯ ಗಾಯನ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’, ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. 3 ರಿಂದ 15 ವರ್ಷದೊಳಗಿನ ಪುಟಾಣಿ ಪ್ರತಿಭೆಗಳು ಭಾಗವಹಿಸುವ ಈ ಸೀಸನ್, ಕರ್ನಾಟಕದ ಮೂಲೆ ಮೂಲೆಯ ಕಿರಿಯ ಗಾಯಕರ ಅದ್ಭುತ ಪ್ರದರ್ಶನಗಳು ಮತ್ತು ಮರೆಯಲಾಗದ ಸಂಗೀತದ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

‘ಸರಿಗಮಪ ಲಿಟಲ್ ಚಾಂಪ್ಸ್’ ಏಪ್ರಿಲ್ 18ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ. ಈ ಸೀಸನ್‌ನಲ್ಲಿ ಅಪ್ರತಿಮ ಪ್ರತಿಭೆ ಹೊಂದಿರುವ ಪುಟ್ಟ ಗಾಯಕರು ತಮ್ಮ ಧ್ವನಿಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದ್ದಾರೆ. ಮನೋರಂಜನೆ ಮತ್ತು ಭಾವನೆಗಳ ಸಮ್ಮಿಶ್ರಣವಾಗಿರುವ ಈ ಕಾರ್ಯಕ್ರಮವು, ಉದಯೋನ್ಮುಖ ಗಾಯಕರಿಗೆ ಭವ್ಯ ವೇದಿಕೆ ಕಲ್ಪಿಸಿಕೊಡುವುದರ ಜೊತೆಗೆ ಸಂಗೀತದ ಸಂಭ್ರಮವನ್ನು ಆಚರಿಸಲಿದೆ.

ಈ ಬಾರಿಯೂ ಕನ್ನಡಿಗರ ನೆಚ್ಚಿನ ಗಾಯಕರಾದ ರಾಜೇಶ್ ಕೃಷ್ಣನ್, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಎಲ್ಲರ ಫೇವರಿಟ್ ವಿಜಯ್ ಪ್ರಕಾಶ್ ಅವರು ತೀರ್ಪುಗಾರರಾಗಿದ್ದು  ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ತಮ್ಮ ಅಪಾರ ಅನುಭವದ ಮೂಲಕ ಪುಟಾಣಿ ಪ್ರತಿಭೆಗಳು ವೇದಿಕೆಯ ಮೇಲೆ ಮಿಂಚಲು ಇವರು ಸ್ಫೂರ್ತಿಯಾಗಲಿದ್ದಾರೆ. ಅನುಶ್ರೀ ಅವರು ತಮ್ಮ ನಿರೂಪಣೆ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ.

ಟೆಲಿವಿಷನ್ ಮಾತ್ರವಲ್ಲದೆ, ಜೀ ಕನ್ನಡದ ಸಾಮಾಜಿಕ ಜಾಲತಾಣಗಳ ಮೂಲಕವೂ ವೀಕ್ಷಕರು ತೆರೆಯ ಹಿಂದಿನ ಕ್ಷಣಗಳು, ಸ್ಪರ್ಧಿಗಳ ಪಯಣ ಮತ್ತು ಹಾಸ್ಯ ಸನ್ನಿವೇಶಗಳ ತುಣುಕುಗಳನ್ನು ಆನಂದಿಸಬಹುದು. ಪ್ರಾಕ್ಟೀಸ್ ನಿಂದ ಹಿಡಿದು ತೀರ್ಪುಗಾರರ ಸಹಜ ಪ್ರತಿಕ್ರಿಯೆಗಳವರೆಗೆ ಎಲ್ಲವನ್ನೂ ಒಳಗೊಂಡ ಈ ವಿಡಿಯೋ ಗಳು ಅಭಿಮಾನಿಗಳನ್ನು ಈ ರಿಯಾಲಿಟಿ ಶೋ ಗೆ ಮತ್ತಷ್ಟು ಹತ್ತಿರವಾಗಿಸಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ