ಟ್ಯಾಗೆ ರೀತಾ ತಾಖೆ
ಟ್ಯಾಗೆ ರೀತಾ ತಾಖೆ ಹುಟ್ಟಿದ್ದು ಅರುಣಾಚಲ ಪ್ರದೇಶ ರಾಜ್ಯದ ಝೀರೋಘಾಟಿ ಗ್ರಾಮದಲ್ಲಿ. ಅಪಾತಾನಿ ಬುಡಕಟ್ಟು ಜನಾಂಗಕ್ಕೆ ಸೇರಿದ ಈಕೆ `ನಾರ್ತ್ ಈಸ್ಟರ್ನ್ ರೀಜನಲ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಟೆಕ್ನಾಲಜಿ,’ ನಿರಜಲಲಿ, ಅ.ಪ್ರದೇಶದಿಂದ ಕೃಷಿ ಪದವೀಧರೆ ಎನಿಸಿದ್ದಾರೆ. ಈಕೆಯ ಕೆರಿಯರ್ ನ ಆರಂಭ ಒಬ್ಬ ಕೃಷಿ ಎಂಜಿನಿಯರ್‌ರೂಪದಲ್ಲಾಯಿತು. ಆ ನಂತರ ಬಲು ಬೇಗ ಆಕೆ ಯಶಸ್ವೀ ಉದ್ಯಮಿ ಎನಿಸಿದರು.
ಈಕೆ ಭಾರತದ ಪ್ರಪ್ರಥಮ ಜೈವಿಕ ಕಿವೀ ಲೈನ್ ಬ್ರಾಂಡ್`ನಾರಾ ಆಬಾ’ದ ಸಂಸ್ಥಾಪಕಿ. ಅಕ್ಟೋಬರ್ 2017ರಲ್ಲಿ ಈಕೆ ತನ್ನ ದಿಂಗತ ಮಾನವರ ಹೆಸರಿನಲ್ಲಿ ಈ ವೈನ್ ಕಂಪನಿ ಆರಂಭಿಸಿದರು. ಇದು ಆ ರಾಜ್ಯದಲ್ಲಿ ಝೀರೋ ಕಂಪನಿ ಹಾಂಗ್ ಗಾಂವ್ ಎಂಬ ಹಳ್ಳಿಯಲ್ಲಿನ ಒಂದು ಅಪ್ಪಟ ಭಾರತೀಯ ಖಾಸಗಿ ಕಂಪನಿ. ಈ ಕಂಪನಿ ದೇಶದ ಮೊದಲ ಆರ್ಗಾನಿಕ್ ಕಿವೀ ವೈನ್‌ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ.
ವಿಶ್ವದೆಲ್ಲೆಡೆ ವಿಖ್ಯಾತಿ
ಝೀರೋಘಾಟಿ ತನ್ನ ಫಲವತ್ತಾದ ಭೂಮಿ, ರಮ್ಯ ಪ್ರಕೃತಿಗಾಗಿ ಹೆಸರಾಗಿದೆ. ರೀತಾ ಅಲ್ಲಿ ಮನಸ್ಸಿಟ್ಟು ಕೃಷಿಗೆ ತೊಡಗಿ, ವೈನ್ ಉದ್ಯಮ ಅಭಿವೃದ್ಧಿಪಡಿಸಿ, ಇದನ್ನು ಅಗ್ರಗಣ್ಯ ಶ್ರೇಣಿಗೆ ತಂದು ನಿಲ್ಲಿಸಿದ್ದಾರೆ. ಆ ಹಳ್ಳಿಯಲ್ಲಿ ಕಿವೀ ಫ್ರೂಟ್ ಬಲು ಹುಲುಸಾಗಿ ಬೆಳೆಯಲ್ಪಡುತ್ತದೆ. ಹೀಗಾಗಿ ಇದರ ವೈನ್ ತಯಾರಿಸಲು ಹೊರಗಿನಿಂದ ಹಣ್ಣು ತರಿಸುವ ಪ್ರಮೇಯವೇ ಬರಲಿಲ್ಲ. ಈ ರೀತಿ ಈಕೆಯ ವೈನ್ ಎಲ್ಲೆಲ್ಲೂ ಪ್ರಸಿದ್ಧಿ ಪಡೆಯಿತು.
ಈ ವೈನಿನ ಸರಿಯಾದ ಪ್ರಕ್ರಿಯೆ, ಸಮರ್ಪಕ ಮಿಶ್ರಣ ತಯಾರಿಸುಲ್ಲಿ ರೀತಾ 6 ವರ್ಷಗಳ ಸಂಶೋಧನೆ ನಡೆಸಿದ್ದಾರೆ. ನಂತರ ಯೋಜನಾಬದ್ಧರಾಗಿ ಕೆಲಸ ಶುರು ಮಾಡಿದರು. ವೈನ್ ಲೋಕಕ್ಕೆ ಒಬ್ಬ ಹೆಣ್ಣಿನ ಸೇರ್ಪಡೆ, ಯಶಸ್ಸು ಸಹಜವಾಗಿಯೇ ಪೈಪೋಟಿ ನೀಡುವ ಪುರುಷ ಪ್ರಧಾನ ಸಮಾಜದ ಸಿಟ್ಟು ಕೆರಳಿಸುತ್ತದೆ. ಹೀಗಾಗಿ ಈಕೆಗೆ ಈ ಉದ್ಯಮ ನಡೆಸಲು ಅಡ್ಡಿ ಆತಂಕ ಸಾವಿರಾರಲ್ಲ, ಲಕ್ಷಾಂತರ ಎನ್ನಬಹುದು. ಆರಂಭದಲ್ಲಿ 20 ಸಾವಿರ ಲೀ. ಸಾಮರ್ಥ್ಯವುಳ್ಳ ಇವರ ವೈನರಿ, ಇದೀಗ 60 ಸಾವಿರ ಲೀ. ಉತ್ಪಾದನೆ ಮೀರಿಸುತ್ತಿದೆ! ಹೀಗಾಗಿ ತಮ್ಮ ಮೊದಲ ಉದ್ಘಾಟನಾ ವಾರ್ಷಿಕೋತ್ಸವದಲ್ಲಿ 300ಕ್ಕೂ ಹೆಚ್ಚಿನ ರೈತರಿಗೆ ಆರ್ಥಿಕ ನೆರವು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
60-80 ಸಿ. ಶಾಖದಲ್ಲಿ ಈ ವೈನಿನ ರುಚಿ ಬೊಂಬಾಟ್! ಕಿವೀ ಫ್ರೂಟ್ ನ್ನು ಪೇಸ್ಟ್ ಮಾಡುವುದರಿಂದ, ವೈನ್ ಬಾಟಲಿಗೆ ತುಂಬಿಸುವವರೆಗೂ ಒಟ್ಟಾರೆ 4 ತಿಂಗಳ ಉತ್ಪಾದನಾ ಕಾರ್ಯವಿದು. ಈಕೆ ಕಾರ್ಯಕ್ಷೇತ್ರ ಇದೀಗ ವೈನ್ ಉತ್ಪಾದನೆ ಮೀರಿ ಮುನ್ನಡೆದಿದೆ!
ಉಲ್ಲೇಖನೀಯ ಯಶಸ್ಸು
ಈಕೆಯ ಸುಪರ್ಬ್ ಯಶಸ್ಸು ಇವರಿಗೆ ಅನೇಕ ಪುರಸ್ಕಾರಗಳನ್ನು ತಂದುಕೊಟ್ಟಿದೆ. ಅದರಲಿ ಆಯೋಗ ಕೂಡಿ 2018ರಲ್ಲಿ `ಮಹಿಳಾ ಭಾರತ ಪರಿವರ್ತನ ಪುರಸ್ಕಾರ’ ಹಾಗೂ 2022ರಲ್ಲಿ ಪ್ರತಿಷ್ಠಿತ `ನಾರಿ ಶಕ್ತಿ ಪುರಸ್ಕಾರ’ಗಳು ಸೇರಿವೆ.
ಇವರ ಕಂಪನಿ ಒಂದು ಮಹತ್ವಪೂರ್ಣ ನಿಯುಕ್ತಿ ರೂಪದಲ್ಲಿ ಬೆಳೆದುಬಂದಿದೆ. ಇಲ್ಲಿ ಆರಂಭದಲ್ಲಿ 25ಕ್ಕೂ ಹೆಚ್ಚಿನ ಸಿಬ್ಬಂದಿ ಇದ್ದರು. 100ಕ್ಕೂ ಹೆಚ್ಚಿನ ಕೆಲಸಗಾರರು ಇಲ್ಲಿ ಆದಾಯ ಗಳಿಸುವಂತಾಯಿತು. ನಾರಾ ಆಬಾ ಬ್ರಾಂಡ್ ನ ಆರ್ಥಿಕ ಯಶಸ್ಸು ವಾರ್ಷಿಕ 12 ಕೋಟಿ ಇದ್ದದ್ದು, ಈಕೆಯ ಉದ್ಯಮಿಶೀಲ ಕುಶಲತೆಯಿಂದ ಮುಂದೆ ಎಷ್ಟೋ ಕೋಟಿಗಳನ್ನು ದಾಟಿತು. ಈಕೆಯ ಪ್ರಭಾವ ಕೇವಲ ವ್ಯಾಪಾರಿ ಜಗತ್ತಿನಲ್ಲಿ ಮಾತ್ರವಲ್ಲದೆ, ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಬಲು ದೊಡ್ಡ ಪ್ರೇರಣೆಯಾಯಿತು.
ಹೆಣ್ಣು ತನ್ನ ಧೀಶಕ್ತಿ ಗುರುತಿಸಬೇಕು!
ರೀತಾ ಗೃಹಶೋಭಾ ಇನ್ ಸ್ಪೈರ್ ಅವಾರ್ಡ್ಸ್ ನ ಬಿಸ್ ನಸ್ ಲೀಡರ್ ಶಿಪ್ ಅಚೀವರ್ ವಿಭಾಗದಲ್ಲಿ ಅವಾರ್ಡ್‌ಪಡೆದು ಬಲು ಉತ್ಸಾಹಗೊಂಡಿದ್ದಾರೆ. ಇದು ತಮ್ಮ ಏಳಿಗೆಗೆ ಪೂರಕ ಎನ್ನುತ್ತಾರೆ. ಈಕೆ ತನ್ನ ಕೆಲಸಗಳಿಂದ, ಗಂಡಿನಂತೆಯೇ ಹೆಣ್ಣು ಮಾಡಲಾಗದ ಕೆಲಸವೇ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಏನೇ ಆಗಲಿ, ಅಬಲೆ ಎಂಬ ಲೇಬಲ್ ಬಿಟ್ಟು ಹೆಣ್ಣು ಸಬಲೆಯಾಗಿ, ಸಾಮಾಜಿಕ ಬಂಧನಗಳನ್ನು ಮುರಿದು ಮುನ್ನುಗ್ಗಬೇಕು, ಆಗ ಇಡೀ ವಿಶ್ವವವೇ ಅವಳಿಗೆ ತಲೆಬಾಗುತ್ತದೆ ಎನ್ನುತ್ತಾರೆ.
– ನಸೀಂ ಅನ್ಸಾರಿ





