ನಟನೆಯ ಕಾರಣ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡರು ಎಂಪವರ್ಮೆಂಟ್ಥ್ರೂ ಎಂಟರ್ಟೇನ್ಮೆಂಟ್ಆನ್ಸ್ಕ್ರೀನ್ಆಫ್ ಸ್ಕ್ರೀನ್

ಭಾರತೀಯ ಸಿನಿಮಾಗಳಲ್ಲಿ ತನ್ನ ಅಸಾಧಾರಣ ನಟನಾ ಚಾತುರ್ಯ, ಆಳವಾದ ಜ್ಞಾನದಿಂದ ಬಾಲಿವುಡ್‌ ನಲ್ಲಿ ಒಂದು ಮೈಲಿಗಲ್ಲಾಗಿರುವ ಕೊಂಕಣಾ ಸೇನ್‌ ಶರ್ಮ, ಕೇವಲ ನಟನೆಯಿಂದ ಮಾತ್ರ ಛಾಪು ಮೂಡಿಸಿದವರಲ್ಲ, ಬದಲಿಗೆ ನಿರ್ದೇಶನದಲ್ಲೂ ಕೈಯಾಡಿಸಿ ತನ್ನ ಪ್ರತಿಭೆ ಮೆರೆದಿದ್ದಾರೆ.

ಸಿನಿಮಾಗಳಲ್ಲಿನ ಸಶಕ್ತ ಸ್ತ್ರೀ ಪಾತ್ರಗಳು, ಸಂವೇದನಾಶೀಲ ವಿಷಯಗಳನ್ನು ಆರಿಸಿಕೊಳ್ಳುವುದರಿಂದ ಸೇನ್‌ ಪ್ರಸಿದ್ಧರಾಗಿದ್ದಾರೆ. ಹಾಗಾಗಿ ಭಾರತೀಯ ಸಿನಿಮಾದ ಒಬ್ಬ ಗಹನಶೀಲ, ಅದ್ಭುತ ಪ್ರತಿಭಾಶಾಲಿ ಕಲಾವಿದೆ ಎನಿಸಿದ್ದಾರೆ.

ವಿಭಿನ್ನ ಐಡೆಂಟಿಟಿ

ಈಕೆ ಹುಟ್ಟಿದ್ದು ಕೋಲ್ಕತಾದಲ್ಲಿ. ಈಕೆ ಸುಪ್ರಸಿದ್ಧ ನಟಿ, ನಿರ್ಮಾಪಕಿ ಅಪರ್ಣಾ ಸೇನ್‌ ರ ಮಗಳು. ಆಕೆಗೆ ಮನೆಯಿಂದಲೇ ಇಂಥ ಪಾರಂಪರಿಕ ಕಲೆ, ಸಾಧನೆ, ರೂಢಿಯಾಯಿತು. ಬಾಲ್ಯದಲ್ಲೇ ಈಕೆ `ಇಂದಿರಾ' ಚಿತ್ರದಿಂದ ಬೆಳ್ಳಿಪರದೆಯಲ್ಲಿ ಮಿಂಚಿದಳು. ಆದರೆ ಈಕೆಗೆ ಸೂಕ್ತ ಐಡೆಂಟಿಟಿ ಸಿಕ್ಕಿದ್ದು ಮೃಣಾಲ್ ‌ಸೇನ್‌ ರ ಬಂಗಾಳಿಯ `ಏಕ್‌ ಜೀವನ್‌' ಚಿತ್ರದಿಂದ. ನಂತರ ಈಕೆ `ಮಕಡೀ, ಪೇಜ್‌' ಮುಂತಾದ ಗಟ್ಟಿ ಚಿತ್ರಗಳಿಂದ ಬಾಲಿವುಡ್‌ ನಲ್ಲಿ ತಳರುವಂತಾಯಿತು. ನಂತರ ಹಿಂದಿರುಗಿ ನೋಡದ ಈಕೆ, `ತಿತಲೀ, ಓಂಕಾರ, ಯೋಂ ಹೋತಾ ತೋ ಕ್ಯಾಯಾ ಹೋತಾ, ಲಕ್‌ ಬೈ ಚಾನ್ಸ್, ಲೇಕ್‌ ಅಪ್‌ ಸಿದ್‌, ರೈಟ್‌ ಯಾ ರಾಂಗ್‌, ಏಕ್‌ ಥೀ ಡಾಯ್ನ್' ಮುಂತಾದ ಚಿತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿ ಸೈ ಎನಿಸಿದರು. ತನ್ನ ಅಪ್ಪಟ ಪರಿಪೂರ್ಣ ನಟನೆಯಿಂದಾಗಿ ಈಕೆಯನ್ನು ಹಲವು ಪ್ರಶಸ್ತಿಗಳು ಅರಸಿ ಬಂದ. ಈಕೆಗೆ ಎಷ್ಟೋ ಸಲ ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟಿ ಮಾತ್ರವಲ್ಲದೆ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಬಂದಿವೆ.

ಲೇಖಕಿ ಮತ್ತು ನಿರ್ದೇಶಕಿ

ಈಕೆ ಭಾರತೀಯ ಸಿನಿಮಾದ ಜನಪ್ರಿಯ ನಟಿ ಮಾತ್ರವಲ್ಲದೆ, ಒಬ್ಬ ಉತ್ತಮ ಲೇಖಕಿ, ನಿರ್ದೇಶಕಿಯಾಗಿಯೂ ಯಶಸ್ಸು ಗಳಿಸಿದ್ದಾರೆ. ಈಕೆ ಹಿಂದಿ ಮಾತ್ರವಲ್ಲದೆ, ಬಂಗಾಳಿ, ಆಂಗ್ಲ ಚಿತ್ರಗಳಲ್ಲೂ ನಟಿಸಿದ್ದಾರೆ. ಈಕೆಯ ಚಿತ್ರಗಳ ಕಥಾ ಹಂದರ ಬಲು ಗಟ್ಟಿ!

ಈಕೆ ನಟ, ಸಹಕಲಾವಿದ ರಣವೀರ್‌ ಶೌರಿ ಜೊತೆ ಡೇಟಿಂಗ್‌ ನಡೆಸುತ್ತಿದ್ದರು. ಮುಂದೆ ಅದು 2010ರಲ್ಲಿ ಮದುವೆಯಲ್ಲಿ ಮುಗಿಯಿತು. ಮುಂದೆ 2011ರಲ್ಲಿ ಇವರಿಗೆ ಹುಟ್ಟಿದ ಮಗನೇ `ಹಾರೂನ್‌.' ದುರಾದೃಷ್ಟವಶಾತ್‌ 2015ರಲ್ಲಿ ಇಬ್ಬರೂ ಬೇರ್ಪಟ್ಟು, ಮುಂದೆ 2020ರಲ್ಲಿ ವಿಚ್ಛೇದನ ಪಡೆದರು. ಆದರೂ ಇಬ್ಬರೂ ದೋಸ್ತಿ ಮುಂದುವರಿಸಿದ್ದಾರೆ. ಮಗನ ಜವಾಬ್ದಾರಿಯನ್ನು ಸಿಂಗ್ ಪೇರೆಂಟ್ಸ್ ಆಗಿ ಇಬ್ಬರೂ ನಿಭಾಯಿಸುತ್ತಿದ್ದಾರೆ. ಆದರೆ ಮುಂದೆ ಇಬ್ಬರೂ ಬೇರೆ ಮದುವೆ ಆಗಲೇ ಇಲ್ಲ.

ಈಕೆ ಕೇವಲ ಸಿನಿಮಾಗೆ ಮಾತ್ರ ಸೀಮಿತರಲ್ಲ. ಸಾಮಾಜಿಕ ಕುರೀತಿಗಳ ಬಗ್ಗೆಯೂ ಆಗಾಗ್ಗೆ ಜನತೆ ಎದುರು ತಮ್ಮ ಅಭಿಪ್ರಾಯ ಹೇಳಿಕೊಳ್ಳುತ್ತಾರೆ. ಹೆಣ್ಣಿನ ಹಕ್ಕುಗಳು, ಲೈಂಗಿಕ ಸಮಾನತೆ, ಸಮಾಜದ ಗಂಭೀರ ಸಮಸ್ಯೆಗಳತ್ತ ಇವರ ದೃಷ್ಟಿಕೋನ ನಿಜಕ್ಕೂ ಪ್ರೇರಣಾದಾಯಕ.

ಖಂಡಿತವಾದಿ ಹಾಗೂ ಬಿಂದಾಸ್

ಇಂದಿನ ಸಿನಿಮಾ ಹಾಗೂ ಸಮಾಜಕ್ಕೆ ಈಕೆಯಂಥ ಸಶಕ್ತ ಮಹಿಳೆಯರ ಅಗತ್ಯವಿದೆ. ಈಕೆ ಆರಿಸಿಕೊಂಡ ಚಿತ್ರಗಳೆಲ್ಲ ಹೆಣ್ಣಿನ ಪರ ವಹಿಸು, ಸ್ತ್ರೀ ಸ್ವಾತಂತ್ರ್ಯಕ್ಕೆ ಮಹತ್ವ ನೀಡುವಂಥವೇ ಆಗಿವೆ. ಮತ್ತೊಂದೆಡೆ ಈಕೆ ಬಹಳ ಓಪನ್‌ ಮೈಂಡೆಡ್‌. ಇರುವ ವಿಷಯವನ್ನು ನೇರವಾಗಿ ಹೇಳಿಕೊಳ್ಳುವ ಖಂಡಿತವಾದಿ, ಸಹಜವಾಗಿಯೇ ಎಷ್ಟೋ ಸಲ ಲೋಕವಿರೋಧಿ ಆಗಬೇಕಾಗುತ್ತದೆ. ಲೈಂಗಿಕ ಸಮಾನತೆಯ ಕುರಿತಾಗಿ ಈಕೆ ತನ್ನ ಅಭಿಪ್ರಾಯ ತಿಳಿಸಿದಾಗ, ಇಂಥ ಎಷ್ಟೋ ಸಂದಿಗ್ಧಗಳು ಎದುರಾಗಿವೆ. ಆದರೂ ಆಕೆ ಎಂದೂ ಹಿಂಜರಿಯಲಿಲ್ಲ. ಮುಂದೆ ಬಾಲಿವುಡ್‌ ಗೆ ಬರಲಿರುವ ತರುಣಿಯರು, ಸೇನ್‌ ರ ಈ ಸ್ವಭಾವ ರೂಢಿಸಿಕೊಂಡರೆ, ಅಂಥವರು ತಮ್ಮ ಗುರಿ ತಲುಪುವಲ್ಲಿ ಎರಡು ಮಾತಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ