– ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರು: ಇಂದಿರಾ ನಗರದ ನ್ಯೂ ತಿಪ್ಪಸಂದ್ರ ರಸ್ತೆಯಲ್ಲಿ  ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ನ  ಕೇಂದ್ರವು ಅದ್ದೂರಿಯಾಗಿ ಮರು ಉದ್ಘಾಟನೆಯಾಯಿತು.

IMG-20260420-WA0051

ಈ ಕೇಂದ್ರವು ಅತ್ಯಾಧುನಿಕ ಡಯಾಗ್ನೋಸ್ಟಿಕ್ ತಂತ್ರಜ್ಞಾನ ಮತ್ತು ಸುಧಾರಿತ ರೋಗಿ ಸೇವೆಗಳೊಂದಿಗೆ ಸಜ್ಜುಗೊಂಡಿದ್ದು, ಬೆಂಗಳೂರಿನ  ಜನತೆಗೆ ವಿಶ್ವಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.

IMG-20260420-WA0056

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್ ಭಾರತದಲ್ಲಿನ ಪ್ರಮುಖ ಡಯಾಗ್ನೋಸ್ಟಿಕ್ ಸಂಸ್ಥೆಯಾಗಿದ್ದು, ದೇಶಾದ್ಯಂತ 200ಕ್ಕೂ ಹೆಚ್ಚು ಶಾಖೆಗಳ ಮೂಲಕ ಜನರಿಗೆ ನಂಬಿಕಸ್ಥ ಸೇವೆ ನೀಡುತ್ತಿದೆ.

IMG-20260420-WA0059

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಆನಂದ್ ಅರ್  ಶೈಣೈ ,ಇಂಟರ್ರ್ವೆನ್ಷನಲ್ ಕಾರ್ಡಿಯಾಲಜಿಸ್ಟ್  ಅವರು ಮಾತನಾಡಿ, ಇಂತಹ ಆಧುನಿಕ ಡಯಾಗ್ನೋಸ್ಟಿಕ್ ಕೇಂದ್ರಗಳು ಸಾರ್ವಜನಿಕ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಲು ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.

IMG-20260420-WA0053

ಕಾರ್ಯಕ್ರಮದಲ್ಲಿ ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ನ ಸಿ.ಇ.ಒ. ಜೆ. ಬಾಲಕೃಷ್ಣನ್ ಅವರು ಸಂಸ್ಥೆಯ ಸೇವೆಗಳು, ತಂತ್ರಜ್ಞಾನ ಮತ್ತು ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಿದರು.

IMG-20260420-WA0055

ಈ ಉದ್ಘಾಟನಾ ಸಮಾರಂಭಕ್ಕೆ ವೈದ್ಯರು, ಗಣ್ಯರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

IMG-20260420-WA0058

ಬೆಂಗಳೂರಿನಲ್ಲಿ ಉನ್ನತ ಮಟ್ಟದ ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ರೂಪಿಸಿಕೊಂಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ