ಮನೆ ಮದ್ದಿನ ಜೊತೆಗೆ ನೀವು ನವಜಾತ ಶಿಶುವಿಗೆ ಯಾವ ಬಗೆಯ ಬೇಬಿ ಕೇರ್ಪ್ರಾಡಕ್ಟ್ಸ್ ಖರೀದಿಸಬೇಕೆಂದು ನೋಡೋಣವೇ....?

ನವಜಾತ ಶಿಶುವಿನ ಆರೈಕೆ ಹೊಸ ತಾಯಂದಿರಿಗೆ ಸದಾ ಟೆನ್ಶನ್‌ ತಂದಿಡುತ್ತದೆ. ಹಳ್ಳಿಗಳ ಕಡೆಯಾದರೆ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದು ಈ ಸಮಸ್ಯೆ ಕಾಡದು. ಆದರೆ ಮಹಾನಗರಗಳಲ್ಲಿ ವಿಭಕ್ತ ಕುಟುಂಬಗಳೇ ಪ್ರಧಾನ. ಹಾಗಾಗಿ ಹೊಸ ತಾಯಂದಿರು ಈ ನಿಟ್ಟಿನಲ್ಲಿ  ಹೆಚ್ಚು ಯೋಚಿಸಿ ಉತ್ತಮ ಬೇಬಿ ಕೇರ್‌ ಪ್ರಾಡಕ್ಟ್ಸ್ ಆರಿಸಬೇಕು. ಅವುಗಳ ಆಯ್ಕೆಯ ಬಗ್ಗೆ ತಿಳಿಯೋಣ :

ಬೇಬಿ ಫೀಡಿಂಗ್ಬಾಟಲ್ : ನವಜಾತ ಶಿಶುವಿಗೆ ಆಗಾಗ ಸ್ತನ್ಯಪಾನ ಮಾಡಿಸುತ್ತಿರಬೇಕು. ಒಮ್ಮೊಮ್ಮೆ ಅನಿವಾರ್ಯ ಕಾರಣಗಳಿಂದ ತಾಯಿ ನೀಡುವ ಎದೆಹಾಲು ಸಾಕಾಗುವುದಿಲ್ಲ. ಆಗ ಹಸುವಿನ ಹಾಲು ಉತ್ತಮ ಉಪಾಯ. ಅದನ್ನು ಕಾಯಿಸಿ, ಆರಿಸಿದ ನಂತರ ಫೀಡಿಂಗ್‌ ಬಾಟಲಿಗೆ ಹಾಕಿ ಮಗುವಿಗೆ ಊಡಿಸಬೇಕು. ಹೀಗಾಗಿ ಮಗುವಿನ ಅಗತ್ಯ ಸಾಮಗ್ರಿಗಳಲ್ಲಿ ಇದು ಬಲು ಮುಖ್ಯ. ಇದು ಸದಾ ಬ್ರಾಂಡೆಡ್‌ ಆಗಿರಬೇಕೆಂಬುದನ್ನು ಗಮನಿಸಿ, ಅದು ಸಾಫ್ಟ್ ಆಗಿರಬೇಕು. ದುಬಾರಿ ಬಾಟಲಿ ಮಾತ್ರವೇ ಶ್ರೇಷ್ಠ ಎಂದು ಭಾವಿಸದಿರಿ. ಅದರ ಗುಣಮಟ್ಟವನ್ನು ಆಮೂಲಾಗ್ರವಾಗಿ ಪರಿಶೀಲಿಸಿ ನಂತರ ಆರಿಸಿಕೊಳ್ಳಿ.

ಡೈಪರ್ಸ್‌ : ನಗರಗಳಲ್ಲಿ ಮಗುವಿನ ಬೆಡ್‌ ಶೀಟ್‌, ಇನ್ನಿತರ ಬಟ್ಟೆಬರೆ ಹೆಚ್ಚು ಗಲೀಜಾಗಬಾರದು ಎಂದು ಮಗು ಎಲ್ಲೆಂದರಲ್ಲಿ 1-2 ಮಾಡಿಕೊಳ್ಳದಂತೆ ಅದಕ್ಕೆ ಡೈಪರ್ಸ್‌ ತೊಡಿಸುವುದು ರೂಢಿ. 1 ಡೈಪರ್‌ ಸುಮಾರು 3-4 ಗಂಟೆಗಳ ಕಾಲ ಮಗುವಿಗೆ ನೆರವಾಗುತ್ತದೆ. ಅದು ಬಯಸಿದಾಗ ಅದರಲ್ಲಿ ಮಲಮೂತ್ರ ವಿಸರ್ಜಿಸಿಕೊಳ್ಳಬಹುದು. ಹೀಗಾಗಿ ಇಂಥ ಶಿಶುಗಳಿಗಾಗಿ ಪ್ರತಿದಿನ 6-7 ಡೈಪರ್ಸ್‌ ಬೇಕಾಗುತ್ತದೆ. ಮಗುವಿಗೆ ಒಂದಿಷ್ಟೂ ಅನಾನುಕೂಲ ಆಗದಂಥ ಡೈಪರ್ಸ್‌ ನ್ನೇ ಆರಿಸಿ. ಅದು ಮಗುವಿಗೆ ಚುಚ್ಚುವಂತಿರಬಾರದು.  ಹಾಗೆಯೇ ವಿಸರ್ಜಿತ ದ್ರವವನ್ನು ಸುಲಭವಾಗಿ ಹೀರಿಕೊಳ್ಳುವಂತಿರಬೇಕು. ಅದರಿಂದ ರಾಶೆಸ್‌ ಸಮಸ್ಯೆ ಬರಬಾರದು ಎಂಬುದೇ ಮುಖ್ಯ.

ಸ್ಕಿನ್ಕೇರ್ಪ್ರಾಡಕ್ಟ್ಸ್ : ನವಜಾತ ಶಿಶುವಿನ ಚರ್ಮ ಅತಿ ಸೆನ್ಸಿಟಿವ್ ‌ಆಗಿರುತ್ತದೆ. ಹೀಗಾಗಿ ನಾವು ಒಂದಿಷ್ಟು ನಿರ್ಲಕ್ಷ್ಯ ವಹಿಸಿದರೂ, ಅಗ್ಗದ ಬೇಬಿ ಪ್ರಾಡಕ್ಟ್ಸ್ ಮಗುವಿಗೆ ತಕ್ಷಣ ಅಲರ್ಜಿ, ರಾಶೆಸ್‌ ಮೂಡಿಸಬಹುದು. ಮಗುವಿಗಾಗಿ ಡೈಫ್ರೀ, ಫ್ರಾಗ್ರೆನ್ಸ್ ಫ್ರೀ, ಮೆಡಿಕಲಿ ಟೆಸ್ಟೆಡ್‌ ಆಗಿರುವಂಥದ್ದನ್ನೇ ಖರೀದಿಸಿ. ಈ ಪ್ರಾಡಕ್ಟ್ಸ್ ಕೊಳ್ಳುವಾಗ ಅದರ ನಿಗದಿತ ಸಮಯದ ಲೇಬಲ್ (ಎಕ್ಸ್ ಪೈರಿ ಡೇಟ್‌) ಚೆನ್ನಾಗಿ ಗಮನಿಸಿ. ಇದು ಬೇಬಿ ಆಯಿಲ್‌, ಲೋಶನ್‌, ಸೋಪ್‌, ಶಾಂಪೂ ಎಲ್ಲದಕ್ಕೂ ಅನ್ವಯಿಸುತ್ತದೆ.

ಸರಿಯಾಗಿ ನೋಡಿ ಮಾಡಿ ಬೇಬಿ ಪ್ರಾಡಕ್ಟ್ಸ್ ಆರಿಸದಿದ್ದರೆ ಮಗುವಿಗೆ ಹಾನಿ ತಪ್ಪಿದ್ದಲ್ಲ. ಬೇಬಿ ಕ್ರೀಂ ಆರಿಸುವಾಗ ಅದರ ಘಟಕಗಳತ್ತ ಅಗತ್ಯವಾಗಿ ಒಮ್ಮೆ ಕಣ್ಣಾಡಿಸಿ. ತಜ್ಞರು ಈ ಕುರಿತಾಗಿ, ಪ್ರಟಿ ಕ್ರೀಂ ಆರಿಸಬೇಕೆಂದು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಹಾರ್ಶ್‌ ಕೆಮಿಕಲ್ಸ್ ನ ಪ್ರಮಾಣ ಇರುವುದಿಲ್ಲ. ಇದು ಮಗುವಿನ ಸ್ಕಿನ್‌ ಮಾಯಿಶ್ಚರ್‌ ಗೆ ಪ್ರಾಡಕ್ಟ್ಸ್ ಆಯ್ಕೆ ಎನಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ